ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, February 6, 2016

ಚುಟುಕುಗಳು - ರಘು ವಿ.

  - 1-
ದಿನಚರಿಯ ಹೊಸಪುಟವ
ರಘು ವಿ.
ಸಂಪಾದಕ, ವಿವೇಕ ಹಂಸ.
ದಿನದ ಮೊದಲ ಕಿರಣದಿಂ
ತೆರೆವ ವಿಧಿಯ ಹಸ್ತವು ನೀನು
ಅಂಜದಳುಕದೆ ಬೆಳಕಿದೆಗೊಟ್ಟು
ನೆಳಲ ಹಿಂದಿಟ್ಟು ಒಲವಿನಿಂ
ಮುನ್ನಡೆವ ಧೀಮಂತಿಕೆಯ
ನೀಡಿ ಹರಸೊ ರವಿಯೇ!

 -2-
 ಜಗದ ದೊಡ್ಡಣ್ಣನುದಯಿಸಿಹ
ಕೃಪೆಯಿಂದ ಇಳೆಯ ಸಲಹಲೆಂದು
ಬೆಳಕ ಬಿತ್ತನೆಗೆ ತೆರೆಯಿರೆದೆಯನು
ನಿತ್ಯ ಜನುಮವು ಅಂತರಂಗದೊಳು
ದೊಡ್ಡಣ್ಣನೀವ ಮೌಲ್ಯಗಳ ಬಿತ್ತಿಹೆವು
ಸಾಧಿಸುವ ಮನ ನೀಡು ಬಾನ ರವಿಯೇ!
-3-
ಒಂಟಿ ಪಯಣಿಗ ನೀನು
ಅದೇನ ಧ್ಯಾನಿಸುವೆಯೊ
ಅದೇನ ಅರಿತಿಹೆಯೊ
ಅನಾದಿಯಿಂದಲೂ ಸತ್ಯ
ಪಾತ್ರೆಯ ಸುವರ್ಣ ಮುಚ್ಚಳ
ನೀನು, ಗುಟ್ಟನೆನಗೆ ಜಗಕೆ
ಉಣಬಡಿಸೊ ರವಿಯೇ! "
-ಕವಿ
( ನಾಳೆ ರವಿಯ ಉತ್ತರ )


-4-
 "ಪಯಣವದೆಲ್ಲ ಒಂಟಿಯೇ
ಲಕ್ಷ ತಾರಾಪಥದಿ ಜತೆಯಿಲ್ಲ
ಎದುರಿಲ್ಲ ಒದರಾಟ ಮೊದಲಿಲ್ಲ
ಸತ್ಯವನಂತ ಯಾತ್ರೆಯದು
ಪಾತ್ರೆ ಮುಚ್ಚಳಗಳಿಲ್ಲ ಬೆಸುಗೆ
ಬಂಧಗಳ ಬಿಡಿಸುವುದೇ ತಪವು
ಗುಟ್ಟು ಗಹ್ವರಗಳಿಲ್ಲ ಇಡು ಹೆಜ್ಜೆ
ಬೆಳಕಾಗುವುದೇ ರಟ್ಟು ನಡೆಯೊ
ಕವಿ ಕತ್ತಲಿಂದ ಬೆಳಕಿನೆಡೆಗೆ!"
-ರವಿ


-5-
"ಹೊತ್ತೊತ್ತಿಗೆ ಚಿತ್ತದಲಿ
ಮೊಳೆವ ಚಿಂತನೆಯಂತೆ
ಅಂದಂದಿನ ದಿನದಾಗಮವ
ಸಾರುವ ರವಿಯೇ,
ನಿನ್ನೊಳಚಿತ್ತದ ಚಿಂತನೆ
ಏನೋ?!"
-ಕವಿ


No comments:

Post a Comment