ಕನ್ನಡ ಎಂದೊಡನೆ..?
ಕನ್ನಡ ಶಿವನಿಗೆ
ತೆಲುಗು ಪಾರ್ವತಿ
ಬಹು ಭಾಷಿಕತೆ,ಬಹು ಸಾಂಸೃತಿಕತೆ,ಬಹು
ಧಾರ್ಮಿಕತೆಗಳು ಈ ದೇಶದ ಸಹಜ ಅಸ್ಮಿತೆಗಳು. ಅವು ಮಾಡುವ ಮಾತುಕತೆಯಲ್ಲಿ,ಸಾಹಿತ್ಯ ಕೃತಿಗಳಲ್ಲಿ ,ಆಚರಣೆಗಳಲ್ಲಿ,
ಕಲಾ ಪ್ರಕಾರಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಬಾಳ ಹೋರಾಟದಲ್ಲಿ ಮುಳುಗಿರುವ ಜನ , ಪರಿಸರದ ಭಾಷೆಗಳನ್ನು
ಎರಡು ಹೊಳ್ಳೆಗಳ ಮೂಲಕ ಒಂದೇ ಉಸಿರನ್ನು ಪಡೆದುಬಿಡುವಂತೆ ಬಳಸುತ್ತಿರುತ್ತಾರೆ. ಪರಿಸರದ ಭಾಷೆಗಳಲ್ಲಿ
ತಮ್ಮದೂ ಒಂದು ಎಂದಾಗ ಸಮಸ್ಯೆಯಿಲ್ಲ. ತಮ್ಮದೂ ವಿಶಿಷ್ಟ ಎಂದಾಗಲೂ ಅಷ್ಟು ಕಷ್ಟವಿಲ್ಲ. ತಮ್ಮದು ಶ್ರೇಷ್ಠ
ಎಂದ ಕೂಡಲೇ ತಾರತಮ್ಯ ಆರಂಭವಾಗುತ್ತದೆ. ಆಗ ಕೊಡುಕೊಳು ಬದಲು ಹೇರಿಕೆ ,ಹೇರಿಕೆಯನ್ನು ವಿರೋಧಿಸುವ
ಸಂಘರ್ಷ- ಹೀಗೇ ಬೇರೆಯದೇ ಸೆಣಸಾಟ ಶುರುವಾಗುತ್ತದೆ
Comments
Post a Comment