'ಅಮ್ಮ'ನೆಂಬ ಅಯಸ್ಕಾಂತ -ಶಿವ ಪ್ರಸಾದ

ಶಿವ ಪ್ರಸಾದ
ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

(Inspired by Sunil Rao ಅವನಿರಬೇಕಿತ್ತು (ಅವಧಿಯಲ್ಲಿ ಪ್ರಕಟವಾದ ಕವಿತೆ))

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು