ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, August 16, 2011

ವಿಧಿ ವಿಪರೀತ...!




ನೆನ್ನೆ ದೇಶದಾದ್ಯಂತ ನಡೆದ ಸ್ವಾತಂತ್ರ ದಿನದ ಆಚರಣೆಯನ್ನ ಗಮನಿಸಿದಾಗ ಇದೊಂತರ ಅಂಗವಿಕಲ ಮಗುವಿಗೆ ಸಿಂಗಾರ ಮಾಡಿ ಮುದ್ದಿಸಿದಂತೆ ಕಾಣಿಸಿತು.ಮಗುವಿಗದರಿಂದ ಸುಖವಿಲ್ಲ ;ಮುದ್ದಿಸೋ ಮಂದಿ ಬಿಡೋಲ್ಲ.ಒಟ್ಟಿನಲ್ಲಿ ಮಗುವಿಗೆ ಭರ್ತಿ ಹಿಂಸೆ ಹೀಗಿತ್ತು...ಏನೋ ಒಂಥರಾ 'ಡ್ರೈ' ಸರಕಾರಿ ಆಚರಣೆ.

ಯಾವೊಬ್ಬ ನಾಗರೀಕನೂ ಮನಸಪೂರ್ತಿ ಸಂಭ್ರಮಿಸಿ ಸ್ವಯಂ ಸೂರ್ತಿಯಿಂದ ಪಾಲ್ಗೊಳ್ಳದ ಈ ಸರಕಾರಿ ಸಂಭ್ರಮದಲ್ಲಿ ಮುಖ್ಯ-ಪ್ರಧಾನ "ಕಂತ್ರಿಗಳು" ಧ್ವಜಾರೋಹಣ ಮಾಡುತ್ತಿದ್ದರೆ ಅವರ ಒತ್ತಾಯದ ಭಾಷಣ ಭೀಕರತೆಗೆ ಬಲಿಯಾದದ್ದು ಅನಿವಾರ್ಯ ಪ್ರೇಕ್ಷಕರಾದ ಶಾಲಾ ಮಕ್ಕಳು! ಡೆಲ್ಲಿಯಲ್ಲಂತೂ ಪರಿಸ್ಥಿತಿ ಇನ್ನೂ ಕರುಣಾಜನಕವಾಗಿತ್ತು,ಬಾಲವಿಲ್ಲದ (ಸ್ವಂತ ಬಲದ ಮೇಲೆ ನಾಲ್ಕು ಮಾತಾಡುವ ಬಲವೂ ಇಲ್ಲ!) ಸಿಂಗ ಅದ್ಯಾರೋ ಬರೆದು ಕೊಟ್ಟ ಭಾಷಣ ಕುಟ್ಟುತ್ತಿದ್ದರೆ ಅಪರೂಪಕ್ಕೆ ಎಡೆಬಿಡದೆ ಸುರಿದ ದೆಹಲಿ ಮಳೆಯಲ್ಲಿ ಒತ್ತಾಯದಿಂದ ಕೂಡಿ ಹಾಕಲ್ಪಟ್ಟ ಮಕ್ಕಳೆಲ್ಲ ಕಂಗಾಲಾಗಿದ್ದವು.ಒಂದೆಡೆ ಮುಗಿಲ ಮಳೆ-ಇನ್ನೊಂದೆಡೆ ಅದಕ್ಕಿಂತಲೂ ಭೀಕರವಾದ ಭಾಷಣದ ಮಳೆ! ಮಕ್ಕಳು ನಿಜಕ್ಕೂ ತೋಯ್ದು ತೊಪ್ಪೆಯಾಗಿದ್ದವು.

ಸುತ್ತಲೂ ಭ್ರಷ್ಟಾಚಾರ-ಜಾತೀಯತೆ-ಹೊಲಸು ರಾಜಕೀಯ-ಸ್ವಜನ ಪಕ್ಷಪಾತ ಸಾಮಾನ್ಯ ಜನರನ್ನ ಹತಾಶರನ್ನಾಗಿಸುತ್ತಿರುವಾಗ ಈ ಹುಸಿ ಆಚರನೆಗಳನ್ನ ಸಾರ್ವಜನಿಕ ಖಜಾನೆಯ ಖರ್ಚಿನಲ್ಲಿ ನಿಜಕ್ಕೂ ನಡೆಸಲೇ ಬೇಕ? ಪ್ರಜಾಪ್ರಭುತ್ವ ಶ್ರೇಷ್ಠ ಅಂದ ಮಾತ್ರಕ್ಕೆ ಅದರಲ್ಲಿ ಅಹಿತಕಾರಿ ಅಂಶಗಳೇ ಇಲ್ಲ ಅಂತೇನಿಲ್ಲ.ಬ್ರಿಟನ್ ನಲ್ಲಿ ಇತ್ತೀಚಿಗೆ ಭುಗಿಲೆದ್ದ ನಾಗರೀಕ ದಂಗೆಯೆ ಅದಕ್ಕೆ ಸಾಕ್ಷಿ,ಇಂದು ಬ್ರಿಟನ್-ನಾಳೆ ಖಂಡಿತ ಭಾರತ.

ಇದಕ್ಕೆಲ್ಲ ತುಪ್ಪ ಸುರಿಯುವಂತೆ ಸರಕಾರ ಇಂದು ಸ್ವಯಂ ಸ್ಪೂರ್ತಿಯಿಂದ ದೇಶದ ಬಹುಪಾಲು ಮಂದಿ 'ಜನ ಲೋಕಪಾಲಕ್ಕೆ' ಆಗ್ರಹಿಸಿ ಅಣ್ಣಾಹಜಾರೆಯ ನೇತೃತ್ವದಲ್ಲಿ ಎಬ್ಬಿಸಿರುವ ಶಾಂತ ಸಮರ ಕಹಳೆಗೆ ದಬ್ಬಾಳಿಕೆಯ ಉತ್ತರ ಕೊಟ್ಟಿದೆ.ಜನ ಮೆಚ್ಚಿದ್ದು ಸರಕಾರಕ್ಕೆ ಬೇಡ-ಸರಕಾರಕ್ಕೆ ಹುಚ್ಚಿರೋದರಲ್ಲಿ ಜನಕ್ಕೆ ಯಾವ ಆಸಕ್ತಿಯೂ ಇಲ್ಲ! ಇನ್ನು ಆಳುವ ಪಕ್ಷದ ಸಾಕಿದ ನಾಯಿಗಳಂತಹ ಮನೀಶ್ ತಿವಾರಿ,ದಿಗ್ವಿಜಯ್ ಸಿಂಗ್,ಅಭಿಷೇಕ್ ಮನು ಸಿಂಘ್ವಿಯಂತಹ ಮಂಗ್ಯಾಗಳು ಅಣ್ಣಾ ಸಾಚಾತನ-ಅವರ ಹೋರಾಟಕ್ಕೆ 'ವಿದೇಶಿ' (?) ಕುಮ್ಮಕ್ಕು,ಧನಸಹಾಯದ ಸ್ವಕಲ್ಪಿತ ಸುದ್ದಿಯನ್ನೆ ಪದೆಪದೆ ಊಳಿಟ್ಟು ತಮ್ಮ ಅರ್ಧ 'ವಿದೇಶಿ' ನಾಳಿನ ನಾಯಕನ ಕಾಲನ್ನ ಇವತ್ತೆ ನೆಕ್ಕುತ್ತ ತಮ್ಮದೆ ಧಾಟಿಯಲ್ಲಿ ಓಲೈಸುವ ಕಸರತ್ತು ನಡೆಸುತ್ತಿದ್ದಾರೆ.

ಕ್ಯೂ ನಾ ಹೋ ಮೇರ ಭಾರತ್ ಮಹಾನ್...

No comments:

Post a Comment