Posts

Showing posts from 2016

ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )

ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ ) ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು.. ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇ...

ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು

ನೂರು ದೇವರನೆಲ್ಲ ನೂಕಾಚೆ ದೂರ ।। ೩।। ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ ನೂರು ದೇವರನೆಲ್ಲ ನೂಕಾಚೆ ದೂರ ।। ೨।। ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು ದಾಸರನು ಪೂಜಿಸಿಯೇ ದಾಸ್ಯವಾಯ್ತು ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ ನೂರು ದೇವರನೆಲ್ಲ ನೂಕಾಚೆ ದೂರ ।। ೨।। ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ ನೂರು ದೇವರನೆಲ್ಲ ನೂಕಾಚೆ ದೂರ ।। ೨।। ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯಾನಿಂದು ಕೂಗಬೇಕು ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ ನೂರು ದೇವರನೆಲ್ಲ ನೂಕಾಚೆ ದೂರ ।। ೩।। ನೂಕಾಚೆ ದೂರ

ಒಂದು ಸಣ್ಣ ಕಥೆ - ಕೃಪೆ ವಾಟ್ಸಪ್

Image
ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ ) ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.  ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..  ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...  ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು.....

ಸಮ್ಮೇಳನವಲ್ಲ, ಸರಕಾರಿ ಸಾಹಿತಿಗಳ ಒಡ್ಡೋಲಗ - ರೋಹಿತ್ ಚಕ್ರತೀರ್ಥ

ಎರಡು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಬರಗೂರು ರಾಮಚಂದ್ರಪ್ಪ ಬರೆದ ಒಂದು ಪುಸ್ತಕದ ಹೆಸರನ್ನು ಗೂಗಲ್ ನೋಡದೆ ಹೇಳಿ, ಎಂದು. ಸುಮಾರು 200ಕ್ಕೂ ಮಿಕ್ಕಿ ಕಾಮೆಂಟ್‌ಗಳು ಬಂದವು. ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಬರಗೂರರ ಒಂದೇ ಒಂದು ಪುಸ್ತಕದ ಹೆಸರನ್ನೂ ಸರಿಯಾಗಿ ಹೇಳಲಿಲ್ಲ (ಆ ಪೋಸ್ಟ್ ಮತ್ತು ಕಾಮೆಂಟ್‌ಗಳು ಹಾಗೇ ಇವೆ, ಅಳಿಸಿಲ್ಲ). ಇನ್ನೇನು ಹತ್ತು ದಿನಗಳಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಉತ್ಸವ ಮೂರ್ತಿಯ ಒಂದಾದರೂ ಕೃತಿಯನ್ನು ಕನ್ನಡಿಗರು ನೆನಪಿಸಿಕೊಂಡಿಲ್ಲ ಎಂದರೆ ಅದಕ್ಕಿಂತ ದುಃಖ, ಖೇದ, ವಿಷಾದ ಬೇರೆ ಇದೆಯೆ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು? ಕ್ವಾಲಿಟಿ! ಅದೊಂದು ಗುಣ ಸಾಹಿತ್ಯರಂಗದಲ್ಲಿ ನಾಸ್ತಿಯಾಗಿ ಬಹಳ ಕಾಲವೇ ಆಗಿಹೋಯಿತು. ಹಾಗಂತ ಒಳ್ಳೆಯ ಕೃತಿಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿವೆ. ಆದರೆ ಹಾಗೆ ಒಳ್ಳೊಳ್ಳೆಯ ಕೃತಿಗಳನ್ನು ಬರೆಯುವವರನ್ನು ಪ್ರಕಾಶಕರು ಮಾತಾಡಿಸುವುದಿಲ್ಲ. ಸರಕಾರದ ಪ್ರಶಸ್ತಿ ಕಮಿಟಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಓದುಗರ ಸಹೃದಯತೆಯಿಂದ, ಬಾಯಿಂದ ಬಾಯಿಗೆ ಹರಡುವ ಪ್ರಚಾರದಿಂದ, ಸಹೃದಯ ವಿಮರ್ಶಕರ ವಿಮರ್ಶೆಯ ಬಲದಿಂದ ಒಳ್ಳೆಯ ಲೇಖಕ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗುತ್ತದೆ. ಆದರೆ ಸರಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಈ ಲೇಖಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯಾವ ಅಕಾಡೆಮಿಗಳಲ್ಲೂ ಅಧ್ಯಕ್ಷ-ಸದಸ್ಯ ಆಗುವುದಿಲ್ಲ. ಸರ...

ಶಿವರಾಮ ಕಾರಂತರ ಮಗಳ ಮದುವೆಯ ಲಗ್ನ ಪತ್ರಿಕೆ

Image

ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್

ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು. ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?! ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ * ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ! * ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ. *ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?! * ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿ...

ಜಮ್ಮುಕಾಶ್ಮೀರ ನಮ್ಮದು - ನೀವೂ ಬನ್ನಿ. ನಿಮ್ಮ ಗೆಳೆಯರನ್ನೂ ಕರೆತನ್ನಿ.ಶೇರ್ ಮಾಡಿ

Image

ಡಿ ವಿ ಜಿ ಹೇಳಿದು

Image

ದ ರಾ ಬೇಂದ್ರೆ - ಹೇಳಿದು

Image

ಕನ್ನಡ ಪುಸ್ತಕಗಳ ತಾಣ

ಹಳೆಗನ್ನಡ ಪಂಪ ರನ್ನ ಶಿವಕೋಟ್ಯಾಚಾರ್ಯ ವಿವಿಧ ವಚನಕಾರರು ನಡುಗನ್ನಡ ಕುಮಾರವ್ಯಾಸ ಜಗನ್ನಾಥದಾಸ ಪಾಂಚಾಳ ಗಂಗ ಪುರಂದರದಾಸ ರಾಘವಾಂಕ ಲಕ್ಷ್ಮೀಶ ಹೊಸಗನ್ನಡ  ಟಿ ಪಿ ಕೈಲಾಸಂ ಪಂಜೆ ಮಂಗೇಶರಾಯ ಬಿ ಎಂ ಶ್ರೀ ಕೆರೂರು ವಾಸುದೇವಾಚಾರ್ಯ ಕೊಡಗಿನ ಗೌರಮ್ಮ ಕೊರಡ್ಕಲ್ ಶ್ರೀನಿವಾಸರಾವ್ ಬಿ ಎಸ್ ಸೀತಾರತ್ನಬಾಯಿ

ಬೇಂದ್ರಯವರು ಕುವೆಂಪು ಯವರ ಬಗ್ಗೆ ಹೇಳಿರುವ ಮೇಚ್ಚುಗೆಯ ಮಾತುಗಳು

Image

ಬೇಂದ್ರಯವರು ಡಿ.ವಿ.ಜಿ ಯವರ ಬಗ್ಗೆ ಹೇಳಿರುವ ಮೇಚ್ಚುಗೆಯ ಮಾತುಗಳು

Image

ಕರುಣಾಳು ಬಾ ಬೆಳಕೆ .. - ಬಿ.ಎಂ. ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ ಕೈ ಹಿಡಿದು ನಡೆಸೆನ್ನನು ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ ಕೈ ಹಿಡಿದು ನಡೆಸದಿಹೆಯಾ ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ? ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ                                                       - ಬಿ.ಎಂ. ಶ್ರೀಕಂಠಯ್ಯ

"ಕೋರಿಕೆ" - ಈಶ್ವರ ಸಣಕಲ್ಲ

ಜಗವೆಲ್ಲ ನಗುತಿರಲಿ! ಜಗದಳುವು ನನಗಿರಲಿ! ನಾನಳಲು, ಜಗವೆನ್ನನೆತ್ತಿಕೊಳದೇ? ನಾ ನಕ್ಕು, ಜಗವಳಲು ನೋಡಬಹುದೇ? ತೆರವಾಗಿ ನನ್ನೆದೆಯು, ಧರೆಯೆದೆಯು ಉಕ್ಕಿರಲಿ! ಧರೆಯೊಳಗೆ ತೇಲಿಸುವೆನೆನ್ನೆದೆಯನು! ಧರೆ ಬತ್ತಿ, ಎನ್ನೆದೆಯು ಉಕ್ಕಲೇನು? ಪೊಡವಿಯೈಸಿರಿವಡೆದು, ಬಡತನವು ನನಗಿರಲಿ ಕೈಯೊಡ್ಡೆ ಪೊಡವಿಯೆನಗಿಕ್ಕದೇನು? ಪೊಡವಿಯೇ ಮೈಯಳಿಯೆ, ಮಾಡಲೇನು? ವಿಶ್ವವನು ತುಂಬಿರುವ ಈಶ್ವರನೆ ಅಳತೊಡಗೆ, ಸೈತಿಡಲು, ಸೈಪಿಡಲು ಬರುವನಾವಂ? ’ಹೇ ತಂದೆ’,ಎನಲೆನ್ನನವನೆ ಕಾವಂ!

ವಸಂತ ಬಂದ, ಋತುಗಳ ರಾಜ ತಾ ಬಂದ - ಬಿ ಎಂ ಶ್ರೀ

ವಸಂತ ಬಂದ, ಋತುಗಳ ರಾಜ ತಾ ಬಂದ ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ, ಇನಿಯರ ಬೇಟ; ಬನದಲಿ ಬೆಳದಿಂಗಳೂಟ, ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ, ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ ! ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು, ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು, ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ ! ಬಂದ ವಸಂತ - ನಮ್ಮಾ ರಾಜ ವಸಂತ ! ಇಂಗ್ಲಿಷ್ ಗೀತಗಳು’ ಸಂಕಲನದ್ದು. ಆಂಗ್ಲ ಕವಿ Thomas Nashe (1567–1601) ಬರೆದ ’Spring' ಕವಿತೆಯ ಅನುವಾದ.

ವನಸುಮದೊಲೆನ್ನ ಜೀವನವು ವಿಕಸಿಸುವಂತೆ - ಡಿ ವಿ ಜಿ

Image
ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ, ಹೇ ದೇವಾ ಜನಕೆ ಸಂತಸವೀವಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ಕಾನನದಿ ಮಲ್ಲಿಗೆಯುಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನುಳಿದು ವಿಪುಲಾಶ್ರಯವೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು - ಡಿ ವಿ ಜಿ

ಓದಿ ಬ್ರಾಹ್ಮಣನಾಗು - ಸಿದ್ಧಯ್ಯ ಪುರಾಣಿಕ

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಹಿಂದು ಮುಸ್ಲಿಮನಾಗು ಬೌದ್ಧ ಕ್ರೈಸ್ತನೆ ಆಗು ಚಾರ್ವಾಕನೇ ಆಗು ಭೋಗ ಬಯಸಿ ಏನಾದರೂ ಆಗು ಹಾರೈಸಿದಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ರಾಜಕಾರಣಿಯಾಗು ರಾಷ್ಟ್ರಭಕ್ತನೆ ಆಗು ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು ಏನಾದರೂ ಆಗು ನೀ ಬಯಸಿದಂತಾಗು ಏನಾದರೂ ಸರಿಯೇ – ಮೊದಲು ಮಾನವನಾಗು ಸಿದ್ಧಯ್ಯ ಪುರಾಣಿಕ ( 1918-1994)

ಭಾರತಿಯ ಸೈನದಲ್ಲಿ ಉದ್ಯೋಗ ಅವಕಾಶ

Image

ಬಿಎಂಆರ್ಸಿಎಲ್(BMRCL)ನಲ್ಲಿ ಉದ್ಯೋಗ

ಬಿಎಂಆರ್ಸಿಎಲ್(BMRCL)ನಲ್ಲಿ ಉದ್ಯೋಗ http://kannadakannadigga.blogspot.in/p/blog-page_13.html BMRCL Vacancy Details: Total No of Posts: 308 Name of the Posts: 1. Maintainer: 72 Posts 2. Train Operator: 255 Posts 3. Section Engineer: 11 Posts
Image

ಇಂದಿನ ಸಮಾಜ - ಪೋಸ್ಟರ್

Image

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು - ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ ಎತ್ತ ನೋಡಿದರೂ ನಗು ಚಂದ ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ ಮೊಸರ್ಬೇಡಿ ಕೆಸರಾ ತುಳುದಾನ ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ ಕಪ್ಪಾದ ಹಸುವು ಕರೆದಾರೆ ಆ ಹಾಲು ಒಪ್ಪೀತು ಶಿವನ ಪೂಜೆಗೆ ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ ನೆಲ್ಲಿ ಬುಡ್ಯಾಗಿ ಚಿಗಿಯಾಲಿ ನನ ಕಂದ ಜಯವನ್ತನಾಗಿ ಮೆರೆಯಾಲಿ                                                       * * * *

ಕೆಲವೊಮ್ಮೆ ಒಂದು ಸಂದರ್ಭೋಚಿತ ನಿರ್ಧಾರ ಉಳಿದವರನ್ನು ರಕ್ಷಿಸುತ್ತದೆ

Image

ದಿನಕರ ದೇಸಾಯಿರವರ ಚುಟುಕಗಳು

Image
Courtesy :  http:// kannada.oneindia.com/

ನಾನೊಂದು ಸಮಾಜವಾಗಿದ್ದರೆ.

 ನಾನೊಂದು ಸಮಾಜವಾಗಿದ್ದರೆ  ದಹಿಸುತ್ತಿದ್ದೆ ಜಾತಿಯ ಬೇರುಗಳನ್ನು ಕಿತ್ತೆಸೆಯುತ್ತಿದ್ದೆ ಕೆಟ್ಟ ಸಂಪ್ರದಾಯ, ಮೂಢನಂಬಿಕೆಗಳನು ತುಳಿಯುತ್ತಿದ್ದೆ ಅಧರ್ಮ, ಅನೀತಿ, ಹಿಂಸೆಗಳನ್ನು  ವಾಮನನಂತೆ! ಸೃಷ್ಠಿಸುತ್ತಿದ್ದೆ ಸುಧರ್ಮ, ಸುಜ್ಞಾನ,ಸುನೀತಿಗಳನ್ನು  ನಿಸರ್ಗದಂತೆ ಪ್ರತಿಷ್ಟಾಪಿಸುತ್ತಿದ್ದೆ ಚಿಂತಕರನು, ದಾರ್ಶನಿಕರನು, ದೇವರ ಜಾಗದಲ್ಲಿ! ನಿರ್ಮಿಸುತ್ತಿದ್ದೆ ಹುತ್ಮಾರ ಮಂದಿರಗಳ ಕಂಡ ಕಂಡಲ್ಲಿ ಮಟ್ಟಹಾಕುತ್ತಿದ್ದೆ ಭಯೋತ್ಪಾಧನೆ, ಭ್ರಷ್ಟಾಚಾರ, ದುರಾಡಳಿತವನ್ನು ತೂಡಿಸುತ್ತಿದ್ದೆ ನಗ್ನ ರಾಜಕೀಯ ಸ್ಥಿತಿಗೆ ಶುಭ್ರ ಬಟ್ಟೆಯನ್ನು ನಿಲ್ಲಿಸುತ್ತಿದ್ದೆ ಕದನ, ಜಗಳ, ಕೋಪ ಎಲ್ಲರ ಮನದಲ್ಲಿ ನಿಡುತ್ತಿದ್ದೆ ಸಮಸ್ಯಗಳನ್ನು ಎದುರಿಸುವ ಶಕ್ತಿ ಜನರಲ್ಲಿ ತಿಳಿಸುತ್ತಿದ್ದೆ ಜೀವನದ ಸಾರ್ಥಕ ಭಾವ ಏನೆಂದು ಬೇಡಿಕೊಳ್ಳುತ್ತಿದ್ದೆ ಬುದ್ಧ, ಬಸವ, ಗಾಂಧಿ ಮತ್ತೇ ಹುಟ್ಟಿ ಬರಲೆಂದು.                          ಮಹಾಂತೇಶ ರಾಜಗುರು               ಶಿಕ್ಷಕರು, ಕೆನರಾ ಕೇಂಬ್ರಿಡ್ಜ್ ಶಾಲೆ. ಯಡವನಹಳ್ಳಿ.

ಜೀವನ

ಜೀವನ ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ ತೊದಲ ನುಡಿಯ ತಪ್ಪುಗಳೇ ಜೀವನ ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ ಗುರಿಯರಿತು ಸಾಧಿಸುವುದೇ ಜೀವನ ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ ತನು ಮನವ ಶುದ್ಧಿಕರಣವೇ ಜೀವನ ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ ನಿಸರ್ಗ ನಿಯಮಗಳ ಅರಿಯುವುದೇ ಜೀವನ ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ. ಮಹಾಂತೇಶ ರಾಜಗುರು, ಶಿಕ್ಷಕರು. ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

ನನ್ನಾಸೆ.

ನನ್ನಾಸೆ. ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ, ಗ್ರಹ ತಾರೆಯರ ಜೊತೆ ಆಟವಾಡುವಾಸೆ, ತಿಂಗಳನ ಬೆಳಕಲ್ಲಿ ಮಿಯುವಾಸೆ, ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ, ಹಕ್ಕಿಗಳ ಕೊರಳ ಸ್ವರವಾಗುವಾಸೆ, ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ, ದುಂಬಿಗೆ ಆಹಾರ ನೀಡುವ ಹೂವಾಗುವಾಸೆ, ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ, ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ, ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ, ಬಸವನುದಿಸಲಿ ಎಂದು ತಪಗೈಯುವಾಸೆ, ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ, ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........ ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು? ಯಾರು?!........? ಮಹಾಂತೇಶ ರಾಜಗುರು, ಶಿಕ್ಷಕರು. ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

ಬಿರು ಮಧ್ಯಾಹ್ನ ಮೈಗಂಟಿದ ಶರಟಿನಿಂದೇಳೊ.... - ಶರತ್ ಚಕ್ರವರ್ತಿ

Image
ಬಿರು ಮಧ್ಯಾಹ್ನ ಮೈಗಂಟಿದ ಶರಟಿನಿಂದೇಳೊ ಹಬೆ ಹತ್ತಿಡಲು ಗಂಟಲಿಗೆ ಅರೆಪಾವು ಮಜ್ಜಿಗೆ ಸುರಿದುಕೊಳ್ಳುವಾಗೊಂದು ದಿಗಿಲು ಹುಟ್ಟಿಕೊಳ್ಳುತ್ತದೆ ಓಟಬಿದ್ದು ಹೊರಬಂದರೇ ಸೂರ್ಯನಿರುವಲ್ಲಿ ಸೂರ್ಯನೆ ಇದ್ದು, - ಶರತ್ ಚಕ್ರವರ್ತಿ ಮೋಡಗಳಿರುವಲ್ಲಿ ಅವುಗಳಿರದೇ ಎದುಸುರು ಮತ್ತೂ ಏರುತ್ತದೆ ಭೂಮಿಗೇನು ಬೆಂಕಿ ಬಿದ್ದಲ್ಲವಲ್ಲ ಎಂದು ಸಾವರಿಸಿಕೊಳ್ಳುತ್ತೇನೆ ಅಲ್ಲೆಲ್ಲೋ ಡ್ಯಾಮು ಬಿರಿಯಿತಂತೆ ಎಂದು ಕೇಳುವಾಗ ತಣ್ಣಗೇ ಇದ್ದವನು ಡ್ಯಾಮಿನ ಅಂಚಿಗೆ ಕಟ್ಟಿದ್ದ ಕಪ್ಪೆಗೂಡ ನೆನೆದು ಮತ್ತೆ ಧಿಗಿಲಾಗುತ್ತೇನೆ ಡ್ಯಾಮಿನಲ್ಲೆ ನೀರೆ ಇರಲಿಲ್ಲ, ಖಾಲಿಯದ್ದು ಬಿರಿದಿದೆ ಬಿಡು ಎಂದವರು ಸುಮ್ಮನಿರಿಸಿದ್ದರೂ ತಮಟೆಯ ಹೊಡೆತ ನಿಲ್ಲುವುದೇ ಇಲ್ಲ ಬಾಲ್ಯಗೆಳೆಯನೊಬ್ಬ ಕನಸಿಗೆ ಬಂದಾಗ ಸಂತಸ ನಳನಳಿಸಿ ಹತ್ತಿರ ಹೋಗಿ ಆಲಂಗಿಸಿಕೊಳ್ಳುತ್ತೇನೆ ಅಪ್ಪಿಕೊಂಡಮೇಲೆ ನೆನಪಾಗುತ್ತದೆ ಅವನಿಂದ ಕದ್ದು ಜೋಬಲ್ಲಿಟ್ಟುಕೊಂಡಿರೊ ಸವೆದ ಬಳಪ ಅಪ್ಪಿದಾಗ ಅವನೆದೆಗೆ ಚುಚ್ಚಬಹುದೆಂದು ಹುಷಾರಿಯಾಗುತ್ತಾ ಮೆಲ್ಲಗೆ ಅಪ್ಪುಗೆ ಬಿಡಿಸಿಕೊಂಡು ಮುಖಮರೆಮಾಚುತ್ತಾ ಹೊರಟೆಬಿಡುತ್ತೇನೆ ಅದೆಷ್ಟೊ ಹೊತ್ತು ಹೋತ್ತೊಯ್ತದ ಮೇಲೆ ಅವನಿಗೆ ಮೀಸೆಯಿದ್ದದ್ದು ನೆನಪಾಗುತ್ತದೆ ನನ್ನ ಗಡ್ಡವನ್ನ ಸವರಿಕೊಂಡು ನಗುವಾಗ ಬಿಕನಾಸಿ ಕಣ್ಣೀರು ಬಂದೇಬಿಡುತ್ತದೆ ಕಾಲಾತಿಕಾಲದಲ್ಲಿ ಜಂಗಮನ ಮೇಲೆ ಬೀಸಿದ ಕಲ್ಲು ನೆನಪಾಗಿ ಪಾಪ ಎಂದುಕೊಳ್ಳುವಷ್ಟರಲ್ಲೆ ಅವನು ಕಲ್ಲಿಡಿದು ಬೆನ...

