ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, February 14, 2016

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ

ಪ್ರೀತಿಯ ಗೆಳತಿ,,,,,,,,,

    ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ  ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ   ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ  ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗಳಿಗೆ ನವ ವಷಾ౯ಚರಣೆಯ ಸಂದರ್ಭ ಮನೆಯಲ್ಲಿ ಸಹಾ ಯಾವುದೇ ಅನುಮಾನ ಬರದು. ಆ ದಿನಕ್ಕಾಗಿ ಕಾಯುತ್ತಿರುವೆ.. . ಇಂದು ಪ್ರೇಮಿಗಳ ದಿನಾರಣೆ ನಾನು ಖುದ್ದಾಗಿ ನಿನ್ನ ಜೊತೆ ಇದ್ದು ಕಾಲಕಳೆಯಲು ಆಗುತ್ತಿಲ್ಲ. ಈ ದಿನ ನಮ್ಮ ಅಪ್ಪನ ಜೊತೆ ದಿನಾಚರಣೆಯನ್ನು ವಿರೋಧಿಸಿ ಧರಣಿ ಮಾಡಬೇಕಾಗಿದೆ. ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆ ನನಗಿದೆ. ಏನೇ ಇರಲಿ ಚಿನ್ನಾ ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ನಿನ್ನ ಪ್ರೇಮಿಯ ಕಡೆಯಿಂದ ಮನಸ್ಸಿನಾಳದ ಶುಭಾಶಯಗಳು.........
ಇಂತಿ ನಿನ್ನ ಕನಸಿನ ಗೆಳೆಯ
ಕಟ್ಟಾ ಹಿಂದುತ್ವವಾದಿ ಯುವಕ

ನಲ್ಮೇಯ ಗೆಳೆಯಾ,,,,,,,,,,,,,,,
       ಕಳೆದ ಮೂರು ವರ್ಷದಿಂದ ನಾನು ನೋಡುತ್ತಿರುವೆನು. ನಿನಗೆ ನಿನ್ನ ಅಪ್ಪನನ್ನು ಎದುರಿಸುವ ಧೈರ್ಯ ಬರುವುದು. ಒಂದಾದರೂ ದಿನ ನಾವು ಜಾಲಿಯಾಗಿ ಪ್ರೇಮಿಗಳಾಗಿ ಓಡಾಡಬಹುದು ಎಂದು, ಆದರೇ ನಿನ್ನ ಪುಕ್ಕಲುತನ ನೋಡಿದರೆ ಅದು ಸಾಧ್ಯವಿಲ್ಲ ಅನಿಸುತಿದೆ. ನಿನಗೆ ನನಗಿಂತ, ನಿನ್ನ ಅಪ್ಪನ ಡೋಂಗಿ ರಾಜಕೀಯದ ಬಗ್ಗೆಯೇ ಹೆಚ್ಚು ಕಾಳಜಿ. ಯಾಕಾಗಿ ಅಪ್ಪ ಮಗ ಮನಸ್ಸಿನಲ್ಲಿ ಒಂದು ಇರಿಸಿಕೊಂಡು ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣಿಸಿಕೊಳ್ಳುವಿರಿ. ಸದಾ ಕಾಲ ನೀನು ನನ್ನೊಂದಿಗೆ ಕಾಲ ಕಳೆಯಲು ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿರುವೆ.
ನಾನು ರಾಜಕೀಯ ಕುಟುಂಬದಿಂದ ಬಂದವಳು ಗೆಳೆಯಾ ನನಗೆ ನಿನ್ನ ಸ್ಥಿತಿ ಅರ್ಥವಾಗುವುದು. ನಮ್ಮ ಅಪ್ಪ ಸಹಾ ಶುದ್ದ ಸಂಪ್ರದಾಯವಾದಿ, ಆದರೇ ರಾಜಕೀಯವಾಗಿ ಜಾತ್ಯಾತೀತ ಆದ ಕಾರಣಕ್ಕೆ ನಾನು ಹೊಸವರ್ಷ, ಪ್ರೇಮಿಗಳ ದಿನಾಚರಣೆಯಂದು ಎಲ್ಲಿ ಬೇಕಾದರೂ ಹೋಗಬಹುದು, ಅದಕ್ಕಾಗಿ ಯಾವುದೇ ಅಡೆತಡೆ ಇಲ್ಲ. ಆದರೇ ನೀನು ಹೇಳಿದಂತೆ ಯುಗಾದಿ ಹಬ್ಬದ ದಿನ ನನಗೆ ಮನೆ ಬಿಟ್ಟು ಬರಲು ಕಷ್ಟ ಆ ದಿನ ಪೂಜೆ ಪನಸ್ಕಾರ ಎಂದು ತುಂಬಾ ಕೆಲಸ ಇರುವುದು. ನಮ್ಮ ಅಪ್ಪ ತೋರಿಸಿಕೊಳ್ಳಲು ಮಾತ್ರ ಜಾತ್ಯಾತೀತ, ಆದರೇ ಮನೆಯಲ್ಲಿ ತುಂಬಾ ಸಂಪ್ರದಾಯ ಕಣೋ. ನಮ್ಮ ಅಪ್ಪ ಸಹಾ ಒಂದು ರೀತಿಯ ಡೋಂಗಿ ರಾಜಕಾರಣೀಯೆ ಆಗಿರುವರು.
ಗೆಳೆಯಾ ನನ್ನ ನಿನ್ನ ಕುಟುಂಬದವರು ಈ ರೀತಿಯ ಡೋಂಗಿ ರಾಜಕೀಯದ ನಡುವೆ ನಮ್ಮ ಪ್ರೀತಿ ಕಣ್ಮರೆಯಾಗುವುದು ಬೇಕಾಗಿಲ್ಲ. ಇಂದೇ ನಿರ್ಧರಿಸು, ಒಂದು ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗಿ ಬದುಕಿ ತೋರಿಸುವುದು. ಇಲ್ಲಾ ಒಂದು ಮನೆಯರನ್ನು ಒಪ್ಪಿಸಿ ಮದುವೆಯಾಗಿ ಆ ನಂತರ ಕಮ್ಯೂನಿಷ್ಟರಾಗಿ ನಾವು ನಮ್ಮ ಕುಟುಂಬವನ್ನು ಬೆಳೆಸುವುದು. ನಿನ್ನ ಉತ್ತರವನ್ನು ಇದೇ 14 ರ೦ದು ತಿಳಿಸು. ನೀನ್ನ ಉತ್ತರದ ನಂತರ ನಾನು ನನ್ನ ಭವಿಷ್ಯದ ಬಗ್ಗೆ 23 ರ೦ದು ತೀಮಾ౯ನ ತೆಗೆದುಕೊಳ್ಳುವೆನು.

ಇಂತಿ ನಿನ್ನ ಮನದಾಳದ ಗೆಳತಿ
ಅಪ್ಪಟ ಜಾತ್ಯಾತೀತ ಯುವತಿ

ಆತ್ಮೀಯ  ಪ್ರೇಮಿಗಳೇ ಚುನಾವಣಾ ಸಮಯವಾದ್ದರಿಂದ ಈ ರೀತಿಯ ಪತ್ರ ಬರೆಯಬೇಕು ಎನಿಸಿತು. ದಯವಿಟ್ಟು ನಿಮ್ಮ ಜಾತಿ, ಧರ್ಮ, ಪ್ರಸ್ಟೆಜ್, ಸಮಾಜ ಈ ಎಲ್ಲದಕ್ಕೂ ಹೆದರಿ ನಿಮ್ಮತನವನ್ನು  ಬಿಟ್ಟು ಹೆಡಿಯಾಗಿ ಬದುಕದಿರಿ. ಡೋಂಗಿ ಜ್ಯಾತ್ಯಾತೀತತೆ, ಹಿಂದುತ್ವ ಧಾಮಿ౯ಕ ಅಂದತ್ವ ಈ ಎಲ್ಲವನ್ನು ಮೀರಿ ನಿಮ್ಮ ಪ್ರೇಮ ಅಮರವಾಗಲಿ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

ವಿವೇಕ ಬೆಟ್ಕುಳಿ.

No comments:

Post a Comment