Friday, November 22, 2013

ಕಾವ್ಯ-ಚಂದ್ರ…. - ಚೇತನ್ ಸೊಲಗಿ ,

ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
 ಚೇತನ್ ಸೊಲಗಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.

-  ಚೇತನ್ ಸೊಲಗಿ ,

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...