ಓದಿ ಬ್ರಾಹ್ಮಣನಾಗು - ಸಿದ್ಧಯ್ಯ ಪುರಾಣಿಕ

ಓದಿ ಬ್ರಾಹ್ಮಣನಾಗು
ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೆ ಆಗು
ದುಡಿದು ಗಳಿಸಿ
ಏನಾದರೂ ಆಗು
ನಿನ್ನೊಲವಿನಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು

ಹಿಂದು ಮುಸ್ಲಿಮನಾಗು
ಬೌದ್ಧ ಕ್ರೈಸ್ತನೆ ಆಗು
ಚಾರ್ವಾಕನೇ ಆಗು
ಭೋಗ ಬಯಸಿ
ಏನಾದರೂ ಆಗು
ಹಾರೈಸಿದಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು

ರಾಜಕಾರಣಿಯಾಗು
ರಾಷ್ಟ್ರಭಕ್ತನೆ ಆಗು
ಕಲೆಗಾರ ವಿಜ್ಞಾನಿ
ವ್ಯಾಪಾರಿಯಾಗು
ಏನಾದರೂ ಆಗು
ನೀ ಬಯಸಿದಂತಾಗು
ಏನಾದರೂ ಸರಿಯೇ –
ಮೊದಲು ಮಾನವನಾಗು


ಸಿದ್ಧಯ್ಯ ಪುರಾಣಿಕ ( 1918-1994)

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು