ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, January 23, 2014

ಸಂವಿಧಾನದ ಮರು ವಿಮಶೆ೯ ಅಗತ್ಯವೇ? - ವಿವೇಕ್ ಬೆಟ್ಕುಳಿ ಕುಮಟಾ


ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 64ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು. 1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು, ನಮ್ಮ ಆಡಳಿತ ಪದ್ದತಿ ಹೇಗಿರಬೇಕು, ಎಲ್ಲವುಗಳ ಸ್ಪಷ್ಟತೆ ರೂಪುರೇಷೆ ಸಂದರ್ಭದಲ್ಲಿ ಇರಲಿಲ್ಲ.  ಆಡಳಿತ ವ್ಯವಸ್ಥೆ ನೀತಿ ನಿಯಮ ಹೇಗಿರಬೇಕು ಎಂಬುದರ ಬಗ್ಗೆ ಒಂದು ಮಾರ್ಗಸೂಚಿಯ ಅಗತ್ಯವಿತ್ತು. ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರವರನ್ನು ಆಯ್ಕೆ ಮಾಡಲಾಯಿತು.  ಬೇರೆ ಬೇರೆ ದೇಶದ ಎಲ್ಲಾ ಸಂವಿಧಾನಗಳನ್ನು ಅಭ್ಯಸಿಸಿ ಸ್ವತಂತ್ರ್ಯ ಭಾರತಕ್ಕೆ ಸಂವಿಧಾನವನ್ನು ಸಿದ್ದಪಡಿಸಲಾಯಿತು. ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಲಾಯಿತು.  ಅಂದಿನಿಂದ ಜನವರಿ 26ನ್ನು ಪ್ರಜಾರಾಜೋತ್ಸವ/ಗಣರಾಜೋತ್ಸವನ್ನಾಗಿ ದೇಶದಲ್ಲೆಡ ಸಂಭ್ರಮಿಸಲಾಗುವುದು. ಸಂಭ್ರಮಕ್ಕೆ  ಈಗ 64 ಹರಯ.   ಕಳೆದ 63 ವರ್ಷಗಳಿಗೆ ನಮ್ಮ ಸಂವಿಧಾನವನ್ನು 100 ಅಧಿಕ ಬಾರಿ ನಾವು ತಿದ್ದುಪಡಿ ಮಾಡಿಕೊಂಡಿರುವೆವು. ಆಗಾಗ ತಿದ್ದುಪಡಿ ಮಾಡುತ್ತಲೇ ಇರುವೆವು. ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡುವ ಬಗ್ಗೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಹಾ ಸೇರಿಸುವುದನ್ನು ಕಾಣಬಹುದಾಗಿದೆ.
 ನಮ್ಮ ಸಂವಿಧಾನದ ಬಗ್ಗೆ, ನಮ್ಮ ದೇಶ ಪ್ರೇಮದ ಬಗ್ಗೆ, ನಮ್ಮ ವರೆಗಿನ ಸಾಧನೆಯ ಬಗ್ಗೆ ಪ್ರತಿ ಜನವರಿ 26 ರಂದು ಹೇಳಿಕೊಳುತ್ತಾ ನಾವು ಗಣರಾಜೋತ್ಸವವನ್ನು ಆಚರಿಸುತ್ತಿರವೆವು. ಪ್ರತಿ ವರ್ಷ ಬೇರೆ ಯಾವುದಾದರು ದೇಶದ ಅಥಿತಿಯನ್ನು ಆಹ್ವಾನಿಸಿ ತಮ್ಮ ಸಾಧನೆಯನ್ನು ದೆಹಲಿಯಲ್ಲಿ ಪ್ರದಶಿ೯ಸುತ್ತಿರುವೆವು. ಗಣರಾಜೋತ್ಸವ ಪರೇಡ್ ಎಂಬುದು ನಮ್ಮ ದೇಶದ ಹೆಮ್ಮೆ ಎಂದು ನಾವು ಹೇಳಿಕೊಳ್ಳುತ್ತಿರುವೆವು.
ಕಳೆದ ಒಂದೆರಡು ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು. ರಾಜಕೀಯದಲ್ಲಿ ಆಮ ಆದ್ಮೀ ಹೊಸ ಸಂಜಲನವನ್ನು ಮೂಡಿಸಿದರೆ, ಜನಹೋರಾಟದಲ್ಲಿ ಅಣ್ಣಾ ಹಜಾರೆಯ ಆಂದೋಲನ ತನ್ನ ಶಕ್ತಿಯನ್ನು ತೋರಿಸಿದೆ. ರಾಷ್ಟ್ರೀಯ ಆಹಾರ ಭಧ್ರತೆಯ ಹಕ್ಕನ್ನು ಜಾರಿಗೊಳಿಸುವ ಮೂಲಕ ಕಾ೯ ತನ್ನ ಬದ್ದತೆಯನ್ನು ತೋರಿಸಿರುವುದು. ಎಲ್ಲಾ ಅಂಶಗಳು ಭಾರತದಂತಹ ದೇಶದಲ್ಲಿ ಒಂದೊಂದು ಮೈಲಿಗಲಾಗಿ ಇರುವುದು.
ಸಲಿಂಗ ಕಾಮಿಗಳ ಬಗ್ಗೆ ಇರುವ ನಿಯಮ, 377 ವಿಧಿ, ರಾಜಕೀಯ ಮತ್ತು ಉದ್ಯೋಗ ಮೀಸಲಾತಿ, ಮಹಿಳೆಯ ರಕ್ಷಣೆ, ಇಂತಹ ಹಲವಾರು ವಿಚಾರಗಳ ಬಗ್ಗೆ ನಮ್ಮ ಎಲ್ಲಾ ನಿಯಮಗಳನ್ನು ಪ್ರಸ್ಥುತ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಡಿಸುವ ಅಗತ್ಯವಿದೆ. ವಿಚಾರಗಳ ಬಗ್ಗೆ ಚೆ೯ಯೂ ಸಹಾ ಆಗುತ್ತಿರುವುದು.
ಆದರೇ 63 ವರ್ಷದ ಹಿಂದಿನ ಪರಿಸ್ಥಿತಿಗೆ ಅನುಗುಣವಾಗಿ ರಚಿಸಿದ ಸಂಪೂರ್ಣ ಸಂವಿಧಾನವನ್ನು ಮರು ವಿಮರ್ಶಗೆ ಒಳಪಡಿಸುವ ಬಗ್ಗೆ ನಾವು ಇಂದು ಚಿಂತಿಸುವ ಅಗತ್ಯವಿದೆ.  ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ನಾವಿಂದು ಹೊಸತನದಲ್ಲಿ ಇಂದಿನ ಸ್ಥಿತಿಗೆ ಹೊಂದುವಂತಹ ಹೊಸ ಸಂವಿಧಾನವನ್ನು ರೂಢಿಸಿಕೊಳ್ಳುವ ಅಗತ್ಯವಿರುವುದು. ಬಗ್ಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಚೆ೯ಯೊಂದನ್ನು ಹುಟ್ಟು ಹಾಕುವ ಅಗತ್ಯತೆ ಇರುವುದು.
ಸ್ವತಂತ್ಯ ಸಿಕ್ಕು 67 ವರ್ಷಗಳನ್ನು ಕಳೆದರು ದಲಿತರ ಮೇಲಿನ ದೌರ್ಜನ್ಯ ಒಂದು ಕಡೆ ನಡೆಯುತ್ತಲೇ ಇರುವುದು. ಅದೇ ರೀತಿ ದಲಿತರ ಹೆಸರಿನಲ್ಲಿ ಸೌಲಭ್ಯ ಪಡೆದ ವ್ಯಕ್ತಿ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ಇರುವವು.
ಯಾವುದೇ ರೀತಿಯ ಕಾನೂನನ್ನು ತಂದರು ಅಪರಾಧಗಳು ಹೆಚ್ಚುತ್ತಲೇ ಇರುವುದು. ಮಹಿಳೆಯರ ಮೇಲೆ ವರ್ಷದಿಂದ ವರ್ಷಕ್ಕೆ ದೌರ್ಜನ್ಯ ನಡೆಯುತ್ತಲೇ ಇರುವುದು. ಒಟ್ಟಾರೆ ನಮ್ಮ ದೇಶ ಜನರ ಹಿತಕ್ಕಿಂತ ಬಂಡವಾಳಶಾಹಿಗಳ ಹಿತಾಸಕ್ತಿಗನುಗುಣವಾಗಿಯೇ ಹೆಚ್ಚಾಗಿ ಗಮನ ಕೇಂದ್ರಿಕರಿಸಿದಂತೆ ಕಂಡು ಬರುತ್ತಿರುವುದು.
ರಾಜಕೀಯ ಪಕ್ಷಗಳು ಸಹಾ ಅಧಿಕಾರಕ್ಕೆ ಬಂದು ಅಪ್ರತ್ಯಕ್ಷವಾಗಿ ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವುದು. ಟಿವಿ, ಕಂಪ್ಯೂಟರ್, ಸೈಕಲ್, ಮೊಬೈಲ್, ಮಂಗಲಸೂತ್ರ, ದುಡ್ಡು ರೀತಿಯಾಗಿ ನೇರವಾಗಿ ಜನರೊಂದಿಗೆ ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಳಿದಿರುವವು. ಜನರಿಂದ ಜನರ ಕಲ್ಯಾಣಕ್ಕಾಗಿ ಆಯ್ಕೆ ಆದ ಚುನಾಯಿತ ಪ್ರತಿನಿಧಿಗಳು ನೆಂಟರ ಮನೆಗೆ ಹೋಗಿ ಬರುವವರಂತೆ ವಿವಿಧ ಭೃಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬರುತ್ತಿರುವರು ಪುನ: ಆಯ್ಕೆ ಆಗುತ್ತಿರುವರು. ಆದ್ಯಾತ್ಮ ಕೇತ್ರದ ಮಠ, ಮಂದಿರ, ಮಸೀದಿಗಳಲ್ಲಿಯೂ ವಿವಿಧ ಬಗೆಯ ಆರೋಪ ಪ್ರತ್ಯರೋಪಗಳು ಬರುತ್ತಿರುವುದು. ಸ್ವಾಮಿಗಳು ಸಹಾ ಜೈಲಿನಲ್ಲಿರುವರು. ಅತ್ಯಾಚಾರ, ಕೊಲೆ ದರೋಡೆ, ಆರೋಪಿತರು ಜೈಲಿಗೆ ಹೋಗಿ ಬರುವರು ಪುನ: ತಮ್ಮ ಕಾರ್ಯದಲ್ಲಿ ಮಗ್ನರಾಗಿರುವರು. ಆತಂರಿಕೆ ಭದ್ರತೆಗೆ ಸವಾಲಾಗಿರುವ ನಕ್ಸ್ಲಿಸಂ ದಿನೇ, ದಿನೇ ಬೇರೆ ಬೇರೆ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿರುವರು.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿರುವ ನಾವು ಇಂದು ಎಲ್ಲಾ ವ್ಯವಸ್ಥೆಯಲ್ಲಿ ಭಾಗವಾಗಲು ಒಪ್ಪಿಕೊಳ್ಳುತ್ತಿರುವೆವು. ಇಲ್ಲಾ ಎಲ್ಲಾ ಗೊತ್ತಿದ್ದು ಏನು ಮಾಡಲಾಗದೆ ಅಸಹಾಯಕರಾಗಿರುವೆವು. ನಮ್ಮ ಕಾನೂನು ಸಹಾ ಅದೇ ರೀತಿಯ ವ್ಯವಸ್ಥೆಯನ್ನು ಸೃಷ್ಠಿಸಿರುವುದು. ಎಲ್ಲಾ ಹಿನ್ನಲೆಯಲ್ಲಿ ನಮ್ಮ ಸಂವಿಧಾನದ ಸಂಪೂರ್ಣ ಮರು ವಿಮಶೆ೯ ಅಗತ್ಯವೆನಿಸುವುದು.
ನಮ್ಮ ಚುನಾವಣಾ ಪದ್ದತಿ, ಕಾ೯ರದ ಕಾರ್ಯವೈಖರಿ, ಭೃಷ್ಟಾಚಾರ, ಅತ್ಯಾಚಾರ, ಹೆಚ್ಚುತ್ತಿರುವ ವಿವಿಧ ಬಗೆಯ ಅಪರಾಧಗಳು, ದೇಶದ ಭದ್ರತೆ, ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಕೊಂಡು  ವಿವಿಧತೆಯಲ್ಲಿ ಏಕತೆಯಿರುವ ನಮ್ಮಂತ ದೇಶದಲ್ಲಿ ಹೊಸ ಸಂವಿಧಾನದ ಅಗತ್ಯತೆ ಕಂಡುಬರುತ್ತಿರುವುದು. ಬಗ್ಗೆ ಈಗಿನಿಂದಲ್ಲೆ ಚೆ೯ಯನ್ನು ಪ್ರಾರಂಭಿಸಿದರೆ ಮುಂದಿನ ಕೆಲವರ್ಷಗಳಲ್ಲಿ ನಾವು ಕಲ್ಪಿಸಿಕೊಳ್ಳುವ ರೀತಿಯಲ್ಲಿ ಸಂವಿಧಾನ ಬರಬಹುದಾಗಿದೆ.
ವ್ಯಕ್ತಿಯೊಬ್ಬ ಸರಾಸರಿ 60 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲನು. ಅದನ್ನು ತಿಳಿದೆ ಕಾ೯ರ್  ನಿವೃತ್ತಿ ವಯಸ್ಸನ್ನು 58-60 ವರ್ಷಕ್ಕೆ ನಿಗದಿಪಡಿಸಿದೆ. ಅದೇ ರೀತಿ 63 ವರ್ಷದ ಹಳೆಯ ಸಂವಿಧಾನಕ್ಕೆ ಒಂದು ನಿವೃತ್ತಿ ಎಂಬುದು ಇರುವುದು ಅಗತ್ಯ. ಬಗ್ಗೆ ಚೆ೯ ಪ್ರಾರಂಭವಾಗುವ ಅಗತ್ಯವಿದೆ.
                                                                                                                                                   
ವಿವೇಕ್ ಬೆಟ್ಕುಳಿ ಕುಮಟಾ

ಕರೆಯೋಲೆ


Wednesday, January 8, 2014

ಕಾವ್ಯ ಕಮ್ಮಟ





ವತ್ತಿನ ಹೊಸ ತಲೆಮಾರಿನ ಯುವಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದ ಮೂಲಕ ಹೊರಹಾಕಲು ಯತ್ನಿಸುತ್ತಿದೆ.. ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ಸಾಹಿತ್ಯ-ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ನಾವು ಕೆಲವರು ಸೇರಿಕೊಂಡು 'ಕಾವ್ಯ ಕಮ್ಮಟ' ಒಂದನ್ನು ಕುಪ್ಪಳಿ ಕವಿಮನೆ ಬಳಿಯ 'ಶತಮಾನೋತ್ಸವ ಭವನ'ದಲ್ಲಿ ಏರ್ಪಡಿಸಿದ್ದೇವೆ. ಜನವರಿ 31, ಪೆಬ್ರವರಿ 1 & 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ-ಸಮಕಾಲೀನ ಕವಿ-ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ, ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದೇವೆ.


ಆಸಕ್ತರ ಗಮನಕ್ಕೆ:

* 50 ಮಂದಿ ಹೊಸ ಪೀಳಿಗೆಯ ಬರಹಗಾರರಿಗೆ ಮೊದಲ ಆದ್ಯತೆ
* ಕಾವ್ಯಾಸಕ್ತ ಇತರರಿಗೂ ಸೀಮಿತ ಅವಕಾಶ
* ಸರಳ ಊಟ & ವಸತಿ ವ್ಯವಸ್ಥೆ ಕಲ್ಪಿಸಲಾಗುವುದು
* ಪ್ರವೇಶ ದರ ರೂ. 500/-
* ಜನವರಿ 10 ರೊಳಗೆ ನೊಂದಾಯಿಸಿಕೊಳ್ಳಬೇಕು.

ವಿವರಗಳಿಗೆ:


ಸತೀಶ್ 
Ph 9035611068 

E mail: info.kaajana@gmail.com

ಆಯೋಜನೆ: ಕಾಜಾಣ ಬಳಗ