ಕುಂಬಾರಕಿ ಈಕಿ ಕುಂಬಾರಕಿ

ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಂಹಾಂಡವೆಲ್ಲ ತುಂಬಿಕೊಂಡಿರುವ

ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನು ಹಣಿಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ

ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯಾನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡೂವಾಕಿ

ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗಿ ಓಯ್ದು ಮಾರುವಾಕಿ

ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ವಸುಧೆಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ

-ಶಿಶುನಾಳ ಶರೀಫ್

(ಕಾರಂಜಿ ಸಿನಿಮಾದಲ್ಲಿ ಈ ಹಾಡು ತುಂಬ ಸೊಗಸಾಗಿ ಮೂಡಿಬಂದಿದೆ.)

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು