ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, February 8, 2016

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ - ಫಾತಿಮಾ

ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ ::
ಇನ್‌ಬಾಕ್ಸ್ ಗೆಳೆಯ
ನೀನು ಕೇಳಿದೆ...
ನೀನು ಸುನ್ನಿನಾ? ಶಿಯಾನಾ?
ನೀನು ಸಲಾಫಿಯಾ? ಹನಾಫಿಯಾ..?
ನಾವು ಯಾರಾದರೇನು ?
ನಾವೆಲ್ಲಾ ಒಂದೇ ಕಾರವಾನ್‌ನ
ಸಹಚರರು
ಸತ್ಯ ಮಾರ್ಗದ ಅನ್ವೇಷಿಗರು
ಅಂದು ಕೊಂಡಿದ್ದೆ
ನಾವೆಲ್ಲಾ ಇಷ್ಟು ಬೇರೆ ಬೇರೆ ಅಂತ
ಅರಿವಿರಲಿಲ್ಲ.
ಕಣ್ಣು ತೆರೆಸಿದೆ ಧನ್ಯವಾದ
...........
ಬುರ್ಖಾ ಹಾಕೋಲ್ವಾ?
ಅಬಯಾ ತೊಡೊಲ್ವಾ ?
ವೇಲು ಸುತ್ತಿಕೊಳ್ಳೋಲ್ವಾ?
ಅಂತ ಹೆದರಿಸಿದೆ ನೀನು ನನ್ನ
ನಿನ್ನ ಕಣ್ಣ ಬೆಂಕಿಗೆ
ಸುಟ್ಟು ಹೋಗುವ ಕಾಗೆ ನಾನಲ್ಲ
ಮೊದಲು ನಿನ್ನ ಮನಕೆ ಬೇಕು
ಸಭ್ಯತೆಯ ತಂಪು ಕನ್ನಡಕ
ಅರಿವಾಗಲಿ ನಿನಗೆ ಬೇಗ.
...........
ನೀ ಕೇಳಿದೆ
’ನಿನ್ನ ವಾಲ್ ಮೇಲೆ
ಪವಿತ್ರ ಸ್ಥಳದ ಚಿತ್ರ ಏಕಿಲ್ಲ ? ’
ಚಿತ್ರ ಹಾಕಿದರೆ ಮಾತ್ರ
ಪ್ರೊಫ಼ೈಲ್ ಪವಿತ್ರವಾಗುವುದೆಂದು
ನನಗೆ ಗೊತ್ತಿರಲಿಲ್ಲ.
ಗೊತ್ತಿದ್ದರೆ ಪವಿತ್ರ ಸ್ಥಳದ ಚಿತ್ರ
ನಿನ್ನ ಎದೆಗೂ ಅಂಟಿಸುತ್ತಿದ್ದೆ
ಖಂಡಿತಾ ಬಿಡುತ್ತಿರುಲಿಲ್ಲ.
.............
ಅದಿರಲಿ
ನೀನೇಕೆ ತ್ವಾಬ್ ತೊಟ್ಟಿಲ್ಲ?
ನಿನ್ನ ವಾಲ್ ಮೇಲೇಕೆ
ಪಾರಿವಾಳ ಬಿಳಿಗುಲಾಬಿ ಚಿತ್ರಗಳಿಲ್ಲ?
ಗುಂಡಿ ತೆರೆದ ಅಂಗಿ - ಬರ್ಬುಡಾ ಚಡ್ದಿ
ಚಿತ್ರಗಳು ಸರಿಯಲ್ಲ.
ರೇಸ್ ಬೈಕಿನ ಚಿತ್ರವೇಕೆ?
ನಿನಗೆ ಮಾಡಲು ಬೇರೆ ಕೆಲಸವಿಲ್ಲ ?
ನಿನ್ನ ಮದುವೆ ಆಗುವ ಹುಡುಗಿಗೆ ಯಾಕೆ ಮುಖವಿಲ್ಲ ?
ಅವಳ ಪ್ರೊಫ಼ೈಲ್ನಲ್ಲಿ ಯಾಕೆ ನಗುತ್ತಿದ್ದಾರೆ
ಬುರ್ಖಾ ಧರಿಸದ
ಜೆನೆಲಿಯಾ ಡಿಸೋಜಾ
ಭೂಮಿಕಾ ಚಾವ್ಲಾ..
 ಫಾತಿಮಾ ಬೆಳವಾಡಿ 

No comments:

Post a Comment