ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, February 18, 2014

ಶ್ರದ್ದಾಂಜಲಿ

Krupe : Kannada Prabha

ವರ್ತಮಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುದೊಡ್ಡ ಹೆಸರು ಆರ್.ಕೆ. ಶ್ರೀಕಂಠನ್ ಅವರದ್ದು. ಸಾಹಿತ್ಯ ಶುದ್ಧ, ಶ್ರುತಿ ಶುದ್ದ, ಸ್ವರ ಶುದ್ದ ಸಂಗೀತ ಪರಂಪರೆಯಲ್ಲಿ  94 ವರ್ಷಗಳ ತುಂಬು ಜೀವನವನ್ನು ನಡೆಸಿದವರು, ಅವರು.
ಆರ್.ಕೆ. ಶ್ರೀಕಂಠನ್ ಅವರು ಹುಟ್ಟಿದ್ದು ಹಾಸನ ಜಿಲೆಯ ರುದ್ರಪಟ್ಟಣಂ ಎಂಬ ಸಂಗೀತವೇ ಉಸಿರಾದ ಊರಿನಲ್ಲಿ 14 ನೇ ಜನವರಿ 1920ರಲ್ಲಿ. ಇವರ ತಂದೆ ಕೃಷ್ಣ ಶಾಸ್ತ್ರಿಗಳು ಒಳ್ಳೆಯ ಗಮಕಿಗಳು. ಕವಿಗಳು, ನಾಟಕಾಗಾರರು ಆಗಿದ್ದರು.. ತಾಯಿ ಸಣ್ಣಮ್ಮನವರು ಕೂಡ ಒಳ್ಳೆಯ ಗಾಯಕಿ ಆಗಿದ್ದರು ಆದರೆ ದುರದೃಷ್ಟವಶಾತ್ ಆರ್.ಕೆ. ಶ್ರೀಕಂಠನ್ ಅವರು 2 ವರ್ಷ ಚಿಕ್ಕವರಾಗಿದ್ದಾಗಲೇ ತಾಯಿ ತೀರಿಕೊಂಡರು. ಇವರ ತಾತ ವೀಣೆ ನಾರಾಯಣ ಸ್ವಾಮಿಯವರು.. ವೀಣೆ ಶೇಷಣ್ಣ & ವೀಣೆ ಸುಬ್ಬಣ್ಣನವರ ಸಮಕಾಲೀನರು.
ಶ್ರೀಯುತರು ತಮ್ಮ ಪ್ರಾಥಮಿಕ & ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಮೈಸೂರಿನ ಸದ್ವಿದ್ಯಾ ಪಾಠ ಶಾಲಾ ಹಾಗೂ ಡಿ. ಬನುಮಯ್ಯ ಪ್ರೌಢ ಶಾಲೆಗಳಲ್ಲೂ, ಬಿ.ಎ. ಪದವಿಯನ್ನು ಮಹಾರಾಜ ಕಾಲೇಜಿನಲ್ಲೂ ಪಡೆದುಕೊಂಡರು.
ಸಂಗೀತವಂತೂ ಮನೆತನದಲ್ಲೇ ಇದ್ದುದರಿಂದ ತಂದೆಯೇ ಅವರಿಗೆ ಮೊದಲ ಗುರುವಾಗಿದ್ದರು. ನಂತರದಲ್ಲಿ ವೀಣೆ ಸುಬ್ಬಣ್ಣ & ಪಿಟೀಲು ಚೌಡಯ್ಯನವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ಅವರ ಸೋದರ ಆರ್.ಕೆ. ವೆಂಕಟರಮಣ ಶಾಸ್ತ್ರಿಯವರಲ್ಲಿ ಸಂಗೀತ ಅಭ್ಯಾಸ ಮುಂದುವರಿಸಿದರು.ಇವರು ಸಂತ ತ್ಯಾಗರಾಜ ಸ್ವಾಮಿ ಗುರುಪರಂಪರೆಗೆ ಸೇರಿದವರು.
ಹರೆಯದ ದಿನಗಳಲ್ಲಿ ಮೈಸೂರು ಸಂಸ್ಥಾನದಲಿ ಒಡೆಯರ ಪ್ರೋತ್ಸಾಹದಲ್ಲಿ ನಡೆಯುತ್ತಿದ್ದ ಎಲ್ಲ ಸಂಗೀತಕಚೇರಿಗಳಲ್ಲೂ ತಪ್ಪದೆ ಪಾಲ್ಗೊಳ್ಳುತ್ತಿದ್ದ ಇವರು ಅದೇ ಕಾಲದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆರೈಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತದಿಂದ ಪ್ರಭಾವಿತರಾಗಿದ್ದರು.
ಅತ್ಯಂತ ಸಾಹಿತ್ಯಶುದ್ದವೂ ಸ್ವರಬದ್ದವೂ ಆದ ಅವರ ಸಂಗೀತ ಕಚೇರಿಗಳು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿವೆ.ಹಾಗೆಯೇ ಅವರ ಕಚೇರಿಗಳಲ್ಲಿ ಬಹಳವಾಗಿ ಕನ್ನಡ ಕೃತಿಗಳು, ದಾಸರ ರಚನೆಗಳು ಬಳಕೆಯಾಗುತ್ತಿದವು.
ಅವರ ಕೊನೆಯ ದಿನಗಳ ವರೆಗೂ ಅವರ ಮಗ ಆರ್.ಎಸ್. ರಮಾಕಾಂತ ಅವರೊಂದಿಗೆ ಕಚೇರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿದುಷಿ ಎಂ.ಎಸ್. ಶೀಲಾ, ಟಿ.ಎಸ್. ಸತ್ಯವತಿ, ಎಚ್.ಕೆ. ನಾರಾಯಣ್ ಹಾಗೂ ಮಗಳು ಗಾಯಕಿ ರತ್ನಮಾಲಾ ಪ್ರಕಾಶ್ ಕೂಡ ಅವರ ಪ್ರಸಿದ್ದ ಶಿಷ್ಯ ವೃಂದ.
ಅವರಿಗೆ ಸಂಗೀತ ಒಲಿದಿದ್ದಂತೆಯೇ ಬೇಕಾದಷ್ಟು ಪ್ರಶಸ್ತಿ-ಪುರಸ್ಕಾರಗಳು ಹುಡುಕಿ ಬಂದಿದ್ದವು.
1979- ಕೇಂದ್ರ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1981- ರಾಜ್ಯ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1995- ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಬಿರುದು
1994- ಟಿ. ಚೌಡಯ್ಯ ರಾಷ್ಟ್ರೀಯ ಸಂಗೀತ ಪ್ರಶಸ್ತಿ
ಕರ್ನಾಟಕ ಸರ್ಕಾರ ಕೊಡಮಾಡುವ ಕನಕ-ಪುರಂದರ ಪ್ರಶಸ್ತಿ
2011 - ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ
ಹೀಗೆ ನೂರಾರು ಪ್ರಶಸ್ತಿ- ಪುರಸ್ಕಾರಗಳು ದೊರೆತಿವೆ.
 ಇಷ್ಟೆಲ್ಲಾ ಸಾಧನೆಯ ಈ ರಾಜ್ಯದ ಕರ್ನಾಟಕ ಸಂಗೀತದ ಮೇರು ಪ್ರತಿಭೆ 2014, ಫೆಬ್ರವರಿ 17 ರ ಸೋಮವಾರ ರಾತ್ರಿ ಶಾಶ್ವತವಾಗಿ ತಮ್ಮ ಸ್ವರ & ಉಸಿರಿನ ಸಂಚಾರ ನಿಲ್ಲಿಸಿದರು.
 ಆದರೆ ಅವರು ಹಾಡಿ ಖ್ಯಾತಿಗೊಳಿಸಿದ ನೂರಾರು ಕನ್ನಡ ಕೃತಿಗಳು ಇನ್ನೂ ಅಲಾಪಿಸುತ್ತಲೆ ಇವೆ.


-
- ರಾಜೇಂದ್ರ ಪ್ರಸಾದ್, ಮಂಡ್ಯ

Monday, February 17, 2014

ಅವಧಾನ ಒಂದು ಕಲೆ, ವಿಜ್ಞಾನ…. - ವಿ. ಕೃಷ್ಣಾನಂದ

ಕೃಪೆ - ವಿಶ್ವ ಕನ್ನಡ

ನಮ್ಮಲ್ಲಿ ಅನೇಕರು ಈ ಹೆಸರನ್ನು ಕೇಳಿರಬಹುದು. ಅದರ ಬಗೆಗೆ ಚಿಂತಿಸುವ ಅಥವಾ ತಿಳಿದುಕೊಳ್ಳುವ ವ್ಯವಧಾನ, ಅವಕಾಶ ಕಾರಣಾಂತರಗಳಿಂದ ಒದಗಿ ಬರದೇ ಇರಬಹುದು. ಕೆಲವೊಮ್ಮೆ ಕೃಷ್ಣ ಅವಧಾನಿ ನರಸಿಂಹ ಅವಧಾನಿ ಎಂಬ ಹೆಸರೋ ಅಥವಾ ಪೂಜಾ ಕಾರ್ಯಕ್ಕೆ, ಜ್ಯೋತಿಷ್ಯಕ್ಕೆ, ಪೌರೋಹಿತ್ಯಕ್ಕೆ ಅವಧಾನಿಗಳನ್ನು `ಕಾಣುವ’ ಪರಿಪಾಠವೂ ಇರಬಹುದು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಅದೇ ಹೆಸರಿನವರಿಗೆ ಕೆಲವೊಮ್ಮೆ ಅದರ ಅರ್ಥ ತಿಳಿಯದೆ ಇರುವುದು. ಏನೋ ಶತಪಾಠಿ, ತ್ರಿವೇದಿಯಂತೆ ನಂದೂ ಒಂದು ಹೆಸರಿರಬಹುದು ಎಂಬ ಧೋರಣೆ ಅಷ್ಟೇ.
ಏನಿದು ಅವಧಾನ? ಯಾರು ಈ ಅವಧಾನಿ? ಏನವನ ವಿಶೇಷತೆ? ಇದನ್ನು ಈಗ ನಾವೆಲ್ಲರೂ ತಿಳಿಯುವ ಪ್ರಯತ್ನ ಮಾಡೋಣ.
ಅವಧಾನ ಎಂದರೆ ಸ್ಥೂಲವಾಗಿ `ಗಮನವಿಟ್ಟು ಕೇಳು’ ಎಂದರ್ಥ. ಆದರೆ ವಿಶೇಷಾರ್ಥದಲ್ಲಿ ಇದರಲ್ಲಿ ಒಂದು ಅದ್ಭುತ ಸಂಗತಿಯೇ ಅಡಗಿದೆ.
ಗಮನವಿಟ್ಟು ಕೇಳು, ಕೇಳಿದ್ದನ್ನು ಗ್ರಹಿಸು, ಗ್ರಹಿಸಿದ್ದನ್ನು ಮನನ ಮಾಡು ಮತ್ತು ಸಂದರ್ಭಕ್ಕೆ ಪುನರುಚ್ಚರಿಸು. ಇವೆಲ್ಲಾ ಕ್ರಿಯೆಗಳೂ ಸಹ ಅವಧಾನದಲ್ಲಿ ಅಡಕವಾಗಿದೆ.
ಹಿಂದಿನ ಕಾಲದ ಕಲಿಕೆಯ, ವಿದ್ಯಾಭ್ಯಾಸದ ಪದ್ಧತಿಯಾದ ಶೃತಿ, ಸ್ಮೃತಿ, ಧೃತಿಯಂತೆಯೇ ಅವಧಾನ ಕೂಡ. ವಾಸ್ತವದಲ್ಲಿ ವೈಜ್ಞಾನಿಕ ಪದ್ಧತಿಯೂ ಹೌದು. ಆದರೆ ಇಂದು ವಿವಿಧ ಪರಿಣಾಮ, ಪ್ರಭಾವದಿಂದಾಗಿ ಕಲಿಕೆಯ ವಸ್ತು, ವಿಷಯ ರೀತಿ ಸಂಸ್ಕೃತಿಯೇ ಬದಲಾಗಿ ಹೋಗುತ್ತಿದೆ. ಇದರಿಂದ ಆಗುತ್ತಿರುವ ದುಷ್ಪರಿಣಾಮಗಳು ಅನೇಕ. ಇರಲಿ, ಅದರ ಕಡೆಗೆ ಮತ್ತೊಮ್ಮೆ ಗಮನ ಹರಿಸೋಣ.
ಅವಧಾನ ಒಂದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ರೀಡೆ. ನಿರ್ದಿಷ್ಟ ಅವಧಿಯಲ್ಲಿ ಕೆಲವು ನಿಯಮಗಳೊಂದಿಗೆ ನಡೆಸಲ್ಪಡುವ ಒಂದು ಅದ್ಭತ ಕ್ರೀಡೆ. ಇದರ ಪರಿಚಯವನ್ನು ಅವಧಾನಿಯಿಂದ ಪ್ರಾರಂಭಿಸೋಣ.
ಅವಧಾನಿ: ಅವಧಾನಿಯೆಂದರೆ ಅವಧಾನವನ್ನು ನಡೆಸಿಕೊಡುವವನು. ಇವನೇ ಅವಧಾನದ ಕೇಂದ್ರ ಬಿಂದು. ಇವನ ಬುದ್ಧಿಶಕ್ತಿ, ಕವಿತಾ ರಚನಾ ಸಾಮರ್ಥ್ಯ, ಧಾರಣೆ ಇವುಗಳ ಆಧಾರದ ಮೇಲೆ ಕ್ರೀಡೆಯ ರಸಾಸ್ವಾದನೆ ಸುಲಲಿತ ಸಂವಹನೆ ಸಾಧ್ಯವಾಗುತ್ತದೆ.
ಪೃಚ್ಛಕ: ಎಂದರೆ ಪ್ರಶ್ನೆ ಕೇಳುವವನು ಎಂದರ್ಥ. ಆದರೆ ಅವಧಾನಕ್ಕೆ ಸಂಬಂಧಪಟ್ಟ ಕೆಲವು ವಿಶೇಷ ನಿಯಮಗಳಡಿಯಲ್ಲಿ, ನಿರ್ದಿಷ್ಟ ಪ್ರಕಾರದ, ಸಂಬಂಧಿತ ಪ್ರಶ್ನೆಗಳನ್ನು ಜವಾಬ್ದಾರಿಯುತವಾಗಿ ಕೇಳುವುದು ಇವರ ಪಾಲಿನ ಕೆಲಸ. ತಮ್ಮ ಉತ್ತಮ ಗುಣಮಟ್ಟದ, ಸದಭಿರುಚಿಯ, ಸದುದ್ದೇಶದಿಂದ ಕೂಡಿದ ಪ್ರಶ್ನೆಗಳಿಂದ ಕಾರ್ಯಕ್ರಮವನ್ನು ರಂಜನೀಯವಾಗಿ ಮಾಡುವಲ್ಲಿ ಇವರ ಪಾತ್ರ ಬಹಳ ಹಿರಿದು.
ಶ್ರೋತೃಗಣ: ಸಭಾಸದರು, ನೆರೆದ ಜನತೆಯೇ ಶ್ರೋತೃಗಣ. ಉತ್ತಮ ಅಭಿರುಚಿಯುಳ್ಳ, ಸದುದ್ದೇಶವನ್ನು ಹೊಂದಿರುವ, ರಸಿಕ ಜನತೆಯೇ ಶ್ರೋತೃಗಣ. ಸಾಹಿತ್ಯ ಸಂಸ್ಕೃತಿಯಲ್ಲಿನ ಅಭಿರುಚಿ, ಪರಿಚಯ, ತಕ್ಕ ಮಟ್ಟಿಗಿನ ಅಭ್ಯಾಸದಿಂದ ಶ್ರೋತೃಗಣ ಉತ್ತಮ ರೀತಿಯಲ್ಲಿ ಭಾಗವಹಿಸಿ, ರಸಾಸ್ವಾದನೆಯನ್ನೂ ಮನೋಲ್ಲಾಸವನ್ನೂ ಪಡೆಯಬಹುದು. ಕೆಲವೊಮ್ಮೆ ಅಪರೋಕ್ಷ ರೀತಿಯಲ್ಲಿ ಉತ್ತಮ ಅವಧಾನಕ್ಕೆ ಕಾರಣರಾಗಬಹುದು.
ಈಗ ಅವಧಾನ ರಚನೆ ಮತ್ತು ವಿಧಾನಗಳನ್ನು ನೋಡೋಣ.
ಮೊದಲೇ ತಿಳಿಸಿದಂತೆ ಅವಧಾನಿಯೇ ಅವಧಾನದ ಕೇಂದ್ರಬಿಂದು. ಆತನ ಸತತ ಅಭ್ಯಾಸ ಭಾಷೆಯ ಮೇಲಿನ ಪ್ರೀತಿ ಮತ್ತು ಹಿಡಿತ, ಸಮಯಸ್ಫೂರ್ತಿ, ನೆನಪಿನ ಶಕ್ತಿ, ಉಚ್ಛಾರಣೆ, ಕಂಠಸಿರಿ, ಲೋಕಜ್ಞಾನ, ಜೀವನದರ್ಶನ ಮುಂತಾದುವುಗಳಿಂದ ಅವಧಾನಕ್ಕೆ ಶೋಭೆ ಬರುತ್ತದೆ. ಹಾಗೆಯೇ ಮೇಲೆ ತಿಳಿಸಿದ ಅರ್ಹತೆಗಳಲ್ಲದೇ, ಸಹೃದಯತೆ, ಸೌಹಾರ್ದತೆ, ಸಹಿಷ್ಣುತೆಗಳೂ ಆವಶ್ಯಕ. ಪ್ರಾಚೀನ ಮತ್ತು ಅರ್ವಾಚೀನ ಕಾವ್ಯಸಂಪದ, ವಿವಿಧ ರೀತಿಯ ಸಾಹಿತ್ಯ ಪ್ರಕಾರಗಳನ್ನು, ಹಲವಾರು ವಿಶೇಷ ಕವಿಗಳನ್ನೂ ಆತ ಓದಿರಬೇಕು. ಅಧ್ಯಯನದಿಂದ ಕಂಡುಕೊಂಡ ವಿಶೇಷ ಅಂಶಗಳನ್ನು ಮನನ ಮಾಡಿ ಸಮಯಕ್ಕೆ ತಕ್ಕಂತೆ ಅವುಗಳನ್ನು ಬಳಸಿಕೊಳ್ಳುವ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ಸಮಯಸ್ಫೂರ್ತಿಯನ್ನು ಆತ ಹೊಂದಿರಬೇಕು.
ಅವಧಾನಿಯ ಒಟ್ಟು ಸಾಮರ್ಥ್ಯವನ್ನು ತಾನೇ ಒರೆಹಚ್ಚಿ ಅವಧಾನಕ್ಕೆ ಪೃಚ್ಛಕರನ್ನು ಆತ ಆಹ್ವಾನಿಸುತ್ತಾನೆ. ಅವನ ಇಚ್ಛೆಯಂತೆ, ಆತನು ಹೇಳುವ ಭಾಷೆಯಲ್ಲಿ ಅವಧಾನ ನಡೆಯುತ್ತದೆ. ಹೀಗೆ ಯಾವ ಭಾಷೆಯಲ್ಲಿ ಅವಧಾನ ಎಂಬುದು ತೀರ್ಮಾನವಾದ ಮೇಲೆ ಯಾವ ರೀತಿಯ ಅವಧಾನ ಎಂದು ನಿರ್ಧಾರವಾಗಬೇಕು.
ಅಷ್ಟಾವಧಾನ: ಎಂಟು ಜನ ಪೃಚ್ಛಕರಿಂದ ಎಂಟು ವಿವಿಧ ಪ್ರಕಾರಗಳ ಪ್ರಶ್ನೆಯನ್ನು ಅನುಕ್ರಮವಾಗಿ ಹಾಗೂ ನಿರ್ದಿಷ್ಟ ರೀತಿಯಲ್ಲಿ ಎದುರಿಸಿ ಅದರ ಪರಿಹಾರವನ್ನು ಬಿಡಿಬಿಡಿಯಾಗಿ ನೀಡಿ ಅವಧಾನದ ಕೊನೆಯಲ್ಲಿ ಸಮಗ್ರವಾಗಿ ಒಟ್ಟುಗೊಳಿಸಿ ಧಾರಣೆಯನ್ನು ಪೂರೈಸುವುದೇ ಅಷ್ಟಾವಧಾನ.
ಇದೇ ರೀತಿಯಲ್ಲಿ ಹದಿನಾರು ಜನರಿಂದ ಕೂಡಿದ್ದರೆ ಷೋಡಶಾವಧಾನ, ಶತಾವಧಾನ ಹಾಗೂ ಸಹಸ್ರಾವಧಾನಗಳೂ ಕೂಡ ಹಿಂದೆ ನಡೆಯುತ್ತಿದ್ದವು ಹಾಗೂ ಈಗಲೂ ಸಾಧ್ಯ ಸಹ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಅಷ್ಟಾವಧಾನ. ಎಂಟು ವಿವಿಧ ಬಗೆಯ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಪೃಚ್ಛಕರು ನೀಡುತ್ತಾರೆ. ಅದನ್ನು ತನ್ನ ಅಪಾರ ಪಾಂಡಿತ್ಯದಿಂದ, ಪ್ರತಿಭೆಯಿಂದ ಅವಧಾನಿ ಸಮಗ್ರವಾಗಿ ಪರಿಹರಿಸುತ್ತಾನೆ. ಒಂದು ಪ್ರಶ್ನೆಗೆ ಉತ್ತರವನ್ನು ಆತ ಸಿದ್ಧಪಡಿಸುತ್ತಿರುವಾಗಲೇ ಮತ್ತೊಂದು ಅಥವಾ ಒಂದಕ್ಕಿಂತ ಹೆಚ್ಚು ವಿಷಯಗಳ ಸಮಸ್ಯೆಗಳನ್ನು ಆತ ಬಿಡಿಸುತ್ತಿರಬೇಕಾಗುತ್ತದೆ. (ಇದನ್ನು ಗಣಕ parallel process ಗಳಿಗೆ ಹೋಲಿಸಬಹುದು)
ಅಷ್ಟಾವಧಾನದ ಜನಪ್ರಿಯ ವಿನ್ಯಾಸ ಹೀಗಿದೆ:
ಎಂಟು ಜನ ಪೃಚ್ಛಕರಲ್ಲಿ ಆರು ಜನ ನಿರ್ದಿಷ್ಟ ಪ್ರಕಾರದ (ಪೂರ್ವ ನಿರ್ಧಾರಿತ ಪ್ರಕಾರ) ಪ್ರಶ್ನೆಗಳನ್ನು ಅನುಕ್ರಮವಾಗಿ ಕೇಳುತ್ತಾರೆ ಹಾಗೂ ಅದಕ್ಕೆ ಅವಧಾನಿಯಿಂದ ಉತ್ತರ ಬಯಸುತ್ತಾರೆ. ಅವಧಾನಿಯು ಅವರಿಗೆ ಹಂತ ಹಂತವಾಗಿ ಉತ್ತರ ನೀಡಿ ಒಟ್ಟು ಉತ್ತರವನ್ನು ಅವಧಾನದ ಕೊನೆಯಲ್ಲಿ ನೀಡುತ್ತಾನೆ.
ಏಳನೆಯ ಪೃಚ್ಛಕನದ್ದೇ ತಕರಾರು. ಈತನಿಗೆ ಯಾವ ಪ್ರಕಾರವೂ ಇಲ್ಲ. ಆತ ಸ್ವತಂತ್ರ. ಈತನ ವಿಷಯವೇ “ಅಪ್ರಸ್ತುತ ಪ್ರಸಂಗ” ಎಂದರೆ ಅವಧಾನಿಯು ತೀವ್ರ ಹಾಗೂ ಕ್ಲಿಷ್ಟಕರ ಸಮಸ್ಯೆಯನ್ನು ಬಿಡಿಸುತ್ತಿರುವಾಗ, ಅವನಿಗೆ ತೊಂದರೆಯಾಗುವಂತೆ, ಏಕಾಗ್ರತೆಗೆ ಭಂಗ ಬರುವಂತೆ ಅಪ್ರಸ್ತುತ ಪ್ರಶ್ನೆಗಳನ್ನು ಆತ ಎಸೆಯುತ್ತಾನೆ. ಅವಧಾನಿಯು ತನ್ನ ಸಮಯ ಸ್ಫೂರ್ತಿಯಿಂದ ಆತನಿಗೆ ತಕ್ಕ ಸಮಾಧಾನ ಹೇಳಿ ತನ್ನ ಯೋಚನಾಲಹರಿ ಮತ್ತು ರಚನಾಕಾರ್ಯಕ್ಕೆ ತೊಡಗಿಸಿಕೊಳ್ಳಬೇಕು.
ಎಂಟನೆಯ ವ್ಯಕ್ತಿಯ ಕೆಲಸ -ಘಂಟಾನಾದ, ಈತ ಕಾರ್ಯಕ್ರಮದ ನಡುನಡುವೆ ಆಗಾಗ ಗಂಟೆಯನ್ನು ಬಾರಿಸುತ್ತಾನೆ. ಅವಧಾನಿಯು ಅದರ ಗಣನೆಯನ್ನು ಅಂದರೆ ಒಟ್ಟು ಎಷ್ಟು ಬಾರಿ ಈ ರೀತಿ ಗಂಟೆ ಬಾರಿಸಲಾಗಿದೆ ಎಂಬುದನ್ನು ಕಾರ್ಯಕ್ರಮದ ಕೊನೆಯಲ್ಲಿ ತಿಳಿಸಬೇಕು.
ಈಗ ಮೊದಲ ಆರು ಜನರ ನಿರ್ದಿಷ್ಟ ಕಾರ್ಯವನ್ನು ನೋಡೋಣ:
೧. ನಿಷೇಧಾಕ್ಷರೀ: ಯಾವುದಾದರೂ ಕವಿತಾವಸ್ತು (ಜನ, ಜೀವನ, ರೀತಿ, ನೀತಿ, ಪುರಾಣ ಘಟನೆ) ನೀಡಿ ಅದರ ಮೇಲೆ ಕೆಲವು ಅಕ್ಷರಗಳನ್ನು ನಿಷೇಧಿಸಿ ಪದ್ಯ ರಚಿಸುವಂತೆ ಹೇಳುವುದು.
ಉದಾ: ಶಿವನನ್ನು ಕುರಿತ ಪದ್ಯ ರಚಿಸಲು ಹೇಳಿ ಶಿ ಅಕ್ಷರವನ್ನು ನಿಷೇಧಿಸುವುದು. ಆಗ ಅವಧಾನಿ ಉ ಎಂದು ಪ್ರಾರಂಭಿಸಿದರೆ ಮಾ ಎಂಬ ಅಕ್ಷರವನ್ನು ನಿಷೇಧಿಸುವುದು. ಈ ಎಂದು ಮುಂದುವರೆದರೆ ಶಿ ಎಂದು ನಿಷೇಧಿಸುವುದು ಹೀಗೆ.
ಹೀಗೆ ಪ್ರತೀ ಹಂತದಲ್ಲೂ ಅವಧಾನಿಯ ಕವಿತ್ವವನ್ನು ಊಹಿಸಿ ಅದಕ್ಕೆ ಸೂಕ್ತ ನಿಷೇಧಗಳ ಮೂಲಕ ತಡೆಯೊಡ್ಡುವುದು.
ಆದರೆ ಅವಧಾನಿಯು ಇವೆಲ್ಲ ನಿಷೇಧಗಳ ನಡುವೆಯೂ ಸಹ ಕೊಟ್ಟ ವಸ್ತುವಿನ ಮೇಲೆ ಕೇಳಿದ ಛಂದಸ್ಸಿನಲ್ಲಿ ಕವಿತಾರಚನೆ ಮಾಡುತ್ತಾನೆ.
೨. ಸಮಸ್ಯಾಪೂರಣ: ಒಂದು ನಾಲ್ಕು ಸಾಲಿನ ಪದ್ಯದಲ್ಲಿ ಯಾವುದಾದರೂ ಒಂದು ಸಾಲನ್ನು ಪೃಚ್ಛಕ ಸಮಸ್ಯಾ ರೂಪದಲ್ಲಿ ನೀಡುತ್ತಾನೆ. ಆಗ ಅವಧಾನಿಯು ಉಳಿದ ಸಾಲುಗಳನ್ನು ಅದೇ ಛಂದಸ್ಸಿನಲ್ಲಿ ಪೂರೈಸಿ ಆ ಸಮಸ್ಯೆಯ ಪರಿಹಾರ ನೀಡಬೇಕು. ಉದಾ: ಅಮವಾಸ್ಯೆಯ ಚಂದಿರ ಹೊಳೆಯುತ್ತಿದ್ದ ಎಂಬ ಸಮಸ್ಯೆಯಲ್ಲಿ ಅಸಾಧ್ಯತೆ ಇದೆ. ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಆಗ ಅವಧಾನಿಯೂ ಸಹ ಕೆಲವೊಮ್ಮೆ ಊಹೆಯಿಂದ ಇದನ್ನೂ ಈ ರೀತಿ ಪರಿಹರಿಸಬಹುದು. ಅಮವಾಸ್ಯೆಯ ದಿನ ಚಂದ್ರ ಬೇರೆ ಭೂಭಾಗದಲ್ಲಿ ಹೊಳೆಯುತ್ತಿದ್ದ ಎಂಬರ್ಥ ಬರುವಂತೆ ಪರಿಹರಿಸಬಹುದು.
ಅಂತೆಯೇ ವಿರೋಧಾಭಾಸದಿಂದ ಕೂಡಿದ, ಮೂರ್ಖತೆಯೇ ಮೈವೆತ್ತಂತೆ ಇರುವ ಸಮಸ್ಯೆಗಳೂ ಎದುರಾಗುತ್ತದೆ. ಅವಧಾನಿಯು ಅದನ್ನು ಪರಿಹರಿಸಬೇಕು. ಉದಾ: ವಿಷ್ಣು ಶಿವನನ್ನು ಮದುವೆಯಾದನು ಎಂಬ ಸಮಸ್ಯೆ ಇದ್ದರೆ, ಅಯ್ಯಪ್ಪನ ಕಥೆಯನ್ನು ಬಳಸಿ ಪರಿಹರಿಸಬಹುದು.
೩. ದತ್ತಪದೀ: ಯಾವುದಾದರೂ ಕವಿತಾ ವಸ್ತುವನ್ನು ನೀಡಿ ಅದಕ್ಕೆ ನಿರ್ದಿಷ್ಟ ಛಂದಸ್ಸನ್ನು ನಿಗದಿಪಡಿಸಿ ಅದಕ್ಕೆ ಹೊಂದದ ಪದಗಳನ್ನೂ ನೀಡಿ ಕವಿತಾ ರಚನೆ ಮಾಡುವಂತೆ ಹೇಳುವುದು.
ಉದಾ: ಇಡಲಿ, ಸಾಂಬಾರು, ದೋಸೆ ಮತ್ತು ಪೂರಿಗಳನ್ನು ಬಳಸಿ ಶಿವಸ್ತುತಿ.
ದೆಹಲಿ, ಮದ್ರಾಸು, ಕಲಕತ್ತಾ ಮತ್ತು ಮುಂಬಯಿ ಬಳಸಿ ಕೃಷ್ಣಸ್ತುತಿ.
ಗಡ್ಡ, ಮೀಸೆ, ಕ್ರಾಪ್, ಶೇವ್ ಪದಗಳನ್ನು ಬಳಸಿ ನವವಧು ವರ್ಣನೆ. ಸೈನ್, ಶೊಸೈನ್, ಟ್ಯಾನ್, ಕಾಟ್(Sine, Cosine, Tan, Cot) ಬಳಸಿ ಯುದ್ಧ ವರ್ಣನೆ.
ಹೀಗೆ ಯಾವ ಪದಗಳಾದರೂ ಸರಿ ಅವುಗಳನ್ನು ನೀಡಿ ಪದ್ಯ ರಚಿಸುವಂತೆ ಕೇಳುವುದು. ಅವಧಾನಿಯು ಅದನ್ನು ನಿರ್ದಿಷ್ಟ ಛಂದಸ್ಸಿನಮಲ್ಲಿಯೇ ಪೂರೈಸಬೇಕು. ಹೀಗೆ ಮಾಡುವಾಗ ಅವನಿಗೆ ಅತ್ಯಂತ ಸಮಯಸ್ಫೂರ್ತಿಯೂ, ಲೋಕಜ್ಞಾನವೂ, ಆಶುಕವಿತ್ವವೂ ಇರಬೇಕಾಗುತ್ತದೆ.
೪.ಸ್ಯಂಸ್ತಂಕ್ಷರೀ: ಒಂದು ಪದ್ಯದ ನಿರ್ದಿಷ್ಟ ಸಾಲುಗಳ ನಿರ್ದಿಷ್ಟ ಅಕ್ಷರಗಳೂ ಸಹ ಇದೇ ರೀತಿ ಇರಬೇಕೆಂದು ನಿಯಮಹಾಕಿ, ತಮಗೆ ಬೇಕಾದ ಛಂದಸ್ಸಿನಲ್ಲಿ ತಮಗೆ ಬೇಕಾದ ವಸ್ತುವಿನ ಮೇಲೆ ಪದ್ಯ ರಚಿಸುವಂತೆ ಕೇಳುತ್ತಾರೆ. ಕೆಲವೊಮ್ಮೆ ಹಾಗೆ ಕೇಳಿದ ಕೇಳಿಕೆಗಳು ಆ ಛಂದಸ್ಸಿನಲ್ಲಿ ಬಹಳ ಕಷ್ಟಪ್ರಾಯವಾಗಿ ಕವಿಯು( ಅವಧಾನಿಯು) ತನ್ನ ಶಬ್ದವ್ಯುತ್ಪತ್ತಿಯನ್ನೇ ಅವಲಂಬಿಸಿ ಅದನ್ನು ಪರಿಹರಿಸಬೇಕು.
೫. ಚಿತ್ರಕವಿತ್ವ: ನಿಜಕ್ಕೂ ಕಷ್ಟಸಾಧ್ಯವಾದ ಭಾಗ. ಪೃಚ್ಛಕ ಮೊದಲೇ ತಯಾರಿಸಿ ಅಳವಡಿಸಿ ನೋಡಿದ ವಿನ್ಯಾಸಕ್ಕೆ ಅವಧಾನಿಯನ್ನು ಆಶುವಾಗಿ ಕವಿತೆ ರಚಿಸೆಂದು ವಸ್ತು ಮತ್ತು ವಿನ್ಯಾಸವನ್ನು ಛಂದಸ್ಸಿನೊಡನೆ ನೀಡುತ್ತಾನೆ. ಉದಾ: ಹಾಸನದ ಮೇಲೆ ಅಷ್ಟಕೋನಾಕೃತಿಯಲ್ಲಿರುವ ಸಾಲುಗಳಿಂದ ಕವಿತೆಯನ್ನು ಭಾಮಿನೀ ಷಟ್ಪದಿಯಲ್ಲಿ ರಚಿಸಿ ಎಂದು ಹೇಳಿದರೆ ಹೇಗಿಂದ ಹೇಗೆ ಓದಿದರೂ ಆರು ಸಾಲುಗಳಲ್ಲಿ ಸರಿಯಾದ ಅಕ್ಷರಗಳಿಂದ ಕೂಡಿದ ಅಷ್ಟಕೋನಾಕೃತಿಯ ವಿನ್ಯಾಸದಲ್ಲಿ ಪದ್ಯ ರಚಿಸಬೇಕು. ಇದನ್ನು ಚಕ್ರಬಂಧವೆಂದೂ ಕರೆಯುತ್ತಾರೆ.
೬. ಕಾವ್ಯವಾಚನ: ಪೃಚ್ಛಕ ಯಾವುದಾದರೊಂದು ಪ್ರಸಿದ್ಧ ಕಾವ್ಯದಿಂದ ಆಯ್ದ ಪದ್ಯಗಳನ್ನು ವಾಚನ ಮಾಡುತ್ತಾನೆ. ಅವಧಾನಿಯು ಅದರ ಪ್ರಸಂಗ ವಿಶೇಷವನ್ನು ತಿಳಿಸಿ ಮೂಲ ಆಕರ ಇತ್ಯಾದಿ ವಿವರಣೆಯನ್ನು ನೀಡಬೇಕಾಗುತ್ತದೆ. ಇದಕ್ಕೆ ಅವಧಾನಿಗೆ ಸಮಗ್ರ ಕಾವ್ಯದ ಪರಿಚಯ, ಅಪಾರ ನೆನಪಿನ ಶಕ್ತಿಯು ಅವಶ್ಯಕ.
ಉದಾಹರಣೆಗೆ: ಕನ್ನಡದ ಅವಧಾನವಾದರೆ ೯ನೇ ಶತಮಾನದ ವಡ್ಡಾರಾಧನೆಯ ಸಾಲಿನಿಂದ ಹಿಡಿದು ೨೦ನೇ ಶತಮಾನದ ಬಣ್ಣದ ತಗಡಿನ ತುತ್ತೂರಿವರೆಗೆ ಎಲ್ಲಾ ಪ್ರಸಿದ್ಧ ಪರಿಚಿತ, ಕಾವ್ಯ, ಕೃತಿ, ಕರ್ತೃಗಳ ಬಗ್ಗೆ ಮಾಹಿತಿ ಇರಬೇಕು ಮತ್ತು ಅಷ್ಟರಮಟ್ಟಿನ ವ್ಯಾಪಕ ಪರಿಚಯ ಅಧ್ಯಯನ ಅತೀ ಅಗತ್ಯ.
೭. ಅಪ್ರಸ್ತುತ ಪ್ರಸಂಗ: ಘಂಟಾನಾದ ಹೀಗೆ ಇವೆಲ್ಲವುಗಳಿಂದ ಒಡಗೂಡಿದ ಒಂದು ರಚನೆಯೇ ಅವಧಾನ. ಇಷ್ಟಾಗುವಾಗ ಸುಮಾರು ೨ ೧/೨ ಯಿಂದ ೩ ಗಂಟೆಯ ಕಾಲಾವಕಾಶದಲ್ಲಿ ಸಭಿಕರಿಗೆ ಸಾಹಿತ್ಯದ, ಸಂಸ್ಕೃತಿಯ ರಸದೂಟವೇ ದೊರೆಯುತ್ತದೆ.
ಹೀಗೆ ಅವಧಾನಿಯ ಶ್ರೇಷ್ಠತೆ ಅವಧಾನದ ಸಂಪೂರ್ಣ ಧಾರಣದ ವೇಳೆಗೆ ಸಾಬೀತಾಗಿ ಜನ ನಿಬ್ಬೆರಗಾಗುವಂತೆ ಆಗಿರುತ್ತದೆ.
ಅವಧಾನ ಒಂದು ಶ್ರೇಷ್ಠ ಕಲೆ. ಮಾನವನ ಸತತ ಪ್ರಯತ್ನ, ಅಧ್ಯಯನ ಒಲವಿನಿಂದ, ದೈವಪ್ರಸಾದವಾಗಿ ಬರುವಂತಾದ್ದು. ಹಿಂದೆ ಭಾರತದ ಅನೇಕ ಭಾಷೆಗಳಲ್ಲಿ ಅನೇಕರೀತಿಯ ಅವಧಾನಿಗಳಿದ್ದರು. ಎಂತಲೇ ಆ ಕುಟುಂಬದ ಹೆಸರುಗಳು ಇಂದಿಗೂ ಇವೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಬದಲಾಗಿರುವ ಜನರ ಅಭಿರುಚಿಯಲ್ಲಿ ಸಾಹಿತ್ಯ, ಸಂಸ್ಕೃತಿ, ನಮ್ಮತನಗಳು ಮೂಲೆಗುಂಪಾಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ನಡುವೆಯೂ ಸಹ ಇಂದಿಗೂ ಸಹ ಕೆಲವು ಅವಧಾನಿಗಳಿದ್ದಾರೆ. ತಮ್ಮ ವಿಶೇಷ ಹಾಗೂ ಭಗೀರಥ ಪ್ರಯತ್ನದಿಂದ ಸಾಹಿತ್ಯ ಗಂಗೆಯನ್ನು ವಿವಿಧ ಕ್ಷೇತ್ರಗಳಲ್ಲಿ ಹಾಯಿಸಿ ಹುಲುಸಾದ ಬೆಳೆ ತೆಗೆದು ಜನರ ಜೀವನ ಸಾಹಿತ್ಯ ಸಂಸ್ಕೃತಿ ಇವುಗಳನ್ನು ಹಸನು ಮಾಡಲು ಶ್ರಮಿಸುತ್ತಿದ್ದಾರೆ.
ಇಂತಹ ಅಧ್ಭುತ ಕಲೆ ಕೇವಲ ಇತಿಹಾಸದಲ್ಲಿ ಮಾತ್ರ ಓಡುವಂತಾಗದೇ ಇರಲು ಪ್ರಯತ್ನಪಡುತ್ತಿರುವ ಇಂತಹ ಅವಧಾನಿ ಕುಲಕ್ಕೆ, ಅಂತಹ ಅವಧಾನಿಗಳ ಕಲಾಪೋಷಣೆಗೆ, ಅದರಲ್ಲಿ ಅಭಿರುಚಿಯಿರುವ ಸಹೃದಯ ಬಳಗಕ್ಕೆ, ಮತ್ತು ಪೃಚ್ಛಕ ಮಹಾಶಯರುಗಳಿಗೆ `ವಿಶ್ವಕನ್ನಡ’ ತನ್ನ ಅಭಿನಂದನೆಯನ್ನು ಸಲ್ಲಿಸುತ್ತದೆ.
ಗ್ರಂಥಋಣ: “ಅವಧಾನ ಕಲೆ”   – [http://vishvakannada.com/node/325|ಡಾ. ರಾ.

ವಿಶ್ವ ಕನ್ನಡ -

Friday, February 14, 2014

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ .... - ರಾಜೇಂದ್ರ ಪ್ರಸಾದ್

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ
ಪ್ರಭುವೇ
ಕೈಗಳಿಗೆ ಅಹಮ್ಮಿನ ಮೊಳೆ
ತಲೆಗೆ ಪ್ರತಿಷ್ಠೆಯ ಮೊಳೆ
ಕಾಲಿಗೆ ಹಿಟ್ಲಿರಿನ ಮೊಳೆ
ಕಡೆಗೆ ಎದೆಗೆ ದ್ವೇಷದ ಮೊಳೆ ಹೊಡೆದರಯ್ಯ
ಹೆಸರಿಲ್ಲದ ಮುಳ್ಳಿನ ಕಿರೀಟ
ಕಣ್ಣಿನಾಳಕ್ಕೆ ಹೊಕ್ಕಿದೆ

ಈ ಕಡುಪಾಪಿಯ ಸಾವು
ಒಂದು ಯಕಶ್ಚಿತ್ ಮೌನವಷ್ಟೇ..
ಕ್ಷಮಿಸಿ ಬಿಡಯ್ಯ
ಮೊಳೆಗಳಿಗೆ ಕೆಂಡಸಂಪಿಗೆಯ ಮರುಹುಟ್ಟು
ಕಾಣಿಸಯ್ಯ
ಅವುಗಳ ಘಮಲಿನಲ್ಲಿ ಮಲಗುತ್ತೇನೆ
ಶವಪೆಟ್ಟಿಗೆ ಎಂದೋ ಸಿದ್ದಗೊಳಿಸಿದ್ದಾರೆ
ಮುಳ್ಳಿನ ಹೊದಿಕೆ ಹೊದಿಸಿ..
ನಾನು ಮಲಗುತ್ತೇನೆ
ಯಾರು ಏಳಿಸಲಾಗದ ಒಂದು ನಿದ್ದೆಗೆ
ಒಂದು ಯಕಶ್ಚಿತ್ ನಿದ್ದೆಗೆ.

-  ರಾಜೇಂದ್ರ ಪ್ರಸಾದ್

ರಕ್ತ ದಾನ ಶಿಬಿರ15th Feb 2014


ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?


ಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹಾ ಆಗುತ್ತಾ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
 ಹಾಗಾದರೇ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇದೆ. ಆದರೇ ಉತ್ತರ ಒಂದೇ ಪ್ರೀತಿ ಎಂದರೇ ಪ್ರೀತಿ ಅಷ್ಟೇ. ಈ ಬಗ್ಗೆ ಉತ್ತರಿಸುವ ಎಲ್ಲರೂ  ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರೇ ವಿನಹ: ಅದಕ್ಕೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ.  ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೇ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು.
ತಂದೆ ತಾಯಿ - ಮಕ್ಕಳ ಪ್ರೀತಿ : ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು. ಚಿಕ್ಕವರಿದಾಗ ದಿನಾಲು ಶಾಲೆಗೆ ಹೋಗಿ ಬರಬೇಕು, ಚೆನ್ನಾಗಿ ಓದಬೇಕು, ಉತ್ತಮ ಮಾಕ್ಸ೯ ತೆಗೆಯಬೇಕೆಂಬ ಅಪೇಕ್ಷೆ, ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚಚಿ೯ಸಬೇಕು. ದುಡಿದು ತಂದು ಹಣವನ್ನು ನೀಡಬೇಕು. ತಾವು ಹೇಳಿದವರಿಗೆ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಸಹವಾಸ ಇರಬೇಕು. ತಾವು ಹೇಳಿದಲ್ಲೇ ಕೆಲಸ ಮಾಡಬೇಕು. ಮನೆಯಿಂದ ದೂರವಿದ್ದರೆ ತಮಗೆ ದಿನಾಲು ಪೋನ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ಅಪೇಕ್ಷೆ. ಮಕ್ಕಳಿಗೆ ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಂಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು.  ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ  ಎಂಬುದು ಮಕ್ಕಳ ಅಪೇಕ್ಷೇ
ಈ ರೀತಿಯ ಪರಸ್ಪರ ಅಪೇಕ್ಷೆಗಳು ಹೊಂದಾಣಿಕೆ ಆಗದೇ ಇರುವಾಗ ಮನಸ್ಥಾಪ, ಜಗಳ, ಬೇರೆ ಮನೆ, ಬೇರೆ ಅಡುಗೆ ಇವು ಸ್ವಾಭಾವಿಕವಾಗಿ ಹುಡುಕಿಕೊಂಡು ಬರುವುದು.
ಹುಡುಗ-ಹುಡುಗಿ ಪ್ರೀತಿ : ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡಿಗಿ/ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಅಪೇಕ್ಷೆ ಆತನ/ಆಕೆಯ ಊಟ, ತಿಂಡಿ, ಇತರೆ  ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ, ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಸನ್ ಇತ್ಯಾದಿ.... ಇಬ್ಬರು ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತಾಪ... ನಂತರ ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ........ ಪುನ: ದುಖ: ಪಶ್ಚಾತಾಪ.......ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ.
ಗಂಡ ಹೆಂಡತಿ ಪ್ರೀತಿ - ತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು. ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು,ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ,  ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು. ಆಭರಣ ಖರೀದಿಸಬೇಕು. ಆಗಾಗ  ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನನ್ನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು ಇತ್ಯಾದಿ, ಇತ್ಯಾದಿ ಅಪೇಕ್ಷೆಗಳು... ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದೂ ಒಬ್ಬರು ಸೋಲಲ್ಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನಾಭಿಪ್ರಾಯ ಇದೆಯೋ ಅಲ್ಲಿ ಮೂರನೇ ವ್ಯಕ್ತಿ ಅಂದರೆ ಹಿರಿಯರ ಪ್ರವೇಶ ಬುದ್ದಿಮಾತು, ಕೋರ್ಟ ವಿಚ್ಛೇಧನ ಇತ್ಯಾದಿ...
ಹೌದು ಎಲ್ಲಾ ಪ್ರೀತಿನೇ ಇವೆಲ್ಲ ಇದ್ದರೆ ಮಾತ್ರ ಜೀವನದಲ್ಲಿ ಮಜಾ ಇದು ಪ್ರೀತಿಯ ಸುಳಿಯಲ್ಲಿ ಸಿಕ್ಕವರ ಹೇಳಿಕೆಯಾದರೆ, ಇನ್ನೊಮ್ಮೆ ನಾನು ಪ್ರೀತಿಯ ಹುಚ್ಚಿನಲ್ಲಿ ಬೀಳುವುದಿಲ್ಲ ಎಂಬುದು ಅಸಹಾಯಕರ ಹೇಳಿಕಯಾಗಿರುವುದು. ಒಟ್ಟಾರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಪ್ರೀತಿಯ ಮಕ್ಕಳೆ ಆಗಿರುವರು. ಪ್ರೀತಿಯ ಬಗೆ ಬೇರೆ ಬೇರೆ ಆಗಿರಬಹುದು ಆದರೇ ಪ್ರೀತಿ ಇಲ್ಲದ ವ್ಯಕ್ತಿ ಇರಲು ಸಾಧ್ಯವೇ ಎಂದು ಹೇಳಬಹುದಾಗಿದೆ.
ಹಾಗಾದರೇ...........
ಅಪೇಕ್ಷೆ ರಹಿತ ಪ್ರೀತಿ ಸಾಧ್ಯವೇ?  ಪ್ರೀತಿ ಎಂದರೇನೇ ಅಪೇಕ್ಷೇ ಎಂಬುದು ಒಂದು ವಾದ,  ಆದರೇ ಅಪೇಕ್ಷ ರಹಿತವಾದ ಪ್ರೀತಿ ಎಂದರೇ ಅದೊಂದು ಆಧ್ಯಾತ್ಮ ತಪ್ಪಸ್ಸು ಆಗಿರುವುದು. ಆದರೇ ಪ್ರಾಪಂಚಿಕ ಬದುಕಿನಲ್ಲಿ ಬದುಕುವಾದ ಅಪೇಕ್ಷ ರಹಿತವಾದ ಪ್ರೀತಿಯನ್ನು ಕಲ್ಪಿಸುವುದು ಅಸಾಧ್ಯವಾದ ಮಾತಾಗಿರುವುದು.
ತಂದೆ ತಾಯಿ, ಅಣ್ಣ-ತಮ್ಮ, ಅಕ್ಕ-ತಮ್ಮ, ಸಂಭಂದಿಕರುಗಳು, ಸ್ನೇಹಿತರು, ಪ್ರೇಯಸಿ, ಹೆಂಡತಿ, ಮಕ್ಕಳು, ಶಿಕ್ಷಕರು, ಗುರು, ಸಹಪಾಠಿ, ಇವರುಗಳಲೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಅಪೇಕ್ಷೆಯಿಂದಲ್ಲೇ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವರು. ಎಲ್ಲರಿಗೂ ತಾವು ತಾವು ಕಂಡು ಕೊಂಡ ಜೀವನವೇ ಮುಖ್ಯ ಅದನ್ನೇ ಎಲ್ಲರೂ ಅನುಸರಿಸಬೇಕು ಎಂಬ ಅಪೇಕ್ಷೆ ಯಾರಿಗೂ ಎದುರಿಗಿನ ವ್ಯಕ್ತಿಯ ಭಾವನೆ ಬಗ್ಗೆ ಬೆಲೆ ಇಲ್ಲ.  ಹುದ್ದೆ, ಸಂಪತ್ತು, ಸೌಂಧರ್ಯ, ಜ್ಞಾನ, ಇವುಗಳು ಮುಖ್ಯವಾಗಿ ಪ್ರೀತಿಯ ಮೇಲೆ ಪ್ರಭಾವ ಬೀರುವುದನ್ನು ನಾವು ಕಾಣುತ್ತಿರುವೆವು.
ದಾರಿಯಲ್ಲಿ ಹೋಗುವಾಗ ರಸ್ತೆಯಲ್ಲಿರುವ ಬೀದಿ ಮಕ್ಕಳು, ಹುಚ್ಚ, ಕುಡುಕ, ಮಹಿಳೆ ಬಗ್ಗೆ ನಮಗೆ ಕೇವಲ ಕನಿಕರ ಇರುವುದು ಹೊರತು ನಮ್ಮಿಂದ ಯಾವುದೇ ಸಹಾಯ ಮಾಡುವುದಕ್ಕೆ ಧೈರ್ಯ ಬರುವುದಿಲ್ಲ.  ಹೆಚ್ಚೆಂದರೆ 10 ರೂಪಾಯಿ ನೀಡಿ ಅಲ್ಲಿಂದ ಕಾಲನ್ನು ಕೀಳುವೆವು. ಕಾರಣ ಅವರ ಬಗ್ಗೆ ನಮಗೆ ಪ್ರೀತಿ ಇಲ್ಲ. ಅಂದರೆ ಅವರ ಬಗ್ಗೆ ಅಪೇಕ್ಷೆಯೂ ಇಲ್ಲ. ಆದರೇ ಅವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಲು ನಮಗೆ ಇಷ್ಟ. ಅಂದರೆ ನಮಗೆ ಅಪೇಕ್ಷೆ  ರಹಿತವಾದ ಪ್ರೀತಿ ಎಂಬುದು ಇಷ್ಟ ಆದರೇ ಅದನ್ನು ಅನುಸರಿಸಲು ಕಷ್ಟ.
ನಾ ಪ್ರೀತಿಸುವ ಎಲ್ಲಾ ವ್ಯಕ್ತಿಗಳ ಬಗ್ಗೆಯೂ ನನಗೆ ಅಪಾರವಾದ ಅಪೇಕ್ಷೆ ಇರುವುದು. ಆದರೇ ಅವರು ನನ್ನ ಬಗ್ಗೆ ಏನಾದರೂ ಅಪೇಕ್ಷೆ ಇರಿಸಿಕೊಂಡರೆ ಅದು ಕಷ್ಟವಾಗಿ ಪರಿಗಣಿಸುವುದು. ಇದು ಇಂದಿನ ಪ್ರಂಪಚದಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ವಿಧ್ಯಮಾನವಾಗಿರುವುದು.
ನನ್ನ ಮಗ ಮೊದಲಿನಂತೆ ಇಲ್ಲ. ನಮ್ಮ ಅಪ್ಪ ಅಮ್ಮ ಮೊದಲಿನಂತೆ ಇಲ್ಲ. ಮದುವೆಯಾದ ಅಕ್ಕ ಮೊದಲಿನಂತೆ ಇಲ್ಲ, ಮನೆಯಿಂದ ಹೊರಗಡೆ ಇರುವ ಅಣ್ಣ ಮೊದಲಿನಂತೆ ಇಲ್ಲ ಈ ಎಲ್ಲಾ ಮೊದಲಿನಂತೆ ಇಲ್ಲಾ ಎಂಬ ಪ್ರಶ್ನೆಗಳು ಬರುವುದು ಯಾಕೆ? ಒಂದು ವ್ಯಕ್ತಿಯ ಬಗ್ಗೆ ಇವರು ಹೀಗೇನೇ ಎಂದು ನಾವು ನಮ್ಮಲ್ಲಿಯೇ ನಿರ್ಧರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಯಾರೊಬ್ಬರ ಬಗ್ಗೆ ಈ ರೀತಿಯಾದ ಅಪೇಕ್ಷೆ ಇರಿಸಿಕೊಂಡು ಅದು ಆಗದೇ ಇದ್ದಾಗ ದುಖ: ಪಡುವುದು ಯಾಕೆ? ಪ್ರೀತಿ ಎಂಬುದು ಒಂದು ರೀತಿಯಲ್ಲಿ ಕೈಗೆ ಸಿಗದ ವಸ್ತು. ಅದು ತನ್ನದು ತಾನು ಹೇಳಿದ ಹಾಗೇ ಕೇಳುವುದು ಎಂಬ ಭ್ರಮೆ ಬೇಡ ಯಾಕೆಂದರೆ ನಾವು ಪ್ರೀತಿಯನ್ನು ಕಾಣುತ್ತಿರುವುದು ಬರೀ ಮನುಷ್ಯ ಜೀವಿಗಳಲ್ಲಿ ಮಾತ್ರ.
ಪ್ರೀತಿಯ ಹುಚ್ಚು ಚಟ
ಮಾತೆವೊಲೊ ಪಿತನವೊಲೊ ಪತಿಯವಲೊ ಸತಿಯವೊಲೊ
ಭ್ರಾತಸುತಸಖರವೊಲೊ ಪಾತ್ರವೊಂದಕ್ಕೆ ತಾಂ
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ
ಪ್ರೀತಿಯ ಹುಚ್ಚು ಚಟ- ಮಂಕುತಿಮ್ಮ .
(ಮನುಷ್ಯ ತನ್ನದನ್ನು ಪರರಿಗೆ ಕೊಡಲು ಮತ್ತು ಪರರಿಂದ ಏನಾದರೂ ಪಡೆಯಲು  ಪ್ರೀತಿ ಪ್ರೇಮಗಳ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಹಾಗೆ ಹಾಗೆಕೊಡಲು ಅಥವಾ ಪಡೆದುಕೊಳ್ಳಲು ಅವನು ತಾಯಿಯ, ತಂದೆಯ, ಪತಿಯ ಪತ್ನಿಯ,ಸ್ನೇಹಿತನ ಅಣ್ಣ-ತಮ್ಮಂದಿರ ಅಥವಾ ಅಕ್ಕ ತಂಗಿಯರ ಪಾತ್ರವನ್ನು ವಹಿಸುತ್ತಾನೆ(ಳೆ). ಪ್ರೀತಿ ತೋರುವುದು ಮನಿಷ್ಯನಿಗೊಂದು ಚಟ)
                                                                                                              ವಿವೇಕ ಬೆಟ್ಕುಳಿ  vivekpy@gmail.com


Thursday, February 13, 2014

ಮದುವೆ


ಬಾಲ್ಯದಲ್ಲಿ ಇರುವಾಗ ಎಲ್ಲರ ಪ್ರೀತಿ ನನ್ನ ಮೇಲೆ ಇತ್ತು
ನಾನಾಗ ತುಂಬಿದ ಬಸ್ಸಿನಲ್ಲಿ ಇದಂತೆ ಅನುಭವ ಪಟ್ಟೆ,
ಅಲ್ಲಿಂದ ಹಾರಿ ಹುಡುಗನಾದಾಗ ಹುಡುಗಿಯ ಸೆಳೆತಕ್ಕೆ ಒಳಗಾದ
ನಾನಾಗ ಮಾರುತಿ ಓಮಿನಿಯಲ್ಲಿ ಇದಂತೆ ಅನುಭವ ಪಟ್ಟೆ,
ನಿಲ್ಲಲಿಲ್ಲ ನನ್ನ ಪ್ರಯಾಣ,
ಯೌವನದಲ್ಲಿ ಪ್ರೇಯಸಿಯ ಪ್ರೀತಿಗೆ ಒಳಪಟ್ಟೆ,
ಗಾಳಿಯಲ್ಲಿ ಹಾರಾಡುವ ವಿಮಾನದ ಅನುಭವ ಪಟ್ಟೆ
ಯೌವನದ ಕೊನೆಯಲ್ಲಿರುವ ನಾನು ಇಂದು ವಿಮಾನದಿಂದ ಸಿಡಿದು ಬಿದ್ದ ತುಣುಕಾಗಿರುವೆ
ಇಂದು ನನಗೆ ಬಸ್ಸಿನ ಆಸರೆಯಿಲ್ಲ, ಓಮಿನಿಯ ಸೆಳೆತವಿಲ್ಲ, ವಿಮಾನದ ಪ್ರೀತಿಯಿಲ್ಲ
ಆದರೂ ಎದೆಬಡಿತ ನಿಂತಿಲ್ಲ. ಸುತ್ತಲು ನಿಶ್ಯಬ್ದ.
ದೂರದಲ್ಲಿ ಸಪ್ಪಳ!!


ವಿವೇಕ ಬೆಟ್ಕುಳಿ 

Tuesday, February 11, 2014

ಕವನ - ಅರ್ಥವಾಗದವಳು , ಹುಡುಗಿ, ಹೆಣ್ಣು

ಅರ್ಥವಾಗದವಳು

ಇದ್ದಕ್ಕಿಂದಂತೆ ಬಂದವಳು
ಬದುಕಿನ ಅರ್ಥ ತಿಳಿಸಿದವಳು
ಗುರುವಾಗಿ ನನ್ನ ತಿದ್ದಿದವಳು
ಸ್ನೇಹಿತೆಯಾಗಿ ನನ್ನ ಅರ್ಥ ಮಾಡಿಕೊಂಡವಳು
ತಾಯಿಯಾಗಿ ನನ್ನ ಸಂತೈಸಿದವಳು
ಪ್ರೇಯಸಿಯಾಗಿ ನನ್ನ ಪ್ರೇಮಿಸಿದವಳು,
ನಾ ಅಂದು ಕೊಂಡೆ ನೀನೇ ನನ್ನವಳು.
ನಾ ಅದನ್ನು ಹೇಳುವ ಹೊತ್ತಿಗೆ ನೀ ಆಗಿದೆ ಬೇರೆಯವಳು
ಯಾಕೆ ಹೀಗಾಯ್ತು? ಕೊನೆಗೆ ಸಿಕ್ಕಿತ್ತು ಉತ್ತರ, ನೀ ಅರ್ಥವಾಗದವಳು!
         
 ಹುಡುಗಿ

ಬಿರುಗಾಳಿಯಂತೆ ಬಂದೆ,
ನೀನು ತಂಗಾಳಿಯಂತೆ ಎಂದು ನಾನೆಂದುಕೊಂಡೆ,
ಆದರೆ ತಿಳಿಯಲಿಲ್ಲ ಗೆಳತಿ ನಿನ್ನಯ ನಡೆ
ನೀ ಬಿಟ್ಟು ಹೋದಾಗ ತಿಳಿಯಿತು ನೀ ಸುಂಟರಗಾಳಿ ಎಂದು !

ಹೆಣ್ಣು

ಹಿಂದೆ ನೀ ಇಲ್ಲದಿರುವಾಗ ಹೆಣ್ಣು ಎಂದರೆ
ಮಮತೆ, ವಾತ್ಸಲ್ಯ, ಕರುಣೆ ಎಂದು ನಾನೆಂದು ಕೊಂಡೆ.
ಅಂದು ನೀ ಬಂದಾಗ ಹೆಣ್ಣು ಎಂದರೆ..
ಸ್ನೇಹ, ಪ್ರೀತಿ,  ಪ್ರೇಮ, ಮೋಹ, ಕಾಮ
ಎಂದು ನಾನೆಂದು ಕೊಂಡೆ.
ಇಂದು ನೀ ಬಿಟ್ಟು ಹೋದಾಗ ನಾ ತಿಳಿದುಕೊಂಡೆ ಹೆಣ್ಣು ಎಂದರೆ
ಅಶಾಂತಿ, ದ್ವೇಷ, ಸ್ವಾಥ೯, ಮೋಹ, ಕಪಟ...,,,,,
ಕೊನೆಗೂ ತಿಳಿಯಿತು ಗೆಳತಿ ಹೆಣ್ಣೆ -  ಸೃಷ್ಠಿ ಲಯ      
                                                   
  ವಿವೇಕ ಬೆಟ್ಕುಳಿ 

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ? - ಶ್ರೀವತ್ಸ ಜೋಶಿ

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ?
==========================
ಬಟ್ಟೆಯಂಗಡಿಯಲ್ಲಿ ಸೀರೆ ತಗೊಳ್ಳುವಾಗ ಹುಡುಕಿ ಹುಡುಕಿ ಎರಡನ್ನು ಶಾರ್ಟ್‌ಲಿಸ್ಟ್ ಮಾಡಿ ಅದರ ಪೈಕಿ ಯಾವುದು ಫೈನಲ್ ಎಂದು ನಿರ್ಧರಿಸಲಾಗದೆ ಎರಡನ್ನೂ ಬಿಟ್ಟು ಬೇರೊಂದು ಅಂಗಡಿಯಲ್ಲಿ ನೋಡುವಾ ಎಂದು ನೀವು ಹೊರಬಂದದ್ದಿದೆಯೇ? ’ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿ’ ಅಂತನೇ ಆಗ್ಬೇಕಿಲ್ಲ. ಬೇರಾವ ಅಂಗಡಿಯಲ್ಲಿ ಬೇರಾವ ವಸ್ತು ಖರೀದಿಯ ದೃಶ್ಯ ಸಹ ಆಗ್ತದೆ. ರೆಸ್ಟೋರೆಂಟ್‌ನಲ್ಲಿ ಸೌತ್ ಇಂಡಿಯನ್ ಊಟ ತಗೊಳ್ಲಾ ಅಥವಾ ನಾರ್ತ್ ಇಂಡಿಯನ್ ನಾನ್ ಗೋಬಿ ಮಟರ್ ತಗೋಳ್ಲಾ ಅಂತನ್ನೋ ಸನ್ನಿವೇಶನೂ ಆಗ್ತದೆ. ಎರಡು ಕಂಪನಿಗಳಿಂದ ಆಫರ್ ಲೆಟರ್ ಬಂದಾಗ ಯಾವುದಕ್ಕೆ ಸೇರಲಿ ಎಂದು ತಲೆಕೆರೆದುಕೊಳ್ಳೋ ಪರಿಸ್ಥಿತಿಯೂ ಆಗ್ತದೆ. ಒಟ್ಟಿನಲ್ಲಿ, ನಿರ್ಧಾರ ತೆಗೆದುಕೊಳ್ಳಲಾರದೆ ಒಂದರೆಕ್ಷಣವಾದರೂ ನೀವು ತೊಳಲಾಡಿದ್ದಿದೆಯೇ?
ಹೌದು ಅಂತಾದರೆ ಆ ಕ್ಷಣದಲ್ಲೊಮ್ಮೆ ನೀವು ಬುರಿಡಾನ್‌ನ ಕತ್ತೆ ಆಗಿದ್ದೀರಿ ಎಂದೇ ಅರ್ಥ!
ಬುರಿಡಾನ್‌ನ ಕತ್ತೆ (Buridan's Ass) ಎಂದರೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿನ ವಿರೋಧಾಬಾಸ (paradox). ಒಂದು ಕತ್ತೆ ಇರುತ್ತದೆ. ಅದಕ್ಕೆ ವಿಪರೀತ ಬಾಯಾರಿಕೆಯೂ ವಿಪರೀತ ಹಸಿವೆಯೂ ಆಗಿರುತ್ತದೆ. ಅದರ ಇಕ್ಕೆಲಗಳಲ್ಲಿ ಒಂದು ಬಕೆಟ್‌ನಲ್ಲಿ ನೀರು ಮತ್ತೊಂದು ಬಕೆಟ್‌ನಲ್ಲಿ ಬೈಹುಲ್ಲು ಇಡಲಾಗುತ್ತದೆ. ಯಾವ ಬಕೆಟ್‌ಗೆ ಮೊದಲು ಬಾಯಿ ಹಾಕಬೇಕು ಎಂದು ನಿರ್ಧರಿಸಲಾರದೆ ಕತ್ತೆ ಸುಮ್ಮನಾಗುತ್ತದೆ. ಅಷ್ಟೇ ಅಲ್ಲ ಹಾಗೇ ಉಪವಾಸವಿದ್ದು ಕೊನೆಗೆ ಸತ್ತೇ ಹೋಗುತ್ತದೆ!
14ನೇ ಶತಮಾನದಲ್ಲಿ ಬಾಳಿದ ಫ್ರೆಂಚ್ ತತ್ತಜ್ಞಾನಿ ಜೀನ್ ಬುರಿಡಾನ್ ಎಂಬಾತ ಈ ವಿರೋಧಾಭಾಸವನ್ನು ಮೊತ್ತಮೊದಲಿಗೆ ಸಾರ್ವಜನಿಕವಾಗಿ ಚರ್ಚಿಸಿದ. ಸಾಕಷ್ಟು ಗೇಲಿಗೂ ಒಳಗಾದ. ಅವನು ಪ್ರಯೋಗ ಮಾಡಿದ್ದು ತನ್ನ ಸಾಕುನಾಯಿಯ ಮೇಲೆ. ರಷ್ಯನ್ ತತ್ತ್ವಜ್ಞಾನಿ ಪಾವ್ಲೊ ಮಾಡಿದ್ನಲ್ಲ ಹಾಗೆಯೇ ಬುರಿಡಾನ್‌ನ ಪ್ರಯೋಗಪಶು ಸಹ ನಾಯಿಯೇ ಆಗಿತ್ತಂತೆ. ಆದರೆ ನಾಯಿಗಾದರೂ ಸ್ವಲ್ಪ ಸ್ಮಾರ್ಟ್‌ನೆಸ್ ಇರ್ತದೆ, ಎದುರಿಗೆ ಆಹಾರವಿದ್ದೂ ನಿರ್ಧರಿಸಲಾರದೆ ಉಪವಾಸದಿಂದ ಸತ್ತುಹೋಗಬೇಕಿದ್ದರೆ ಅದು ಕತ್ತೆಯಂಥ ದಡ್ಡ ಪ್ರಾಣಿಯೇ ಇರಬೇಕು ಎಂದು ತಮಾಷೆ ಮಾಡಿದ ಜನ ಆ ಪ್ರಯೋಗವನ್ನು "ಬುರಿಡಾನ್‌ನ ಕತ್ತೆ" ಎಂದೇ ಗುರುತಿಸಿದರು. ನಿರ್ಧಾರ ಮಾಡಲಾಗದ, ಡಿಸಿಶನ್ ಮೇಕಿಂಗ್ ಕೆಪ್ಯಾಕಿಟಿ ಇಲ್ಲದ ವ್ಯಕ್ತಿಯನ್ನು ’ಬುರಿಡಾನ್‌ನ ಕತ್ತೆ’ ಎಂದು ತಮಾಷೆ ಮಾಡುವುದು ರೂಢಿಯಾಯ್ತು.
ಈಗ 2014ರ ಲೋಕಸಭಾ ಚುನಾವಣೆಯಲ್ಲಿ ನವಯುವಕರು, ದೇಶ ಮುನ್ನಡೆಯಬೇಕೆಂಬ ಉತ್ಸಾಹಿಗಳು ಮೋದಿಯನ್ನೇ ಬೆಂಬಲಿಸುವುದು ಎಂದು ಆಗಲೇ ನಿರ್ಧರಿಸಿರುವಂತಿದೆ. ಮೋದಿಯನ್ನು ಅತಿಭಯಂಕರವಾಗಿ ವಿರೋಧಿಸುವವರದೂ ನಿರ್ಧಾರ ಹೇಗೂ ಆಗಿದೆ. ಉಳಿದವರ ಪರಿಸ್ಥಿತಿ ಏನು? ಅವರು ತಾವೂ ಉಪವಾಸ ಬಿದ್ದು ದೇಶವನ್ನೂ ಉಪವಾಸಕ್ಕೆ ತಳ್ಳುವ ಬುರಿಡಾನ್ ಕತ್ತೆಗಳಾಗದಿದ್ದರೆ ಸಾಕು!

 ಶ್ರೀವತ್ಸ ಜೋಶಿ

Monday, February 10, 2014

ಕವನ - ಪ್ರೀತಿ, ಹುಡುಗಿ ಸಹವಾಸ, ಹುಚ್ಚು

 ಪ್ರೀತಿ
ಸಿದ್ದರಾಮಯ್ಯನವರಿಗೆ ಅಹಿಂದ ಮೇಲೆ ಪ್ರೀತಿ
ದೇವಗೌಡರಿಗೆ ಮಕ್ಕಳ ಮೇಲೆ ಪ್ರೀತಿ
ಯಡಿಯೂರಪ್ಪನವರಿಗೆ ಲಿಂಗಾಯತ್ ಮೇಲೆ ಪ್ರೀತಿ
ಗೆ೯ ಸಾಹೇಬರಿಗೆ ದಲಿತರ ಮೇಲೆ ಪ್ರೀತಿ
ಎಲ್ಲಾ ಪ್ರೀತಿಯ ಮರ್ಮ ಒಂದೇ ಅದೇ ಅಧಿಕಾರದ ಮೇಲಿನ ಮೋಹ ಮಾತ್ರ.
  

ಹುಡುಗಿ ಸಹವಾಸ
ಹುಡುಗ ಹುಡುಗಿಯ ಸಹವಾಸಕ್ಕೆ ಬರುವ ಮುಂಚೆ
ತುಂಬಿದ ಸಾಗರವಾಗಿದ್ದ,
ಹುಡುಗ ಹುಡುಗಿಯ ಸಹವಾಸದಲ್ಲಿ ಇದ್ದಾಗ,
ಬೇಕಷ್ಟು ನೀರು ಕೊಡುವ ಬಾವಿಯಾಗಿದ್ದ,
ಹುಡುಗಿ ಹುಡುಗನನ್ನು ಬಿಟ್ಟು ಹೋದಾಗ,
ಹುಡುಗ ಒಣಗಿದ ಕೆರೆಯಂತೆ ಬರಬಾದ ಆಗಿದ್ದ.


 ಹುಚ್ಚು
ಭೃಷ್ಟ ವ್ಯವಸ್ಥೆ ಸುಧಾರಿಸುವ ಹುಚ್ಚು ಕ್ರೇಜಿವಾಲಗೆ,
ಸಂಪೂರ್ಣ ವ್ಯವಸ್ಥೆ ಸುಧಾರಿಸುವ ಹುಚ್ಚು ರಾಹುಲ ಗಾಂಧಿಗೆ
ದೇಶ ಸುಧಾರಿಸುವ ಹುಚ್ಚು ನರೇಂದ್ರ ಮೋದಿಗೆ
ಇವರಿಗೆಲ್ಲರಿಗೆ ಬುದ್ದಿ ಕಲಿಸುವ ಹುಚ್ಚು ಮತದಾರಿಗೆ
ಒಟ್ಟಾರೆ ಎಲ್ಲರಿಗೂ ಬೇರೆಯವರನ್ನು ಸುಧಾರಿಸುವ ಹುಚ್ಚು ನಾವು ಬದಲಾಗುವ ಮಾತೇ ಇಲ್ಲ. !

ವಿವೇಕ ಬೆಟ್ಕುಳಿ

‘ಸಾಫ್ಟ್ ಜಗತ್ತಿನಲ್ಲಿ’ - ಕವನ ಸಂಕಲನ
ನನ್ನ ಗೆಳೆಯ ಚೇತನ ಸೊಲಗಿ ಅವರ ಮೊದಲ ಕವನ ಸಂಕಲನ ‘ಸಾಫ್ಟ್ ಜಗತ್ತಿನಲ್ಲಿ’ 

## ನನಗೆ ನಾ ಹೇಳಿಕೂಂಡೆ -

* ನಡೆ ಮತ್ತು ನುಡಿ ಒಂದಾಗಿರೇ ಬದುಕು. ಇಲ್ದೆದಿರೆ... ಅದು ಒಂದು ಬದುಕೇ ? 

* "ಬೆನ್ನುಡಿ "ಗಿಂತಲೂ "ಮುನ್ನುಡಿ" ಚಂದ

ಕೆಡಕು ಮಾಡಿದವನಿಗೆ ಕೆಡುಕು ಮಾಡಿದರೆ ನಾನೂ ಕೆಡುಕನೆ, 

## ನನಗೆ ನಾ ಹೇಳಿಕೂಂಡೆ

Tuesday, February 4, 2014

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ
ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು
ಫೆಬ್ರವರಿ 1 ಮತ್ತುರಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ  8ನೇ ರಾಷ್ಟ್ರೀಯ ವಿದ್ಯಾಥಿ೯ ಸಮ್ಮೇಳನ  ಸೈನ್ಸ್ ಎಂಡ್ ಸ್ಪೀರಿಜ್ಯೂಲ್ ಕ್ವಿಷ್ಟ್   ಜರುಗಿತು. ಸಮ್ಮೇಳನವನ್ನು ಭಕ್ತಿವೇದಾಂತ ಸಂಸ್ಥೆ  ಕಲಕತ್ತಾ ಮತ್ತು ಆಯ್ ಆಯ್ ಟಿ ಬನಾರಸ್ ಹಿಂದೂ ವಿಶ್ವವಿಧ್ಯಾಲಯ ಇವುಗಳು ಜಂಟೀಯಾಗಿ ಆಯೋಜಿಸಿದ್ದವು.
 ಸಮ್ಮೇಳನದಲ್ಲಿ ನಾ೯ಟಕದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಸಮ್ಮೇಳನವನ್ನು ದೀಪ ಬೆಳಗಿಸುವ ಮುಖಾಂತರ ಸ್ವಾಮಿಜಿಯವರು ಉದ್ಘಾಟಿಸಿದರು.
ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ  ಎರಡು ಮುಖಗಳಿದಂತೆ ಇರುವುದು. ಆಧ್ಯಾತ್ಮದಲ್ಲಿಯೇ ವಿಜ್ಞಾನದ ರಹಸ್ಯ ಅಡಗಿರುವುದು ಎಂದು ಹೇಳಿದ ಸ್ವಾಮಿಜಿಯವರು ರೀತಿಯ ಸಮ್ಮೇಳನವನ್ನು ಆಯೋಜಿಸಿ ವಿದ್ಯಾಥಿ೯ ಳಿಗೆ ಅನ್ವೇಷಣೆ ಮಾಡಲು ಪ್ರೋತ್ಸಾಹಿಸುತ್ತಿರುವ ಭಕ್ತಿವೇದಾಂತ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.  2 ದಿನದ ಕಾರ್ಯಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಭಾಗವಹಿಸದ್ದ ಎಲ್ಲರಿಗೂ ಕರೆನೀಡಿದರು
ಆಯ್ ಆಯ್ ಟಿ ಗೋವಾಹಟಿಯ ಬೋರ್ಡ ಆಫ್ ಗವರ್ನರದ ಚೇರಮ್ಯಾನ ಪ್ರೋ. ಆರ್.ಪಿ ಸಿಂಗಭಕ್ತಿ ವೇದಾಂತ ಸಂಸ್ಥೆ ಕಲಕತ್ತಾದ ಅಧ್ಯಕ್ಷರಾರ ಶ್ರೀ ವಾಸುದೇವ್ ರಾವ್ಡಾ. ಸುದೀಪ್, ಡಾ. ಪಿ ಕೆ ಗೋಸ್ವಾಮಿಡಾ. ಪ್ರಥ್ವೀಶ ನಾಗ್, ಪ್ರೋ ಪಿ,ಕೆ ಮುಖ್ಯೋಪಾಧ್ಯಾಯ ಹಾಗೂ ಪ್ರೋ ಕೆ ತ್ರಿಪಾಠಿಯವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
2 ದಿನದ ಸಮ್ಮೇಳನದಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಚೆ೯ಗಳು ನಡೆದವು. ಇದರಲ್ಲಿ ದೇಶದ ಹಲವಡೆಯಿಂದ ಬಂದ ವಿದ್ಯಾಥಿ೯ ಗಳು ಭಾಗವಹಿಸಿದ್ದರು.


ವಿವೇಕ ಬೆಟ್ಕುಳಿ