ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, November 13, 2017

ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?

“ಶೈಕ್ಷಣಿಕ ವ್ಯವಸ್ಥೆಯ ಲೋಪಕ್ಕೆ ಇನ್ನೊಂದು ಬಲಿ- ಪ್ರದ್ಯುಮ್ನನ ಕೊಲೆ”

 ದೇಶದ ಆಡಳಿತದ ಕೇಂದ್ರ ಸ್ಥಾನ ದೆಹೆಲಿಯ ಸಮೀಪದಲ್ಲೇ  ಗುಗಾ೯೦ (ಗುರುಗ್ರಾಮ) ಇರುವುದು. ಇಲ್ಲಿನ  ರೆಯಾನ ಇಂಟರ ನ್ಯಾಷ್ಯನಲ್ ಸ್ಕೂಲ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ ಕೊಲೆ  ನಡೆದು 2 ತಿಂಗಳು ಗತಿಸಿರುವುದು. ಶಾಲೆಯಲ್ಲಿ ನಡೆದ ಬಾಲಕನ ಕೊಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕವನ್ನು ಸ್ವೃಷ್ಠಿ ಮಾಡಿರುವುದು.
7 ವರ್ಷದ ಬಾಲಕನನ್ನು ಕೊಲೆ ಮಾಡಿದವರಾರು? ಪ್ರಾರಂಭದಲ್ಲಿ ಶಾಲೆಯ ಬಸ್ ಕಂಡಕ್ಟರ್  ಅಶೋಕನ ಮೇಲೆ ಆಪಾದನೆ, ಬಂಧನ ಆಯ್ತು, ಸಿಬಿಐ ತನಿಖೆಯ ನಂತರ ಅದೇ ಶಾಲೆಯ 11 ನೇತರಗತಿಯ ವಿದ್ಯಾಥಿ೯ಯೇ ಕೊಲೆಗಾರ ಎಂದು ತಿಳಿದು ಬಂದಿರುವುದು. ಕೊಲೆಗೆ ಕಾರಣ ಪರೀಕ್ಷೆಯನ್ನು ಮುಂದುಡುವುದೇ ಆಗಿರುವುದುಚಿಕ್ಕ ಕಾರಣಕ್ಕಾಗಿ ಕೊಲೆಯ ಅಗತ್ಯ ಏನಿತ್ತು? ಅದೂ 7 ವರ್ಷದ ಮುಗ್ದ ಬಾಲಕನನ್ನು ಕೊಲೆ ಮಾಡುವ ಅಗತ್ಯವಿತ್ತೇ? ಕೊಲೆ ಮಾಡಿದ ವಿದ್ಯಾಥಿ೯ ಮಾನಸಿಕವಾಗಿ ಖಿನ್ನನ್ನಾಗಿದ್ದನೆಕೊಲೆಗಾರನನ್ನು ಬಾಲ ಅಪರಾಧಿ ಎಂದು ಪರಿಗಣಿಸದೇ ಜೀವಾವಧಿ ಶಿಕ್ಷೆ ನೀಡಬೇಕೆಂಬ ಆಗ್ರಹ, ಶಾಲೆಯ ಆಡಳಿತವನ್ನು ಕೆಲವು ದಿನ ತಾವೇ ತೆಗೆದುಕೊಳ್ಳುವೆವು ಎಂಬ ಕಾ೯ರದ ನಿಧಾ೯, ರೀತಿಯಾಗಿ ಹತ್ತು ಹಲವಾರು ರೀತಿಯಲ್ಲಿ ಚೆ೯ಗಳು ಸದ್ಯದಲ್ಲಿ ಚಾಲ್ತಿಯಲ್ಲಿರುವುದು.
ಆದರೇ ಯಾವ ಕಾರಣಕ್ಕಾಗಿ ಮಗುವಿನ ಕೊಲೆಯಾಯಿತು? ಪರೀಕ್ಷೆ ಎಂಬ ಭಯ ಮಕ್ಕಳನ್ನು ಕೊಲೆ ಮಾಡುವಂತಹ ಕೃತ್ಯಕ್ಕೂ ಉತ್ತೇಜನ ನೀಡುವುದು ಎಂದಾದರೇ ಅಂತಹ ಮೌಲ್ಯಮಾಪನದ ಅಗತ್ಯ ಇದೇಯಾ? ತನ್ನದೇ ಶಾಲೆಯಲ್ಲಿ ಓದುತ್ತಿರುವ ಮಗುವನ್ನು ಕೊಂದಾದರೂ ಕೆಲವು ದಿನ ಪರೀಕ್ಷೆಯ ಭಯದಿಂದ ದೂರ ವಿರಬಹುದು ಎಂದು ಒಬ್ಬ ಬಾಲಕ ಆಲೋಚಿಸುವನು ಎಂದಾದರೇ, ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯವಿದೆ.
ಶಿಕ್ಷಣ ನೈತಿಕತೆಯನ್ನು ಕಲಿಸುವುದು, ಉತ್ತಮ ನಾಗರಿಕನನ್ನಾಗಿ ರೂಪಿಸುವುದು, ಶಿಕ್ಷಣ ಇಲ್ಲದ ಮನುಷ್ಯ ಪಶುವಿಗೆ ಸಮಾನ ಎಲ್ಲಾ ಶಿಕ್ಷಣಕ್ಕೆ ಸಂಭದಿಸಿದ ವಾಕ್ಯಗಳನ್ನು ಹೇಳುತ್ತಾ ನಾವು ಶಾಲೆಯಲ್ಲಿ ಏನು ಕಲಿಸುತ್ತಿರುವೆವು?                               ನಿಜವಾಗಿ ಶಾಲೆ ಉತ್ತಮ ಪ್ರಜೆಯನ್ನು ತಯಾರಿಸುತ್ತಾಇದೆಯಾ?               
