ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, October 27, 2013

ಮದುವೆ ಸಮಾರಂಬ

ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ?
ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಯಾರಿಗೂ ಕೆಲಸವೂ ಇಲ್ಲ ಪುರಸತ್ತು ಇಲ್ಲದಂತ ಪರಿಸ್ಥಿತಿ. ಎಪ್ರಿಲ್ ಮೇ ತಿಂಗಳು ಬಂತು ಬಂದರೆ ಮುಗಿಯಿತು ಶಾಲಾ ಕಾಲೇಜಿಗೆ ರಜೆ, ಜೋರಾಗಿ ಮದುವೆ, ಮುಂಜಿ, ಗ್ರಹಪ್ರವೇಶದ ಭರಾಟೆ ಪ್ರತಿಯೊಂದು ಮನೆಯಲ್ಲಿಯೂ ಹತ್ತಾರು ಆಮಂತ್ರಣ ಪತ್ರಿಕೆಗಳು. ಒಂದು ಕಡೆ ಬಿಸಿಲಿನ ಜಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ. ಕಾರಣ ಆಮಂತ್ರಣ ಕೊಟ್ಟವರು ಬೇಸರ ಮಾಡಿಕೊಳ್ಳುವರು, ಅವರು ನಮ್ಮ ಮನೆಯಲ್ಲಿ ಕಾರ್ಯವಾದಾಗ ಬರುವುದಿಲ್ಲ ಎಂಬ ಭಯ ಇರುವುದು. ಮುಖ್ಯವಾಗಿ ಅಲ್ಲಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಹುದುಗಿರುವ ಆಶೆ.
ಈ ಸಭೆ ಸಮಾರಂಭವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಯಾಕಾಗಿ ಈ ರೀತಿ ವತರ್ಿಸುತ್ತಿರುವರು ಎಂದು ಅನಿಸುವುದು. ಆದರೂ ಅದು ಹಿಂದಿನಿಂದ ನಡೆದುಕೊಂಡ ಬಂದ ರೀತಿಯಾಗಿದೆ. ವಿವಿಧ ರೀತಿಯ ಜನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.
ಸ್ವತಂತ್ರರು : ಚಿಕ್ಕಮಕ್ಕಳಿವರು ಇವರಿಗೆ ಪಾಪ ಯಾರ ಮದುವೆ ಅಥವಾ ಮುಂಜಿ ಎಂಬುದು ತಿಳಿದಿಲ್ಲ. ಒಟ್ಟಾರೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೋಗಿರುವರು. ಸಮಾರಂಭದಲ್ಲಿ ನೀಡುವ ಶರಬತ್ತು ಕುಡಿದು, ಅದರ ಪೈಪನ್ನು ಕೂಡಿಸುವುದು ಯಾರು ಹೆಚ್ಚು ಸೇರಿಸಿರುವರು ಎಂದು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುವುದು ಇವರ ಕಾರ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ತಮ್ಮ ಬಾಲ್ಯವೇ ಮರೆತು ಹೋಗುತ್ತಿರುವಾಗ ಚಿಕ್ಕ ಮಕ್ಕಳಿಗೆ ಸ್ವತಂತ್ಯ ಸಿಗುವುದೇ ಈ ರೀತಿಯ ಸಮಾರಂಭಗಳಿಗೆ ಹೋದಾಗ. ಆ ಮಕ್ಕಳಿಗೆ ಈ ಬೇಸಿಗೆ ಧಗೆಯಲ್ಲಿ ಬಟ್ಟೆಯೇ ಬೇಕು ಏನಿಸುವುದಿಲ್ಲ ಆದರೇನು ಮಾಡುವುದು ಅಮ್ಮನ ಒತ್ತಾಯದಿಂದ ಧರಿಸಲೇಬೇಕಾದ ಅನಿವಾರ್ಯತೆ ಇರುವುದು.
ಸೂಚಕಗಳು :
                ಕುಡಿದು ಒಗೆದಿರುವ ಶರಬತ್ತು ಪೈಪ್ ಅಥವಾ ಬಟ್ಟೆಯ ಪ್ಲಾಸ್ಟಿಕ್ ಕವರ್ನ್ನು ಆರಿಸುತ್ತಾ ಇರುವರು.
                ಇನ್ನೊಂದು ಶರಬತ್ತು ಬೇಕು, ಬೊಂದಿ ಪ್ಯಾಕೇಟ್ ಬೇಕು ಎಂದು ಅಳುತ್ತಾ ಇರುವರು.
                ಮಹೂರ್ತದ ಕಲ್ಪನೆ ಇರುವುದಿಲ್ಲ.
                ತಮ್ಮದೇ ಗುಂಪಿನೊಂದಿಗೆ ಆಟವಾಡುತ್ತಾ ಇರುವರು. ವಾದ್ಯ ಬಾರಿಸಿದಾಗ ಒಬ್ಬರೇ ಇದ್ದರೇ ಡ್ಯಾನ್ಸ ಮಾಡುತ್ತಾ ಇರುವರು.

ಆಕರ್ಷಕರು : ಬಹುಷ: ಯುವ ಸಮೂಹ ಸಮಾರಂಭಕ್ಕೆ ಹೋಗುವುದಕ್ಕೆ ಅವರದೇ ಆದ ಕಾರಣಗಳಿರುವುದು. ಯುವಕರು ಹುಡುಗಿಯರನ್ನು ನೊಡಲೆಂದೇ ಹೊಗುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೇ ಯುವತಿಯರು ಹೋಗುವಾಗ ಯುವಕರಿಗೆ ತಾವು ತೋರಿಸಿಕೊಳ್ಳುವುವುದರ ಜೊತೆಗೆ ಒದಿಂಷ್ಟು ಜನರಿಗೆ ತನ್ನ ಡ್ರೆಸ್ ಆಭರಣ ತೋರಿಸುವ ಮಹತ್ವಾಕಾಂಕ್ಷೆ ಇರುವುದು. ಅಷ್ಟೇ ಅಲ್ಲ ಬೇರೆಯ ಮಹಿಳೆಯರು ಧರಿಸಿರುವ ಬಟ್ಟೆ ಮತ್ತು ಆಬರಣದ ಬಗ್ಗೆ ತಿಳಿದು ಮನೆಗೆ ಬಂದು ಇತರರಿಗೆ ವರದಿ ಒಪ್ಪಿಸುವ ಬಾತ್ಮೀದಾರರಾಗಿಯೂ ಇವರು ಕಾರ್ಯನಿರ್ವಹಿಸುವರು. ಯುವ ಸಮೂಹದ ಉಪಸ್ಥಿತಿ ಬಹುಶ: ಪರಸ್ಪರ ಆಕರ್ಷಣೆಗಾಗಿರುವುದು.
ಸೂಚಕಗಳು :
                ಗುಂಪಿನಲ್ಲಿದ್ದು ತಮ್ಮಷ್ಟಕ್ಕೆ ತಾವೇ ನಗುವರು.
                ಬಟ್ಟೆಗೆ ಹಾಕಿರುವ ಇಸ್ತ್ರೀ ಕತ್ತರಿಸುವ ರೀತಿ ಇರುವುದು.
                ಹೊಸದಾಗಿ ಚಾಲ್ತಿಯಲ್ಲಿರುವ ಸಿನಿಮಾದ ಡ್ರೆಸ್ ಅಥವಾ ಹೇರ್ ಸ್ಟೈಲ್ ಇರುವುದು.
                ಮುಖದ ಕಣ್ಣಿನ ಚಲನವಲನ ಜೋರಾಗಿರುವುದು.
                ಊಟಕ್ಕೆ ಕುಳಿತಿರುವಾಗ ಎದುರುಗಡೆ ಅಥವಾ ಕಾಣುವ ಹಾಗೇ ಯುವಕ, ಯುವತಿಯರ ಗುಂಪಿರುವುದು.
ಆಭರಣ&ಬಟ್ಟೆ ಪ್ರದರ್ಶಕರು : ಹೆಚ್ಚಾಗಿ ಹೆಂಗಸರು ಸಮಾರಂಭಕ್ಕೆ ಹೋಗುವ ಮೂಲ ಉದ್ದೇಶವೇ ತಮ್ಮ ಹೊಸ ಸೀರೆಯ ಮತ್ತು ಇತ್ತಿಚೀಗೆ ತನ್ನ ಗಂಡ ಅಥವಾ ಮಕ್ಕಳು ಮಾಡಿಸಿರುವ ಆಭರಣದ ಪ್ರದರ್ಶನ ಮಾಡುವುದೇ ಆಗಿದೆ. ತಮ್ಮ ಮನೆಯಲ್ಲಿ ಕಾರ್ಯ ಇದ್ದಾಗ ಬಟ್ಟೆ ಆಭರಣದ ಬಗ್ಗೆ ಹೆಚ್ಚು ಚಿಂತಿಸಲು ಆಗದು ಆಗ ಕಾರ್ಯ ಮುಗಿಸುವ ತವಕದಲ್ಲಿ ಇರುವರು. ಆದರೇ ಪಕ್ಕದ ಮನೆಯಲ್ಲಿ ಕಾರ್ಯ ಇದ್ದರೇ ಇವರಿಗೆ ಹೆಚ್ಚು ಒತ್ತಡ ಯಾವು ಬಟ್ಟೆ, ಆಭರಣ ಯಾವಾಗ ಧರಿಸಬೇಕು ಎಂಬುದರ ಬಗ್ಗೆ ವಾರದ ಹಿಂದಿನಿಂದಲ್ಲೇ ತಯಾರಿ ನಡೆಸುವರು. ಇನ್ನೂ ದುರಂತ ಎಂದರೆ ಪಾಪ ಹೆಚ್ಚಿನವರಿಗೆ ಅವರಲ್ಲಿ ಎಷ್ಟೇ ಬಟ್ಟೆ ಆಭರಣ ಇದ್ದರೂ ಬೇರೆಯವರದ್ದೇ ಚೆನ್ನಾಗಿ ಕಾಣಿಸುವುದು ಆದ್ದರಿಂದ ಅವರಿಂದ ಒಂದು ದಿನದ ಮಾತಿಗೆ ಪಡೆದು ಅದನ್ನು ಧರಿಸುವುದು ಇದೆ.
ಗುರುತಿಸುವ ಸೂಚಕಗಳು :
                ಎಲ್ಲರಿಗೂ ಕಾಣುವ ಹಾಗೇ ಆಭರಣ ಪ್ರದರ್ಶನ ಇರುವುದು.
                ಆಭರಣವನ್ನು ಆಗಾಗ ಮುಟ್ಟಿ ನೊಡಿಕೊಳ್ಳುತ್ತಿರುವರು
                ಬೇರೆಯವರು ತನ್ನ ಆಭರಣವನ್ನು ನೋಡುತ್ತಿರುವರಾ ಎಂದು ಆ ಕಡೆ ಈ ಕಡೆ ಗಮನಿಸುತ್ತಾ ಇರುವರು.
                ತಮ್ಮ ಅಥವಾ ಬೇರೆಯವರ ಮಕ್ಕಳನ್ನು ಎತ್ತಿಕೊಳ್ಳುವಾಗ ಆಭರಣ ಸೀರೆಗೆ ಅಥವಾ ಕೈಗೆ ಸಿಲುಕಿದ ಹಾಗೇ ಮಾಡುವರು
                ತಮ್ಮ ಹಾಗೂ ತಮ್ಮ ಮಕ್ಕಳ ಬಟ್ಟೆಯೂ ಕೊಳೆಯಾಗುವ್ಯದೆಂಬ ಆತಂಕದಿಂದ ಇರುವರು. ಮಕ್ಕಳನ್ನು ಆದ್ದರಿಂದ ಓಡಾಡಲು ಬಿಡಲು ಇಷ್ಟಪಡುವುದಿಲ್ಲ.
ಗಾಂಭೀರ್ಯದಿಂದ ಇರುವವರು  : ಬಹುಶ: ಇವರುಗಳು ತಾವು ಹಿರಿಯರು ಎಂದು ತೋರಿಸಿಕೊಳ್ಳುವ ವೇದಿಕೆ ಸಮಾರಂಭವಾಗಿರುವುದು. ಮಕ್ಕಳನ್ನು ಗದರಿಸುವುದು, ಊಟದಲ್ಲಿ ಶಾಂತತೆ ಕಾಪಾಡುವುದು, ನಾಲ್ಕಾರು ಜನ ಸೇರಿ ಹೆಂಗಸರು ಕಾಣುವ ರೀತಿಯಲ್ಲಿ ಏನೋ ಗಂಭೀರ ಚಚರ್ೆ ಮಾಡುವುದು, ನೆಂಟಸ್ಥಿಕೆಯ ಬಗ್ಗೆ ಚಚರ್ಿಸುವುದು, ಒಟ್ಟಾರೆ ಇವರು ಗಂಬೀರವಾಗಿರುವರು. ಇವುಗಳು ಗಂಡಸರು ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯಾಗಿದೆ.
