ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್ಲ ಇದ್ದದ್ದು ’ಪದ್ಯ’ಗಳ ಪೂರ್ಣಸಾಹಿತ್ಯ ಪ್ರಕಟಿಸುವುದಕ್ಕೆ. ಈ ಸಲ ಪದ್ಯ ಅಲ್ಲ, ಗದ್ಯ. ಅದೂ ಯಾವುದೆಂದರೆ ’ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂದು ಗದ್ಯವನ್ನು ಕೊಂಡಾಡುವ ಗದ್ಯ, ಅದೇ ಮುದ್ದಣ-ಮನೋರಮೆಯ ಜಗದ್ವಿಖ್ಯಾತ ಸರಸಸಲ್ಲಾಪ ಸಂಭಾಷಣೆ. ಹಳಗನ್ನಡದಲ್ಲಿರುವಂಥ ಗದ್ಯ. ಇದು, ನಮಗಿಂತ ಹಿಂದಿನ ಬ್ಯಾಚ್ನಲ್ಲಿ ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಮೊದಲನೆಯ ಪಾಠವಾಗಿತ್ತು. ಇದರಲ್ಲಿ ಬರುವ ಕೆಲವೆಲ್ಲ ವಾಕ್ಯಗಳು- "ಪದ್ಯಂ ವಧ್ಯಂ ಗದ್ಯಂ ಹೃದ್ಯಂ", "ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು", "ಕನ್ನಡ ಕತ್ತುರಿಯಲ್ತೆ." "ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ" ಮುಂತಾದುವು ನುಡಿಗಟ್ಟುಗಳಾಗಿ ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿವೆ. ವಿದ್ವತ್ಪೂರ್ಣ ಭಾಷಣಗಳನ್ನೂ ಲೇಖನಗಳನ್ನೂ ಮುತ್ತುಹವಳಗಳಂತೆ ಅಲಂಕರಿಸಿವೆ. ಹಾಂ. ಹೇಳೋದೇ ಮರೆತೆ. ಈ ವಾರದ ಕೋರಿಕೆ ಸಲ್ಲಿಸಿದವರು ಬೆಂಗಳೂರಿನಿಂದ Jyothi Umesh. ಅವರು ತುಂಬಾ ಹಿಂದೆಯೇ ಒಮ್ಮೆ ಇದರ ಬಗ್ಗೆ ಕೇಳಿದ್ದರು. ಮತ್ತೆ ಮೊನ್ನೆಯಷ್ಟೇ ನಾನು ಬೇರೆ ಒಂದು ಪೋಸ್ಟ್ನಲ್ಲಿ ’ಮುದ್ದಣ ಮನೋರಮೆ’ಯರ ಪ್ರಸ್ತಾವ ಮಾಡಿದಾಗ ಮತ್ತೆ ನೆನಪಿಸಿಕೊಂಡು ಯಾವಾಗ ಪ್ರಕಟಿಸುತ್...
ವಿವರಗಳು ಬರೆದುಕೊಡಿ
ReplyDelete
Deleteಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಎಂಬ ಹಳ್ಳಿಯಲ್ಲಿ ವೀರನಾರಾಯಣ ದೇವಸ್ಥಾನವಿದೆ. ಇದು ಹೊಯ್ಸಳರ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು. ಹೊಯ್ಸಳರ ರಾಜ ಎರಡನೆ ವೀರ ಬಲ್ಲಾಳನಿಂದ ಕಟ್ಟಿಸಲ್ಪಟ್ಟಿದ್ದು -
https://kn.wikipedia.org/wiki/ವೀರ_ನಾರಾಯಣ_ದೇವಸ್ಥಾನ,_ಬೆಳವಾಡಿ