ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ - V R BHAT

ಕನ್ನಡನಾಡಿಗಾಗಿ ಯಾರ‍್ಯಾರು ಏನೆಲ್ಲಾ ಸೇವೆಮಾಡಿದರು ಎಂಬುದು ಬೇರೆ ವಿಷಯ.
ಕನ್ನಡ ನೆಲದಲ್ಲಿಯೇ ಅರಳಿದ ’ಅವಧಾನ’ ಕಲೆ ಮಾಸಿಹೋದಾಗ ಹೊಸದಾಗಿ ಅದನ್ನು ಪ್ರತಿಷ್ಠಾಪಿಸಿದವರು ಶತಾವಧಾನಿ ಡಾ| [’ರಾಗ’]ರಾ.ಗಣೇಶರು. ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ, ವಾಚಿಸಿದ್ದಾರೆ, ಪ್ರವಚಿಸಿದ್ದಾರೆ, ಉಪನ್ಯಾಸಗಳಂತೂ ಯಾರೂ ಮಾಡದಷ್ಟು ಹೇರಳ ಸಂಖ್ಯೆಯಲ್ಲಿ ಅವರಿಂದ ನಡೆದಿವೆ. ಅವರ 
ಪಾಂಡಿತ್ಯ ಕನ್ನಡ ಜನರಿಗೆ ಪರಿಚಯವಿರದ್ದಲ್ಲ; ಆದರೆ ಕರ್ನಾಟಕ ಸರಕಾರಕ್ಕೆ ಇನ್ನೂ ಅವರ ಪರಿಚಯವಿಲ್ಲ!! ಕೆಲವರು ಕೆಲವು ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಮಾತ್ರ ತೊಡಗಿಕೊಳ್ಳುತ್ತಾರೆ; ಗಣೇಶರದ್ದು ಹಾಗಲ್ಲ, ಕನ್ನಡದಲ್ಲಿ ಈಗಿರುವ ಪರಮೋಚ್ಚ ವ್ಯಾಖ್ಯಾನಕಾರರು ಮತ್ತು ಅತಿಶ್ರೇಷ್ಠ ವಿದ್ವಾಂಸರು ಎಂದರೆ ಗಣೇಶರೊಬ್ಬರೇ. ಅವರ ನೆನಪಿನ ಶಕ್ತಿಯಂತೂ ಸಾಗರದಷ್ಟು ಅಗಾಧ. ಪ್ರೀತಿಯಿಂದ, ಅಭಿಮಾನದಿಂದ ಹೇಳುವುದಾದರೆ ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ.




 V.r. Bhat

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು