ಪಲಾವ್ ತಿಂದು ಪುಕ್ಕಟೆ ಪ್ರತಿಭಟನೆ...ಅಮರಣಾಂತ!



ಬೂ ಸಿ ಯ ಕರೆ ಕೊಟ್ಟ "ಭ್ರಷ್ಟಾಚಾರ ವಿರೋಧಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ"ಕ್ಕೆ ಸ್ವತಹ ಬೂಸಿಯ ಪಿಳ್ಳೆ ನೆವ ತೆಗೆದು ಚಕ್ಕರ್ ಕೊಟ್ಟು ಪರಾರಿಯಾಗಿದ್ದರೂ ಅವರ ಶಿಷ್ಯಗಣ ಗುರುವಾಕ್ಯ ಪರಿಪಾಲನೆಗಾಗಿ ಬೆಳಗ್ಯೆಯೇ ಮನೆಯಲ್ಲಿ ಹೊಟ್ಟೆ ಬಿರಿಯ ಟಿಫನ್ ಮುಗಿಸಿ ಗಾಂಧಿ ಪ್ರತಿಮೆಯ ಮುಂದೆ ತಮ್ಮ ಚೇಲಾ ಪಡೆಗಳೊಂದಿಗೆ ತೇಗುತ್ತಲೇ ಬಂದು ಝಾಂಡಾ ಊರಿಯೆ ಬಿಟ್ಟಿತು...ರಸಿಕ ಚಕ್ರವರ್ತಿ ರೇಣು,ಪೋಲಿ ಪುಟ್ಟ,ಗೋಲ್ ಮಾಲ್ ಗೋಪಾಲಕೃಷ್ಣ,ಓ ಸಿ ವಿಶ್ವನಾಥ,ಉಂಡ್ಫೆನಾಮ ನಿರಾಣಿ,ಸ್ತ್ರೀ ರಾಮಚಂದ್ರೆ ಗೌಡ,ಸರ್ವರ್ ಸೋಮ ಹೀಗೆ ರಾಜ್ಯಕ್ಕೆ ಒಕ್ಕರಿಸಿಕೊಂಡ ಎಲ್ಲಾ ಶನಿಗಳೂ ಅಲ್ಲಿಗೆ ಬಂದು ಎರಡು ಘಂಟೆ ಬೀಡಿ ಸೇದಿ,ಪಾನ್ ಹಾಕಿ ನಡುನಡುವೆ ಚೂರ್ ಕೂಗಿ ಕಡೆಗೆ ಬಂದ ಬಿಟ್ಟಿ ಪಲಾವ್ ತಿನ್ನೋಕೂ ಕಚ್ಚಾಡಿ ಎರಡೆ ಎರಡು ಘಂಟೆಯೊಳಗೆ ತಮ್ಮ ಅಮರಣಾಂತ ಉಪವಾಸವನ್ನ ಖೈದು ಮಾಡಿ ಎಂ ಜಿ ರೋಡಿನ ಬಾರುಗಳತ್ತ ನಗುನಗುತ್ತಲೇ ಹೆಜ್ಜೆ ಹಾಕಿದರು.ಗುಂಪಿನಲ್ಲಿ ಬೀಜದ ಹೋರಿಯಂತೆ ಕಂಗೊಳಿಸುತ್ತಿದ್ದ 'ರಸಿಕ'ರೇಣುವನ್ನ ಹತ್ತಿರಕರೆದು ಅವನ ಅರ್ಜೆಂಟ್ ಅಪ್ಪಾಜಿ ಯಾಕೆ ಬರಲಿಲ್ಲ ಎಂದು ಗುಟ್ಟಾಗಿ ಪ್ರಶ್ನಿಸಲಾಗಿ ;ಅವನು ತನ್ನ ಎಂದಿನ ಗಟ್ಟಿ ಗಂಟಲಲ್ಲೇ "ನೋಡಿ,ಮಾನ್ಯ ಅಪ್ಪಾಜಿ ಯಡಿಯೂರಪ್ಪನವರು ದೊಡ್ಡ ಜನನಾಯಕ.ಒಂದ್ ವೇಳೆ ಅವರೇನಾದ್ರೂ ಇಲ್ಲಿಗೆ ಬಂದಿದ್ರೆ ಇಡೀ ಎಂ ಜಿ ರೋಡು ಟ್ರಾಫಿಕ್ ಜಾಮ್ ಆಗಿ ಜನ ದಿನದ ಬ್ರೆಡ್ಗೆ ಕಣ್ ಕಣ್ ಬಿಡಬೇಕಿತ್ತು?!" ಎಂಬ ಭೀಕರ ಉತ್ತರ ಬಂದದ್ದೆ ಪ್ರಶ್ನಿಸಿದ ನನಗೆ ಮೂರ್ಛೆ ಹೋಗುವಂತಾಯ್ತು....

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು