ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, August 16, 2011

ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ ....

ಕನಸಿನ ಕರಿ ಮೋಡಗಳು
ನುಂಗಿ ಮರೆಮಾಚಿದ ಕಾಮನಬಿಲ್ಲಿನಲ್ಲಿ....
ನನ್ನ ಒಲವ ಬಣ್ಣಗಳೂ ಇದ್ದವು,
ನಿನ್ನ ಮನಸಿನ ಆಕರ್ಷಣೆ ಅವನ್ನು ಅರಿವಿಲ್ಲದಂತೆ ಕದ್ದಿದ್ದವು/
ಕಣ್ಣಲ್ಲಿ ಪ್ರತಿಫಲಿಸಿದ ಕನಸಿನ ಮಳೆಬಿಲ್ಲಿನ ಸಪ್ತ ವರ್ಣಗಳು
ಮತ್ತೆ ಒಂದಾಗಿ ಕನಸಿನ ಮೋಡದಲ್ಲಿ ಲೀನವಾದವು,
ಮನಸಿನ ತಲೆಬಾಗಿಲಲಿ
ಬಿದ್ದ ನಿನ್ನ ಹೆಸರಿನ ಹೂರಂಗೋಲಿ...
ಬಾಡದಂತೆ ನಿತ್ಯ ಕನಸು ಹೊಸ ಹೂಗಳ ತಂದಲ್ಲಿ ಸುರಿಯುತಿದೆ
ಮೌನವಾಗಿ ಅನುಕ್ಷಣ ನಿನ್ನನೆ ಅದು ಕರೆಯುತಿದೆ//ನೋವಿನ ಸಾಗರದಾಚೆಗೆ
ಒಂದು ಸಂತಸದ ತೀರವಿದೆ...
ನೋವಿನ ತೊರೆಗೂ ಮೇಲೆ ನಲಿವಿನ ಪಾರವಿದೆ,
ನೀ ಬಂದರೆ ಬಾಳು ಸಂಭ್ರಮಿಸೋದು ಅಪಾರವಿದೆ/
ಸಂಶಯವಿಲ್ಲದೆ ಮನ ಮಾರ್ನುಡಿದ
ನಿನ್ನ ಹೆಸರಿನ ಹಿಂದೆ ನನ್ನವೆ ಆದ ಖಾಸಗಿ ಖುಷಿಗಳ ನಲಿವಿದೆ...
ಮೌನ ಎದೆ ಮಿಡಿತದ ಅವ್ಯಕ್ತ ಒಲವಿದೆ//


ಮನದ ಮನೆಯ ಹೊಸಿಲು ದಾಟಿದ ಭಾವಗಳು
ಬಂಧನದ ಹಂಗಿಲ್ಲದೆ ಸ್ವಚ್ಚಂದವಾಗಿ ವಿಹರಿಸುವಾಗ...
ಅದರ ಮೇಲೆ ಬಿದ್ದ ಒಲವ ಮಳೆ ನಿನ್ನೆದೆಯಲ್ಲಿ ಕಟ್ಟಿದ್ದ ಮೋಡಗಳದ್ದು,
ಕಣ್ಣೀರ ಹನಿಯೆಲ್ಲ ನಿನ್ನ ನೆನಪಿಗೆ ಹೊಳೆದಾಗ....
ಹರಿದಾಗ ನಾನೇಕೆ ಅಳಲಿ?
ಎದೆಯ ಪ್ರಾರ್ಥನೆ ಇದಿಷ್ಟೆ
ಮನಸೆಲ್ಲ ನಿನ್ನುಸಿರ ನೆನಪೆ ತುಂಬಿರಲಿ/
ಮುಗಿಲೆಲ್ಲ ಬರಿದಾಗಿ ಕನಸ ತಾರೆ ಮೂಡದೆ
ಎದೆಯೆಲ್ಲ ಬರಡಾಗಿ ನಿನ್ನ ಒಲವ ಕಾಣದೆ...
ಎದೆ ಪಿಸು ನುಡಿದ ಆಕಾಂಕ್ಷೆಗಳ ಹರಕೆಗಳೆಲ್ಲ,
ಒಂದೊಂದಾಗಿ ಕನಸಿನರಮನೆಯ ಹೊಸ್ತಿಲು ದಾಟಿದವು
ನಿನ್ನೆದೆ ವಿಳಾಸದ ಕರೆಗಂಟೆ ತಂತಿ ಮೀಟಿದವು//ಹೇಗೆ ಹೇಳಿದರೂ ಭಾವಗಳ ಬಯಕೆ ಬದಲಾಗೊಲ್ಲ
ಮನಸಿನ ರಾಗಗಳ ಲಯ ಬೇರೆ ಮೂಡೋಲ್ಲ....
ಬದುಕು ಒಂದೆ,
ಹಾಗೇನೆ ಬದುಕಲ್ಲಿ ಬಂದ ನೀನೂನು!/
ಮನಸಿನ ಬಳ್ಳಿ ನಿನ್ನ ನಗುವಿನ ಗೊಬ್ಬರದಾಸರೆ ಸಿಗದೆ
ಬರಗಾಲಕ್ಕೆ ಸಿಕ್ಕ ತೆಂಗಿನಂತೆ ಸೊರಗಿ ಹೋಗಿದೆ....
ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ
ಕನಸಿನ ಬೀಜಗಳನ್ನೆ ಬಿತ್ತಿ...ನೆಮ್ಮದಿಯ ಚಿಗುರನ್ನ ಕಾಣುವ ನನ್ನ ಹಂಬಲ,
ನಿನ್ನ ಸಮ್ಮತಿಯಿಲ್ಲದೆ ಕರಗಿ ಹೋಗಿದೆ//

No comments:

Post a Comment