ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, July 24, 2017

ಕೃಪೆ ವಾಟ್ಸಪ್

ನವಯುಗದ ಸೊಸೆಯ ಹೊಸಾ ಒಪ್ಪಂದ !
ತಾನು ಶಾಪಿಂಗ್ ಗೆ ಅಥವಾ ವಿಹಾರಕ್ಕೆ ಹೋದಾಗ ನನ್ನ ಮಗುವನ್ನು ಅತ್ತೆ ನೋಡಿಕೊಳ್ಳಲಿ. ಅವರ ಮಗುವನ್ನು ನಾನು ನೋಡಿಕೊಳ್ತೇನೇ....

*****

ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚೂಕಮ್ಮಿ ನೂರು ಸೀರೆ ತೆಗೆದು, ಅದರಲ್ಲಿ 25 ಶಾರ್ಟ್ಲಿಸ್ಟ್ ಮಾಡಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸ್ತಾಳೆ.

ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ:

"ಹಿಂದಿನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚ್ಕೊಳ್ತಾ ಇದ್ರಂತೆ. ಅವನೇ ಪುಣ್ಯವಂತ"

ಹೆಂಡತಿ ತಣ್ಣಗೆ ಉತ್ತರಿಸಿದಳು.

"ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು,  ಈ ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನ್ನ ಎಷ್ಟು ಮರ ಹತ್ತಿ ಇಳಿಸಿದ್ಲೋ ನೀವೇನು ನೋಡಿದ್ರಾ?"

ನೀತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ ವಾದಿಸಬಾರದು.

*****

ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??

ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ಮಾಡಿದ್ದು!! ಇಲ್ಲಿ ತಿನ್ರಿ ಈಗ...ನಾನೂ ನೋಡ್ತೀನಿ...!!

*****

ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??

ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ಮಾಡಿದ್ದು!! ಇಲ್ಲಿ ತಿನ್ರಿ ಈಗ...ನಾನೂ ನೋಡ್ತೀನಿ...!!


*****

ಹೆಂಡತಿ:-ಎಲ್ಲಿಗೆ ಹೋಗಿ ಬರ್ತ ಇದೀರಿ
ಗಂಡ:-ಕಾಲು ನೋವು ಕಣೆ ಅದಕ್ಕೆ ಹಾಸ್ಪಿಟಲ್ಗೆ ಹೋಗಿ ಬರ್ತ ಇದೀನಿ
ಹೆಂಡತಿ:-ಅಯ್ಯೊ ಒಬ್ರೆ ಹೋಗಿದಿರಾ ನನ್ನ ಕರ್ದ್ರಿದ್ರೆ ಬರ್ತ ಇರ್ಲಿಲ್ವಾ
ಗಂಡ:-ಅಲ್ರೆಡಿ ಕಾಲ್ ನೋವು ಇದೆ ಅದರ ಜೊತೆಗೆ ತಲೆನೋವು ಯಾಕೆ ಅಂತ ಕರಿಲಿಲ್ಲ ಕಣೆ ಅಷ್ಟೇ😔😫😏

ಹೆಂಡತಿ:-ರೀ

*****

ಬೇರೆಯವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲದಿರಬಹುದು ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ...
ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು......

*****


ಬದುಕಿದ್ದಾಗ ನಮಸ್ಕಾರ ಮಾಡದ ಜನ
ಸತ್ತಾಗ
ಪಾದ ಮುಟ್ಟಿ ಕೈ ಮುಗಿದರು.
•••
ಉಸಿರಿರುವಾಗ
ನೀ ಸತ್ತಿದ್ದರೇ ಚೆನ್ನಾಗಿರುತಿತ್ತು ಎಂದವರು
ಸತ್ತಾಗ
ಬದುಕಿರಬೇಕಿತ್ತೆಂದರು.
•••
ಬದುಕಿದ್ದಾಗ ಪಾಪಿಯೆಂದರು
ಸತ್ತಾಗ ಪಾಪ ಎಂದರು.
•••
ಹೊಟ್ಟೆಗಾಗಿ ಬೇಡುವಾಗ
ಕುತ್ತಿಗೆಹಿಡಿದು ತಳ್ಳಿದರು
ಸತ್ತಾಗ ಅತ್ತು ಹೆಗಲಾದರು.

ಇದೆ ನಮ್ಮ ಜೀವನ
ಜೀವನ ಅರಿತು  ನೀ ಬಾಳು

Monday, July 17, 2017

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ. ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಅಷ್ಟೇ ಅಲ್ಲದೆ, ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ, ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು. ಇನ್ನು ನಿಂಬೆರಸ. ಇದನ್ನೂ ಅಷ್ಟೇ ನಾವು ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ನಿಂಬೆರಸ, ಸಕ್ಕರೆಯನ್ನು ನೀರಿನಲ್ಲಿ ಬೆರೆಸಿಕೊಂಡು ಶರಬತ್ ತರಹ ಕುಡಿದರೆ ದೇಹ ತಂಪಾಗುತ್ತದೆ. ಆದರೆ ಅರಿಶಿಣ, ನಿಂಬೆರಸಗಳನ್ನು ಉಪಯೋಗಿಸಿ ತೂಕ ಕಡಿಮೆ ಮಾಡಿಕೊಳ್ಳುವ ಸಂಗತಿ ಗೊತ್ತೇ..? ತೂಕವಷ್ಟೇ ಅಲ್ಲ, ಹೊಟ್ಟೆ ಬಳಿ ಸಂಗ್ರಹವಾಗಿರುವ ಕೊಬ್ಬು ಸಹ ಕರಗುತ್ತದೆ. ಅದೇಗೆ ಎಂದು ಈಗ ನೋಡೋಣ.

1. ಒಂದು ಗ್ಲಾಸು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು, 1/4 ಟೀಸ್ಫೂನ್ ಅರಿಶಿಣವನ್ನು ಮಿಕ್ಸ್ ಮಾಡಬೇಕು. ಎರಡೂ ಮಿಕ್ಸ್ ಮಾಡಿದ ಬಳಿಕ ಬೇಕೆಂದರೆ ಅದರಲ್ಲಿ ಸ್ವಲ್ಪ ಜೇನು ಬೆರೆಸಬಹುದು. ಆ ರೀತಿ ಮೂರನ್ನೂ ಬೆರೆಸಿ ಆ ನೀರನ್ನು ಉಗುರುಬೆಚ್ಚಗೆ ಇದ್ದಾಗಲೇ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿತ್ಯ ಎರಡು ಬಾರಿ ಈ ಮಿಶ್ರಣವನ್ನು ಕುಡಿದರೆ ವಾರದಲ್ಲಿ ಫಲಿತಾಂಶ ಸಿಗುತ್ತದೆ. ತೂಕ ಕಡಿಮೆಯಾಗುವವರೆಗೂ ಅಥವಾ ಹೊಟ್ಟೆ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುವವರೆಗೂ ಇದನ್ನು ಕುಡಿಯಬಹುದು.

2. ಒಂದು ನಿಂಬೆಹಣ್ಣನ್ನು ಸಂಪೂರ್ಣವಾಗಿ ಹಿಂಡಿ ಅದರಲ್ಲಿನ ರಸವನ್ನು ತೆಗೆಯಬೇಕು. ಅದಕ್ಕೆ ಅರ್ಧ ಟೀಸ್ಫೂನ್ ಅರಿಶಿಣ, 1/4 ಟೀಸ್ಪೂನ್ ಕಪ್ಪು ಮೆಣಸಿನ ಪುಡಿ. 1/4 ಟೀಸ್ಫೂನ್ ಆಲೀವ್ ಆಯಿಲ್ ಬೆರೆಸಬೇಕು. ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ 1 ಅಥವಾ 2 ಟೀಸ್ಫೂನ್ ಪ್ರಮಾಣದಲ್ಲಿ 3 ಹೊತ್ತು ಊಟದ ಬಳಿಕ ತೆಗೆದುಕೊಳ್ಳಬೇಕು. ಇದರಿಂದ ಕೊಬ್ಬು ಬೇಗ ಕರಗುತ್ತದೆ. ಹೊಟ್ಟೆ ಸಮಸ್ಯೆಯೂ ಬರಲ್ಲ.

3. ಸಣ್ಣ ಉರಿಯ ಮೇಲೆ ಒಂದು ಕಪ್ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಅರ್ಧ ಟೀ ಸ್ಫೂನ್ ನಿಂಬೆರಸ, ಅರ್ಧ ಟೀಸ್ಫೂನ್ ಜೇನು ಮಿಕ್ಸ್ ಮಾಡಿಕೊಳ್ಳಬೇಕು. ಇದರ ಜತೆಗೆ ವೆನೀಲಾ ಎಕ್ಸ್‌ಟ್ರಾಕ್ಟನ್ನು ಸಹ ಬೆರೆಸಬೇಕು. ಆ ಬಳಿಕ ಆ ಮಿಶ್ರಣಕ್ಕೆ ಅರ್ಧ ಟೀಸ್ಫೂನ್‌ ಅರಿಶಿಣ ಹಾಕಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಳಿಕ ಕೆಳಗಿಳಿಸಿ ಶೋಧಿಸಿ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಕುಡಿಯಬೇಕು. ಈ ಪಾನೀಯವನ್ನು ಒಂದು ವಾರ ಕಾಲ ಕುಡಿದರೆ ಫಲಿತಾಂಶ ನಿಮಗೇ ಗೊತ್ತಾಗುತ್ತದೆ. ಇದನ್ನು ಊಟಕ್ಕೂ ಮುನ್ನ ಅಥವಾ ಬಳಿಕ ತೆಗೆದುಕೊಳ್ಳಬಹುದು.
Courtesy whatsapp group: ಶಾಶ್ವತ ಆನಂದ ಯೋಗ _ Balaji Naidu  Santhosh Seenu

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ... -ಕೃಪೆ ವಾಟ್ಸಪ್,

ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು. ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"'ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು..? ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗ್ತೀರಿ'"
ಎಂದು ಕೇಳಿದ. ಆದರೆ ಈ ಮಾತುಗಳು 'ಕೇಳಿಯೋ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಕೋಟುಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲಿನಲ್ಲಿದ್ದ ಓರ್ವ ವ್ಯಕ್ತಿ
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊರಟಿದ್ದೀರಿ'
ಎಂದ, ಮುಂಚೆ ಕೊಂಕು ನುಡದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿರಲಿಲ್ಲ. ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವನು ಮಗು ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.

ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ಆತನಿಗೆ/ಳಿಗೆ
ನಾವೆಲ್ಲ ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ...