ನಾನೊಂದು ಸಮಾಜವಾಗಿದ್ದರೆ.
ನಾನೊಂದು ಸಮಾಜವಾಗಿದ್ದರೆ ದಹಿಸುತ್ತಿದ್ದೆ ಜಾತಿಯ ಬೇರುಗಳನ್ನು
ಕಿತ್ತೆಸೆಯುತ್ತಿದ್ದೆ ಕೆಟ್ಟ ಸಂಪ್ರದಾಯ, ಮೂಢನಂಬಿಕೆಗಳನು
ತುಳಿಯುತ್ತಿದ್ದೆ ಅಧರ್ಮ, ಅನೀತಿ, ಹಿಂಸೆಗಳನ್ನು ವಾಮನನಂತೆ!
ಸೃಷ್ಠಿಸುತ್ತಿದ್ದೆ ಸುಧರ್ಮ, ಸುಜ್ಞಾನ,ಸುನೀತಿಗಳನ್ನು ನಿಸರ್ಗದಂತೆ
ಪ್ರತಿಷ್ಟಾಪಿಸುತ್ತಿದ್ದೆ ಚಿಂತಕರನು, ದಾರ್ಶನಿಕರನು, ದೇವರ ಜಾಗದಲ್ಲಿ!
ನಿರ್ಮಿಸುತ್ತಿದ್ದೆ ಹುತ್ಮಾರ ಮಂದಿರಗಳ ಕಂಡ ಕಂಡಲ್ಲಿ
ಮಟ್ಟಹಾಕುತ್ತಿದ್ದೆ ಭಯೋತ್ಪಾಧನೆ, ಭ್ರಷ್ಟಾಚಾರ, ದುರಾಡಳಿತವನ್ನು
ತೂಡಿಸುತ್ತಿದ್ದೆ ನಗ್ನ ರಾಜಕೀಯ ಸ್ಥಿತಿಗೆ ಶುಭ್ರ ಬಟ್ಟೆಯನ್ನು
ನಿಲ್ಲಿಸುತ್ತಿದ್ದೆ ಕದನ, ಜಗಳ, ಕೋಪ ಎಲ್ಲರ ಮನದಲ್ಲಿ
ನಿಡುತ್ತಿದ್ದೆ ಸಮಸ್ಯಗಳನ್ನು ಎದುರಿಸುವ ಶಕ್ತಿ ಜನರಲ್ಲಿ
ತಿಳಿಸುತ್ತಿದ್ದೆ ಜೀವನದ ಸಾರ್ಥಕ ಭಾವ ಏನೆಂದು
ಬೇಡಿಕೊಳ್ಳುತ್ತಿದ್ದೆ ಬುದ್ಧ, ಬಸವ, ಗಾಂಧಿ ಮತ್ತೇ ಹುಟ್ಟಿ ಬರಲೆಂದು.
ಮಹಾಂತೇಶ ರಾಜಗುರು
ಶಿಕ್ಷಕರು, ಕೆನರಾ ಕೇಂಬ್ರಿಡ್ಜ್ ಶಾಲೆ. ಯಡವನಹಳ್ಳಿ.
Comments
Post a Comment