ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, October 31, 2013

~pulse

ಅವಮಾನದ ಪರಿದಿ
ಹರಿದಿದೆ...
ಇನ್ನಾದರು
ಜೊಲ್ಲ ಸೂಸಿ
ನೆಕ್ಕಿ ನೆಲವಿಡಿದು
ಸತ್ತೋಗುವೆ...

ಸಾಕು ಅವಮಾನದ ಸನ್ಮಾನನನ.....

~pulse

~pulse

ಶಿವಪ್ರಸಾದ
brilliantbrainz@gmail.com
ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse
ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse

ಎನಗಿಂತ ಕಿರಿಯರಿಲ್ಲ:::

ಶಿವಪ್ರಸಾದ
brilliantbrainz@gmail.com
ಎನಗಿಂತ ಕಿರಿಯರಿಲ್ಲ:::

ಎನ್ನ ನೋವಿನ ಕಡೆಗೆ
ತನ್ನ ತಾ ನೇ ಮರೆತೆ...
ನಗುವ
ಒಂದಿಷ್ಟಾದರು ಹುಡುಕಿ
ನಡು ಉಳುಕಿ
ನಗ ಬಾರದಿತ್ತು
ಎಂದೆನಿಸಿ
ಮತ್ತೆ ಅವಮಾನಗೈದು
ಕೊನೆಗೆ 
ಉಳಿದು ತಳದಿ
ಅಳುವೆಂಬ ಹನಿ....

Wednesday, October 30, 2013

ನೆನಪಿನ ದೋಣಿಹಿಡಿದು...

ವ್ಯಕ್ತಿ ಗಮನಿಸಬೇಕಾದದ್ದು ಇದು -
ಕೆಲವೊಮ್ಮೆ ಈ ಸಲಿಲತೆಗಳು ನನ್ನ ಗ್ರಹಣಕ್ಕೆ ಬಂದುದೂ ಉಂಟು.
ನಮ್ಮ ಕಾಲೇಜಿನಲ್ಲಿ ಕೆಲವು ಸೃಜನಾತ್ಮಕ ಇಂಗ್ಲೀಷ್ ಸಿನಿಮಾ ತೋರಿಸುತಿದ್ದ ಕನ್ನಡ ಸಂಘದ ಎಲ್ಲರನ್ನೂದೂರುತಿದ್ದವರ ಪಾಡೂ ಹೀಗೇ ಆಗಿತ್ತು. ಸಾಹಿತ್ಯ ,ಸಾನಿದ್ಯ ಎಲ್ಲವೂ ಭಾವಕ್ಕೆ ಬಿಟ್ಟಿದ್ದು ಹೊರತು ಭಾಷೆಗೆ ಬಿಟ್ಟಿದ್ದಲ್ಲ.ಭಾಷೆಯ ಚೌಕಟ್ಟಿನಲ್ಲಿ ಬದುಕುವವರಿಗೆ ಭಾಷೆ ಒಂದು ವಿಷ ಸದ್ಯಕ್ಕೆ ಅಮಲೇರಿಸುವ ಮದ್ದು ಅಷ್ಟೆ.ಬರಿಯ ನೀರು ಕುಡಿವವರಿಗೆ ಸಾರದಾಚೆಯ ಉಪ್ಪೂ ಸಹ ಕಹಿಯಾಗಿ ರುಚಿಸುತ್ತದೆ.
ನೆನಪಿನ ದೋಣಿಯಿಂದ-
ಬಿ.ಎಂ.ಶ್ರೀ ರವರು ಆಗ ತುಂಬ ಬಿಗುಮಾನದ ವ್ಯಕ್ತಿಯಾಗಿದ್ದರೆಂದು ನನ್ನ ಭಾವನೆ. ವೇಷ ಭೂಷಣ ಮಾತುಕತೆ ಎಲ್ಲದರಲ್ಲಿಯೂ ಭಾರತೀಯತ್ವಕ್ಕಿಂತಲೂ ಆಂಗ್ಲೇಯತ್ವವೆ ಅವರ ವ್ಯಕ್ತಿತ್ವದ ಹೊರಭಂಗಿಯಾಗಿತ್ತು.ಸಾರ್ವಜನಿಕ ವೇದಿಕೆಯಲ್ಲಾಗಲಿ ಕಾಲೇಜಿನ ಸಂಘ ಸಂಸ್ಥೆಯಲ್ಲಾಗಲಿ ಕಡೆಗೆ ಕಾಲೇಜು ವಿದ್ಯಾರ್ಥಿಗಳೋಡನೆಯೆ ಆಗಲಿ ಕನ್ನಡದಲ್ಲಿ ಮಾತನಾಡಿ ವ್ಯವಹರಿಸುವುದು ತಮ್ಮ ಅಂತಸ್ಥಿಗೆ ತಕ್ಕುದಲ್ಲವೆಂಬಂತೆ ವರ್ತಿಸುತಿದ್ದರು.ಮುಂದೆ ಕೆಲವು ವರ್ಷಗಳಲ್ಲಿಯೇ ಅವರು ಕನ್ನಡದ ಕಣ್ವರಾದ ಮೇಲೆ ಎಷ್ಟು ತೆರೆದ ಹೃದಯರಾದರೋ ಎಷ್ಟು ಸರಳ ಮನಸ್ಕರಾದರೋ ಎಷ್ಟು ಸಾಮಾನ್ಯರೊಡನೆ ಸಾಮಾನ್ಯರಾಗಿ ಹೊಕ್ಕುಬಳಸಲು ಕಲಿತರೋ ಅಷ್ಟೂ ತದ್ವಿರುದ್ದರಾಗಿ ತೋರುತ್ತಿದ್ದರಾಗಿ ತೋರುತ್ತಿದ್ದರು ಆಗ!
ಶಿವಪ್ರಸಾದ್,ಬೆಂಗಳೂರು
ಅಪ್ಪನ ನೇಗಿಲ
ನಾ ಹೊತ್ತೆ
ಅಮ್ಮನ ಆಸೆಯ
ನಾ ಹೆತ್ತೆ...

