ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, March 10, 2016

ಚುಟುಕ - ರಘು ವಿ,

ವರುಷವಿಡೀ ನಡೆವಂಗೆ
ಎಡವುದೇಂ ಹೊಸದೆ?
ರಘು ವಿ
ಉರಿವ ದೀಪಕ್ಕೆ ಕಿಟ್ಟ
ಕಟ್ಟುವುದೇಂ ಹೊಸದೆ?
ಜನುಮವಿಡೀ ಉರಿವ
ನಿರಂತರದ ದಿನಕರಗೆ 
ಗ್ರಹಣವಿದು ಹೊಸದೆ?
ನೆರಳಾಟಕ್ಕೆ ಅಂಜುವೊಡೆ
ಬಾಳನಂಜುಗಳ ಹೇಗೆ
ಅರಗಿಪೆಯೊ ಮನುಜ?
ಮನದ ಗ್ರಹಣವ ಕಳೆದು
ನಡೆ ಬೆಳಕಿನೆಡೆಗೆ!
[ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]
Monday, March 7, 2016

ಆರೈಕೆಯ ಅವಧಾನ - ಮಾಲತಿ ಹೆಗ್ಗಡೆ ( ವಿಜಯವಾಣಿ - ೨೨ ಫೆಬ್ರವರಿ ೨೦೧೬)

ಅಮ್ಮಾ, ನೀನು ನಿನ್ನ ಎಲ್ಲಾ ಒಡವೆನೂ ಮನೆಗೆ ಅ೦ತ ಕೊಟ್ಟುಬಿಟ್ಟೆಯೇನಮ್ಮಾ? ಒ೦ದಾದರೂ ಇಟ್ಟುಕೊಳ್ಳಬೇಕಿತ್ತು. ನೀನು ಅವನ್ನೆಲ್ಲ ಧರಿಸಿದರೆ ಎಷ್ಟು ಸು೦ದರವಾಗಿ ಕಾಣುತ್ತಿದ್ದೆ' ಎ೦ದು ಅಳುತ್ತ ಕೇಳಿದ ಬಾಲಕನ ವಯಸ್ಸು ಏಳು ವಷ೯ವಷ್ಟೇ. "ಹೂ೦ ಕಣಪ್ಪಾ. ನಿಮ್ಮಪ್ಪ ಮನೆ ಕಟ್ಟಿಸಬೇಕು ಅ೦ತ ಅ೦ದುಕೊ೦ಡಿದ್ದಾರೆ. ಒಡವೆ ಆದ್ರೆ ನಾನು ಒಬ್ಬಳೇ ಧರಿಸಬೇಕು. ಒಡವೆನೆಲ್ಲಾ ಮಾರಿ ಮನೆ ಕಟ್ಟಿಸಿದರೆ ಎಲ್ಲಾರಿಗೂ ಅನುಕೂಲ' ಎ೦ದು ಮಗನನ್ನು ತಬ್ಬಿ ಸ೦ತೈಸಿದಳು ಆಕೆ. ಅವಧಾನ ಕಲೆಯೊ೦ದಿಗೆ ಅವಿನಾಭಾವವಾಗಿ ಬೆರೆತ ಆ ಮಗನ ಹೆಸರು ಗಣೀಶ. ಅಮ್ಮನ ಹೆಸರು ಅಲಮೇಲು.
ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ ಅವಳು ಕಲೆ, ಸಾಹಿತ್ಯ, ಸ೦ಗೀತ ಎಲ್ಲವುಗಳಲ್ಲಿ ಅಭೀರುಚಿ ಇದ್ದವಳು. ದೇಶಕ್ಕೆ ಸ್ವಾತ೦ತ್ರ್ಯ ಬ೦ದ ಹೊಸದರಲ್ಲೇ ಬಿ.ಎ. ಪದವಿ ಓದಿದ, ತು೦ಬ ಪ್ರಾಮಾಣಿಕನಾದ ಸಕಾ೯ರಿ ಉದ್ಯೋಗಿಯೊ೦ದಿಗೆ ಅವಳ ವಿವಾಹವಾಯಿತು. ಆ ಕಾಲದಲ್ಲಿ ಸಕಾ೯ರಿ ಉದ್ಯೋಗಿಗಳಿಗೆ, ಪ್ರಾಮಾಣಿಕವಾಗಿ ಬದುಕುವವರಿಗೆ ಜೀವನ ನಿವ೯ಹಣೆ ಬಲು ಕಷ್ಟವೆನ್ನುವ ಸ್ಥಿತಿ ಇರುತ್ತಿತ್ತು. ತವರೂರಿನ ಅನುಕೂಲವನ್ನು ನೆನೆದು ಸೇರಿದ ಕುಟು೦ಬವನ್ನು ಹಳಿದವಳಲ್ಲ ಆಕೆ. ಅಭ್ಯಾಸವಿಲ್ಲದ ಕೆಲಸಗಳನ್ನೆಲ್ಲ ಒ೦ದೊ೦ದಾಗಿ ಕಲಿತಳು. ಸುತ್ತಮುತ್ತಲಿನವರೆಲ್ಲರೊ೦ದಿಗೆ ಬೆರೆತಳು. ಶಿಸ್ತಿನ ಸರದಾರ ಎನಿಸುವ ಪತಿಗೆ ಶೀಘ್ರವಾಗಿ ಸಿಟ್ಟು ಬರುತ್ತಿತ್ತು. ತಾಳ್ಮೆಯ ಪ್ರತಿರೂಪದ೦ತಿರುವ ಅಲಮೇಲು ನಗುನಗುತ್ತಲೇ ಬದುಕಿನ ಹೊಣೆ ಹೊರುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. "ಶಾಲೆಯಲ್ಲಿ ಏನು ಕಲಿಯುತ್ತೀರೋ ಅದನ್ನು ಚೆನ್ನಾಗಿ ಕಲಿಯಿರಿ, ಅದಕ್ಕೆ ಬೇಕಾದ ಎಲ್ಲಾ ಸವಲತ್ತನ್ನು ನಾನು ಒದಗಿಸುತ್ತೇನೆ' ಎ೦ಬ ಪತಿಗೆ ಲಲಿತಕಲೆಗಳೆ೦ದರೆ ಸೋಮಾರಿಗಳು ಕಾಲಕ್ಷೇಪ ಮಾಡುವ ಸ೦ಗತಿ ಎನಿಸುತ್ತಿತ್ತು.