 ಮಕ್ಕಳು ಶಾಲೆಗೆ ಹೋಗುವಾಗ, ಪರೀಕ್ಷೆ ಬರೆಯುವಾಗ ಭಯ ಪಡುವುದು ಯಾಕೆ?                                                       ಶಿಕ್ಷಕರ ಮೇಲೆ ಉತ್ತಮ ಫಲಿತಾಂಶದ ಒತ್ತಡ ಎಲ್ಲಿಂದ ಬರುತ್ತಿದೆ?                                                                           ಸಾಮಾಜಿಕ ಸೇವೆಯಲ್ಲಿ ಒಂದಾದ ಶಿಕ್ಷಣ ಕ್ಷೇತ್ರ ಇಂದು ವ್ಯಾಪ್ಯಾರಿ ಕ್ಷೇತ್ರವಾಗಿ ಪರಿವರ್ತನೆ ಆಗಲು ಕಾರಣವೇನು?
ಎಲ್ಲಾ  ಪ್ರಶ್ನೆಗಳಿಗೆ ನಾವು ಉತ್ತರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಇಂತಹ ಪ್ರಯತ್ನಗಳನ್ನು ಆಂದೋಲನದ ರೀತಿಯಲ್ಲಿ ಮಾಡಿ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ವಿಮಶೆ೯ಗೆ ಒಳಪಡಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ಆಡಳಿತ ಮಂಡಳಿಯವರು ಎಲ್ಲರ ಒಂದೇ ಗುರಿ 100% ಉತ್ತಮ ಫಲಿತಾಂಶ ಬರಬೇಕು ಕಾರಣಕ್ಕಾಗಿಯೇ ಒಬ್ಬರು ಇನ್ನೊಬ್ಬರ ಮೇಲೆ ಒತ್ತಡ ಹಾಕುತ್ತಾ ಇರುವರು. ಎಲ್ಲದಕ್ಕೂ ಮೂಲ sಕಾರಣ ನಮ್ಮ ಮೌಲ್ಯಮಾಪನ ಪದ್ದತಿಯೇ ಆಗಿರುವುದುದುರಾದೃಷ್ಠವಶಾತ್ ನಮ್ಮ ಸಮಾಜದಲ್ಲಿ ಮೌಲ್ಯಮಾಪನ ಪದ್ದತಿಯ ಮೇಲೆ ಹೆಚ್ಚಿನ ವ್ಯವಸ್ಥೆ ರೂಪುಗೊಂಡಿರುವುದು.
ಮೌಲ್ಯಮಾಪನ ಪದ್ದತಿಯನ್ನು ಬದಲಾಯಿಸದೇ, ಸಿಲೆಬಸ್ ಬದಲಾವಣೆ, ಶಿಕ್ಷಕರಿಗೆ ತರಬೇತಿ ನೀಡುವುದುಮಕ್ಕಳಿಗೆ ಒಂದು ವಿಷಯವಾಗಿ ನೈತಿಕ ಶಿಕ್ಷಣ ಹೇಳುವುದು, ಮಹಾನ ವ್ಯಕ್ತಿಗಳ ಚರಿತ್ರೆ ತಿಳಿಸುವುದು ಎಲ್ಲಾ  ಕ್ರಮಗಳು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ  ಮೇಲನೋಟದ ಲಕ್ಷಣಗಳಿಗೆ ಪರಿಹಾರವಾಗಿರುವದು ವಿನಃ ಶಾಶ್ವತ ಪರಿಹಾರ ಆಗಲಾರದು. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ನಾವು ಶಿಕ್ಷಣವನ್ನು ನೋಡುವ ದೃಷ್ಠಿಯೇ ಬದಲಾಗಬೇಕಾಗಿದೆ.
ಹಿನ್ನೆಲೆಯಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರು ಅವರ ಜನ್ಮ ದಿನವಾದ (ನವಂಬರ್ 14) ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರವೆವುಇಂದು ನಮ್ಮೊಂದಿಗೆ ಕುಣಿದು ಕುಪ್ಪಳಿಸಬೇಕಾದ ಪ್ರದ್ಯುಮ್ನ ಜೊತೆಗಿಲ್ಲ, 11 ತರಗತಿಯ ಸೊಹ್ನಾ ಅಪರಾಥಿಯಾಗಿ ಪೋಲಿಸ ವಶದಲ್ಲಿ ಇರುವವನು. ಇಬ್ಬರ ಮಕ್ಕಳ ಪಾಲಕರ ಮನಸ್ಥಿತಿಯನ್ನು ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಅವರ ದುಖ:ವನ್ನು ಸಹಿಸುವ ಶಕ್ತಿ ಬರಲಿ.
ಪ್ರದ್ಯುಮ್ನನೇ ಕೊನೆ ಮತ್ತೇ ಇಂತಹ ಘಟನೆ ಮರುಕಳಿಸಬಾರದು ದಿಶೆಯಲ್ಲಿ ಗಟ್ಟಿ ನಿಧಾ೯ರಗಳನ್ನು ತೆಗೆದುಕೊಳ್ಳಬಹುದಾದ ಇಂದಿನ ನಮ್ಮ ಪ್ರಧಾನಿಯವರು, ತುಂಬಾ ತಳ ಹಂತದಿಂದ ಮೇಲೆ ಬಂದಿರುವ ನಮ್ಮ  ಮುಖ್ಯಮಂತ್ರಿಗಳ  ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ಮುನ್ನುಡಿ ಬರೆಯುವ ಚೆ೯  ಮುಂದುವರೆಸಲಿ ಎಂದು ಆಶಿಸೋಣ.

ವಿವೇಕ ಬೆಟ್ಕುಳಿ


8722954123