ನಾನು ಕೂಡ ಭಾರತೀಯ - ಪವನ್ ಪಾರುಪತ್ತೇದಾರ


ತಾತ್ಸಾರ ಎಂದಿಗೂ ನನಗೆ ಕಟ್ಟಿಟ್ಟ ಬುತ್ತಿ
ಜನಿವಾರ ಹಿಡಿದೊಡನೆ ಜಗಕೆ ನಾ ದೂರ
ಸಂಸ್ಕೃತವ ಉಲಿದೊಡನೆ ಸಂಘಕ್ಕೆ ಭಾರ
ತೆಗಳೋಕೆ ನಿಮಗೊಂದು ವಸ್ತುವು ನಾನು
ಪವನ್ ಪಾರುಪತ್ತೇದಾರ
ನನ್ನ ತೆಗೆಳಿದೊಡನೆ ಹತ್ತುವಿರಿ ಖ್ಯಾತಿಯ ಪ್ಲೇನು
ತೆಗೆಳುವ ಭರದಲ್ಲಿ ಮರೆಯದಿರಿ ಗೆಳೆಯರೆ
ನಾನು ಕೂಡ ನಿಮ್ಮಂತೆ ಭಾರತೀಯ

ಮೀಸಲಿನ ಗೋಜಿಗೆ ಎಂದು ಹೋಗಿಲ್ಲ
ಸರ್ಕಾರಿ ಕೆಲಸಕ್ಕೆ ಅವಕಾಶ ಕೇಳಿಲ್ಲ
ಸವಲತ್ತು ಮರೆತಿರುವೆ ಹುಟ್ಟಿದಾಗಿಂದ
ಮಸಲತ್ತೆ ನೋಡಿರುವೆ ಮೂಲೆ ಮೂಲೆಯಿಂದ
ಹಿಂದೆಂದೋ ಯಾವನೋ ಮಾಡಿದ ಶೋಷಣೆಗೆ
ಇಂದಿನ ಯುವ ಪೀಳಿಗೆಗೆ ಶಿಕ್ಷೆ ಯಾಕೆ
ಜನಿವಾರದವರು ಜೋಪಡಿಯಲು ಇರುವರು
ಜಾತಿಯ ಹೆಸರಿನಲಿ ತಾರತಮ್ಯ ಯಾಕೆ
ಹಸಿವಿಗೆ ಬಡತನಕೆ ಜಾತಿಯ ಹಂಗಿಲ್ಲ
ಜಾತಿ ಜಾತಿ ನಡುವೆ ಕಂದಕವು ಏಕೆ
ಮರೆಯದಿರಿ ಗೆಳೆಯರೆ ಜಾತಿಗೂ ಮುಂಚೆ
ನಾನು ಕೂಡ ನಿಮ್ಮಂತೆ ಭಾರತೀಯ

ಕೆಲವರ ಕುತಂತ್ರ ಹೆಸರು ಮಾಡುವ ಹುನ್ನಾರ
ಒಂದು ಪಂಥವನು ಬೈದೊಡೆ ಬೆಳೆದುಬಿಡೋ ಆಸೆ
ಬಿತ್ತುತಿದೆ ದ್ವೇಶವನು ನಮ್ಮ ನಮ್ಮಗಳ ನಡುವೆ
ಎಲ್ಲರೊಳು ಒಂದಾಗಿ ಎಲ್ಲರೊಳು ಬೆರೆತು
ಒಬ್ಬರನೊಬ್ಬರು ಅರಿತು ಪರಸ್ಪರ ಗೌರವಿಸಿ
ಒಟ್ಟಾಗಿ ಬಾಳುವುದ ನೋಡುವಾಸೆ ಎನಗೆ
ಮರೆಯದಿರಿ ಗೆಳೆಯರೆ ನಿಮ್ಮ ಅಣ್ಣತಮ್ಮನು ನಾನು
ನಾನು ಕೂಡ ನಿಮ್ಮಂತೆ ಭಾರತೀಯ

ಪವನ್ ಪಾರುಪತ್ತೇದಾರ :-

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು