ಮದುವೆಯ ಮುಂಚೆ - ನಂತರದಲ್ಲಿ ಗಂಡಿನ ಸ್ಥಿತಿ

ಮದುವೆಯ ಮುಂಚೆ - ನಂತರದಲ್ಲಿ ಗಂಡಿನ ಸ್ಥಿತಿ,

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮದುವೆ ಆಗಲೇ ಬೇಕು ಅಂದಾಗ ಮಾತ್ರ ಜೀವನ ಸಂಪೂರ್ಣ ಆಗುತ್ತದೆ. ಇಲ್ಲವಾದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ.  ಈ ರೀತಿಯಾಗಿ ಯಾವ ಪುಣ್ಮಾತ್ಮ ಸ್ವರ್ಗಕ್ಕೆ ಹೋಗಿ ಹಿಂದಿರುಗಿದವನು ಹೇಳಿದನೋ ಗೊತ್ತಿಲ್ಲ, ಆದರೆ ನಮ್ಮ ಸಮಾಜದಲ್ಲಿ. ಮದುವೆ ಮಾತ್ರ ಕಡ್ಡಾಯ ಎಂಬತಾಗಿರುವುದು. ಮಾನವ ಯೋಚಿಸಲು ಅರ್ಹತೆ ಇರುವ ಪ್ರಾಣಿ, ಅದಕ್ಕಾಗಿ ವಂಶವನ್ನು ವೃದ್ದಿಸಲು. ಪ್ರಾಯಕ್ಕೆ ಬಂದ ಯವಕ-ಯುವತಿಯರು ತಮ್ಮ ಮೈಥುನವನ್ನು ಈಡೇರಿಸಕೊಳ್ಳಲು ಮದುವೆ ಎಂಬ ಸಂಪ್ರದಾಯ ಸೃಷ್ಠಿಯಾಯಿತು ಎಂಬುದು ನನ್ನ ಮಟ್ಟಿನ ತಿಳುವಳಿಕೆಯ ಮಾತು. ಅದೇನೆ ಇರಲ್ಲಿ ಇಲ್ಲಿ ನಾವು ಯೋಚಿಸುತ್ತಿರುವುದು ಗಂಡು ಜಾತಿಯಲ್ಲಿ ಹುಟ್ಟಿದ ಮನುಷ್ಯನಲ್ಲಿ  ಮದುವೆಯ ಮುಂಚೆ,  ನಂತರ ಮತ್ತು ಮಕ್ಕಳಾದ ನಂತರ ಹೇಗೆ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ, ಅದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆಯಾಗಿರುವುದು.
ಮದುವೆಗೆ ಮುಂಚೆ ವೀರ
ಮದುವೆ ಆದ ಮೇಲೆ ಗಂಭೀರ
ಮಕ್ಕಳಾದ ಮೇಲೆ ಫಕೀರ!
ಈ ಮಾತು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕುಮಟಾ ತಾಲ್ಲೂಕು ಕೋಡ್ಕಣಿಯ ಎನ್ಕೆ ನಾಯ್ಕರು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಪದೇ ಪದೇ ಹೇಳುತ್ತಿದ್ದರು. ಬಹುಶ: ಮದುವೆಯ ಅವರ ಅನುಭವವೇ ಆ ರೀತಿ ಮಾತಿನಲ್ಲಿ ಹೊರಹೊಮ್ಮಿತಾ ಅಥವಾ ಓದಿದ ಹೇಳಿಕೆಯೋ ನನಗೆ ಗೊತ್ತಿಲ್ಲ. ಆದರೇ ಆ ವಿಚಾರದ ಬಗ್ಗೆ ನಾನು ನನ್ನ ಸುತ್ತ ಮುತ್ತಲಿನ ವೀರ, ಗಂಭೀರ, ಫಕೀರರೊಂದಿಗೆ ಮಾತನಾಡಿದಾಗ 90% ಕ್ಕೆ ಹೆಚ್ಚು ಜನರು ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವುದು ಈ ಹೇಳಿಕೆಯ ಘನತೆಯನ್ನು ಹೆಚ್ಚಿಸಿರುವುದು.
 ಹೌದು ಈ ಬಗ್ಗೆ ಅಂದಿನಿಂದ ಮದುವೆಯ ಮುಂಚಿನ ಮದುವೆ ನಂತರದ ಮತ್ತು ಮದುವೆ ಆಗಿ ಮಕ್ಕಳಾದ ಮೇಲಿನ ಗಂಡಿನ ಸ್ಥಿತಿಯ ಬಗ್ಗೆ ನನಗೆ ತುಂಬಾ ಆಸಕ್ತಿ ಅವರು ನಡೆದುಕೊಳ್ಳುವ ರೀತಿ, ಅವರ ನಡವಳಿಕೆಯಲ್ಲಿ ಆಗುವ ಬದಲಾವಣೆ, ಜನರು ಅವರನ್ನು ನೋಡುವ ರೀತಿ ಈ ಎಲ್ಲವೂ ನಾವು ಬದುಕುತ್ತಿರುವ ಸಮಾಜದಲ್ಲಿ ಸಾಮಾನ್ಯವಾಗಿದ್ದರೂ ಈ ಬದಲಾವಣೆ ಇದಕ್ಕೆ ಪೂರಕವಾದ ಕಾರಣಗಳ ಹಂಚಿಕೊಳ್ಳುವುದು ಅಗತ್ಯವೆನಿಸುವುದು.
ಮದುವೆಗೆ ಮುಂಚಿನ ಗಂಡಿನ ಸ್ಥಿತಿ :  ವೀರರಾದವರು ಎಲ್ಲಿಗೆ ಹೋಗಲಿ, ಬರಲಿ ಏನೇ ಮಾಡಲಿ ಯಾರು ಕೇಳುವುದಿಲ್ಲ, ಮನೆಯ ಒತ್ತಡ ಇದ್ದರೂ ಅದು ಸ್ವಾತಂತ್ರ್ಯಕ್ಕೆ ಎಂದು ದಕ್ಕೆ ತರುವಂತಾಗಿರುವುದಿಲ್ಲ. ಬೇರೆ ಊರಿಗೆ ಹೋದ ವೀರ ಒಂದೆರಡು ದಿನ ತಡವಾಗಿ ಬಂದರು ಅಂತಹ ಪರಿಣಾಮ ಏನು ಬೀರುವುದಿಲ್ಲ. ಸ್ನೇಹಿತರೊಂದಿಗೆ ಹರಟೆ, ಸಂತೋಷ, ಪುಂಡಾಟಿಕೆ, ಹಲವಾರು ಹುಡುಗಿಯರೊಂದಿಗೆ ಓಡಾಟ, ಪಾಟರ್ಿ ಇವೆಲ್ಲವು ವೀರಸಮುದಾಯದ ಅವಿಭಾಜ್ಯ ಅಂಗವಾಗಿರುವುದು. ಮನಸ್ಸಿಗೆ ಬಂದ ಪ್ಯಾಶನ್, ಆಹಾರ ಸೇವನೆ ಇಲ್ಲಿ ಮಾತ್ರ ಸಾಧ್ಯ. ಯಾವುದೇ ಕೆಲಸವನ್ನು ಸಾಧಿಸುವ ಛಲ, ನೇರ ಮಾತು ವೀರರಿಗೆ ಮಾತ್ರ ಸಾಧ್ಯ ಅರ್ಥದಲ್ಲಿ ಜಗತ್ತನೆ ಗೆಲ್ಲಬಲ್ಲೆ ಎಂಬ ಆತ್ಮ ವಿಶ್ವಾಸ ಮತ್ತು ಎಲ್ಲರೂ ತನ್ನವರೆ ಎಂಬ ಭಾವನೆ ಈ ಸಮುಹದ ಹೆಚ್ಚಿನವರಲ್ಲಿ ಇರುವುದು.
ಇಂತಹ ಆತ್ಮವಿಶ್ವಾಸದಿಂದ ಇರುವ ವೀರರು  21 ವರ್ಷ ದಾಟಿದ ನಂತರ  ಅವರ ಮದುವೆಯ ಬಗ್ಗೆ ಒಬ್ಬರಲ್ಲ ಒಬ್ಬರೂ ಚಿಂತಿಸಲು ಪ್ರಾರಂಭಿಸುವರು. ಕೆಳಕಾಣಿಸಿದ ಕಾರಣಗಳಿಂದ ಅನಿವಾರ್ಯವಾಗಿ ವೀರರಾದವರು ಮದುವೆಗೆ ಸಿದ್ದರಾಗುವರು.
 ಮದುವೆ ಮಾಡಿದರೆ ಜವಬ್ದಾರಿ ಮುಗಿಯಿತು ಎಂದು ತಿಳಿದುಕೊಳ್ಳುವ ಪಾಲಕರು.  ಮನೆಯಲ್ಲಿ ಮಾಡಲು ಕೆಲಸವಿಲ್ಲದ ಬೇರೆಯವರ ಮನೆ ಬಗ್ಗೆ ಯೋಚಿಸುವ ಹಿರಿಯ ನಿರುದ್ಯೋಗಿಗಳು, ವಯಸ್ಸಾಗಿರುವುದೇ ಮದುವೆ ಆಗಿ ಮಕ್ಕಳು ಮಾಡಲು ಎಂದು ತಿಳಿದಿರುವ ಕೆಲವು ಯುವ ಸಮೂಹ,  ಬೇರೆಯವರ ಮನೆಯಲ್ಲಿ ಮದುವೆ ಆಯಿತಿ ಎಂದು ಮನೆಯಲ್ಲಿ ಮದುವೆ ಎರ್ಪಡಿಸುವವರು,  ಪರಿಸ್ಥಿತಿಯ ಒತ್ತಡದಿಂದ ಮದುವೆ. ಈ ರೀತಿಯ ಕಾರಣಗಳಿಂದ ಅನಿವಾರ್ಯ/ಅಗತ್ಯವೋ ಗೊತ್ತಿಲ್ಲ ವೀರರು ಮದುವೆ ಆಗುವರು. ಅಲ್ಲಿಗೆ ಮುಗಿಯುತು ಜೀವನ ಎಂಬ ಮಹಾಭಾರತದ ವೀರ ಅಧ್ಯಾಯ.
ಮದುವೆಯ ನಂತರದ ಸ್ಥಿತಿ : ಮದುವೆಯಾದ ಮೇಲೆ ಗಂಡಿನ ಮಾತು ನಡುವಳಿಕೆಯಲ್ಲಿ ಏನೇ ಚಿಕ್ಕ ಬದಲಾವಣೆ ಇದ್ದರೂ ಅದು ನಿರಂತರವಾಗಿ ಅವನೊಂದಿಗೆ ಇದ್ದ ತಂದೆ, ತಾಯಿ, ತಂಗಿ ಇವರಿಗೆ ತಕ್ಷಣ ತಿಳಿಯುವುದು. ಯಾವುದೇ ಅನುಮಾನ ಯಾರಿಗೂ ಬರದಂತೆ ಅಭಿನಯಿಸಬೇಕಾದ ಅಗತ್ಯ ವಿರುವುದು.
ಒಂದು ಮಾತಿದೆ “ಮದುವೆಯಾದ ಗಂಡಿನ ಸ್ಥಿತಿ ಇಸ್ಪೀಟ್ ಎಲೆಯ ಜೋಕರ್” ನಂತೆ ಈ ಬಗ್ಗೆ ಇಸ್ಪೀಟ್ ಬಗ್ಗೆ ತಿಳಿದಿರುವವರಲ್ಲಿ ಕೇಳಬಹುದು.
ಬೇರೆ ಮನೆಯಿಂದ ಬಂದ ಹೆಣ್ಣಿಗೆ ಬೇಸರವಾಗದಂತೆ ಪ್ರಭುದ್ದ ಗಂಡನಾಗಿ ಹೆಂಡತಿಯ ಜೊತೆ, ತಾಯಿ-ತಂದೆಯ ಮೇಲಿನ ಗೌರವಕ್ಕೆ ಚ್ಯುತಿ ಬರದಂತೆ ಪ್ರೀತಿಯ ಮಗನಾಗಿ, ಅಕ್ಕ ತಂಗಿಯರ ಜವಬ್ದಾರಿ ಅರಿತ ಅಣ್ಣ/ ತಮ್ಮನಾಗಿ, ನಟಿಸಬೇಕಾದ ಅಗತ್ಯವಿರುವುದು. ಈ ರೀತಿಯಾಗಿ ಎಲ್ಲರನ್ನು ಸಂಭಾಳಿಸುತ್ತಾ ಸಾಗುವುದು ನಿಜವಾಗಿ ಮದುವೆಯಾದ ಗಂಡಿನ ಬಹುಮುಖ್ಯವಾದ ಮೈಲಿಗಲ್ಲಾಗಿರುವುದು. ಒಂದು ಮಾತನಾಡಿದರೆ ಕಡಿಮೆ ಎರಡು ಮಾತನಾಡಿದರೆ ಹೆಚ್ಚು ಎಂಬಂತೆ ಇರುವುದು ಅವನ ಸ್ಥಿತಿ. ಒಟ್ಟಾರೆ ವೀರನಾಗಿದ್ದ ಯುವಕ ಅನಿವಾರ್ಯವಾಗಿ ಗಂಭೀರನಾಗಬೇಕಾಗುವುದು.
ಈ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಂಡಿನ ನೆಮ್ಮದಿ ಹಾಳುಗೆಡಹುತ್ತಿರುವಲ್ಲಿ ಮುಖ್ಯವಾಗಿ ನಮ್ಮ ಟಿ ವಿ ಧಾರವಾಹಿಗಳ ಪಾತ್ರ ಬಹು ಮುಖ್ಯವಾಗಿದೆ. ಬರುವ ಕೌಟುಂಬಿಕ ಧಾರವಾಹಿಗಳಲ್ಲಿ 90% ಅಧಿಕ ಅತ್ತೇ ಸೊಸೆ, ಸೊಸೆ ಮತ್ತು ಮನೆಯ ಮಗಳು ಇವರುಗಳ ಜಗಳ, ಕುಂತಂತ್ರ ಈ ವಿಚಾರವೇ ಹೆಚ್ಚಾಗಿರುವುದು. ಅದನ್ನು ನೋಡುವ ಮನೆಯ ಸದಸ್ಯರ ಮೇಲೆ ಧಾರವಾಹಿಗಳು ಅಪ್ರತ್ಯಕ್ಷವಾಗಿ ಪರಿಣಾಮ ಬೀರುತ್ತಲೇ ಇರುವುದು ಸಾಮಾನ್ಯವಾಗಿದೆ.
 ಗೆಳೆಯರೊಂದಿಗೆ ಹರಟೆ, ಪಾಟಿ೯, ತಿರುಗಾಟ ಇದಕ್ಕೆ ತೆರೆ ಬೀಳುವುದು, ನೇರ ಮಾತು ಕಡಿಮೆಯಾಗುವುದು, ಎಲ್ಲಿಗೆ ಹೋದರೂ ಸಂಜೆ ಮನೆಗೆ ಬರುವ ಅನಿವಾರ್ಯತೆ, ಯುವತಿಯರೊಂದಿಗೆ ಹೋಟೆಲ್, ಫಿಲ್ಮ ಎಂದು ಓಡಾಡುವ ಆಶೆ ಇದ್ದರು ಹೆಂಡತಿ ಭಯದಿಂದ ನಿರಾಕರಣೆ, ತಿರುಗಾಡಲು ಹೋಗುವುದಾದರೇ ಜೊತೆಗೆ ಹೆಂಡತಿ, ಕೆಲಸ ಮಾಡುವಲ್ಲಿ ಹೆಚ್ಚಿನ ಧ್ಯಾನ, ಕೇವಲ ಹಣಕ್ಕಾಗಿ ಹೆಚ್ಚಿನ ಕೆಲಸದಲ್ಲಿ ಆಸಕ್ತಿ, ತಿನ್ನುವುದರಲ್ಲಿ ಜಿಪುಣತನ, ಸ್ನೇಹಿತರೊಂದಿಗೆ ಒಟನಾಟ ಕಡಿಮೆಯಾಗುವುದು. ಕೇವಲ ಮನೆ ಮತ್ತು ಹೆಂಡತಿಯ ಮನೆಯವರ ಬಗ್ಗೆ ಯೋಚನೆ, ಹೆಂಡತಿಯಿಂದ ಅತಿಯಾದ ಗೌರವ ಇರುವುದು, ಧರಿಸುವ ಬಟ್ಟೆಯಲ್ಲಿಯೂ ಹೆಂಡತಿಯ ಪ್ರಭಾವ ಇರುವುದು.
ಈ ಗಂಭೀರ ಸ್ಥಿತಿಯೂ ಹೆಚ್ಚಿಗೆ ದಿನ ಮುಂದುವರೆಯುವುದಿಲ್ಲ. ಸಮಾಜವು ಸಹಾ ಹೆಚ್ಚಿಗೆ ಗಂಭೀರರನ್ನು ನೋಡಲು ಇಚ್ಛಿಸುವುದಿಲ್ಲ ಎಂದು ಅನಿಸುವುದು. ಮದುವೆ ಆಗಿ ಸರಿಯಾಗಿ 9 ತಿಂಗಳಿಗೆ ಮಕ್ಕಳಾದರೆ ಸರಿ, ಇಲ್ಲವಾದರೆ ಪುನ: ಎಲ್ಲರ ಪ್ರಶ್ನೆಗೂ ಉತ್ತರಿಸಬೇಕಾದ ಅಗತ್ಯತೆ, ಏನಾದರೂ ತೊಂದರೆ ಇದ್ದರೆ ಇಂತಹ ಡಾಕ್ಟರ ಹತ್ತಿರ ಹೋಗಿ, ಈ ದೇವರಿಗೆ ಹರಕೆ ಮಾಡಿ ಹೀಗೆ ಬಗೆ ಬಗೆಯ ಪುಕ್ಕಟೆ ಸಲಹೆಗಳನ್ನು ನೀಡುವವರು ಹೆಚ್ಚಾಗುವರು. ಈ ಎಲ್ಲಾ ಹೊರ ವ್ಯಕ್ತಿಗಳ ಒತ್ತಡ ಅಥವಾ ಮದುವೆ ಆಗಿರುವುದೇ ಮಕ್ಕಳು ಮಾಡಲು ಎಂದು ತಿಳಿದುಕೊಂಡು ಗಂಭೀರ ಸ್ಥಿತಿಯಲ್ಲಿರುವವರು ಆ ಸ್ಥಿತಿಯಿಂದ ಹೊರ ಬರಲು ಪ್ರಯತ್ನಿಸುವರು. ಸ್ವತ: ಇಚ್ಛೆಯಿಂದ ಅಥವಾ ಪರಿಸ್ಥಿತಿಯ ಒತ್ತಡವೋ ಒಟ್ಟಾರೆ ಮದುವೆ ಆದ ವರ್ಷದ ಒಳಗೆ ಮಕ್ಕಳನ್ನು ಪಡೆಯುವರು.  ಇಲ್ಲಿಗೆ ಮುಗಿಯಿತು ಜೀವನ ಎಂಬ ಮಹಾಭಾರತದ ಅಲ್ಪ ಕಾಲದ ಗಂಭೀರ ಅಧ್ಯಾಯ.

ಮದುವೆ ಆಗಿ ಮಕ್ಕಳಾದ ಮೇಲೆ ಸ್ಥಿತಿ : ಮದುವೆ ಆಗಿ ಮಕ್ಕಳಾದ ಮೇಲೆ ಅಲ್ಲಿಗೆ ಮುಗಿಲ್ಲಿಲ. ಹುಟ್ಟಿದ್ದು ಹೆಣ್ಣು ಆದ್ದರಿಂದ ಸತ್ತಾಗ ಕೊಳ್ಳಿ ಇಡಲು ಒಂದು ಗಂಡು ಬೇಕೆಂಬ ಒತ್ತಡ/ಆಶೆ, ಹುಟ್ಟಿದು ಗಂಡಾದರೆ ಮನೆಗೊಂದು ಲಕ್ಮೀ ಬೇಕೆಂಬ ಒತ್ತಡ/ಆಶೆ, ಇದನ್ನು ಈಡೇರಿಸವಲ್ಲಿ ಆಗುವ ವಿಫಲತೆ ಒಟ್ಟಾರೆ ಮದುವೆ ಆಗಿ ಮೂರು ವರ್ಷದಲ್ಲಿ 2 ಅಥವಾ 3 ಮಕ್ಕಳು ಮನೆಯಲ್ಲಿ ಓಡಾಡುತ್ತಿರುವರು. ಆ ವೇಳೆಗೆ ಗಂಡು ಮನೆಯಿಂದ ಪ್ರತ್ಯೇಕವಾಗಿರುವನು, ತಾನು ತನ್ನ ಹೆಂಡತಿ ಮಕ್ಕಳು ಬಿಟ್ಟು ಬೇರೆಯವರ ಯಾರ ಬಗ್ಗೆಯೂ ಚಿಂತಿಸುವುದಿಲ್ಲ,
ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಹೆಂಡತಿಗೆ ಪ್ರತ್ಯೇಕ ಮನೆಯ ಚಿಂತೆ, ಮಗನಿಗೆ ಬೈಕಿನ ಕನಸು, ಮಗಳಿಗೆ ನೆಕ್ಲೆಸ್ ಹುಚ್ಚು,  ಆದರೇ ಗಂಡಾದವನಿಗೆ ಮಗನ ಶಿಕ್ಷಣ, ಮಗಳ ಮದುವೆಯ ಚಿಂತೆ, ಈ ಎಲ್ಲ ಚಿಂತೆಗಳ ಮಧ್ಯೆ ದುಡಿಯವ ಕೈ ಒಂದು ತಿನ್ನುವವರು ನಾಲ್ಕು ಈ ಸ್ಥಿತಿಯಲ್ಲಿ ನಿತ್ಯ ಜೀವನ ಸಾಗಿಸುವ ಜವಬ್ದಾರಿ, ಎಲ್ಲಾ ಒತ್ತಡದಿಂದ  ಬಿಳಿಯಾಗುತ್ತಿರುವ ತಲೆಗೂದಲು, ಹೆಂಡತಿಯಿಂದ ಏಕವಚನ ಪ್ರಯೋಗ, ಸಾಲದ ಹೊರೆ, ಶರಾಬಿನ ಹವ್ಯಾಸ,  ಹಳೆಯ ಬಟ್ಟೆಗಳ ಬಳಕೆ, ಅಪ್ಪನ ಆಸ್ಥಿಯ ಬಗ್ಗೆ ಕಣ್ಣು, ಮಕ್ಕಳಿಂದಲ್ಲೂ ಬುದ್ದಿವಾದ, ಒಟ್ಟಾರೆ ಎಲ್ಲಾ ಇದ್ದೂ,  ಏನೂ ಇಲ್ಲದ ಓಡಾಡುತ್ತಿರುವ ಫಕೀರನಂತೆ ಆಗುವುದು ಗಂಡಿನ ಸ್ಥಿತಿ.
ಇಲ್ಲಿಯೂ ಸಹಾ ಪುಕ್ಕಟೆ ಸಲಹೆ ನೀಡಲು ಹಲವಾರು ಜನರು ಬರುವರು, ಮಗಳ ಮದುವೆ ಮಾಡು, ಯೋಜನೆ ಮಾಡಿ ಜೀವನ ಸಾಗಿಸಿದ್ದರೇ ಹೀಗೆ ಆಗುತ್ತಿರಲಿಲ್ಲ ಅದೂ ಇದೂ ಎಂದು ತಿಳುವಳಿಕೆ ಮತ್ತು ಅವನ ಮುಂದೆಯ ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸಿದ್ದ ಹೆಂಡತಿಯ ಬಗ್ಗೆ ಹೊಗಳಿಕೆ, ಈ ಎಲ್ಲವನ್ನು ಕೇಳಿ ಸಾಯಬೇಕು ಎನಿಸಿದರೂ ಸಾಯಲು ಇಷ್ಟವಿಲ್ಲದೇ, ಬದುಕಲು ಆಶೆಯಿಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ.
ಇದು ಜೀವನ ಎಂಬ ಮಹಾ ಭಾರತದ ನಿಣಾ೯ಯಕ ಅಧ್ಯಾಯ ಫಕೀರ ಅಧ್ಯಾಯ ಇದನ್ನು ತಕ್ಷಣ ಕೊನೆಗೊಳಿಸಲು ಆಗದ ಸ್ಥಿತಿ ಇರುವುದು.  ಇದರಲ್ಲಿ ಗೆದ್ದವನಿಗೆ ಆಯುಷ್ಯ ಹೆಚ್ಚು. ಆದರೇ ಇದರಲ್ಲಿ ಎಲ್ಲಾ ರೀತಿಯಿಂದಲ್ಲೂ ಗೆಲ್ಲವು ಎಂಬುದು 100% ಇಲ್ಲ. ಆದರೂ ಈಗೀನ ಅಂಕ ಪದ್ದತಿಯಂತೆ ಪಾಸು-ನಪಾಸು ಎನ್ನಬಹುದು. ಅದರ ಪರಿಣಾಮವನ್ನು ಫಕೀರರೇ ಹೇಳಬೇಕು ಹೊರತು ಬೇರೆಯವರು ಹೇಳಲು ಸಾಧ್ಯವಿರುವುದಿಲ್ಲ.
ಬಾಲ್ಯದ ನಂತರದ ದಿನದಲ್ಲಿ ಗಂಡುಗಳು ವೀರರಾಗಿರುವಾಗ ಹೆಣ್ಣಿನ ಬಗ್ಗೆ ಆಸಕ್ತಿ ಇರುವುದು ಸಹಜ, ಹಾಗೆಂದು ಆಸೆಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದರ  ಬಗ್ಗೆ ಯೋಚಿಸಿ.  ಏನೋ ಇಷ್ಟ ಅಥವಾ ಒತ್ತಡನೋ ಮದುವೆ ಆದ ಮೇಲೆ ಪರಸ್ಪರ ಅರ್ಥಮಾಡಿಕೊಂಡು ಮಕ್ಕಳನ್ನು ಪಡೆಯುವುದು ಯೋಜನೆ ಇರುವ ಮಾನವನಿಗೆ ಅಗತ್ಯವಾಗಿದೆ. ಆದರೇ ಮದುವೆ ಆದ 10 ತಿಂಗಳ ಒಳಗೆ ಮಕ್ಕಳಾಗುವುದು ಎಂದರೆ ಅದರಿಂದ ಸ್ಪಷ್ಟವಾಗುವುದು ಮದುವೆಯ ಉದ್ದೇಶ. ಏನೇ ಇರಲಿ ಮದುವೆ ಒತ್ತಡದಿಂದ ಆಯಿತು ಮಕ್ಕಳು  ಆಕಸ್ಮಿಕವಾಗಿ ಆಯಿತು ಕನಿಷ್ಠ ಮಕ್ಕಳ ಸಂಖ್ಯೆಯನ್ನು 1 ಅಥವಾ 2 ಕ್ಕೆ ಕಡಿಮೆ ಮಾಡಿದರೆ ಮುಂದೆ ಫಕೀರನಾದಾಗ ನಪಾಸಾಗುವ ಸ್ಥಿತಿಯಿಂದ ಬಚಾವಾಗಬಹುದು.

                                                                                                                                                ವಿವೇಕ ಬೆಟ್ಕುಳಿ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು