Monday, June 27, 2011

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ....

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೊ ಅದು , ಎಂತಿರುವುದೊ ಅದು
ನೋಡಬಲ್ಲೆನೆ ಒಂದುದಿನ ಕಡಲನು ಕೂಡಬಲ್ಲೆನೆ ಒಂದುದಿನ . . . .

ಸಾವಿರ ಹೊಳೆಗಳು ತುಂಬಿ ಹರಿದರು ಒಂದೇಸಮನಾಗಿಹುದಂತೆ
ಸುನೀಲ ವಿಸ್ತರ ತರಂಗಶೋಭಿತ ಗಂಭಿರಾಂಬುಧಿ ತಾನಂತೆ
ಮುನ್ನೀರಂತೆ , ಅಪಾರವಂತೆ
ಕಾಣಬಲ್ಲೆನೆ ಒಂದುದಿನ,ಅದರೊಳು ಕರಗಲಾರೆನೆ ಒಂದುದಿನ . . . .

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೆ ನಾನು,ಕಡಲ ನೀಲಿಯೊಳು, ಕರಗಬಹುದೆ ನಾನು . . . .

-ಜಿ. ಎಸ್. ಶಿವರುದ್ರಪ್ಪ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...