ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, January 29, 2017

ಸಹಪಂಕ್ತಿ ಭೋಜನ

 ಸಹಪಂಕ್ತಿ ಭೋಜನದ ಬಗ್ಗೆ ಚಚೆ೯ ವಾದ ವಿವಿಧಗಳು ಆಗುತ್ತಾ ಇರುವುದು. ಒಟ್ಟಿಗೆ ಹಂಚಿ ತಿನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ? ಆಳುವ ಪ್ರಭುಗಳಿಗೆ, ಧರ್ಮದ ಗುತ್ತಿಗೆ ಪಡೆದವರಿಗೆ, ಪ್ರಗತಿಶೀಲರೆಂಬ ಹಣೆಪಟ್ಟಿ ಹೊಂದಿದವರಿಗೆ ಇಂತಹ ಮಕ್ಕಳ ಸಂದೇಶ....ತಲುಪದೇ ಇರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅತಿ ದೊಡ್ಡ ದುರಂತವಾಗಿದೆ.
Saturday, January 28, 2017

ಮಕ್ಕಳನ್ನು ಯಂತ್ರಗಳನಾನ್ನಗಿಸುವ ವ್ಯವಸ್ಥೆ - ವಿವೇಕ ಬೆಟ್ಕುಳಿ,ಹುಟ್ಟಿದಾಗ ಅಳುವ, ಆ ನಂತರದಲ್ಲಿ ಹಸಿವಾದಾಗ, ನೋವಾದಾಗ ಅಳುತ್ತಾ, ತನ್ನಷ್ಟಕ್ಕೆ ನಗುತ್ತಾ ಬೆಳೆಯುವ ಮಗು ತೊದಲು ಮಾತನಾಡಿದಾಗ...ಅಮ್ಮ, ಅಪ್ಪ...ಅಣ್ಣ  ಏನೇ ಹೇಳಿದರು ಮನೆ ಮಂದಿಯೆಲ್ಲಾ ಸಂತೋಷದಿಂದ ಆ ಮಗುವಿನ ಸಹಜತೆಯಿಂದ ಆಕಷಿ೯ತರಾಗುವರು. ಯಾವುದೇ ಹುದ್ದೆ, ಅಂತಸ್ತು ಯಾವುದೂ ಸಹಾ ಆ ಮಗುವಿಕೆ ತಿಳಿದರುವುದಿಲ್ಲ, ಮಗುವಿನ ಜನನ ಅದರ ಆಕರ್ಷಣೆಯಿಂದಾಗಿ ಮಗುವಿನ ತಾಯಿ ಸಹಾ ನಿಧಾನವಾಗಿ ಗೌರವಕ್ಕೆ ಅರ್ಹಳಾಗುವಳು. ಇಂತಹ ಮುಗ್ದ ಮನಸ್ಸಿನ ಮಕ್ಕಳು ಚಿಕ್ಕ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮನೆಯೆಲ್ಲಾ ಓಡಾಡುವುದು. ಅದಕ್ಕೊಂದು ಹೆಸರು, ಜಾತಿ ನೀಡಿ ಯಾವಾಗ ನಾವು ಪ್ರತೇಕ ಗುರುತಿಸುವಿಕೆ ಪ್ರಾರಂಭ ಮಾಡುವೆವು. ಅಂದಿನಿಂದ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳತೊಡಗುವರು. ಸಹಜವಾಗಿ ಇರುವ ಮಗುವಿಗೆ ಮನೆಯ ಅಂತಸ್ತು, ಅಪ್ಪ ಅಮ್ಮನ ಗೌರವ ಜಾತಿ, ಧರ್ಮದ ರೀತಿ ಈ ಎಲ್ಲವನ್ನು ಆ ಮಗುವಿನ ನಡುವಳಿಕೆ, ಆಹಾರ ವೇಷ ಭೂಷಣದಲ್ಲಿ ಒತ್ತಾಯವಾಗಿ ತುರುಕಲು ಪ್ರಾರಂಭಿಸುವೆವು. ಅದರ ಮುಂದುವರೆದ ಭಾಗವಾಗಿಯೇ ಶಾಲೆಗಳು ಸೃಷ್ಠಿಯಾಗಿರುವುದು. ಯಾವಾಗ ಮಗು ಶಾಲೆಗೆ ಹೋಗಲು ಪ್ರಾರಂಭ ಮಾಡುವುದೋ ಅಂದಿನಿಂದ ಮಗು ಯಾಂತ್ರಿಕ ಮಗುವಾಗಿರುವುದು, ವಿನಹ: ಸಹಜ ಮಗುವಾಗಿರದು. ಸಹಜ ಮಗುವನ್ನು ಯಾಂತ್ರಿಕ ಮಗುವನ್ನಾಗಿಸುವಲ್ಲಿ ಮುಖ್ಯವಾಗಿ ತಾಯಿ, ತಂದೆ ಹಾಗೂ ಶಾಲಾ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವುದು. ಸ್ವಲ್ಪ ಸಹಜತೆ ಬಗ್ಗೆ ಮಾತನಾಡುವ ಅಜ್ಜ, ಅಜ್ಜಿ ಕಡೆ ಸಹಜವಾಗಿ ಮಗು ಆಕಷಿ೯ತವಾಗುವುದು. ಆದರೇ ಇಂದಿನ ಆದುನಿಕ ಯುಗದಲ್ಲಿ ವಯಸ್ಸಾದವರನ್ನು ವೃದ್ದಾಶ್ರಮದಲ್ಲಿ ಇಡುವ ವ್ಯವಸ್ಥೆ ಪ್ರಾರಂಭವಾಗಿರುವುದರಿಂದ ಮಗುವಿನ ಬಗ್ಗೆ, ಅದರ ಸ್ವಾತಂತ್ಯದ ಬಗ್ಗೆ ಮಾತನಾಡುವ ಯಾರು ಸಹಾ ಅದರ ಜೊತೆ ಇಲ್ಲದಂತೆ ಆಗಿರುವುದು. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಾಲೆಗೆ ಹೋಗುವುದು, ಇಂಗ್ಲೀಷ ಮಾತನಾಡುವುದು, ಉತ್ತಮವಾದ ವೇಷ ಭೂಷಣ ಧರಿಸಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುವುದು. ಒಟ್ಟಾರೆ ಎಲ್ಲರಕ್ಕಿಂತ ಮುಂದೆ ಬಂದು ಶಾಲೆಯಲ್ಲಿ ಉತ್ತಮ ವಿದ್ಯಾಥಿ೯ ಅನಿಸಿಕೊಳ್ಳುವುದೇ ಮಕ್ಕಳ ಮುಖ್ಯ ಕತ್ಯರ್ವವಾಗಿರುವುದು.


ಈ ಎಲ್ಲ ರೀತಿಯ ಪ್ರಯಾಣವನ್ನು ಮುಗಿಸಿ 15 ವರ್ಷಕ್ಕೆ ಕಾಲಿರಿಸದ ಮಕ್ಕಳು. ಯಂತ್ರಗಳಾಗಿರುವರು. ಭಾವನೆಗಳಿಗೆ ಬೆಲೆ ಇಲ್ಲದೆ, ತಪ್ಪು ಸರಿಯ ನಡುವಿನ ದಾರಿ ತಿಳಿಯದೇ, ಏನಾದರೂ ಮಾಡು ಉತ್ತಮವಾಗಿ ಅಂಕ ತೆಗೆದು ಹೆಚ್ಚು ಹಣ ಸಂಪಾದಿಸುವ ಕೆಲಸ ಮಾಡುವುದು. ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡು ಮಕ್ಕಳು ಮುಂದೆ ಸಾಗುವರು. ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಪ್ರೀತಿ ಬೇಕಾಗಿಲ್ಲ, ಎತ್ತಿ ಆಡಿಸಿದ ಮನೆಮಂದಿಯ ಬಗ್ಗೆ ಕಲಿಕರವಿಲ್ಲ. ಏನಿದ್ದರು ಒಬ್ಬರನ್ನು ಹಿಂದೆ ಹಾಕಿ ಮುಂದೆ ಹೋಗುವುದು ಮಾತ್ರ ತಿಳಿದಿರುವುದು. ನನ್ನ ಆಸುಪಾಸಿನಲ್ಲಿ ನಮ್ಮ ಮನೆಯ ವಾತಾವರಣದಲ್ಲಿ ಹತ್ತಾರು ಮಕ್ಕಳನ್ನು ನಾನು ಕಳೆದ 15-20 ವರ್ಷದಿಂದ ನೋಡುತ್ತಾ ಇರುವೆನು. ವರ್ಷಗಳು ಕಳೆದಂತೆ ಈ ತರಹದ ವಿಷಕಾರಿ ವಾತಾವರಣ ಮಾತ್ರ ಹೆಚ್ಚಾಗುತ್ತಾ ಇರುವುದು. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಪರಿಹಾರ ಹುಡುಕುವ ಅಗತ್ಯವಿದೆ. ಇಲ್ಲವಾದರೇ ನಮ್ಮ ಮುಂದಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೋಸ, ಯುದ್ದ, ಹಿಂಸೆ ಈ ಎಲ್ಲವುಗಳು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಮನೆ ಮನೆಗಳಲ್ಲಿಯೂ ಆವರಿಸುವುದು ಖಂಡಿತ.
ಪ್ರೀತಿ, ಪ್ರೇಮ ಶಾಂತಿಯ ಜಗತ್ತಿಗಾಗಿ, ನಮ್ಮ ಮನೆಗಾಗಿ, ಮಕ್ಕಳನ್ನು ಸಹಜವಾದ ವಾತಾವರಣದಲ್ಲಿ ಬೆಳಸಬೇಕಾಗಿದೆ. ಅದೇ ರೀತಿ ನಮ್ಮ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ರೀತಿ ಶೈಕ್ಷಣಿಕ ವ್ಯವಸ್ಥೆ ಮುಂದುವರೆದರೆ ಬರುವ ಜಗತ್ತಿನಲ್ಲಿ ಮಕ್ಕಳು/ಜನರು ಗಳೆಂಬ ಯಂತ್ರಗಳು ಸಿಗುವುದು ವಿನಹ: ಭಾವನೆಗಳಿರುವ ಜೀವಿಗಳು ಸಿಗಲು ಸಾಧ್ಯವೇ ಇಲ್ಲ

ಮುಗ್ದ ಮನಸ್ಸುಗಳು..

ಪದೇ ಪದೇ ಕಾಡುವ ಹುಡುಗಿ...
......ಅಂದು ನಿನ್ನ ಪೋಟೋ ತೆಗೆದುಕೊಂಡೆ ಇಂದು ನಿನ್ನನ್ನು ಮರೆಯಲು ಆಗುತ್ತಿಲ್ಲ.ನಿನಗಾಗಿ ನಾನು ಏನು ಮಾಡಲು ಆಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ನಿನ್ನಂತ ಸಾವಿರಾರು ಮುಗ್ದ ಮಕ್ಕಳಿಗೆ ಸಿಗಬಹುದಾದ ಸ್ವಾತಂತ್ಯದ ನಿರಿಕ್ಷೇಯಲ್ಲಿ ನಾನು ಇರುವೆನು.......ಕನಸು ಕಾಣುತ್ತಿರುವುವೆನು

Wednesday, January 25, 2017

ಭಗವದ್ಗೀತೆಯ ಕಿರು ಪರಿಚಯ - ಪ್ರಶ್ನೋತ್ತರಮಾಲಿಕೆ.. Badari Prasad Margasahayam


* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.


* ಯಾವಾಗ ಬೋಧಿಸಿದ..?

ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ.


* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.
* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.
* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.
* ಎಷ್ಟು ಸಮಯ ಬೋಧಿಸಿದ..?

ಉತ್ತರ : ೪೫ ನಿಮಿಷ.
* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?

ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ..ತನ್ನ ಕರ್ತವ್ಯದಿಂದ ಅರ್ಜುನ
ವಿಮುಖನಾಗಲು ಬಯಸುತ್ತಾನೆ. ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ. ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.
* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.

* ಎಷ್ಟು ಶ್ಲೋಕಗಳಿವೆ..?
ಉತ್ತರ : ೭೦೦ ಶ್ಲೋಕಗಳು.

* ಗೀತೆಯಲ್ಲಿರುವ ವಿಷಯಗಳಾವವು..?

ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ
ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ..
* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು...?
ಉತ್ತರ : ಭಗವಾನ್ ಸೂರ್ಯದೇವನಿಗೆ.
* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.

* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.
* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
ಶರಣಾಗತಿಯನ್ನು ಹೊಂದುವುದು..
* ಭಗವದ್ಗೀತೆಯಲ್ಲಿ
ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ - ೫೭೪. ಅರ್ಜುನ - ೮೫ ಧೃತರಾಷ್ಟ್ರ - ೦೧ ಸಂಜಯ - ೪೦
ಶ್ರೀಕೃಷ್ಣಾರ್ಪಣಮಸ್ತು

ಶ್ರೀವಿಷ್ಣು ಸಹಸ್ರನಾಮದ ಮಹತ್ವ:
ಮನುಷ್ಯನ ಆಯಸ್ಸು ನೂರು ವರ್ಷ... ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ..

|| ಶ್ರೀಕೃಷ್ಣಾರ್ಪಣಮಸ್ತು ||
|| ನಾಹಂ ಕರ್ತಾ ಹರಿಃ ಕರ್ತಾ |

Monday, January 9, 2017

ಹೊಣೆಯರಿತ ನಾಗರಿಕರಿಂದ - ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

ಹೊಣೆಯರಿತ ನಾಗರಿಕರಿಂದ:
ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ  ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಮಾಧ್ಯಮಗಳ ವರದಿಯ ಪ್ರಕಾರ, ಘನವೆತ್ತ ಕರ್ನಾಟಕ ಸರಕಾರ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೊಸ  ಪಠ್ಯಪುಸ್ತಕಗಳನ್ನು ೨೦೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಪಠ್ಯಕ್ರಮ ಬಹಳಷ್ಟು ವಿಕೃತ ಮತ್ತು  ತಪ್ಪುಮಾಹಿತಿಗಳನ್ನು ಒಳಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ.
ಘನವೆತ್ತ ರಾಜ್ಯಸರ್ಕಾರ ಹಾಗು  ಪ್ರಾಥಮಿಕ ಶಿಕ್ಷಣ ವಿಭಾಗ ಪುಸ್ತಕಗಳ ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಪಾರದರ್ಶಕ ವಿಚಾರ ವಿನಿಮಯ ನಡೆಸಿಲ್ಲ. ಹೊಸ ಪುಸ್ತಕ ರಚನೆಗೆ,ಬೇರೆ ಬೇರೆ ವಿಷಯದಲ್ಲಿ ರಚನೆಯಾದ ಸಮಿತಿಗಳಿಗೆ ತಮ್ಮ ಅಂತಿಮ ಕರಡನ್ನು ಸಲ್ಲಿಸಲು  ೧೫ ಜನವರಿ ೨೦೧೭ ಕೊನೆಯದಿನವಾದರೂ, ಬೇರೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಸರಕಾರ ಈ ಪಠ್ಯಗಳನ್ನು ನಿಗೂಢರೀತಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಪ್ರಕಟಿಸಲು ಹೊರಟಿದೆ.
ಈ ಪಠ್ಯಪುಸ್ತಕ ಬದಲಾವಣೆಯ ವಿಚಾರದಲ್ಲಿ ಸರಕಾರದ ಮತ್ತು ಪಠ್ಯಪುಸ್ತಕ ಸಮಿತಿಯ ನಡವಳಿಕೆ ಮತ್ತು ನಿಗೂಢತೆ, ಮುಂದಿನ ಪೀಳಿಗೆಗಳ ಮಧ್ಯೆ ವೈಷಮ್ಯ ಮತ್ತು ಅಸಮಾನತೆಯ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂಬ ಸಂಶಯ ಮೂಡುತ್ತದೆ.
ನಮ್ಮ ಮಕ್ಕಳ ಹಾಗು ಅವರ ಪೀಳಿಗೆಯ/ಗಳ ಭವಿಷ್ಯದ ಕಾಳಜಿಯಿಂದ, ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಕರ್ನಾಟಕದ ಘನವೆತ್ತ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧರಾಮಯ್ಯ ಅವರಿಂದ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆಗ್ರಹಪೂರ್ವಕವಾಗಿ ಕೇಳುತ್ತಿದ್ದೇವೆ.
. ೨೦೧೭ರಲ್ಲಿ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶೈಕ್ಷಣಿಕ ಕಾರ್ಯನೀತಿಯನ್ನು ಜಾರಿಗೆ ಸೂಚನೆ ಇದ್ದರೂ, ಯಾಕೆ ರಾಜ್ಯ ಸರಕಾರ ಈ ಹೊಸ ಪಠ್ಯಪುಸ್ತಕವನ್ನು ಪ್ರಕಟಿಸಲು ಅವಸರಿಸುತ್ತಿದೆ? ಒಮ್ಮೆ ಪಠ್ಯಪುಸ್ತಕವನ್ನು ಬದಲಾಯಿಸಿ ಪ್ರಕಟಿಸಿದರೆ, ಮುಂದಿನ ಕೆಲವು ವರ್ಷಗಳ ಕಾಲ ಹೊಸ ಪಠ್ಯಪುಸ್ತಕ ತರುವುದುದು ಬೇರೆ ಬೇರೆ ಕಾರಣಗಳಿಗಾಗಿ ಕಷ್ಟ ಎಂಬ ಅರಿವು ಸರಕಾರಕ್ಕೆ ಇಲ್ಲವೇ ಅಥವಾ ಅರಿವಿದ್ದು ಪ್ರಕಟಿಸುವ ಧ್ರಾಷ್ಟವೇ?
೨. ೨೦೧೭ರಲ್ಲಿ, ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ೨೦೦೫ರ (NCF ೨೦೦೫)ರ ಪ್ರಕಾರ ಪಠ್ಯಕ್ರಮವನ್ನು ತಯಾರಿಸಿರುವುದು ಪಠ್ಯಕ್ರಮದ ಗುಣಮಟ್ಟದ ಬಗ್ಗೆ ಸಂಶಯ ಮೂಡುವುದಿಲ್ಲವೇ?
೩. ಪಠ್ಯ ಪುಸ್ತಕಗಳ ವಿಷಯ ತಜ್ಞರು ವಿಷಯ ಸಂಭಂದಿತ ವರದಿಯನ್ನು ಮತ್ತು ಅದರ ವಿಮರ್ಶೆಯ ವರದಿಯನ್ನು ನೀಡದಿದ್ದರೂ, ಹೊಸ ಪಠ್ಯ ಪುಸ್ತಕಗಳನ್ನು ೨೦೧೭ರ ಶೈಕ್ಷಣಿಕ ವರ್ಷಕ್ಕೆ ಪ್ರಕಟಿಸುವ ತುರ್ತು ಯಾಕೆ.
೪. ಪಠ್ಯಕ್ರಮ ಬದಲಾವಣೆಯ ವಿಚಾರದಲ್ಲಿ ಸಂಭಂದಪಟ್ಟ ಎಲ್ಲಾ ವರ್ಗಗಳನ್ನು ಅಂದರೆ ಶೈಕ್ಷಣಿಕ ತಜ್ಞರನ್ನು, DSERT, DIETs, CTE, ಸಂಪನ್ಮೂಲ ವ್ಯಕ್ತಿಗಳನ್ನು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರ ವರ್ಗಗಳನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ?  ಈಗ ಪುಸ್ತಕವನ್ನು ಪ್ರಕಟ ಮಾಡಲು ಹೊರಟಿರುವ ತರಾತುರಿಯಲ್ಲಿ ಮೇಲ್ಕಂಡ ವರ್ಗಗಳ ಮರುಮಾಹಿತಿಯನ್ನು ಪಡೆಯಲು ಸಮಯ ಎಲ್ಲಿದೆ?
೫. ಹೊಸ ಪಠ್ಯ ಪುಸ್ತಕ ರಚನೆ ಮಾಡುವ ಬಗ್ಗೆ ರಾಜ್ಯ ಸರಕಾರ ಯಾಕೆ ನಿಗೂಢತೆಯನ್ನು ಕಾಪಾಡಿಕೊಂಡು ಬರುತ್ತಿದೆ? ಪಠ್ಯ ಪುಸ್ತಕದ ಯಾವ ಯಾವ ಭಾಗಗಳನ್ನು ಪುನರ್ವಿಮರ್ಶೆ, ಬದಲಾವಣೆ ಮಾಡಲಾಗಿದೆ ಹಾಗು ಯಾವ ಯಾವ ಭಾಗಗಳನ್ನು ತೆಗೆದು ಹಾಕಲಾಗಿದೆ? ಈ ವಿಚಾರಗಳ ಬಗ್ಗೆ ಯಾಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ?
೬. ಪಠ್ಯಪುಸ್ತಕದ ಶೇಕಡಾ ೨೦ರಷ್ಟು ಭಾಗಕ್ಕೆ ಕತ್ತರಿ ಹಾಕಿರುವುದು ನಿಜವೇ? ಈ ೨೦ ಶೇಕಡಾ ಕಡಿತ ಪಠ್ಯಪುಸ್ತಕಗಳ ಗುಣಮಟ್ಟವನ್ನು ಕಡಿಮೆ ಮಾಡಿಲ್ಲವೇ? ಇದು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕೆ, ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗವಾಕಾಶಗಳನ್ನು ಕುಂಠಿತಗೊಳಿಸುವುದಿಲ್ಲವೇ?
೭. ಹೊಸ ಶೈಕ್ಷಣಿಕ ವರ್ಷಕ್ಕೆ ೬ ತಿಂಗಳು ಉಳಿದಿರುವಂತೆ (ಅದರಲ್ಲಿ ಮೂರು ತಿಂಗಳು ಪರೀಕ್ಷಾ ತಯಾರಿ ಮತ್ತು ಫಲಿತಾಂಶ ಘೋಷಣೆಯಲ್ಲಿ ಕಳೆದು ಹೋಗುತ್ತದೆ) ಘನ  ಸರಕಾರ ಶಿಕ್ಷಕರಿಗೆ ಹೇಗೆ ಹೊಸ ಪಠ್ಯಕ್ರಮದ ತರಭೇತಿಯನ್ನು ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆಯಲ್ಲವೇ?
೮. ಮಾನ್ಯ ಮುಖ್ಯಮಂತ್ರಿಗಳು ಯಾಕೆ ಪ್ರಾಥಮಿಕ ಶಿಕ್ಷಣ ಸಚಿವ ಶ್ರೀ. ತನ್ವಿರ್ ಸೇಠ್ ಹಾಗು ಶಿಕ್ಷಣ  ಇಲಾಖೆಯ ಅಧಿಕಾರಿಗಳ ಸಲಹೆಯನ್ನು ತಿರಸ್ಕರಿಸುತ್ತಿದ್ದಾರೆ ? ಅವರು ಪಠ್ಯಪುಸ್ತಕದಲ್ಲಿ  ಯಾರ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ?
೯. ಬರಗೂರು ರಾಮಚಂದ್ರಪ್ಪ  ಅವರಂತಹ, ಎಡಪಂತೀಯ ಲೇಖಕರಿಗೆ ಶಿಕ್ಷಣ ನೀತಿ ಮತ್ತು ಪಠ್ಯ ಪುಸ್ತಕ ಬದಲಾವಣೆಯನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ. ಅವರನ್ನು  ಪಠ್ಯ ಪುಸ್ತಕ ಬದಲಾವಣೆಯ ಸಮಿತಿಗೆ ಆಯ್ಕೆ ಮಾಡಲು ಅವ್ರ ಅರ್ಹತೆ ಏನು?  ಇದರ ಹಿಂದಿರುವ ಕುತ್ಸಿತ ಚಿಂತನೆ ಏನು?
೧೦. ಇತಿಹಾಸ, ಗಣಿತ, ವಿಜ್ಞಾನ, ಸಮಾಜ ಶಾಸ್ತ ಹಾಗೂ ಭಾಷಾ ಪಠ್ಯಪುಸ್ತಕಗಳ ಬದಲಾವಣೆ ನಡೆಯುತ್ತಿರುವುದು, ಬರಗೂರು ರಾಮಚಂದ್ರಪ್ಪ ಈ ಬದಲಾವಣೆಗಳ ಹಿಂದಿರುವ ವ್ಯಕ್ತಿ ಎಂದಾದರೆ, ಯೋಜಿಸಲಾದ ಪಾಠಕ್ರಮ ಬದಲಾವಣೆ ಎಡಪಂತೀಯ ಚಿಂತನೆಗಳನ್ನು ಹಬ್ಬಿಸಿ, ನಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ, ಇತಿಹಾಸ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ಮತ್ತು ಪ್ರೀತಿಯನ್ನು ಕಮ್ಮಿ ಮಾಡುವ ಪ್ರಯತ್ನವೇ?
೧೧. ರಾಷ್ಟ್ರೀಯ ಮಟ್ಟದ ಪರೀಕ್ಷಗೆಳಲ್ಲಿ ಕನ್ನಡದ ಮಕ್ಕಳೇಕೆ ಹಿಂದೆ ಉಳಿಯುತ್ತಾರೆ ಎಂದು ಅಧ್ಯಯನ ನಡೆಸಿದ್ದ ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದ "ಕರ್ನಾಟಕ ಜ್ಞಾನ ಆಯೋಗ" ರಾಜ್ಯ ಸರ್ಕಾರಕ್ಕೆ 09,10,11,12 ತರಗತಿಯಲ್ಲಿ CBSEಯ ಪಠ್ಯ ಪುಸ್ತಕಗಳನ್ನೇ ಕನ್ನಡಕ್ಕೆ ಅನುವಾದಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತ್ತು ಮತ್ತು ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈಗ  ಇನ್ನೊಂದು ಪಠ್ಯಕ್ರಮ ತಂದು ರಾಜ್ಯದ  ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತೆ ಹಿಂದುಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಪೊಲಿಟಿಕಲ್ ಐಡಿಯಾಲಜಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುವುದಿಲ್ಲವೇ ?
೧೨. ಶಾಲೆಗಳು CBSE ಅಥವಾ ICSE  ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಅವಕಾಶ ಇದ್ದರೂ, ೭೫,೦೦೦ ಶಾಲೆಗಳು  ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅಳವಡಿಕೊಂಡಿವೆ. ಆದರೆ ಹಳೆಯ/ಔಟ್ ಡೇಟೆಡ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ  ಇಂತಹ ಹೀನ ಕ್ರಮದಿಂದ, ರಾಜ್ಯಸರಕಾರ CBSE ಅಥವಾ ICSE ವಿದ್ಯಾರ್ಥಿಗಳ ಮಧ್ಯೆ ಶೈಕ್ಷಣಿಕ ಅಸಮಾನತೆಯನ್ನು ತರಲು ಹೊರಟಿದೆಯೇ? ಈ ಮುಖೇನ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿಧ್ಯ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ನಾಶಮಾಡಲು ಹೊರಟಿದೆಯೆ ನಮ್ಮ ರಾಜ್ಯ ಸರಕಾರ?
೧೩. ಇದು ಹೊಸ ಪೀಳಿಗೆಯನ್ನು ಗುರಿಯಾಗಿಸಿ, ಹೊಸ ಸುಳ್ಳು ಹೋರಾಟಗಾರರನ್ನು ಸೃಷ್ಟಿ ಮಾಡುವ ಕುತಂತ್ರವೇ?
೧೪. ಶಿಕ್ಷಣದ ಗುಣಮಟ್ಟವನ್ನು ಕುಂಠಿತಗೊಳಿಸಿ, ಸರಕಾರೀ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆಯೇ ಈ ಸರಕಾರ?
ಶ್ರೀ. ಸಿದ್ದರಾಮಯ್ಯನವರ ಸರಕಾರದ ಕಳೆದ ನಾಲ್ಕು ವರ್ಷಗಳ "ಕಾರ್ಯಭಾರ"ವನ್ನು ನೋಡುವಾಗ, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚುನಾಯಿತ ಕ್ಯಾಬಿನೆಟ್ ಗಿಂತ ತಮ್ಮ ಎಡಪಂತೀಯ ಲೇಖಕರ ಕಿಚನ್ ಕ್ಯಾಬಿನೆಟ್ ಜೊತೆ ಕೆಲಸ ಮಾಡಿದ್ದೆ ಹೆಚ್ಚು. ಈ ಎಡಪಂತೀಯ ಕಿಚನ್ ಕ್ಯಾಬಿನೆಟ್ ಪ್ರಜಾಪ್ರಭುತ್ವವನ್ನು ನಾಶ ಮಾಡುವ, ಸಮಾಜವನ್ನು ವಿಘಟಿಸುವ, ಸುಳ್ಳು ಹೋರಾಟಗಾರರನ್ನು ಸೃಷ್ಟಿಸುವ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿ ಅವರುಗಳನ್ನು ಶೈಕ್ಷಣಿಕ ಮತ್ತು ಬೌದ್ಧಿಕ ವಲಯಗಳಲ್ಲಿ ಬ್ರೈನ್ ವಾಷ್ ಮಾಡಿ ಉಪಯೋಗಿಸುವ ಕೆಲಸವನ್ನು ಮಾಡಿ ದೇಶದ ಭವಿಷ್ಯವನ್ನು ದುರಂತದ ಎಡೆಗೆ ತಳ್ಳುವ ಕೆಲಸ ಮಾಡುತ್ತದೆ.

https://www.change.org/p/the-chief-minister-of-karnataka-stop-karnataka-congress-government-from-ruining-students-future