ನಂಗೆಲಿಯ ಬಲಿದಾನ
ನಮ್ಮ ದೇಶದ ಅತಿ ದೊಡ್ಡ ಶಾಪವೆಂದರೆ ಅಸ್ಪೃಶ್ಯತೆ. ನಾವು ಎಲ್ಲಿಯವರೆಗೆ ಮನುಷ್ಯರನ್ನು ಮನುಷ್ಯರಂತೆ ನೋಡುವುದನ್ನು ಬೆಳೆಸಿಕೊಳ್ಳುವುದಿಲ್ಲವೋ ನಾವು ಒಂದು ನಾಗರಿಕ ಸಮಾಜವಾಗಿ ಬಾಳುವುದು ಅಸಾಧ್ಯವಾಗುತ್ತದೆ.
ನಮ್ಮ ಧರ್ಮ ಇಂದು ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎನ್ನುತ್ತ ಕೇವಲ ಮುಟ್ಟದಿರುವ ಧರ್ಮವಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಜ್ಞಾನದ ನೀಡಿಕೆಯಲ್ಲಿ, ಅಧ್ಯಾತ್ಮದಲ್ಲಿ, ಶ್ರೀಮಂತಿಕೆಯಲ್ಲಿ ಪ್ರಪಂಚಕ್ಕೇ ಮಾದರಿಯಾಗಿದ್ದ ನಮ್ಮ ದೇಶ ಕೆಳಮಟ್ಟಕ್ಕೆ ಇಳಿಯಲು ಈ ಅಸ್ಪೃಶ್ರ್ಯತೆಯ ಮನೋಭಾವವೇ ಕಾರಣ.` ಹೀಗೆಂದು ತಮ್ಮ ಆಕ್ರೋಶವನ್ನು ಒಂದು ಶತಮಾನದ ಹಿಂದೆಯೇ ಬಹಿರಂಗಪಡಿಸಿದವರು ವೀರ ಸನ್ಯಾಸಿ ವಿವೇಕಾನಂದರು. ಈ ವ್ಯಕ್ತಿ-ವ್ಯಕ್ತಿಗಳ ನಡುವಿನ ತಾರತಮ್ಯಗಳು ಈಗ ಕಡಿಮೆಯಾಗಿದ್ದರೂ ಅವು ಇನ್ನೂ ಉಳಿದಿರುವುದು ಖೇದದ ಸಂಗತಿ.
ಈ ಅವ್ಯವಸ್ಥೆಯ ವಿರುದ್ಧ ಹೋರಾಡಿದವರು ಹಲವರು. ಕೆಲವರ ಹೆಸರುಗಳು ನೆನಪಿನಲ್ಲಿವೆ. ಅನೇಕರ ಹೆಸರುಗಳು ಮರೆಯಾಗಿ ಹೋಗಿವೆ. ಹೀಗೆ ತಾರತಮ್ಯದ ವಿರುದ್ಧ ಹೋರಾಟದಲ್ಲಿ ತನ್ನ ಜೀವನವನ್ನೇ ಬಲಿಕೊಟ್ಟು ಇತಿಹಾಸ ನಿರ್ಮಿಸಿದ ಮಹಿಳೆ ನಂಗೆಲಿ. ಕೇರಳದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಇಡೀ ಮಹಿಳಾ ಸಮುದಾಯಕ್ಕೆ ಮರ್ಯಾದೆಯನ್ನು, ಸ್ವಾತಂತ್ರವನ್ನು ತಂದುಕೊಟ್ಟವಳು ನಂಗೆಲಿ. ಅವಳ ಬಲಿದಾನವನ್ನು ಇತಿಹಾಸ ದಾಖಲಿಸದಿರುವುದು ದುರ್ದೈವ. ಅವಳ ಮನೆತನದವರು ಬಾಯಿಂದ ಬಾಯಿಗೆ ಅವಳ ಗಾಥೆಯನ್ನು ಸಾಗಿಸಿ ಕಾಪಾಡಿಕೊಂಡಿದ್ದಾರೆ.
ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ಹಾಕುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಕಳೆದ ಶತಮಾನದಲ್ಲಿ ಕೇರಳದ ತಿರುವಾಂಕೂರಿನಲ್ಲಿ ಅತ್ಯಂತ ಹೀನಾಯವಾದ ತೆರಿಗೆ ಜಾರಿಯಲ್ಲಿತ್ತು. ಕೆಳಜಾತಿಯ ಮಹಿಳೆಯರಿಗೆ ತಮ್ಮ ಎದೆ ಮುಚ್ಚಿಕೊಳ್ಳಲು ಅನುಮತಿ ಇರಲಿಲ್ಲ.
ಅವರು ಹಾಗೆಯೇ ತೆರೆದೆದೆಯಲ್ಲಿ ತಿರುಗಾಡಬೇಕಿತ್ತು, ಮೇಲ್ವರ್ಗದ ಜನರ ಹಸಿದ ಕಣ್ಣುಗಳಿಗೆ ಆಹಾರವಾಗಬೇಕಿತ್ತು. ಅವರು ಎದೆಯನ್ನು ಮುಚ್ಟಿಕೊಳ್ಳಬೇಕಾದರೆ ರಾಜ್ಯಕ್ಕೆ ತೆರಿಗೆ ಕಟ್ಟಬೇಕಾಗಿತ್ತು. ಅದನ್ನು ಮುಲಕ್ಕರಮ್ ಎನ್ನುತ್ತಿದ್ದರು. ಹಾಗೆಂದರೆ ಎದೆ ತೆರಿಗೆ ಎಂದರ್ಥ. ಬಹಳಷ್ಟು ಬಡ ಹೆಣ್ಣುಮಕ್ಕಳು ತೆರಿಗೆ ಕಟ್ಟಲು ಹಣ ಎಲ್ಲಿಂದ ತಂದಾರು? ಅನೇಕ ಸುಂದರ ತರುಣಿಯರು ಈ ಕ್ರೂರ ಶಾಸನಕ್ಕೆ ಹೆದರಿ ತಮ್ಮ ಗುಡಿಸಲುಗಳ ಕತ್ತಲೆಯಲ್ಲಿಯೇ ತಮ್ಮ ಜೀವನವನ್ನು ಕೊಳೆಸಿಬಿಡುತ್ತಿದ್ದರು.
ಅಕಸ್ಮಾತ್ ಯಾವುದೇ ಮಹಿಳೆ ಎದೆಯ ಮೇಲೆ ಬಟ್ಟೆ ಹಾಕಿಕೊಂಡು ಹೋದರೆ ತಕ್ಷಣವೇ ಅಧಿಕಾರಿಗಳು ಆಕೆಗೆ ಉಗ್ರ ಶಿಕ್ಷೆ ನೀಡಿ ತೆರಿಗೆ ಹಾಕುತ್ತಿದ್ದರಂತೆ.
ಈ ಸಮಯದಲ್ಲಿ ನಂಗೆಲಿ ಈ ವ್ಯವಸ್ಥೆಯನ್ನು ಧಿಕ್ಕರಿಸಲು ತೀರ್ಮಾನ ಮಾಡಿದಳು. ಆಕೆ ಇದ್ದದ್ದು ಚೆರ್ತಲಾ ಎಂಬ ಊರಿನಲ್ಲಿ. ಆಕೆಗೆ ಆಗ ಸುಮಾರು ಮೂವತ್ತು-ಮೂವತ್ತೈದು ವರ್ಷ ವಯಸ್ಸಿದ್ದೀತು. ನಂಗೆಲಿ ತುಂಬ ಸುಂದರಿ ಎಂಬ ಹೆಸರಿತ್ತು.
ಆಕೆಯ ಗುಂಗುರು ಕೂದಲು ಮೊಳಕಾಲು ಮುಟ್ಟುತ್ತಿತ್ತಂತೆ. ಆಕೆಯ ಬಣ್ಣವೂ ಅಪರೂಪವೇ. ನಂಗೆಲಿ ತುಂಬ ಆರೋಗ್ಯ ಪೂರ್ಣವಾಗಿದ್ದು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವಳು. ಆಕೆಯ ಸಮಾಜದ ಜನ ಆಕೆಯನ್ನು ಅಪ್ಸರೆ ಎಂದೇ ಕರೆಯುತ್ತಿದ್ದರು. ನಂಗೆಲಿಗೆ ತನ್ನ ಸೌಂದರ್ಯದ ಬಗ್ಗೆ ಅಭಿಮಾನವೂ ಇತ್ತು. ಅದರೊಂದಿಗೆ ಮತ್ತೊಬ್ಬರ ಕಣ್ಣಿಗೆ ಆಹಾರ ಮಾಡುವ ವ್ಯವಸ್ಥೆಯ ಬಗ್ಗೆ ರೋಷವೂ ಇತ್ತು. ಆಕೆ ಈ ವ್ಯವಸ್ಥೆಯನ್ನು ಎದುರಿಸಿ ಸ್ವಾತಂತ್ರ್ಯವನ್ನು ಬಯಸಿದಳು.
ನಂಗೆಲಿ ಹೊರ ನಡೆದಾಗ ಎದೆಯ ಮೇಲೆ ಬಟ್ಟೆಯನ್ನು ಹೊದ್ದೇ ನಡೆದಳು. ಈ ವಿಷಯ ಬೆಂಕಿಯಂತೆ ಹರಡಿತು. ನಗರದ ಅಧಿಕಾರಿ ನಂಗೆಲಿಯ ಮನೆಗೆ ಎದೆ ತೆರಿಗೆಯನ್ನು ಹಾಕಲು ಧಾವಿಸಿದ. ಆಗ ನಂಗೆಲಿಯ ಗಂಡ ಕಂದಪ್ಪನ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿ ಜೋರು ಮಾಡಿ ತಕ್ಷಣವೇ ತೆರಿಗೆ ಕಟ್ಟುವಂತೆ ಆಗ್ರಹಿಸಿದ. ಆಗಿನ ಪದ್ಧತಿಯಂತೆ ತೆರಿಗೆಯನ್ನು ಬಾಳೆ ಎಲೆ ಹಾಸಿದ ತಟ್ಟೆಯ ಮೇಲೆ ಒಂದು ದೀಪದ ಹಿಂದೆ ಇಟ್ಟುಕೊಡುವುದು ವಾಡಿಕೆ.
ನಂಗೆಲಿ ಅಧಿಕಾರಿಗೆ ಒಂದು ನಿಮಿಷ ಕಾಯುವಂತೆ ತಿಳಿಸಿ, ಮನೆಯ ಒಳಗೆ ನಡೆದಳು. ಹಣ ತರಲು ಹೋಗಿರಬೇಕೆಂದು ಅಧಿಕಾರಿ ಭಾವಿಸಿದ. ಐದು ನಿಮಿಷಗಳ ನಂತರ ಎದೆಯ ಮೇಲೆ ಬಟ್ಟೆ ಹೊದ್ದುಕೊಂಡು ಬಂದ ನಂಗೆಲಿ ತಟ್ಟೆಯನ್ನು ಅಧಿಕಾರಿಯ ಮುಂದೆ ಇಟ್ಟಳು. ಅದನ್ನು ನೋಡಿ ಗಾಬರಿಯಾದ ಅಧಿಕಾರಿ ನಡುಗತೊಡಗಿದ, ಮನೆಯಿಂದ ಹೊರಗೆ ಓಡಿ ಬಿಟ್ಟ. ನಂಗೆಲಿ ಆ ತಟ್ಟೆಯಲ್ಲಿ ತನ್ನ ಎರಡೂ ಸ್ತನಗಳನ್ನು ಕತ್ತರಿಸಿ ಇಟ್ಟುಬಿಟ್ಟಿದ್ದಳು. ಕ್ಷಣದಲ್ಲೇ ನಂಗೆಲಿ ಕೂಡ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಆಕೆಯ ಸುತ್ತಮುತ್ತ ರಕ್ತದ ಕೋಡಿ ಹರಿದಿತ್ತು.
krupe : Prajavani 12 July 2011

Comments
Post a Comment