ಇನ್ನೆದುರು
ಅವನಿದ್ದರೂ
ಸಾವೇ,..
ನನ್ನಿಚ್ಚೆಯ
ಮಚ್ಚಿಗೆ......
ಶಿವಪ್ರಸಾದ,ಬೆಂಗಳೂರು
ಧರ್ಮವೆಂಬ ದಾರಿಯೊಳಗೆ ::::
ಶಿವಪ್ರಸಾದ್,ಬೆಂಗಳೂರು

ದಯದ ಧರ್ಮದ ಮುಂದೆ
ದಾರಿ ಹೋಕರು ಇವರು
ಒದ್ದು ಬಿಟ್ಟಾನೂ ಬಸವ
ಇನ್ನಿವರಾಟಕೆ....

~pulse...

ಲೇಖನ - ರಾಘವೇಂದ್ರ ಅಡಿಗ ಎಚ್ಚೆನ್.


ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ,
    ಕಳೆದ ತಿಂಗಳಲ್ಲಿ  ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ್ಶ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮಔಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
    ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.
    ಸ್ನೇಹಿತರೇ, ಚಿದಾನಂದಮೂರ್ತಿಗಳೇ ಹೇಳಿಕೊಳ್ಳುವಂತೆ- “‘ನನ್ನ ಹಲವು ವರ್ಷಗಳ ನಿರಂತರ ಸಂಶೋಧನೆ ಕಾರ್ಯದಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಶ್ರಮ, ಆಂತರಿಕ ಹತಾಶೆ, ಕಾತುರಗಳನ್ನು ಅನುಭವಿಸಿದ್ದೇನೆ ಹಲವು ರೋಮಾಂಚಕ ಕ್ಷಣಗಳನ್ನು ಅನುಭವಿಸಿದ್ದೇನೆ.......... ಈ ಕಿರು ಕೃತಿಯನ್ನೋದಿದವರಿಗೆ ನಮ್ಮ ಹಿಂದಿನ ಕವಿಗಳು, ಮಹನೀಯರು, ಹೃದಯಕ್ಕೆ ಹತ್ತಿರವಾಗುತ್ತಾರೆ, ಆಪ್ತರಾಗುತ್ತಾರೆ’’.
    ಈ ಪುಸ್ತಿಕೆಯಲ್ಲಿ ಒಟ್ಟು ಹದಿನೇಳು ಅಧ್ಯಾಯಗಳಿದ್ದು ಮೊದಲನೇ ಅಧ್ಯಾಯವು ‘ಪ್ರವೇಶಿಕೆ’. ಇದರಲ್ಲಿ ಚಿದಾನಂದಮೂರ್ತಿಗಳು ತಾವು ಕನ್ನಡ ನಾಡಿನ ಶ್ರೇಷ್ಠರ ಈಗಿನ ವಂಶಸ್ಥರನ್ನು ಹುಡುಕಲು ಸಿಕ್ಕ ಸ್ಪೂರ್ತಿಯ ಕುರಿತಾಗಿ ಹೇಳಿಕೊಂಡಿದ್ದಾರೆ. ಅವರು ಇಂಗ್ಲೆಂಡಿಗೆ ಭೇಟಿ ಕೊಟ್ಟಾಗ ಅಲ್ಲಿನ ಮಹಾಕವಿ ವರ್ಡ್ಸ್ ವರ್ತನ ಮನೆಗೆ ಹೋದಾಗಿನ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಇನ್ನು ಎರಡನೇ ಅಧ್ಯಾಯದಿಂದ ಹದಿನೇಳನೆ ಅಧ್ಯಾಯದವರೆಗೆ ಪಂಪನಿಂದ ಮೊದಲ್ಗೊಂಡು ನಾನ್ಯದೇವ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರವ್ಯಾಸ, ವಿಜಯನಗರದ ದೊರೆಗಳು, ಚಾಮರಸ, ಸೋದೆ, ಕೆಳದಿಯ ಅರಸರು, ಕಿತ್ತೂರು ರಾಣಿ ಚೆನ್ನಮ್ಮ, ಕೊಡಗು ಮತ್ತು ಮೈಸೂರಿನ ಅರಸರ ಈಗಿನ ವಂಶಸ್ಥರು ಹಾಗೂ ಅವರ ಕುರುಹುಗಳನ್ನು ಅವರ ಛಾಯಾಚಿತ್ರ ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಗಳ ಸಹಿತವಾದ ಮಾಹಿತಿಯನ್ನು ನೀಡುತ್ತಾರೆ.
    ಇಂದಿಗೆ ಸರಿಸುಮಾರು ಸಾವಿರದ ನೂರು ವರ್ಷಗಳ ಹಿಂದೆ ಇದ್ದಂತಹಾ ಪಂಪ ಕವಿಯ ವಂಶಸ್ಥರು ಇಂದಿಗೂ ಧಾರವಾಡದ ಅಣ್ಣಿಗೇರಿಯಲ್ಲಿದ್ದು ಕನ್ನಡದ ಮುಖ್ಯ ವಿದ್ವಂಸರುಗಳಾಲ್ಲಿ ಒಬ್ಬರಾದ ಜಿ. ಬ್ರಹ್ಮಪ್ಪನವರು ಇಂದಿನ ವಂಶಸ್ಥರನ್ನು ಪ್ರಥಮವಾಗಿ ಪತ್ತೆ ಮಾಡಿರುತ್ತಾರೆ. ಪಂಪನ ತಂದೆಯ ಕಡೆಯ ವಂಶಸ್ಥರಾದ ಭೀಮಪ್ಪಯ್ಯ ದೇಶಪಾಂಡೆ ಹಾಗೂ ತಾಯಿಯ ಕಡೆಯ ವಂಶಸ್ಥರಾದ ಗೋವಿಂದ ಭಟ್ ಜೋಶಿಯವರಿಬ್ಬರೂ ಅಣ್ಣಿಗೇರಿಯಲ್ಲಿಯೇ ಇರುವುದು ಇನ್ನೊಂದು ವಿಶೇಷ. ಅಲ್ಲದೆ ಆಂಧ್ರದ ಕುರಿಕಾಲವೆಂಬಲ್ಲಿ ದೊರಕಿದ ಪಂಪನ ತಮ್ಮ ಜಿನವಲ್ಲಭನ ಶಾಸನದಲ್ಲಿ ಉಲ್ಲೇಖಿಸಲಾದ ಕವಿತಾಗುಣಾರ್ಣವ ಕೆರೆಯನ್ನೂ ಸಹ ಪತ್ತೆಹಚ್ಚಲಾಗಿದ್ದು ಈಗದನ್ನು ಅಲ್ಲಿನ ಜನರು ‘ಉಡನ್ ಚೆರವು’ ಎನ್ನುವ ಹೆಸರಿನಲ್ಲಿ ಗುರುತಿಸುತ್ತಾರೆ.
    ನೇಪಾಳವನ್ನಾಳಿದ ‘ಕರ್ನಾಟ’ವಂಶದ ದೊರೆಗಳಲ್ಲಿ ನಾನ್ಯದೇವನ ಹೆಸರು ಅತಿ ಮುಖ್ಯವಾಗಿ ಕೇಳಿಬರುತ್ತದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ ಸಮಂತನಾಗಿದ್ದುಕೊಂಡು ಆಳ್ವಿಕೆ ನಡೆಸಿದ ನಾನ್ಯದೇವನ ಕಾಲ ಸುಮಾರಾಗಿ ಕ್ರಿ.ಶ. ೧೧೦೦ ಆಗಿರುತ್ತದೆ. ಅಂತಹಾ ನಾನ್ಯದೇವಾ ವಂಶಸ್ಥರೌ ಇಂದಿಗೂ ನೇಪಾಳದಲ್ಲಿ ವಾಸವಾಗಿದ್ದಾರೆ. ನೇಪಾಳದ ಕಟ್ಮಂಡುವಿನಲ್ಲಿ ನೆಲೆಸಿರುವ ಶೀ ದೇವ್ ವೈದ್ಯ ದಂಪತಿಗಳು ಕನ್ನಡ ನಾನ್ಯದೇವನ ವಂಶಸ್ತಹ್ರೆನ್ನುವುದು ಅವರಲ್ಲಿರುವ ವಂಶವೃಕ್ಷದ ದಾಖಲೆಯಿಂದ ದೃಢಪಟ್ಟಿದೆ. (ಇಲ್ಲಿ ನಾವು ಗಮನ್ಸಬಹುದಾದ ಅಂಶವೆಂದರೆ ನಾನ್ಯದೇವನ ಹೆಸರಿನಲ್ಲಿನ ‘ದೇವ’ ಎನ್ನುವ ಪದ ಇಂದಿಗೂ ಆ ವಂಶಿಗರ ಹೆಸರಿನೊಂದಿಗೆ ಸೇರಿಕೊಂಡು ಬಂದಿದೆ!)
    ಇನ್ನು ಕನ್ನಡದ ಶ್ರೇಷ್ಠ ವಚನಕಾರ ಯುಗಪುರುಷ ಜಗಜ್ಯೋತಿ ಬಸವೇಶ್ವರ ಎಂದೆಲ್ಲಾ ಕರೆಸಿಕೊಳ್ಳುವ ಬಸವಣ್ಣನ ವಂಶಸ್ಥರು ಇಂದೂ ಸಹ ಬಾಗೇವಾಡಿಯಲ್ಲಿದ್ದಾರೆ. ಶೀ ಕಿರಣ್ ಕುಲಕರ್ಣಿಯವರು ಬಸವಣ್ಣನ ತಂದೆಯ ಕಡೆಯ ಈಗಿನ ವಂಶಸ್ಥರಾಗಿದ್ದಾರೆ. ಇನ್ನೊಂದು ವಿಚಾರವೆಂದರೆ ಎಲ್ಲರೂ ಸಾಧಾರಣವಾಗಿ ತಿಳಿದಿರುವಂತೆ ಬಸವಣ್ಣ ಜನ್ಮಸ್ಥಾನವು ಬಾಗೇವಾಡಿಯಾಗಿರದೆ ಆತನ ತಾಯಿಯ ತೌರು ಮನೆಯಾದ ಇಂಗುಳೇಶ್ವರವಾಗಿರುತ್ತದೆ. ಬಸವಣ್ಣನ ತಂದೆ ಮಾದರಸನ ಮೊದಲ ಪತ್ನಿ ಹೆರ್ರಿಗೆ ಸಮಯದಲ್ಲಿ ತೀರಿಇಕೊಳ್ಳುತ್ತಾಳೆ. ಮಾದರಸನು ಮಾದಲಾಂಬಿಕೆಯನ್ನು ಎರಡನೆ ವಿವಾಹವಾಗುತ್ತಾನೆ. ಎಂದರೆ ಬಸವಣ್ಣ ಮಾದಎ=ರಸನ ಎರಡನೆ ಪತ್ನಿಯ ಮಗನಾಗಿದ್ದು ಮಾದಲಾಂಬಿಕೆಯ ತೌರೂರು ಇಂಗುಳೇಶ್ವರದಲ್ಲಿ ಜನಿಸುತ್ತಾನೆ. ಮಾದರಸನ ಮೊದಲ ಪತ್ನಿಯ ಮಗ ದೇವರಾಜನೆನ್ನುವುದು ಕ್ರಿ.ಶ್.೧೨೬೦ ರ ಶಿಲಾಶಾಸನವೊಂದರಲ್ಲಿ ಉಲ್ಲೇಖಗೊಂಡಿದೆ. ಈ ದೇವರಾಜನ ವಂಶಸ್ಥರೂ ಸಹ ಬೆಳಗಾವಿಯ ಅರ್ಜುನವಾಡವೆಂಬಲ್ಲಿ ಇಂದು ನೆಲೆಸಿರುವುದನ್ನು ಲೇಖಕರು ಪತ್ತೆ ಮಾಡಿದ್ದಾರೆ. ಬಸವಣ್ಣನ ತಾಯಿಯ ವಂಶಸ್ಥರಾದ ಅರವಿಂದ ಕುಲಕರ್ಣಿಗಳು ಇಂದಿಗೂ ಇಂಗುಳೇಶ್ವರದಲ್ಲಿ ನೆಲೆಸಿದ್ದಾರೆ. ಅಂದಹಾಫ಼ೆ ಬಸವಣ್ಣನ ಇಂದಿನ ವಂಶಸ್ಥರ ಬಗ್ಗೆ ಪ್ರಥಮವಾಗಿ ಗುರುತಿಸಿದವರು ಕನ್ನಡದ ಶೇಷ್ಠ ವಿದ್ವಾಂಸರಾಗಿದ್ದ ಡಾ. ಸಿದ್ದಯ್ಯ ಪುರಾಣಿಕರು.
    ಬಸವಣ್ಣನ ಸಮಕಾಲೀನಳಾಗಿದ್ದ ಕನ್ನಡದ ಶೇಷ್ಠ ವಚನಗಾರ್ತಿ ಅಕ್ಕಮಹಾದೇವಿಯ ವಂಶಸ್ಥರು ಗೋಕಾಕದಲ್ಲಿ ನೆಲೆಸಿದ್ದು ಈಗಿರುವ ಮೃತ್ಯುಂಜಯ ಹಳೆ ಪಟ್ಟಣಶೇಟ್ಟಿ ಯೆನ್ನುವವರು ಅಕ್ಕನ ದೊಡಡಪ್ಪನ ಕಡೆಯ ವಂಶಸ್ಥರಾಗಿರುತ್ತಾರೆಂದು ಅವರ ಬಳಿಯಿರುವ ವಂಶಾವಳಿ ದಾಖಲೆಗಳಿಂದ ಚಿದಾನಂದಮೂರ್ತಿಗಳು ಪತ್ತೆ ಮಾಡಿರುತ್ತಾರೆ.
    ಕನ್ನಡದಲ್ಲಿ ‘ಗಿರಿಜಾ ಕಲ್ಯಾಣ’ದಂತಹಾ ಚಂಪೂ ಕಾವ್ಯದೊಂದಿಗೆ ಅನೇಕ ಶಿವಶರಣಾರ ಜೀವನದ ಕುರಿತಾಗಿ ರಗಳೆಗಳನು ರಚಿಸಿ ಖ್ಯಾತನಾದಂತಹಾ ಹರಿಹರ ಕವಿಯು ವಾಸವಿದ್ದ ಮನೆಯ ಜಾಗವನ್ನು ಪತ್ತೆ ಮಾಡಿದ ವಿವರಗಳು(ಹಂಪೆಯ ವಿರೂಪಾಕ್ಷ ದೇವಾಲಯದ ಪಕ್ಕದ ಮನ್ಮಥ್ ಕುಂಡದ ದಡದಲ್ಲಿ) ಹಾಗೇ ಹರಿಹರನ ಸೋದರಳಿಯನಾದ ‘ಹರಿಶ್ಚಂದ್ರ ಕಾವ್ಯ’, ‘ವೀರೇಶ ಚರಿತೆ’, ‘ಸಿದ್ದರಾಮ ಚಾರಿತ್ರ್ಯ’ದಂತಹಾ ಷಟ್ಪದಿ ಕಾವ್ಯಗಳನ್ನು ಕನ್ನಡಕ್ಕೆ ನೀಡಿದ ‘ಷಟ್ಪದಿ ಬ್ರಹ್ಮ’ನೆಂದು ಖ್ಯಾತನಾದ  ರಾಘವಾಂಕನ ಸಮಾಧಿ ಸ್ಥಳವನ್ನೂ ಇಂದಿನ ಬೇಲೂರಿನಲ್ಲಿರುವ ಪಾತಾಳೇಶ್ವರ ದೇಗುಲವೆಂದು ಪತ್ತೆ ಹಚ್ಚಲಾಗಿದೆ. ಜತೆಗೆ ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾಗಿದ್ದ ಕೆರೆಯ ಪದ್ಮರಸನು ಕಟ್ಟಿಸಿದ್ದ ಕೆರೆಯನ್ನೂ ಸಹ ಪತ್ತೆಯಾಗಿದ್ದು ಬೇಲೂರಿನಲ್ಲಿರುವ ಬಿಷ್ಟಮ್ಮನ ಕೆರೆಯೇ ಪದ್ಮರಸನು ಅಂದು ಕಟ್ಟಿಸಿದ್ದ ಕೆರೆಯಾಗಿದೆ.
    ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾದ ಕುಮಾರವ್ಯಾಸ ಅಥವಾ ಗದುಗಿನ ನಾರಣಪ್ಪನ ವಂಶಸ್ಥರ ವಿವರಗಳೂ ಈ ಪುಸ್ತಿಕದಲ್ಲಿ ನಮಗೆ ದೊರೆಯುತ್ತವೆ. ಅಂದಹಾಗೆ ‘ಕರ್ಣಾಟ ಭಾರತ ಕಥಾಮಂಜರಿ’ ಅಥವಾ ಕುಮಾರವ್ಯಾಸ ಭಾರತವನ್ನು ಬರೆದಿರುವ ಕನ್ನಡದ ಖ್ಯಾತ ಕವಿ ನಾರಣಪ್ಪನ ಹುಟ್ಟೂರು ಇಂದಿನ ಹುಬ್ಬಳ್ಳಿಯಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ ಕೋಳಿವಾಡವಾಗಿದ್ದು ಅಲ್ಲಿ ಇಂದಿಗೂ ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲ ಕುಲಕರ್ಣಿಯವರು ವಾಸವಿದ್ದಾರೆ. ಕುಮಾರವ್ಯಾಸನ ತಮ್ಮನ ವಂಶಜರು ಸಹ ಕೋಳಿವಾಡದಲ್ಲಿದ್ದು ಕುಮಾರವ್ಯಾಸನ ನಂತರ ಒಂಭತ್ತನೇ ತಲೆಮಾರಿನಿಂದ ಕೋಳಿವಾಡದ ಗೌಡಿಕಿ ಹಾಗೂ ಕುಲಕರ್ಣಿತ್ವವು ಈ ಮನೆತನದವರ ಪಾಲಿಗೆ ಬಂದಿತು
