ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ

ಪಾರಿಜಾತದ ಹುಡುಕಾಟಕ್ಕೆ

ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....

ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!

ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ

ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.


ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ

ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
ಚೇತನ್ ಸೊಲಗಿ
ನೋಡಂಗೆ ಇಲ್ಲ
ಕೆಂಗುಲಾಬಿ ಹಂಗ ನೀನಿರಬೇಕಾದ್ರ

ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....

ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!

-ಚೇತನ್ ಸೊಲಗಿ, ಮುಂಡರಗಿ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು