ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, November 12, 2013

ಉಮಾಶ್ರೀ ಚಿತ್ರೋತ್ಸವ : ನಟಿಯ ಆಂತರ್ಯ ಬದುಕಿನ ಯಾನ - ಶಂಕರ್ ಮಿತ್ರಾ ಶ್ರೀವಾಸ್ತವ್


ಬೆಂಗಳೂರಿನ ಉತ್ಸಾಹಿ ತಂಡ "ಕಾಜಾಣ " ಆಯೋಜಿಸಿದ್ದ ಉಮಾಶ್ರೀ ಚಿತ್ರೋತ್ಸವ ಇತ್ತೀಚೆಗಷ್ಟೇ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆಯಿತು .  ಬೇಲೂರು ರಘುನಂದನ್ ರವರ ನೇತೃತ್ವ ದಲ್ಲಿ ನಡೆದ ಮೂರು ದಿನದ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು . ಚಿತ್ರರಂಗದ ಗಣ್ಯರಾದ ಕೇಸರಿ ಹರವು , ರೇಖಾ ರಾಣಿ , ಆ ದಿನಗಳು ಚಿತ್ರ ನಿರ್ದೇಶಕ ಚೈತನ್ಯ , ಆದ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ , ಡಾ।। ನಿಕಿಲಾ  , ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ನಟಿ  ಉಮಾಶ್ರೀ ಯವರ ಚಿತ್ರ ಬದುಕಿನ ಬಗೆಗಿನ ಹೊರ ಒಳವುಗಳನ್ನ ಶಿಬಿರಾರ್ಥಿಗಳೊಡನೆ ಹಂಚಿಕೊಂಡರು  ಹಾಗೂ ಚರ್ಚೆ ನಡೆಸಿದರು . ಮೂರು ದಿನದ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರ ಕೊಟ್ರೇಶಿ ಕನಸು , ಕನಸೆಂಬ ಕುದುರೆಯನೇರಿ , ಗುಲಾಬಿ ಟಾಕೀಸ್ ಚಿತ್ರಗಳ ಪ್ರದರ್ಶನವನ್ನೂ ಕೂಡ ಕಾಜಾಣ ಆಯೋಜಿಸಿತ್ತು . ಒಬ್ಬ ನಟಿಯನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿರುವ ಈ ಚಿತ್ರೋತ್ಸವ ದೇಶದ ಮೊಟ್ಟ ಮೊದಲ ಪ್ರಯತ್ನ .  ಕಾಜಾಣದ ಮೊದಲ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ .








ಮೊದಲ ದಿನ ಕೇಸರಿ ಹರವು ರವರು ಉಮಾಶ್ರಿ ಯವರ ಆರಂಭದ ದಿನಗಳು ಬಗ್ಗೆ ಮಾತನಾಡುತ್ತಾ ಉಮಾಶ್ರೀ ಯವರ ರಂಗ ಭೂಮಿಯ ಬದುಕಿನ ವಿವಿದ ಆಯಾಮಗಳನ್ನು ಶಿಬಿರಾರ್ಥಿ ಗಳ ಮುಂದೆ ತೆರೆದಿಟ್ಟರು . ಆಕಸ್ಮಿಕತೆ ಗಿಂತ ಅನಿವಾರ್ಯತೆ ಉಮಾಶ್ರೀ ಯವರನ್ನು ರಂಗಭೂಮಿ ಯಿಂದ ಚಿತ್ರರಂಗಕ್ಕೆ ಕರೆದೊಯ್ಯಿತು ಎಂದು ತಿಳಿಸಿದರು . ಲೇಖಕಿ ನಿರ್ದೇಶಕಿ ನಿರ್ಮಾಪಕಿ ರೇಖಾ ರಾಣಿಯವರು ಉಮಾಶ್ರೀ ಯವರ ದ್ವಂದ್ವಾರ್ಥ ಚಿತ್ರಗಳ ಬಗ್ಗೆ ಮಾತನಾಡುತ್ತಾ ಉಮಾಶ್ರೀ ಹಾಗೂ ಎನ್ .ಎಸ್ . ರಾವ್ ರವರ ಕಾಂಬಿನೇಶನ್ ಚಿತ್ರಗಳು ಆ ಕಾಲದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದವು . ಸೂಕ್ಷ್ಮ ವಾಗಿ ಗಮನಿಸಿದಾಗ ಉಮಾಶ್ರೀ ಯವರ ಮಾತಿನಲ್ಲಿ - ಆಂಗಿಕ ಭಾವದಲ್ಲಿ ಪಾತ್ರ ತಾವಾಗುತ್ತಿದ್ದರು . ಆದರೆ ಮುಗ್ದತೆ ಮಾತ್ರ ಮುಖದಲ್ಲಿ ಸದಾ ಇರುತ್ತಿತ್ತು. ಎಲ್ಲ ಚಿತ್ರಗಳೂ ಎಲ್ಲ ಕಾಲದಲ್ಲೂ ಪ್ರೇಕ್ಷಕರನ್ನು ಮರಳು ಮಾಡಲು ಸಾದ್ಯವಿಲ್ಲ.  ದ್ವಂದ್ವಾರ್ಥ ಕೂಡ ಒಂದು ಕಲೆಯಾ ಪ್ರಾಕಾರವೇ ಎಂದು ಮಂಡಿಸಿದರು . ಕೆ ಎಂ ಚೈತನ್ಯ ರವರು ಉಮಾಶ್ರೀ ಯವರೊಡನೆ ತಮ್ಮ ಚಿತ್ರ ರಂಗದ ಅನುಭವವನ್ನೂ - ಕೊಟ್ರೇಶಿ ಕನಸು ಚಿತ್ರದ ಬಗ್ಗೆ ಚರ್ಚೆಯಲ್ಲಿ ಶಿಭಿರಾರ್ಥಿ ಗಳೊಡನೆ ಭಾಗವಹಿಸಿದರು.

ಎರಡನೇ ದಿನ ಕನಸೆಂಬ ಕುದುರೆಯನೇರಿ ಚಿತ್ರ ಪ್ರದರ್ಶನ ದ ನಂತರ ಕನಸೆಂಬ ಕುದುರೆಯನೇರಿ ಚಿತ್ರದ ಕಾದಂಬರಿಗಾರ ಅಮರೇಶ್ ನುಗಡೋಣಿ ಯವರೊಡನೆ ಚಿತ್ರದ ಬಗ್ಗೆ ಸಂವಾದ ವಿತ್ತು . ಶಿಬಿರಾರ್ಥಿಗಳೊಡನೆ ಮಾತನಾಡುತ್ತಾ ಅಮರೇಶ್ ರವರು ದೃಶ್ಯ ಮಾದ್ಯಮಕ್ಕೂ ಬರಹಕ್ಕೂ ಇರುವ ವ್ಯತ್ಯಾಸ ಮತ್ತು ಗಿರೀಶ್ ಕಾಸರವಳ್ಳಿ ಯವರು ಕೇವಲ ತಮ್ಮ ಸವಾರಿ ಕಾದಂಬರಿಯ ತಿರುಳನ್ನು ಮಾತ್ರ ಇಟ್ಟುಕೊಂಡು ಚಿತ್ರವನ್ನು ಪ್ರಸ್ತುತ ದಿನಗಳಿಗೆ ತೆರಿದಿಟ್ಟ ತಂತ್ರಗಳ ಬಗ್ಗೆ ಮಾತನಾಡಿದರು . ನಂಬಿಕೆಯ ಬದುಕಿನಲಿ ವಿಹರಿಸುವುದು ತಮ್ಮ ಕತೆಯಲ್ಲಿದೆ .. ಆದರೆ ಅದನ್ನು ಮೀರಿ ಬದುಕಲು ಸಾದ್ಯ ಎಂಬುದನ್ನು ಗಿರೀಶ್ ಕಾಸರವಳ್ಳಿ ಯವರು ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಅವರನ್ನು ಶಾಘ್ನಿಸಿದರು . ಉಮಾಶ್ರಿ ಯವರ ಬದುಕು ಆಂತರ್ಯ ರೂಪಾಂತರ ಗಳ ಬಗ್ಗೆ ಮಾತನಾಡಿದ ಅಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಯವರು ಉಮಾಶ್ರೀ ಯವರು ಆಂತರ್ಯದ ಮೂಲಕ ಪ್ರಕಟ ಗೊಳ್ಳುವ ಅವರ ಮನಸ್ಥಿತಿ ಬಗ್ಗೆ , ಅವರ ಪಾತ್ರಗಳ ಪರಕಾಯ ಪ್ರವೇಶ , ಉಮಾಶ್ರೀ ಯವರು ತಮಗರಿವಿಲ್ಲದಂತೆ ಪಾತ್ರಗಳ ಪರಕಾಯ ಪ್ರವೇಶ - ನಂತರ ಪಾತ್ರಗಳಿಂದ ಕಳಚಿಕೊಂಡು ಬರಿದಾಗುತ್ತಿದ್ದರು . ಮತ್ತೆ ಹೊಸ ಪಾತ್ರಗಳನ್ನ ತುಂಬಿಕೊಳ್ಳುತ್ತಿದ್ದರು . ಮತ್ತೆ ಬರಿದಾಗುತ್ತಿದ್ದರು . ಈ ತುಂಬಿ ಕೊಳ್ಳುವಿಕೆ . ಬರಿದಾಗುವಿಕೆಯೇ ಅವರನ್ನು ಉತ್ತುಂಗಕ್ಕೆ ಕರೆದೊಯ್ದಿದೆ . ಜೊತೆಗೆ ದುಃಖ ಪರಂಪರೆಯ ನಡೆ ಉಮಾಶ್ರೀ ಯವರಲ್ಲಿತ್ತು ದುಃಖ ದಲ್ಲಿ ಕಲಿತಷ್ಟು ಮನುಷ್ಯ ಸುಖದಲ್ಲಿ ಕಲಿಯುವುದಿಲ್ಲ ಎಂದು ಆಧ್ಯಾತ್ಮಕ ವಾಗಿ ಉಮಾಶ್ರೀಯವರ ಬೆಳವಣಿಗೆ ಬಗ್ಗೆ ತೆರೆದಿಟ್ಟರು . ಡಾ ।। ನಿಕಿಲಾ  ಪೋಷಕ ಪಾತ್ರಗಳಲ್ಲಿ ಉಮಾಶ್ರೀಯ ಬೆಳವಣಿಗೆ ಬಗ್ಗೆ ತಿಳಿಸಿದರು .

ಮೂರನೇ ದಿನ ಗಿರೀಶ್ ಕಾಸರವಳ್ಳಿ ಯವರ ಗುಲಾಬಿ ಟಾಕೀಸ್ ಚಿತ್ರ ಪ್ರದರ್ಶನ ದ ನಂತರ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರೊಡನೆ ಶಿಭಿರಾರ್ಥಿ ಗಳ ನೇರ ಸಂವಾದವಿತ್ತು . ಉಮಾಶ್ರೀ ಪ್ರಭುದ್ದ ನಟಿಯಷ್ಟೇ ಅಲ್ಲ ಒಳ್ಳೆ ಸೃಜನ ಶೀಲತೆ ಯುಳ್ಳ ನಟಿ ಹಾಗೂ ಅವರ ಪಾತ್ರಗಳ ಸೂಕ್ಮತೆ ಗಳನ್ನೂ ತಿಳಿಸಿದರು . ನಂತರ ಉಮಾಶ್ರೀ ಯವರೊಡನೆ ಶಿಭಿರಾರ್ಥಿಗಳ ನೇರ ಸಂವಾದ ವನ್ನು ಕಾಜಾಣ ತಂಡ  ಏರ್ಪಡಿಸಿತ್ತು . ಸಂವಾದದಲ್ಲಿ ಉಮಾಶ್ರೀ ಯವರು ತಾವು ಉಮಾದೇವಿ ಯಿಂದ ಉಮಾಶ್ರೀ ಯಾದ  ಬಗ್ಗೆ , ತಮ್ಮ ರಂಗ ಭೂಮಿ ಪಯಣ - ಸಿನಿ ಪಯಣವನ್ನು ಶಿಭಿರಾರ್ಥಿಗೊಡನೆ ಹಂಚಿಕೊಂಡರು . ಸಂವಾದದ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

 ಸಮಾರೋಪ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರೊಡನೆ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ , ನಿರ್ದೇಶಕ ಗಿರೀಶ್ ಕಾಸರವಳ್ಳಿ , ಚಿತ್ರ ಸಾಹಿತಿ ರೇಖಾ ರಾಣಿ , ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ,ಹಾಗೂರವರು ಭಾಗವಹಿಸಿದ್ದರು .