ನಾಕು ತಂತಿ - - ದ. ರಾ. ಬೇಂದ್ರೆ

Image
.. ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ

ಚುಟುಕ - ರಘು ವಿ,

Image
ವರುಷವಿಡೀ ನಡೆವಂಗೆ ಎಡವುದೇಂ ಹೊಸದೆ? ರಘು ವಿ ಉರಿವ ದೀಪಕ್ಕೆ ಕಿಟ್ಟ ಕಟ್ಟುವುದೇಂ ಹೊಸದೆ? ಜನುಮವಿಡೀ ಉರಿವ ನಿರಂತರದ ದಿನಕರಗೆ  ಗ್ರಹಣವಿದು ಹೊಸದೆ? ನೆರಳಾಟಕ್ಕೆ ಅಂಜುವೊಡೆ ಬಾಳನಂಜುಗಳ ಹೇಗೆ ಅರಗಿಪೆಯೊ ಮನುಜ? ಮನದ ಗ್ರಹಣವ ಕಳೆದು ನಡೆ ಬೆಳಕಿನೆಡೆಗೆ! [ ಕಿಟ್ಟ ಕಟ್ಟುವುದು = ಬತ್ತಿ ಉರಿದು ಕಪ್ಪಾಗುವುದು. Carbonization]

ಡಿ ವಿ ಜಿಯವರ 129ನೆಯ ಜನ್ಮದಿನಾಚರಣೆ - ಅಮಂತ್ರಣ ಪತ್ರಿಕೆ

Image

ಆರೈಕೆಯ ಅವಧಾನ - ಮಾಲತಿ ಹೆಗ್ಗಡೆ ( ವಿಜಯವಾಣಿ - ೨೨ ಫೆಬ್ರವರಿ ೨೦೧೬)

ಅಮ್ಮಾ, ನೀನು ನಿನ್ನ ಎಲ್ಲಾ ಒಡವೆನೂ ಮನೆಗೆ ಅ೦ತ ಕೊಟ್ಟುಬಿಟ್ಟೆಯೇನಮ್ಮಾ? ಒ೦ದಾದರೂ ಇಟ್ಟುಕೊಳ್ಳಬೇಕಿತ್ತು. ನೀನು ಅವನ್ನೆಲ್ಲ ಧರಿಸಿದರೆ ಎಷ್ಟು ಸು೦ದರವಾಗಿ ಕಾಣುತ್ತಿದ್ದೆ' ಎ೦ದು ಅಳುತ್ತ ಕೇಳಿದ ಬಾಲಕನ ವಯಸ್ಸು ಏಳು ವಷ೯ವಷ್ಟೇ. "ಹೂ೦ ಕಣಪ್ಪಾ. ನಿಮ್ಮಪ್ಪ ಮನೆ ಕಟ್ಟಿಸಬೇಕು ಅ೦ತ ಅ೦ದುಕೊ೦ಡಿದ್ದಾರೆ. ಒಡವೆ ಆದ್ರೆ ನಾನು ಒಬ್ಬಳೇ ಧರಿಸಬೇಕು. ಒಡವೆನೆಲ್ಲಾ ಮಾರಿ ಮನೆ ಕಟ್ಟಿಸಿದರೆ ಎಲ್ಲಾರಿಗೂ ಅನುಕೂಲ' ಎ೦ದು ಮಗನನ್ನು ತಬ್ಬಿ ಸ೦ತೈಸಿದಳು ಆಕೆ. ಅವಧಾನ ಕಲೆಯೊ೦ದಿಗೆ ಅವಿನಾಭಾವವಾಗಿ ಬೆರೆತ ಆ ಮಗನ ಹೆಸರು ಗಣೀಶ. ಅಮ್ಮನ ಹೆಸರು ಅಲಮೇಲು. ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ ಅವಳು ಕಲೆ, ಸಾಹಿತ್ಯ, ಸ೦ಗೀತ ಎಲ್ಲವುಗಳಲ್ಲಿ ಅಭೀರುಚಿ ಇದ್ದವಳು. ದೇಶಕ್ಕೆ ಸ್ವಾತ೦ತ್ರ್ಯ ಬ೦ದ ಹೊಸದರಲ್ಲೇ ಬಿ.ಎ. ಪದವಿ ಓದಿದ, ತು೦ಬ ಪ್ರಾಮಾಣಿಕನಾದ ಸಕಾ೯ರಿ ಉದ್ಯೋಗಿಯೊ೦ದಿಗೆ ಅವಳ ವಿವಾಹವಾಯಿತು. ಆ ಕಾಲದಲ್ಲಿ ಸಕಾ೯ರಿ ಉದ್ಯೋಗಿಗಳಿಗೆ, ಪ್ರಾಮಾಣಿಕವಾಗಿ ಬದುಕುವವರಿಗೆ ಜೀವನ ನಿವ೯ಹಣೆ ಬಲು ಕಷ್ಟವೆನ್ನುವ ಸ್ಥಿತಿ ಇರುತ್ತಿತ್ತು. ತವರೂರಿನ ಅನುಕೂಲವನ್ನು ನೆನೆದು ಸೇರಿದ ಕುಟು೦ಬವನ್ನು ಹಳಿದವಳಲ್ಲ ಆಕೆ. ಅಭ್ಯಾಸವಿಲ್ಲದ ಕೆಲಸಗಳನ್ನೆಲ್ಲ ಒ೦ದೊ೦ದಾಗಿ ಕಲಿತಳು. ಸುತ್ತಮುತ್ತಲಿನವರೆಲ್ಲರೊ೦ದಿಗೆ ಬೆರೆತಳು. ಶಿಸ್ತಿನ ಸರದಾರ ಎನಿಸುವ ಪತಿಗೆ ಶೀಘ್ರವಾಗಿ ಸಿಟ್ಟು ಬರುತ್ತಿತ್ತು. ತಾಳ್ಮೆಯ ಪ್ರತಿರೂಪದ೦ತಿರುವ ಅಲಮೇಲು ನಗುನಗುತ್ತಲೇ ಬದುಕಿನ ಹೊಣ...

ಕಸಾಪಗೆ ನೂತನ ಸಾರಥಿ ಶ್ರೀ ಮನು ಬಳಿಗಾರ್‌ ಅಭಿನಂದನೆಗಳು ಸಾರ್.

Image
 ಶ್ರೀ ಮನು ಬಳಿಗಾರ್‌   ಕಸಾಪ ನೂತನ ಸಾರಥಿ  ಶ್ರೀ ಮನು ಬಳಿಗಾರ್‌   ಅಭಿನಂದನೆಗಳು

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ - ಚಿತ್ರ: ದೂರದ ಬೆಟ್ಟ

Image
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿಮ್ಮ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ ಏಸೇ ಕಷ್ಟ ಬಂದ್ರು ನಮ್ಗೆ, ಗೌರ ಏಸೇ ಕಷ್ಟ ಬಂದ್ರು ನಮ್ಗೆ, ಮೀಸೆ ಬುಡ್ತೀನ್ ಸುಮ್ಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ ಈ ನಿಮ್ಮ ಪಾದದಾಣೆ ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೆ ಪ್ರೀತಿನೇ ಆ ದ್ಯಾವ್ರು ತಂದ, ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿಮ್ಮ ಪಾಲಿಗೆ, ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಚಿತ್ರ: ದೂರದ ಬೆಟ್ಟ (೧೯೭೩/1973) ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ನೀ ಹೀಂಗ ನೋಡಬ್ಯಾಡ ನನ್ನ - ದ ರಾ ಬೇಂದ್ರೆ

ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ? ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ. ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ? ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು? ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ! ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ? ...

ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ - ಅಮಂತ್ರಣ ಪತ್ರಿಕೆ,

Image
"ಪರ್ವ-ಭಾರತ" ಒಂದು ತೌಲನಿಕ ಅಧ್ಯಯನ. ಮಾರ್ಚ್ 6, 2016 .. ರವಿವಾರ. ಸಮಯ - ಮುಂಜಾನೆ -10 ಗಂಟೆಗೆ .  ಸ್ಥಳ- ವಿಜಯಾ ಕಾಲೇಜು ಒಳಾಂಗಣ ಸಭಾಂಗಣ, ಬಸವನಗುಡಿ, ಆರ್.ವಿ ರಸ್ತೆ, ಬೆಂಗಳೂರು

ಸುಭಾಷಿತ - ಆರ್ ಗಣೇಶ್

Image

ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ

Image
ಡಿವಿಜಿ ರವರ "ಸಂಸ್ಕೃತಿ" ಕೃತಿ ಕುರಿತು ಉಪನ್ಯಾಸ - ಉಪನ್ಯಾಸಕರು ಸೂರ್ಯಪ್ರಕಾಶ್ ಪಂಡಿತ್ ದಿನಾಂಕ : 28-02-15 ಸಂಜೆ , ಸಮಯ :  5.30

ನೆಹರುಗೊಂದು ಪತ್ರ - ಪಲ್ಲವಿ ರಾವ್

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್. ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು , ಕಂಗ್ರಾಜ್ಯುಲೇಷನ್ಸ್! ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ...

ಪಂಪ.

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ ಗಾಯನ : ಚಂದ್ರಶೇಖರ ಕೆದಿಲಾಯ, ಮೋಹನ ರಾಗ , ಜಂಪೆ ತಾಳ

Image
ಕಟ್ಟುವೆವು ನಾವು ಹೊಸ ನಾಡೊಂದನು,                 - ರಸದ ಬೀಡೊಂದನು. ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು!       ನಮ್ಮೆದೆಯ ಕನಸುಗಳ ಕಾಮಧೇನು       ಆದಾವು, ಕರೆದಾವು ವಾಂಛಿತವನು;       ಕರೆವ ಕೈಗಿಹುದಿದೋ ಕಣಸುಗಳ ಹರಕೆ;       ಗುರಿ ತಪ್ಪದೊಮ್ಮುಖದ ಬಯಕೆ ಬೆಮ್ಬಳಕೆ! ಜಾತಿಮತ ಭೇದಗಳ ಕಂದಕವು ಸುತ್ತಲೂ, ದುರ್ಭೇದ್ಯವೆನೆ ಕೋಟೆ ಕೊತ್ತಲಗಳು; ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ  ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!      ನಾವು ಹಿಂದೆಗೆವೆವೇ? ವೀರ ತರುಣರು ನಾವು!      ಒಂದೆ ನೆಗೆತಕೆ ನೆಗೆವೆವೋ ಕಂದಕವನು,      ಕುಟ್ಟಿ ಪುಡಿಮಾಡುವೆವು ಕೋಟೆಗಳನು,      ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು! ಕೋಟೆಗೋಡೆಗೆ ನಮ್ಮ ಹೆನಗಲೇ ಮೆಟ್ಟಿಲು, ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು ಆದಾವು; ಅನ್ಜುವೆದೆ ನಮ್ಮದಲ್ಲ; ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!      ...

ಸುಬ್ರಾಯ ಚೊಕ್ಕಾಡಿ - ಚಿತ್ರ ಕೃಪೆ ಶಿವ ಸುಬ್ರಮಣ್ಯ

Image
ಚಿತ್ರ  ಕೃಪೆ ಶಿವ ಸುಬ್ರಮಣ್ಯ

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ

ಪ್ರೀತಿಯ ಗೆಳತಿ,,,,,,,,,     ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ  ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ   ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ  ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗ...

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...

ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ... : ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗ...

ಕನ್ನಡ ಚಿತ್ರ ಬರಹ,

Image

ವಿರೋಧಿಗಳಿಂದಲ್ಲೇ ಜನಪ್ರೀಯವಾಗುತ್ತಿರುವ ಪ್ರೇಮಿಗಳ ದಿನಾಚರಣೆ - ವಿವೇಕ ಬೆಟ್ಕುಳಿ

ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರೀಯವಾಗುವುದು. ಮಾಜಿ ಸಚಿವ ಹೆಚ್ ವಿಶ್ವನಾಥ ಅವರ ಆತ್ಮಕಥೆ ಹಳ್ಳಿಹಕ್ಕಿಯ ಹಾಡು ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯು ಆರ್ ಆನಂತಮೂತರ್ಿ ಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಠಿಯಾಯಿತು. ಪುಸ್ತಕಗಳು, ಸಿನಿಮಾ, ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೆ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು  ಜಯಂತಿ ಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು.ಇದೇ ರೀತಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿರುವುದು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚು ಹೆಚ್ಚು ಮಹತ್ವ ಸಿಗುತ್ತಿರುವುದು. ಇದು ಒಂದು ರೀತಿ ಪುಕ್ಕಟೆ ಪ್ರಚಾರ. ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾ...

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ - ಫಾತಿಮಾ

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ :: ಇನ್‌ಬಾಕ್ಸ್ ಗೆಳೆಯ ನೀನು ಕೇಳಿದೆ... ನೀನು ಸುನ್ನಿನಾ? ಶಿಯಾನಾ? ನೀನು ಸಲಾಫಿಯಾ? ಹನಾಫಿಯಾ..? ನಾವು ಯಾರಾದರೇನು ? ನಾವೆಲ್ಲಾ ಒಂದೇ ಕಾರವಾನ್‌ನ ಸಹಚರರು ಸತ್ಯ ಮಾರ್ಗದ ಅನ್ವೇಷಿಗರು ಅಂದು ಕೊಂಡಿದ್ದೆ ನಾವೆಲ್ಲಾ ಇಷ್ಟು ಬೇರೆ ಬೇರೆ ಅಂತ ಅರಿವಿರಲಿಲ್ಲ. ಕಣ್ಣು ತೆರೆಸಿದೆ ಧನ್ಯವಾದ ........... ಬುರ್ಖಾ ಹಾಕೋಲ್ವಾ? ಅಬಯಾ ತೊಡೊಲ್ವಾ ? ವೇಲು ಸುತ್ತಿಕೊಳ್ಳೋಲ್ವಾ? ಅಂತ ಹೆದರಿಸಿದೆ ನೀನು ನನ್ನ ನಿನ್ನ ಕಣ್ಣ ಬೆಂಕಿಗೆ ಸುಟ್ಟು ಹೋಗುವ ಕಾಗೆ ನಾನಲ್ಲ ಮೊದಲು ನಿನ್ನ ಮನಕೆ ಬೇಕು ಸಭ್ಯತೆಯ ತಂಪು ಕನ್ನಡಕ ಅರಿವಾಗಲಿ ನಿನಗೆ ಬೇಗ. ........... ನೀ ಕೇಳಿದೆ ’ನಿನ್ನ ವಾಲ್ ಮೇಲೆ ಪವಿತ್ರ ಸ್ಥಳದ ಚಿತ್ರ ಏಕಿಲ್ಲ ? ’ ಚಿತ್ರ ಹಾಕಿದರೆ ಮಾತ್ರ ಪ್ರೊಫ಼ೈಲ್ ಪವಿತ್ರವಾಗುವುದೆಂದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಪವಿತ್ರ ಸ್ಥಳದ ಚಿತ್ರ ನಿನ್ನ ಎದೆಗೂ ಅಂಟಿಸುತ್ತಿದ್ದೆ ಖಂಡಿತಾ ಬಿಡುತ್ತಿರುಲಿಲ್ಲ. ............. ಅದಿರಲಿ ನೀನೇಕೆ ತ್ವಾಬ್ ತೊಟ್ಟಿಲ್ಲ? ನಿನ್ನ ವಾಲ್ ಮೇಲೇಕೆ ಪಾರಿವಾಳ ಬಿಳಿಗುಲಾಬಿ ಚಿತ್ರಗಳಿಲ್ಲ? ಗುಂಡಿ ತೆರೆದ ಅಂಗಿ - ಬರ್ಬುಡಾ ಚಡ್ದಿ ಚಿತ್ರಗಳು ಸರಿಯಲ್ಲ. ರೇಸ್ ಬೈಕಿನ ಚಿತ್ರವೇಕೆ? ನಿನಗೆ ಮಾಡಲು ಬೇರೆ ಕೆಲಸವಿಲ್ಲ ? ನಿನ್ನ ಮದುವೆ ಆಗುವ ಹುಡುಗಿಗೆ ಯಾಕೆ ಮುಖವಿಲ್ಲ ? ಅವಳ ಪ್ರೊಫ಼ೈಲ್ನಲ್ಲಿ ಯಾಕೆ ನಗುತ್ತಿದ್...

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಏನಿದು ಹೊಸ ಸ್ಕ್ಯಾಮ್..? ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ. ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ. ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್...

ಹಾಸ್ಯ - ಕೃಪೆ - ವಾಟ್ಸ್ ಆಪ್

ಹೊಸದಾಗಿ ಮದುವೆ ಆಗಿ ಬಂದ ಸೊಸೆ ಏನೂ ಕೆಲಸ ಮಾಡಲ್ಲ ಅಂತ ಮಗನಿಗೆ ಹೇಳಿ ಪೇಚಾಡಿಕೊಂಡರು ಅಮ್ಮ. ಆಮೇಲೇ ಅಮ್ಮಾ ಮಗ ಸೇರಿ ಒಂದು plan ಮಾಡಿದರು ಅಮ್ಮ ಹೇಳಿದ್ರು" ನಾಳೆ ಬೆಳಿಗ್ಗೆ ಕಸ ಗುಡಿಸತಾ ಇರ್ತೀನಿ ಆಗ ನೀನು ಬಿಡಮ್ಮ ನಾ ಗುಡಸ್ತೀನಿ ಅನ್ನು ಆಗಲಾದ್ರೂ ನಾ ಮಾಡ್ತೀನಿ ಅಂತಾಳಾ ನೋಡೋಣ" ಅದೇ ಪ್ರಕಾರ ಅಮ್ಮ ಕಸ ಗುಡಸ್ತಾ ಇದ್ದಾಗ ಮಗ "ಬಿಡಮ್ಮ ನಾ ಗುಡಸ್ತೀನಿ" ಅಂದ "ಇಲ್ಲ ನಾ ಗುಡಸ್ತೀನಿ" ಅಮ್ಮ ಮಗ ಕಿತ್ತಾಡೊಕೆ ಶುರು ಮಾಡಿದ್ರು. ಸೊಸೆ ಬಂದು ಶಾಂತ ರೀತಿಯಿಂದ ಹೇಳಿದಳು"ಅದಕ್ಕೆ ಯಾಕ ಕಿತ್ತಾಡತೀರಿEven  date ಗೆ ಅಮ್ಮ ಗುಡಸಲಿ,Odd date ಗೆ ಮಗ ಗುಡಸಲಿ" ಅಂತ. ಸೊಸೆ Rockingಅಮ್ಮ ಮಗ Shocking ಕೃಪೆ - ವಾಟ್ಸ್ ಆಪ್

ಚುಟುಕುಗಳು - ರಘು ವಿ.

Image
  - 1- ದಿನಚರಿಯ ಹೊಸಪುಟವ ರಘು ವಿ. ಸಂಪಾದಕ, ವಿವೇಕ ಹಂಸ. ದಿನದ ಮೊದಲ ಕಿರಣದಿಂ ತೆರೆವ ವಿಧಿಯ ಹಸ್ತವು ನೀನು ಅಂಜದಳುಕದೆ ಬೆಳಕಿದೆಗೊಟ್ಟು ನೆಳಲ ಹಿಂದಿಟ್ಟು ಒಲವಿನಿಂ ಮುನ್ನಡೆವ ಧೀಮಂತಿಕೆಯ ನೀಡಿ ಹರಸೊ ರವಿಯೇ!  -2-  ಜಗದ ದೊಡ್ಡಣ್ಣನುದಯಿಸಿಹ ಕೃಪೆಯಿಂದ ಇಳೆಯ ಸಲಹಲೆಂದು ಬೆಳಕ ಬಿತ್ತನೆಗೆ ತೆರೆಯಿರೆದೆಯನು ನಿತ್ಯ ಜನುಮವು ಅಂತರಂಗದೊಳು ದೊಡ್ಡಣ್ಣನೀವ ಮೌಲ್ಯಗಳ ಬಿತ್ತಿಹೆವು ಸಾಧಿಸುವ ಮನ ನೀಡು ಬಾನ ರವಿಯೇ! -3- ಒಂಟಿ ಪಯಣಿಗ ನೀನು ಅದೇನ ಧ್ಯಾನಿಸುವೆಯೊ ಅದೇನ ಅರಿತಿಹೆಯೊ ಅನಾದಿಯಿಂದಲೂ ಸತ್ಯ ಪಾತ್ರೆಯ ಸುವರ್ಣ ಮುಚ್ಚಳ ನೀನು, ಗುಟ್ಟನೆನಗೆ ಜಗಕೆ ಉಣಬಡಿಸೊ ರವಿಯೇ! " -ಕವಿ ( ನಾಳೆ ರವಿಯ ಉತ್ತರ ) -4-  "ಪಯಣವದೆಲ್ಲ ಒಂಟಿಯೇ ಲಕ್ಷ ತಾರಾಪಥದಿ ಜತೆಯಿಲ್ಲ ಎದುರಿಲ್ಲ ಒದರಾಟ ಮೊದಲಿಲ್ಲ ಸತ್ಯವನಂತ ಯಾತ್ರೆಯದು ಪಾತ್ರೆ ಮುಚ್ಚಳಗಳಿಲ್ಲ ಬೆಸುಗೆ ಬಂಧಗಳ ಬಿಡಿಸುವುದೇ ತಪವು ಗುಟ್ಟು ಗಹ್ವರಗಳಿಲ್ಲ ಇಡು ಹೆಜ್ಜೆ ಬೆಳಕಾಗುವುದೇ ರಟ್ಟು ನಡೆಯೊ ಕವಿ ಕತ್ತಲಿಂದ ಬೆಳಕಿನೆಡೆಗೆ!" -ರವಿ -5- "ಹೊತ್ತೊತ್ತಿಗೆ ಚಿತ್ತದಲಿ ಮೊಳೆವ ಚಿಂತನೆಯಂತೆ ಅಂದಂದಿನ ದಿನದಾಗಮವ ಸಾರುವ ರವಿಯೇ, ನಿನ್ನೊಳಚಿತ್ತದ ಚಿಂತನೆ ಏನೋ?!" -ಕವಿ

ವೀರ ನಾರಾಯಣ ದೇವಸ್ಥಾನ, ಬೆಳವಾಡಿ

Image

ಸುಭಾಷಿತ,

Image

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

Image

1946 ೧೯೪೬ರಲ್ಲಿ ಕನ್ನಡ ಪುಸ್ತಕಗಳ ಬೆಲೆ (ರು. ಪೈ)

Image

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು

Image
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡುವನು ಬಿಸಿಲೂಡುವನು ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ ಗೂಡಿನ ಹೊರ ಹೊರ ದೂಡುವನು ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು ಕೂಡಲ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು ರವಿ ಹೊಳೆಯುವನು ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು ಕಣ್ ಬಿಡಿಸುವನು ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ ತೊಡಿಸುವನು ಹನಿ ತೊಡೆಸುವನು ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು ಕವಿ : ಪಂಜೆ ಮಂಗೇಶ ರಾಯರು