ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, October 15, 2013

ತುಳಿಸಿಕೊಂಡವರು ಇವರು - ಪವನ್ ಪಾರುಪತ್ತೇದಾರ


ಪವನ್ ಪಾರುಪತ್ತೇದಾರ


ಅದು ಸಿಂಧೂ ನದಿಯ ಸೇತುವೆ
ಅಲ್ಲಲ್ಲಿ ಕಾಂಕ್ರೀಟಿನ ಕೊರತೆ
ಕಬ್ಬಿಣದ ಸಲಾಕೆಗಳ ಅಲುಗಾಟ ಬೇರೆ
ತಟದಾಕಡೆ ಹೆಸರಾಂತ ದೇಗುಲ
ತಟದೀಕಡೆ ಜಾತ್ರೆ ಪೇಟೆ ಪೆಂಡಾಲು

ಸೇತುವೆಯ ಮೇಲೆ ಇಪ್ಪತ್ತೈದು ಸಾವಿರ ಜನೆ
ಎಲ್ಲರ ಮನದಲ್ಲೂ ಒಂದೇ ಬಯಕೆ
ಆಯುಧಗಳಿಗೊಂದಷ್ಟು ಶಕ್ತಿ ಬರಲೆಂದು
ಗುದ್ದಲಿ ಪಿಕಾಸಿ ಶನಕೆ ಕುಡುಗೋಲು
ನೇಗಿಲು ವೊರವಾಲೆ ಇನ್ನು ಇನ್ನೆಷ್ಟೋ

ಈಗ ಅದೇ ಸೇತುವೆ ಇನ್ನೂ ಭದ್ರವಾಗಿದೆ
ಆದರಲ್ಲಿ ಎಲ್ಲರಲ್ಲು ಭಯದ ವಾತಾವರಣ
ಕಾಂಕ್ರೀಟು ಗುಂಡಿಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ
ಕಬ್ಬಿಣದ ಸಲಾಕೆಗಳಿಗೆ ಕರುಳು ನರಗಳ ಹಾರ
ಇಲ್ಲಿ ಯಾರು ಪಾಪಿಗಳೋ ಗೊತ್ತಿಲ್ಲ
ತುಳಿದವರ ತುಳಿಸಿಕೊಂಡವರ

ಸಿಂಧು ಹರಿಯುತ್ತಳೇ ಇದ್ದಾಳೆ
ರಕ್ತದ ತೊಟ್ಟು ಸೇತುವೆಯ ಸೊಂದಿಗಳಿಂದ
ಜಾತ್ರೆ ಪೇಟೆ ಪೆಂಡಾಲುಗಳಲ್ಲಿನ
ಸರಕುಗಳೆಲ್ಲಾ ಸೂತಕದ ಮೌನ
ಗಿರಗಿಟ್ಟಲೆ ಹಿಡಿದ ಹುಡುಗನ ಕೈ ಹಾಗೆ ಇದೆ
ಜೋಳಿಗೆಯಲ್ಲಿ ತುಂಬಿಕೊಂಡಿದ್ದ ಕಡಲೆ ಹಾಗೆ ಇದೆ
ಆದರೆ ಯಾರಿಗೂ ಜೀವವಿಲ್ಲ
ಶಕ್ತಿ ದೇವತೆ ಆಯುಧಗಳ ಹಿಡಿದು ಮೌನವಾಗಿದ್ದಾಳೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ

(ಮಧ್ಯಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದವರ ಕುರಿತು )

No comments:

Post a Comment