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ  ಉಮಾಶ್ರೀ ಯವರು ಚಿತ್ರರಂಗದಲ್ಲಿ ಪ್ರಿಯವಾಗುವ ನಾವುಗಳು ರಾಜಕೀಯದಲ್ಲಿ ಎಲ್ಲರಿಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದು ಅಸಾದ್ಯ . ತನ್ನ ಬದುಕನ್ನ ಕಟ್ಟಿ ಕೊಡಲು ರಂಗಭೂಮಿ ಮತ್ತು ಚಿತ್ರ ರಂಗ ಸಹಾಯ ಮಾಡಿದೆ ಮತ್ತೊಂದೆಡೆ ರಾಜಕೀಯ ಬೇರೆಯವರಿಗೆ ಸಹಾಯ ಮಾಡುವ ಅವಕಾಶ ನೀಡಿದೆ . ಹಿಂದಿನ ರಾಜ್ಯೋತ್ಸವ ಪ್ರಶಸ್ತಿಗಳು ಸಾಕಷ್ಟು ಜನರ ಟೀಕೆಗೆ ಒಳಗಾಗಿದ್ದವು . ಆದರೆ ಈ ವರ್ಷದ ಪ್ರಶಸ್ತಿಗಳು ಕಡಿಮೆ ಟೀಕೆಗೆ ಒಳಗಾಗಿದ್ದಾವೆಂದು ಹೆಮ್ಮೆ ಯಿಂದ ನುಡಿದರು .

ಸಚಿವರಾದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಉಮಾಶ್ರೀ ಚಿತ್ರಗಳು ಸಾಹಿತ್ಯದ ಹೊರತಾಗಿ ಮನರಂಜನಾತ್ಮಕ ಮಾಧ್ಯಮ ಗಳಿಂದಲೂ ಪರಿವರ್ತನೆ ಸಾದ್ಯ ಎಂಬುದನ್ನು ನಿರೂಪಿಸಿದ್ದಾವೆಂದು
ತಿಳಿಸಿದರು .

ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು ಸಿನಿಮಾ ಮಾಧ್ಯಮ ಕೇವಲ ಮನರಂಜನೆಗೆ ಸೀಮಿತ ವಾಗಿರದೇ ಸಮಾಜವನ್ನು , ಸಮಾಜದ ಒಳ ಹೊರವುಗಳನ್ನು ತೆರೆದಿಡುವ ಕನ್ನಡಿಯಾಗಬೇಕು ಎಂದರು .

ಚಿತ್ರಲೇಖಕಿ ರೇಖಾ ರಾಣಿಯವರು ಮಾತನಾಡಿ ಚಿತ್ರರಂಗಕ್ಕಿರುವ ಭೌದ್ದಿಕತೆ - ನೈತಿಕತೆ ಜೊತೆಗೆ ಸಮಸ್ಯೆ ಯನ್ನು ಅವಲೋಕಣ ಮಾಡಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವ ಬಗ್ಗೆ ಇಂತಹ ಶಿಬಿರಗಳು ನಿರಂತರವಾಗಿ ನಡೆಯ ಬೇಕು ಎಂದರು. 

ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ಮಾತನಾಡುತ್ತ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಬೆಳವಣಿಗೆಗೆ ಯುವಕರ ಪಾತ್ರ ಅಮೂಲ್ಯವಾದುದ್ದು . ಇವರು ಪ್ರತ್ಯೇಕ ದ್ವೀಪಗಳಾಗಿರದೆ ನಾಡು - ನುಡಿ - ಕನ್ನಡ  ಬೆಳಸುವ ಬೆಳಗಿಸುವ ದೀಪವಾಗಿರಬೇಕು ಎಂದು ನೆರೆದ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿದರು ಹಾಗೂ ಶುಭ ಹಾರೈಸಿದರು .

 ಕಾಜಾಣ ಬಳಗದ ಬೇಲೂರು ರಘುನಂದನ್ ಶಿಬಿರದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸುತ್ತ ಇದು ಕೊನೆಯಲ್ಲ ... ನಿರಂತರ ಎಂದರು .


ಶಂಕರ್ ಮಿತ್ರಾ ಶ್ರೀವಾಸ್ತವ್


http://newskannada.com/karavaliinner.php?news=rs&nid=8243

No comments:

Post a Comment