                ಸುಮ್ಮನೆ ಆ ಕಡೆ ಈ ಕಡೆ ಓಡಾಡುತ್ತಾ ಇರುವರು.
                ನಾಲ್ಕು ಜನರು ಸೇರಿ ನಿಂತಾಗ ಸಿಗರೇಟ್ ಅಥವಾ ಬೀಡಿ ಇರುವುದು.
                ಮಾತನಾಡುತ್ತಾ ದೊಡ್ಡ ಗುಂಪಿನ ಕಡೆ ಗಮನ ಇಡುವರು.
                ಮಾತನಾಡುವಾಗ ಮುಖದ ಅಭಿನಯ ಮತ್ತು ಕೈಯ ಚಲನೆ ಇರುವುದು
                ಒಂದು ಹೊಸದಾದ ಟಾವೆಲ್ ಹೆಗಲ ಮೇಲೆ ಇರುವದು.

ಊಟಕ್ಕಾಗಿ ಬರುವವರು : ಸಮಾರಂಭಕ್ಕೆ ಬಂದವರು ಎಲ್ಲರೂ ಊಟ ಮಾಡಿಯೇ ಹೋಗುವುದು ಇದೆ. ಆದರೇ ಊಟಕ್ಕಾಗಿಯೆ ಬರುವ ಅಥಿತಿಗಳು ಇರುವರು. ಅವರಿಗೆ ಅದು ಯಾರ ಮನೆ ಸಮಾರಂಭ ಎಂಬುವುದು ಮುಖ್ಯವಲ್ಲ ಸರಿಯಾಗಿ ಊಟದ ಸಮಯಕ್ಕೆ ಬಂದು ಮೊದಲ ಪಂಕ್ತಿಯಲ್ಲಿಯೇ ಕುಳಿತು ಹೊಟ್ಟೆ ತುಂಬ ಊಟಮಾಡಿ ಹೋಗುವುದು ಅವರ ಕಾಯಕ, ಅವರು ಬೆಳ್ಳಗೆ ಎದ್ದು 11 ಗಂಟೆಯವರೆಗೆ ಕೆಲಸ ಮಾಡಿ ಆ ನಂತರ ಊಟವನ್ನು ಸಮಾರಂಭದಲ್ಲಿ ಮಾಡಿ ಪುನ: 3 ಗಂಟೆಗೆ ತಮ್ಮ ಕಾಯಕದಲ್ಲಿ ತೊಡಗುವರು. (ಬೇಸಿಗೆಯಲ್ಲಿ ಸಾರಿಗೆ ಏನು ಸಿಗದೇ ಇದ್ದಾಗ ಮತ್ತೇನು ಮಾಡಲು ಸಾಧ್ಯ) ಈ ಗುಂಪಿನಲ್ಲಿ ಮೇಲ್ಕಾಣಿಸಿದ ಗುಂಪಿನಲ್ಲಿ ಬರುವ ಯುವಕ,ಯುವತಿ,ಗಂಡಸು, ಹೆಂಗಸರು ಇವರೂ ಸಹಾ ಕೆಲವರು ಬರುವರು. (ಊಟದ ಮೊದಲ ಪಂಕ್ತಿಯಲ್ಲಿರುವರು ಅವರನ್ನು ಮುಂದಿನ ಸಮಾರಂಭದಲ್ಲಿ ಹೋಗಿ ನೋಡಲು ಅವಕಾಶವಿದೆ.)
                ಊಟ ಹಾಕುವುದು ಎಲ್ಲಿ ಎಂದು ಮೊದಲೇ ತಿಳಿದಿರುವರು.
                ಮೊದಲ ಪಂಕ್ತಿಯಲ್ಲಿಯೇ ಕುಳಿತುಕೊಳ್ಳುವರು. ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳುವರು.
                ಇವರಿಗೆ ಶಕೆ ಏನು ತಾಗುವುದಿಲ್ಲ. ಆರಾಮ ಆಗಿ ಏನನ್ನು ಎಷ್ಟು ತಿನ್ನಬೇಕೋ ಅಷ್ಟು ತಿಂದು ಹೋಗುವರು. ಎಲೆಯ ಮೇಲೆ ಏನನ್ನು ಬಿಡುವುದಿಲ್ಲ.
                ಊಟದ ನಂತದ ಆಯ್ಸಕ್ರೀಮ್ ಅಥವಾ ಎಲೆ ಅಡಿಕೆ ನಿಡುತ್ತಿದ್ದರೇ ಖಂಡಿತಾ ಸ್ವೀಕರಿಸಿ ಹೋಗುವರು.
ಆಶೀರ್ವದಿಸಲು ಬರುವವರು : ಇನ್ನೊಂದು ಗುಂಪಿದೆ ಅಕ್ಷತೆಯನ್ನು ಹಾಕಬೇಕು ಎಂದು ಬರುವವರು. ಇದರಲ್ಲಿ ಹೆಚ್ಚಾಗಿ ವಯಸ್ಸಾದವರು ಬರುವರು. ಇತರೆ ಗುಂಪಿನ ಜನರು ಇದ್ದರೂ ಪ್ರಮಾಣ ಕಡಿಮೆಯಾಗಿ ಇರುವುದು.
ಸೂಚಕಗಳು:
                ಮದುವೆ ಕಾರ್ಯಕ್ರಮವನ್ನು ನೋಡುತ್ತಾ ಇರುವರು. ಹೇಗಾದರೂ ಮಾಡಿ ಎಲ್ಲವನ್ನು ಗಮನಿಸಲು ಅನೂವಾಗುವ ಸ್ಥಳದಲ್ಲಿ ಇರುವರು.
                ಅಕ್ಷತೆಯನ್ನು ಸರಿಯಾಗಿ ಹಾಕುವರು.
                ಮದುವೆ ನಂತರ ಊಡುಗರೆ ನೀಡುವರು. ಒತ್ತಾಯ ಮಾಡಿದರೇ ಮಾತ್ರ ಊಟ ಇಲ್ಲವಾದರೇ ನೆರವಾಗಿ ಮನೆಗೆ ಹೋಗುವರು.
            ಮಾಮೂಲಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಈ ರೀತಿಯ ವ್ಯಕ್ತಿಗಳು ಸವರ್ೆಸಾಮಾನ್ಯವಾಗಿದೆ. ಈ ಎಲ್ಲ ರೀತಿಯ ಜನರು ಇದ್ದರೇ ಮದುವೆ ಮದುವೆಯಂತೆ ಇರುವುದು ಮದುವೆ ಸರಾಗವಾಗಿ ಆಗಬೇಕಾದರೇ ಮಕ್ಕಳ ಗಲಾಟೆ, ಹೆಂಗಸರ ಬಳೆಗಳ ಸದ್ದು, ಗಂಡಸರ ಗಾಂಭೀರ್ಯತೆ, ಯುವಕ ಯುವತಿಯರ ಓಡಾಟ ಇವುಗಳ ಜೊತೆಗೆ ಹಿರಿಯರ ಆಶರ್ೀವಾದ ಇವೆಲ್ಲವು ಅಗತ್ಯವಾಗಿದೆ. ಈ ಎಲ್ಲವನ್ನು ಆಯಾ ಜನರು ಅದೇ ರೀತಿಯಾಗಿ ನಿರ್ವಹಿಸಿದರೇ ಮಾತ್ರ ಮದುವೆ ಸಂಭ್ರಮದಿಂದ ಕೂಡಿರುವುದು.
ಒಂದು ಮದುವೆ ಮಾಡುವುದು ಸುಲಭವಲ್ಲ ಅದಕ್ಕಾಗಿಯೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾಧೆ ಇರುವುದು. ಮದುವೆಯ ಮಾಡುವವರ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾ ಅಲ್ಲಿ ಭಾಗವಹಿಸುವ ಜನರ ಮನಸ್ಥಿತಿಯನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದರೇ ಆ ಸಮಾರಂಭ ಚಿರಕಾಲ ನೆನಪಿನಲ್ಲಿರುವುದು. ಆ ಪ್ರಯತ್ನ ಮುಂದಿನ ಸಮಾರಂಭದಿಂದಲೇ ಆಗಲಿ. ವರ್ಷ ವರ್ಷ ಬದಲಾವಣೆ ಆಗುತ್ತಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಈ ಅನುಭವ ಸಿಗದೇ ಇರಬಹುದು.  ಮಿಸ್ ಮಾಡಿಕೊಳ್ಳುವುದಿಲ್ಲ ಅಲ್ಲವಾ?

ವಿವೇಕ

No comments:

Post a Comment