ನೆನಪಿನ ದೋಣಿಹಿಡಿದು...

ವ್ಯಕ್ತಿ ಗಮನಿಸಬೇಕಾದದ್ದು ಇದು -
ಕೆಲವೊಮ್ಮೆ ಈ ಸಲಿಲತೆಗಳು ನನ್ನ ಗ್ರಹಣಕ್ಕೆ ಬಂದುದೂ ಉಂಟು.
ನಮ್ಮ ಕಾಲೇಜಿನಲ್ಲಿ ಕೆಲವು ಸೃಜನಾತ್ಮಕ ಇಂಗ್ಲೀಷ್ ಸಿನಿಮಾ ತೋರಿಸುತಿದ್ದ ಕನ್ನಡ ಸಂಘದ ಎಲ್ಲರನ್ನೂದೂರುತಿದ್ದವರ ಪಾಡೂ ಹೀಗೇ ಆಗಿತ್ತು. ಸಾಹಿತ್ಯ ,ಸಾನಿದ್ಯ ಎಲ್ಲವೂ ಭಾವಕ್ಕೆ ಬಿಟ್ಟಿದ್ದು ಹೊರತು ಭಾಷೆಗೆ ಬಿಟ್ಟಿದ್ದಲ್ಲ.ಭಾಷೆಯ ಚೌಕಟ್ಟಿನಲ್ಲಿ ಬದುಕುವವರಿಗೆ ಭಾಷೆ ಒಂದು ವಿಷ ಸದ್ಯಕ್ಕೆ ಅಮಲೇರಿಸುವ ಮದ್ದು ಅಷ್ಟೆ.ಬರಿಯ ನೀರು ಕುಡಿವವರಿಗೆ ಸಾರದಾಚೆಯ ಉಪ್ಪೂ ಸಹ ಕಹಿಯಾಗಿ ರುಚಿಸುತ್ತದೆ.
ನೆನಪಿನ ದೋಣಿಯಿಂದ-
ಬಿ.ಎಂ.ಶ್ರೀ ರವರು ಆಗ ತುಂಬ ಬಿಗುಮಾನದ ವ್ಯಕ್ತಿಯಾಗಿದ್ದರೆಂದು ನನ್ನ ಭಾವನೆ. ವೇಷ ಭೂಷಣ ಮಾತುಕತೆ ಎಲ್ಲದರಲ್ಲಿಯೂ ಭಾರತೀಯತ್ವಕ್ಕಿಂತಲೂ ಆಂಗ್ಲೇಯತ್ವವೆ ಅವರ ವ್ಯಕ್ತಿತ್ವದ ಹೊರಭಂಗಿಯಾಗಿತ್ತು.ಸಾರ್ವಜನಿಕ ವೇದಿಕೆಯಲ್ಲಾಗಲಿ ಕಾಲೇಜಿನ ಸಂಘ ಸಂಸ್ಥೆಯಲ್ಲಾಗಲಿ ಕಡೆಗೆ ಕಾಲೇಜು ವಿದ್ಯಾರ್ಥಿಗಳೋಡನೆಯೆ ಆಗಲಿ ಕನ್ನಡದಲ್ಲಿ ಮಾತನಾಡಿ ವ್ಯವಹರಿಸುವುದು ತಮ್ಮ ಅಂತಸ್ಥಿಗೆ ತಕ್ಕುದಲ್ಲವೆಂಬಂತೆ ವರ್ತಿಸುತಿದ್ದರು.ಮುಂದೆ ಕೆಲವು ವರ್ಷಗಳಲ್ಲಿಯೇ ಅವರು ಕನ್ನಡದ ಕಣ್ವರಾದ ಮೇಲೆ ಎಷ್ಟು ತೆರೆದ ಹೃದಯರಾದರೋ ಎಷ್ಟು ಸರಳ ಮನಸ್ಕರಾದರೋ ಎಷ್ಟು ಸಾಮಾನ್ಯರೊಡನೆ ಸಾಮಾನ್ಯರಾಗಿ ಹೊಕ್ಕುಬಳಸಲು ಕಲಿತರೋ ಅಷ್ಟೂ ತದ್ವಿರುದ್ದರಾಗಿ ತೋರುತ್ತಿದ್ದರಾಗಿ ತೋರುತ್ತಿದ್ದರು ಆಗ!
ಶಿವಪ್ರಸಾದ್,ಬೆಂಗಳೂರು

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು