ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, September 21, 2012

ಒಪ್ಪಿ ಬಿಡಿ ಇತಿಹಾಸ ಸುಳ್ಳಾಗದು....

ಜಗತ್ತಿನಾದ್ಯಂತ ಪ್ರವಾದಿ ಮಹಮದ್ ಪೈಗಂಬರ್'ರ ಬಗ್ಗೆ ಬಂದಿರುವ "ಇನ್ನೋಸೆನ್ಸ್ ಆಫ್ ಮುಸ್ಲಿಮ್ಸ್" ಚಲನಚಿತ್ರದ ವಿರುದ್ಧ ಉಗ್ರ ಪ್ರತಿಭಟನೆ ಬೇರೆ ಬೇರೆ ಸ್ವರೂಪದಲ್ಲಿ ನಡೆಯುತ್ತಿದೆ. ಆದರೆ ನನ್ನ ಸಮಕಾಲೀನ ತಲೆಮಾರಿನ ನನ್ನೂರಿನ ಸುತ್ತಮುತ್ತಲ ಮುಸ್ಲಿಂ ಯುವಕರೂ ಇದನ್ನ ಸಾಧಕ ಬಾಧಕಗಳ ಅರಿವಿಲ್ಲದೆ ಬೆಂಬಲಿಸುತ್ತಿರೋದು ನನಗೆ ಏಕಕಾಲಕ್ಕೆ ಅಚ್ಚರಿ ಹಾಗೂ ಜಿಗುಪ್ಸೆಯನ್ನು ಹುಟ್ಟಿಸಿವೆ. ಅವರ "ಪ್ರವಾದಿ"ಯವರೆಡೆಗೆ ಅವರಿಗಿರುವ ಭಾವನಾತ್ಮಕ ಗೌರವ ತಪ್ಪಲ್ಲ. ತಾವು ಆರಾಧಿಸುವ ವ್ಯಕ್ತಿಯ ವ್ಯಕ್ತಿತ್ವಕ್ಕೆ ಇನ್ಯಾರಾದರೂ ವಿರುದ್ಧವಾಗಿ ಮಾತನಾಡಿದರೆ ಅದು ಎಂತವರ ಮನಸಿಗೂ ಆಘಾತ ತರೋದು ನಿಜ, ಆದರೆ ಅದನ್ನ ಅವಹೇಳನ ಅಂತ ಏಕಪಕ್ಷೀಯವಾಗಿ ವಿವೇಚಿಸದೆ ನಿರ್ಧರಿಸೋದು ಮಾತ್ರ ಹಾಸ್ಯಾಸ್ಪದ. ಅಷ್ಟಕ್ಕೂ ಇಲ್ಲಿ ಪ್ರತಿಭಟನೆಗೆ ಇಳಿದ ನನ್ನ ಅನೇಕ ಸ್ನೇಹಿತರು ಆ ಸಿನೆಮಾವನ್ನ ಇನ್ನೂ ನೋಡಿಯೇ ಇಲ್ಲ. ನನ್ನ ಊಹೆ ತಪ್ಪಗಿರದಿದ್ದರೆ ಮುಂದೆಯೂ ನೋಡಲ್ಲ ! ಆದರೂ ಯಾರಾದರೊಬ್ಬರು ಹೇಳಿದರೆ ಚುಚ್ಚಿಕೊಟ್ಟ ಪುಣ್ಯಾತ್ಮನ ಅಸ್ವಸ್ಥ ಮನಸ್ಥಿತಿಯನ್ನ ಅವಲೋಕಿಸುವ ಬದಲು ತಕ್ಷಣ ಪ್ರಚೋದನೆಗೆ ಒಳಗಾಗಿ ನೇರ ಅಂದವರನ್ನೆ ಹಲ್ಲೆಮಾಡಿಯಾದರೂ ಮಣಿಸುವ ಮಟ್ಟಕ್ಕೆ ಇಳಿಯುತ್ತಾರೆ. ಇಲ್ಲಿ "ಹಲ್ಲೆ "ಯನ್ನ ಕೇವಲ ದೈಹಿಕ ಎಂದು ಪರಿಗಣಿಸಬೇಕಿಲ್ಲ ಅಧ್ಯಯನ ಹಾಗೂ ಅರಿವಿನ ಕೊರತೆಯಿರುವ ಮಾನಸಿಕ ಗೂಂಡಾಗಿರಿಯೂ ಕೂಡ ಇನ್ನೊಬ್ಬರ ಮೇಲೆ ಎಸಗುವ ಹಲ್ಲೆಯೇ ಅಲ್ಲವೇ? ತಮಗೆ ನೋವಾದರೆ ಅದನ್ನ ಉಂಟು ಮಾಡಿದವರನ್ನ ಅದೇ ಮಾಧ್ಯಮ ಬಳಸಿ ತರ್ಕಬದ್ಧವಾಗಿಯೆ ಮಣಿಸಬೇಕೆ ವಿನಃ ಭಾವಾವೇಶದ ಆಸಹ್ಯ ಪ್ರದರ್ಶನದಿಂದಲ್ಲ. ಆದರೆ ಪ್ರವಾದಿಯ ನಡೆಯನ್ನ ಸಮರ್ಥಿಸಿ ಕನ್ನಡದ ಕೆಲವು ಮುಸ್ಲಿಂ ಮೂಲಭೂತವಾದಿ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿರುವ ಪತ್ರಕರ್ತರ ಗೆಟಪ್ಪಿನ ಮುಲ್ಲಾಗಳು ಬರೆದ ವಾದ ಅರ್ಧ ಸತ್ಯ ಮಾತ್ರ ಅಂತ ವಿಷಾದದಿಂದಲೇ ಹೇಳಬೇಕಾಗಿದೆ. ಅದರ ಬಗ್ಗೆ ಪ್ರತಿಪಾದನೆಗೆ ಬೇಕಾದ ಪ್ರಬಲ ಪುರಾವೆಗಳು ನನ್ನಲ್ಲಿವೆ. ಈ ಹಿಂದೆ "ಮಹಮದ್ ಪೈಗಂಬರ್ ಹಾಗೂ ಇಸ್ಲಾಮಿನ ಆತ್ಮಕಥೆ"ಯನ್ನ ನನ್ನ ಬ್ಲಾಗಿನಲ್ಲಿ ಬರೆಯುತ್ತಾ ಅರ್ಧದಲ್ಲೆ ಸಮಯಾಭಾವದಿಂದ ನಿಲ್ಲಿಸಿದ್ದೆ. ಸಧ್ಯದಲ್ಲೇ ಅದನ್ನ ಮುಂದುವರೆಸುತ್ತೇನೆ. ಅದನ್ನ ಓದಿ ಈ ಮಾತುಗಳ ಸತ್ಯಾಸತ್ಯತೆಗಳನ್ನ ಯಾರು ಬೇಕಾದರೂ ಖಚಿತ ಪಡಿಸಿಕೊಳ್ಳಬಹುದು. ಅವರದ್ದೆ ವಯಸ್ಸಿನ ನಮ್ಮಂತವರ ಮಾತುಗಲ್ಲಿರುವ ಮಡುಗಟ್ಟಿರುವ ವಿವೇಕ, ಇದೆ ವಯಸ್ಸಿನ ವಿದ್ಯಾವಂತ(?) ಮುಸ್ಲಿಂ ಯುವಜನರಲ್ಲಿ ಧಾರಾಳ ಕೊರತೆಯಾಗಿರೋದು ಮಾತ್ರ ದುರಂತ.

No comments:

Post a Comment