- ಪಿ.ಎಸ್.ಪರ್ವತಿ , ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗದಗ ಹಣ ನೀಡಿ ಪಡೆಯುವ ಸರಕು ಅಥವಾ ಸೇವೆಯಿಂದಾಗಿ ನಾವು ಗ್ರಾಹಕರೆನಿಸಿಕೊಳ್ಳುತ್ತೇವೆ. ಈ ರೀತಿ ಹಣ ಕೊಟ್ಟು ಪಡೆದ ಸರಕು ಅಥವಾ ಸೇವೆಗಳಲ್ಲಿ ಅದು ಕೊಟ್ಟ ಬೆಲೆಗೆ ಅನುಗುಣವಾದ ಗುಣಮಟ್ಟವನ್ನು ಹೊಂದಿರದಿದ್ದಲ್ಲಿ ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಗ್ರಾಹಕರಿಗೆ ಕಾನೂನು ಒದಗಿಸಿದೆ. ಡಿಸೆಂಬರ್ ೨೪ ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ಜಾಗೃತಿಗಾಗಿ ಈ ಲೇಖನ ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ. ಆದರೆ ನಾವದನ್ನು ಗಮನಸಿರುವುದಿಲ್ಲ. ಬೆಳಗಿನ ಹಲ್ಲುಜ್ಜುವ ಹಲ್ಲುಪುಡಿ ಅಥವಾ ಟೂಥ್‌ಪೇಸ್ಟ್, ಹಾಲಿನಿಂದ ಹಿಡಿದು ತಿಂಡಿ, ಊಟಕ್ಕಾಗಿ ಅಂಗಡಿಯಲ್ಲಿ ಕೊಂಡು ತಂದ ಆಹಾರ ಪದಾರ್ಥಗಳು, ಕುಡಿಯುವ ನಲ್ಲಿ ನೀರು, ಸಂಚರಿಸುವ ರಸ್ತೆ, ಬಸ್ ಸೇವೆಯಲ್ಲದೇ ಶಾಲಾ-ಕಾಲೇಜು ವಿದ್ಯಾರ್ಜನೆಗೂ ಸಹ ಶುಲ್ಕ ನೀಡಿ ಗ್ರಾಹಕರಾಗುತ್ತೇವೆ. ಬಟ್...