ಅಲಮೇಲು ಅವರಿಗೆ ಲಲಿತಕಲೆಗಳಲ್ಲಿ ಅಪಾರ ಆಸಕ್ತಿ ಇತ್ತು. ಮಗ ಇ೦ಜಿನಿಯರಿ೦ಗ್ ಓದುತ್ತಿದ್ದಾಗಲೂ, "ಸ೦ಸ್ಕೃತವನ್ನು ಓದು. ಸ೦ಗೀತವನ್ನು ಕಲಿ' ಎ೦ದು ಭಾರತೀಯ ಕಲೆಗಳ ಬಗ್ಗೆ ರುಚಿ ಹಚ್ಚಿದರು. ಮಕ್ಕಳು ಅಮ್ಮನ ಪ್ರೀತಿಯ ಮಕ್ಕಳಾಗಿ ಬೆಳೆದರು. "ಕಾಲೇಜು ಓದುವ ದಿನಗಳಲ್ಲೂ ನಾನು ಅಮ್ಮನೊ೦ದಿಗೆ ಸಿನಿಮಾಗಳನ್ನು ನೋಡುತ್ತಿದ್ದೆ. ಇಬ್ಬರೂ ಒಟ್ಟಿಗೇ ಕುಳಿತು ಸ೦ಗೀತವನ್ನು ಕೇಳುತ್ತಿದ್ದೆವು. ಹಾಡುತ್ತಿದ್ದೆವು. ಬುದ್ಧಿಯನ್ನು ಭಾವವನ್ನು ಬೆಸೆದು ಬದುಕು ಕಟ್ಟುವ ಕಲೆಯನ್ನು ನನಗೆ ಕಲಿಸಿದವಳು ನಮ್ಮಮ್ಮ' ಎ೦ದು ನೆನಪಿಸಿಕೊಳ್ಳುತ್ತಾರೆ ಶತಾವಧಾನಿ ಡಾ. ಆರ್. ಗಣೀಶ್.
ಅಲಮೇಲು ಹಬ್ಬ ಹರಿದಿನಗಳಲ್ಲಿ ಮನೆಗೆಲಸಕ್ಕೆ ಬರುವವರಿಗೆ ಮೊದಲು ಅರಿಶಿಣ ಕು೦ಕುಮ ನೀಡಿ, "ನೀನೇ ಮೊದಲಿನ ಮುತ್ತೈದೆ ನಮ್ಮ ಮನೆಗೆ ಬ೦ದವಳು' ಎನ್ನುತ್ತಿದ್ದರು. ವಿಧವೆಯರು ಯಾರಾದರೂ ಮನೆಗೆ ಬ೦ದರೆ ಅರಿಶಿಣ ಕು೦ಕುಮ ಕೊಡುತ್ತಿದ್ದರು. "ಹುಟ್ಟಿದಾಗಿನಿ೦ದ ಬ೦ದ ಅಲ೦ಕಾರಗಳನ್ನೆಲ್ಲ ಗ೦ಡ ಸತ್ತಾಗ ತೆಗೆಯುವುದೇಕೆ? ನಿಮಗಷ್ಟು ಬೇಸರವಿದ್ದರೆ ಕರಿಮಣಿಯನ್ನಷ್ಟೇ ತೆಗೆದಿಡಿ ಸಾಕು' ಎನ್ನುತ್ತಿದ್ದರು. ಆ ಕಾಲದಲ್ಲಿ ಜಾತಿ ಸ೦ಪ್ರದಾಯ ಮೂಢನ೦ಬಿಕೆಗಳ ವಿರುದ್ಧವಾದ ಇ೦ತಹ ನಡವಳಿಕೆಯುಳ್ಳ ಅಪರೂಪದ ವ್ಯಕ್ತಿತ್ವದವರಾಗಿದ್ದರು ಅವರು.
ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾರದ ಕಷ್ಟ ಅಲಮೇಲು ಅವರದ್ದಾದರೂ ಆ ಆತ೦ಕ ಮಕ್ಕಳಿಗೆ ಕಾಡದ೦ತೆ ಎಚ್ಚರ ವಹಿಸಿದರು. ಪತಿ ಕ್ಯಾನ್ಸರ್‍ಗೆ ತುತ್ತಾದಾಗ ಮನ ಮುಟ್ಟಿ ಸೇವೆ ಸಲ್ಲಿಸಿದರು. ನಾಲ್ಕು ವಷ೯ಗಳ ಸೇವೆಗೆ ಪ್ರತಿಫಲ ದೊರೆಯದೆ ಪತಿ ವಿಧಿವಶರಾದರು.
ಎಪ್ಪತ್ತರ ಇಳಿವಯಸ್ಸಿನಲ್ಲಿ ಅಲಮೇಲು ಅವರಿಗೆ ಆಲೆl„ಮರ್ ಕಾಯಿಲೆ ಕಾಣಿಸಿಕೊಳ್ಳಲಾರ೦ಭಿಸಿತ್ತು. ಮರೆವು ಶುರುವಾಗಿತ್ತು. ಒ೦ದು ದಿನ ತಳಕ್ಕೆ ನೀರು ಹಾಕದೆ ಕುಕ್ಕರನ್ನು ಒಲೆಗೇರಿಸಿ ಅನ್ನ ಹೊತ್ತಿಸಿದರೆ ಇನ್ನೊ೦ದು ದಿನ ಬಾಗಿಲಿಗೆ ಚಿಲಕ ಹಾಕುವುದನ್ನೇ ಮರೆಯುತ್ತಿದ್ದರು. ಅಮ್ಮನ ಮರೆವು ಮಗನಿಗೆ ಆತ೦ಕ ಹುಟ್ಟಿಸಿತ್ತು. ವೈದ್ಯರಲ್ಲಿಗೆ ಕರೆದುಕೊ೦ಡು ಹೋದಾಗ ಅವರಿಗಿರುವುದು ಆಲ್ಫೈಮರ್ ಕಾಯಿಲೆ ಎ೦ದರು (ಈ ಕಾಯಿಲೆಗೆ ತುತ್ತಾದವರಿಗೆ ನಿಧಾನವಾಗಿ ಎಲ್ಲವೂ ಮರೆತುಹೋಗುತ್ತದೆ. ಒ೦ದಥ೯ದಲ್ಲಿ ಅವರು ಮಗುವೇ ಆಗುತ್ತಾರೆ.)
ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎ೦ದು ಸಾಕಷ್ಟು ವೈದ್ಯರನ್ನು ಸ೦ಪಕಿ೯ಸಿದ್ದಾಯಿತು. ಅದೇ ಸಮಯದಲ್ಲಿ ಆಸ್ಪತ್ರೆಯವರ ನಿಲ೯ಕ್ಷದಿ೦ದ ಅಲಮೇಲು ಅವರಿಗೆ ಬೆನ್ನಮೇಲೆ ಹುಣ್ಣಾಗಿ ಯಮಯಾತನೆ ಶುರುವಾಗಿತ್ತು. "ಆಸ್ಪತ್ರೆಯಿ೦ದ ಡಿಸ್ಚಾಜ್‍೯ ಮಾಡಿಕೊಡಿ. ಮನೆಯಲ್ಲಿ ನಾನೇ ಪ್ರತಿದಿನ ಡ್ರೆಸ್ಸಿ೦ಗ್ ಮಾಡಿಸುತ್ತೇನೆ' ಎ೦ದು ಮಗ ಹೇಳಿದ. ಅವಿವಾಹಿತನಾಗಿಯೇ ಉಳಿದ ಮಗ ಅಮ್ಮನನ್ನು ನೋಡಿಕೊಳ್ಳುತ್ತಾನಾದರೂ ಹೇಗೆ? "ಯಾವುದಾದರೂ ಆಸ್ಪತ್ರೆಯಲ್ಲಿಯೇ ಇಡಿ' ಎ೦ದು ಎಲ್ಲರೂ ಇತ್ತ ಸಲಹೆಯನ್ನು ತಿರಸ್ಕರಿಸಿ ಮನೆಗೇ ಕರೆದುತ೦ದ.
ಅಮ್ಮ ಎನ್ನುವುದನ್ನು ಬಿಟ್ಟ ಮಗ, ನ೦ದಾಪಾಪೂ ಎನ್ನಲಾರ೦ಭಿಸಿದ. ಮಗುವನ್ನು ಆರೈಕೆ ಮಾಡಿದ೦ತೆ ದಿನವೂ ಅವರ ಸೇವೆ ಮಾಡಿದ. ಸತತವಾಗಿ ಒ೦ದೂವರೆ ವಷ೯ ಡ್ರೆಸ್ಸಿ೦ಗ್ ಮಾಡಿದ ಮೇಲೆ ಅ೦ಗೈ ಅಗಲವಾದ ಬೆಡ್‍ಸೋರ್ ವಾಸಿಯಾಗಿ ವೈದ್ಯರಿಗೇ ಅಚ್ಚರಿ ಮೂಡಿಸಿತ್ತು. "ಯಾರಪ್ಪಾ ನೀನು? ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ?' ಎ೦ದು ಪ್ರಶ್ನಿಸುವ ಅಮ್ಮನಿಗೆ ಮಗನ ಗುರುತೇ ತಿಳಿಯುತ್ತಿರಲಿಲ್ಲ. ಈ ಅಮ್ಮ ಮಗನ ಪ್ರೀತಿಗೆ ಸ್ನೇಹಿತರ, ಹಿತೈಷಿಗಳ, ವೈದ್ಯರುಗಳ ಅಪಾರ ಬೆ೦ಬಲವಿತ್ತು. ಅಮೆರಿಕ ವಿಶ್ವವಿದ್ಯಾಲಯದಿ೦ದ ಒ೦ದು ಟೀಮ್ ಅವರ ಮನೆಗೇ ಬ೦ದು ಆಲ್ಫೈಮರ್ ಕಾಯಿಲೆ ಇರುವವರನ್ನು ದೀಘ೯ಕಾಲ ನೋಡಿಕೊ೦ಡ ಮನೆಯವರಿಗೇ ಖಿನ್ನತೆ ಬರುತ್ತದೆ. ಅಪಾರವಾದ ಏಕಾಗ್ರತೆ ಬೇಡುವ ಶತಾವಧಾನವನ್ನೆಲ್ಲ ಇವರು ಸಲೀಸಾಗಿ ಮಾಡುವುದು ಹೇಗೆ ಎ೦ದು ಅಭ್ಯಸಿಸಿಕೊ೦ಡು ಹೋದರು!
"ಅಮ್ಮನಿಗೆ ಅಥ೯ವಾಗಲಿ ಬಿಡಲಿ, ಕಾಯ೯ಕ್ರಮದ ನಿಮಿತ್ತ ಬೇರೆ ಊರಿಗೆ ಹೋಗಲಿ, ಫೋನಿನಲ್ಲಾದರೂ ಪ್ರತಿದಿನವೂ ಮಾತನಾಡುತ್ತಿದ್ದೆ. ಆಗ ಬೊ೦ಬೆಯ೦ತಿದ್ದ ಅಮ್ಮನ ಮುಖದ ಮೇಲೊ೦ದು ಆನ೦ದದ ಕಳೆ ಇರುತ್ತಿತ್ತು. ದಿನವೂ ಅಮ್ಮನ ಮಡಿಲಿನಲ್ಲಿ ಒ೦ದು ನಿಮಿಷವಾದರೂ ತಲೆ ಇಡುತ್ತಿದ್ದೆ' ಎನ್ನುವ ಮಗನ ಪ್ರೀತಿ, ಕಾಳಜಿಯಲ್ಲಿ ಎ೦ಟು ವಷ೯ಗಳ ಸುದೀಘ೯ ಅವಧಿ ನ೦ದಾಪಾಪೂ ಬದುಕಿದ್ದರು. "ಅಮ್ಮ ಹೋಗಿ ನಾಲ್ಕು ವಷ೯ಗಳಾದವು. ಇನ್ನೂ ಅವರಿರಬೇಕಿತ್ತು ಎ೦ದೇ ಎನಿಸುತ್ತದೆ' ಎ೦ದು ಕಣ್ಣಾಲಿ ತು೦ಬಿಕೊಳ್ಳುವ ಪ್ರತಿಭಾವ೦ತ ಮಗನಲ್ಲಿಯೇ ಅಮ್ಮ ಜೀವ೦ತವಾಗಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವ ಡಾ. ಆರ್. ಗಣೀಶರ೦ಥವರು ನಿಸ್ಸ೦ಶಯವಾಗಿಯೂ ನಮಗೆ ದಾರಿದೀಪವಾಗಬಲ್ಲರು. ಮಾಲತಿ ಹೆಗ್ಗಡೆ
ಕೃಪೆ - ವಿಜಯವಾಣಿ

Thursday, March 3, 2016

ಕಸಾಪಗೆ ನೂತನ ಸಾರಥಿ ಶ್ರೀ ಮನು ಬಳಿಗಾರ್‌ ಅಭಿನಂದನೆಗಳು ಸಾರ್.


 ಶ್ರೀ ಮನು ಬಳಿಗಾರ್‌  

ಕಸಾಪ ನೂತನ ಸಾರಥಿ 
ಶ್ರೀ ಮನು ಬಳಿಗಾರ್‌ 
 ಅಭಿನಂದನೆಗಳು

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ - ಚಿತ್ರ: ದೂರದ ಬೆಟ್ಟ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಮ್ಗೆ, ಗೌರ
ಏಸೇ ಕಷ್ಟ ಬಂದ್ರು ನಮ್ಗೆ, ಮೀಸೆ ಬುಡ್ತೀನ್ ಸುಮ್ಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
ಈ ನಿಮ್ಮ ಪಾದದಾಣೆ
ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೆ
ಪ್ರೀತಿನೇ ಆ ದ್ಯಾವ್ರು ತಂದ, ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ, ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಚಿತ್ರ: ದೂರದ ಬೆಟ್ಟ (೧೯೭೩/1973)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್
ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


Wednesday, March 2, 2016

ನೀ ಹೀಂಗ ನೋಡಬ್ಯಾಡ ನನ್ನ - ದ ರಾ ಬೇಂದ್ರೆ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

                                                            - ದ ರಾ ಬೇಂದ್ರೆ
                                       ('ನಾದಲೀಲೆ' ಕವನ ಸಂಕಲನದಿಂದ)

ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ - ಅಮಂತ್ರಣ ಪತ್ರಿಕೆ,

"ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ.
ಮಾರ್ಚ್ 6, 2016 .. ರವಿವಾರ. ಸಮಯ - ಮುಂಜಾನೆ -10 ಗಂಟೆಗೆ
ಸ್ಥಳ- ವಿಜಯಾ ಕಾಲೇಜು ಒಳಾಂಗಣ ಸಭಾಂಗಣ,
ಬಸವನಗುಡಿ, ಆರ್.ವಿ ರಸ್ತೆ, ಬೆಂಗಳೂರು


ಸುಭಾಷಿತ - ಆರ್ ಗಣೇಶ್