    ಇನ್ನು ಕನ್ನಡ ನಾಡಿನ ಮತ್ತು ದಕ್ಷಿಣ ಭಾರತದ ಮುಖ್ಯ ರಾಜವಂಶಗಳಲ್ಲಿ ಒಂದಾದ ವಿಜಯನಗರದ ಅರಸರ ವಂಶಜರು ಮತ್ತು ವಿಜಯನಗರದ ರಾಜಗುರುಗಳಾಗಿದ್ದ ಶೀ ವಿದ್ಯಾರಣ್ಯ ಮಹಾಸ್ವಾಮಿಗಳ ಮಠದ ಪರಂಪರೆಗಳ ಬಗ್ಗೆಯೂ  ಪುಸ್ತಕದಲ್ಲಿ ವಿವರಿಸಲಾಗಿದೆ. ಕ್ರಿ.ಶ.೧೫೬೫ ರ ರಕ್ಕಸಗಿ-ತಂಡರಗಿ ಯುದ್ದದಲ್ಲಿ ಪರಾಜಯಗೊಳ್ಳುವುದರೊಂದಿಗೆ ವಿಜಯನಗರದ ವೈಭವದ ಆಳ್ವಿಕೆ ಮುಕ್ತಾಯಗೊಂಡಿತು. ಆದರೆ ಅಳಿಯ ರಾಮರಾಯನ ನಂತರ ಆರಂಭಗೊಂಡ ಅರವೀಡು ವಂಶದ ಅರಸರು ಆಂಧ್ರದ ಪೆನುಗೊಂಡೆ ಮೊದಲಾದೆಡೆಗಳಲ್ಲಿ ನೆಲೆಸಿ ಆಡಳಿತವನ್ನು ಮುಂದುವರಿಸಿದರು. ಆ ಅರವೀಡು ವಂಶದ ದೊರೆಗಳ ವಂಶಸ್ಥರು ಇಂದಿಗೂ ಹೊಸಪೇಟೆಯಲ್ಲಿ ವಾಸವಿದ್ದಾರೆ. ರಾಜಾ ಅಚ್ಯುತರಾಯರು(೧೯೩೬-೨೦೦೮) ಮತ್ತವರ ಪತ್ನಿಯವರಾದ ರಾಣಿ ಚಂದ್ರಕಾಂತಾದೇವಿ ಹಾಗೂ ಅವರ ಪುತ್ರರಾದ ರಾಜಾ ಶೀಕೃಷ್ಣದೇವರಾಯರು ಇಂದು ಹೊಸಪೇಟೆಯಲ್ಲಿ ನೆಲೆಸಿದ್ದು ಲೇಖಕ ಚಿದಾನಂದಮೂರ್ತಿಗಳ ಮನೆಗೂ ಒಮ್ಮೆ ಬಂದಿದ್ದರು. ಹಾಗೇ ರಾಜಾ ಅಚ್ಯುತರಾಯ ದಂಪತಿಗಳನ್ನು ರಾಜಧಾನಿ ಬೆಂಗಳೂರಿಗೆ ಕರೆಸಿ ಸನ್ಮಾನವನ್ನು ಸಹ ನೆರವೇರಿಸಲಾಗಿತ್ತು.
    ಶೀ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ‘ಶೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸಂಸ್ಥಾನ ಮಠ’ ವಿದ್ದು ಅದು ಹಿಂದೆ ವಿದ್ಯಾರಣ್ಯ ಮಹಾಸ್ವಾಮಿಗಳು ವಾಸವಿದ್ದ ಜಾಗವಾಗಿದೆ. ಇಂದಿಗೂ ಆ ಪರಂಪರೆಯನ್ನು ಮುಂದುವರಿಸಿರುವ ಗುರುಗಳನ್ನು ನಾವು ಅಲ್ಲಿ ಕಾಣುತ್ತೇವೆ. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರ ಕುಲಗುರುಗಳಾಗಿದ್ದ ಕಾಶೀವಿಲಾಸ ಕ್ರಿಯಾಶಕ್ತಿಗಳವರು ವಾಸವಿದ್ದ ಗುಹೆಯನ್ನು ಗುರುತಿಸಲಾಗಿದೆ. ಈ ಗುರುಗಳ ಪರಂಪರೆಯು ವಿದ್ಯಾರಣ್ಯ ಸಂಸ್ಥಾನದಂತೆ ಮುಂದುವರಿದಿರುವುದಿಲ್ಲ.
    ಇನ್ನು ಕನ್ನಡದ ಮಹತ್ವದ ಕವಿಗಳಾದ ಚಾಮರಸ, ‘ಭರತೇಶ ವೈಭವ’ದ ಕರ್ತೃ ರತ್ನಾಕರ ವರ್ಣಿ, ಕನ್ನಡ ಬಸವಪುರಾಣವನ್ನು ಬರೆದ ಭೀಮಕವಿಯ ವಂಶಸ್ತಹ್ರು ಹಾಗೂ ಕುರುಹುಗಳ ಕುರಿತು ಸಹ ಈ ಪುಸ್ತಿಕೆಯಲ್ಲಿ ಚರ್ಚಿಸಲಾಗಿದೆ. ‘ಪ್ರಭುಲಿಂಗ ಲೀಲೆ’ಯ ಕರ್ತೃ ವಾದ ಚಾಮರಸನು ವಾಸವಿದ್ದ ಗುಹೆಯನ್ನು ಹಂಪಿಯಲ್ಲಿ ಗುರುತಿಸಲಾಗಿದ್ದು ರತ್ನಾಕರ ವರ್ಣಿಯ ವಂಶಸ್ಥರು ಮೂಡಬಿದಿರೆಯಲ್ಲಿರುವ ಜೈನ ಕುಟುಂಬದವರಾದ ರವಿರಾಜ ಶೆಟ್ಟರು ರತ್ನಾಕರ ವರ್ಣಿಯ ಇಂದಿನ ವಂಶಸ್ಥರಾಗಿರುತ್ತಾರೆ. ಭೀಮಕವಿಯ ಸಮಾಧಿ ಆಂಧ್ರದ ಅನಂತಪುರದ ಗಡೇಕಲ್ಲು ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ. ಇನ್ನು ಫಾಲ್ಕುರಿಕೆ ಸೋಮನಾಥನ ವಂಶಸ್ಥರು ಮಾಗಡಿ ತಾಲ್ಲೂಕು ಕಲ್ಯದಲ್ಲಿ ವಾಸವಿದ್ದು ಶೀ ಕೆ.ಪಿ. ಮಲ್ಲಿಕಾರ್ಜುನಾರಾದ್ಯರು ಸೋಮನಾಥನ ಇಂದಿನ ವಂಶಸ್ಥರಾಗಿದ್ದಾರೆ. ಇನ್ನು ಸೋಮನಾಥನ ಸಮಾಧಿ ಕಲ್ಯದ ಬೆಟ್ಟದ ಮೇಲಿರುವ ಕಲ್ಲೇಶ್ವರ ಬೆಟ್ತದ ಮೇಲಿದೆ ಎನ್ನುವುದು ಬೆಳಕಿಗೆ ಬಂದಿದೆ.
    ಅಂತೆಯೇ ವಿಜಯನಗರ ಕಾಲಾನಂತರ ನಮ್ಮನ್ನಾಳಿದ ಸೋದೆ, ಕೆಳದಿ, ಹಾಲೇರಿ ಹಾಗೂ ಮೈಸೂರು ಅರಸರ ವಂಶಸ್ಥರ ವಿಚಾರವಾಗಿಯೂ ಚಿದಾನಂದಮೂರ್ತಿಗಳಿ ಈ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ.  ಸೋದೆ ವಂಶಸ್ಥರಲ್ಲಿ ಆಳ್ವಿಕೆ ನಡೆಸಿದ ಮಲ್ಲಮ್ಮಾಜಿಯವರ ವಂಶ್ಸಸ್ಥರು ಇಂದು ಗೋವಾದಲ್ಲಿ ನೆಲೆಸಿದ್ದು ಸವಾಯಿ ಸದಾಶಿವ ರಾಜೇಂದ್ರ ಒಡೆಯರು ಮತ್ತವರ ಮಕ್ಕಾಳು ಗೋವಾದ ಬಾಂದೇವಾಡಿ(ಬಾಂದೋವ್) ಎನ್ನುವಲ್ಲಿ ಇದ್ದಾರೆ. ವಿಜಯನಗರದ ಬಲಿಷ್ಟ ಸಾಮಂತ ರಾಜ್ಯವಾಗಿದ್ದ ಶಿವಮೊಗ್ಗದ ಕೆಳದಿ ಅರಸರ ಈಗಿನ ವಂಶಸ್ಥರಾದ ಲಿಂಗರಾಜ ನಾಯಕ್ ಹುಬ್ಬಳ್ಳಿಯಲ್ಲಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವುದು ಬಹು ಮುಖ್ಯ ಸಂಗತಿಯಾಗಿದೆ. ಹಾಗೆಯೇ ‘ಕೆಳದಿ ನೃಪವಿಜಯ’ದ ಕರ್ತೃವಾದ ಲಿಂಗಣ್ಣ ಕವಿಯ ತಂದೆ- ತಾಯಿಯರ ವಂಶಸ್ಥರೂ ನಮ್ಮ ನಡುವೆ ಇದ್ದಾರೆ. ಇನ್ನು ಮಡಿಕೇರಿಯ ಹಾಲೇರಿ ದೊರೆಗಳ ಈಗಿನ ವಂಶಸ್ಥರು ಪೂನಾದಲ್ಲಿ ವಾಸವಾಗಿದ್ದು ಲೇಖಕರು ಅವರೊಂದಿಗೆ ದೂರವಾಣಿ ಮುಖಾಂತರ ಸಂಭಾಷಿಸಿದ್ದಾರೆ. ಗಂಗಾಧರ ಚಿರುಮೆ ಮತ್ತು ನಳಿನಿ ಗಂಗಾಧರ ಚಿರುಮೆಯವರುಗಳು ಮಡಿಕೇರಿ ಅರಸರ ವಂಶಸ್ಥರೆನ್ನುವುದು ಅವರ ಬಳಿಯಿರುವ ವಂಶವೃಕ್ಷದಿಂದ ಸಾಬೀತಾಗಿದೆ. ಹಾಗೆಯೇ ಮೈಸೂರಿನ ಒಡೆಯರ ಈಗಿನ ವಂಶಸ್ಥರಾದ ಶೀಕಂಠದತ್ತ ಒಡೆಯರುಗಳು ಮೈಸೂರು ಅರಮನೆಯಲ್ಲಿ ವಾಸವಿದ್ದಾರೆ.
    ಬೆಳಗಾವಿ ಜಿಲ್ಲೆಯ ಕಿತ್ತೂರು ಅದನ್ನಾಳಿದ ಚೆನ್ನಮ್ಮ ರಾಣಿಯಿಂದ ಪ್ರಸಿದ್ದವಾಗಿರುವ ಸ್ಥಳ. ಚಿಕ್ಕ ರಾಜ್ಯವಾಗಿದ್ದ ಕಿತ್ತೂರನ್ನುಅ ಬ್ರಿಟಿಷರು ತಮ್ಮಾಲು ಮುಂದಾದಾಗ ಧೈರ್ಯದಿಂದ ಕಾದಾಡಿ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ಬಲಿಕೊಟ್ತ ನಾಡು ಕಿತ್ತೂರು. ಅಂತಹಾ ನಾಡನ್ನಾಳಿದ ಚೆನ್ನಮ್ಮ ತಾಯಿಯ ಕೆಚ್ಚೆದೆಯ ಹೋರಾಟ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭರತ ಖಂಡದಲ್ಲಿಯೇ ಬಲು ಪ್ರಸಿದ್ದವಾದುದು. ಇಂತಹಾ ಚೆನ್ನಮ್ಮ ರಾಣಿಯ ವಂಶಸ್ಥರು ಸೋಮಶೇಖರ ದೇಸಾಯಿಗಳು ಇಂದು ಬೆಳಗಾವಿಯ ಖಾನಾಪುರದಲ್ಲಿ ನೆಲೆಸಿದ್ದಾರೆ.
    ಹೀಗೆ ಹಿಂದೆ ನಮ್ಮ ನಾಡನ್ನಾಳಿದ ಅದೆಷ್ಟೋ ರಾಜ ಮನೆತನಗಳಾ ಮತ್ತು ಕನ್ನ್ಡದಲ್ಲಿ ಮಹಾಕಾವ್ಯಗಳಾನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ ಮಹಾಕವಿಗಳಾ ವಂಶಸ್ಥರುಗಳು ಇಂದಿಗೂ ನಮ್ಮ-ನಿಮ್ಮ ನಡುವೆ ಇದ್ದಾರೆನ್ನುವುದೇ ನಮಗೊಂದು ಹೆಮ್ಮೆ. ಅಂತಹಾ ವಂಶಸ್ಥರ ವಿವರಗಳು ಮತ್ತು ಅಂದಿನವರ ವಾಸವಿದ್ದ ಸ್ಥಳದ ಕುರುಹುಗಳನ್ನು ಹುಡುಕಿ ಅದನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಂತಹಾ ಒಂದು ಪ್ರಯತ್ನವು ಈ ಕಿರು ಹೊತ್ತಿಗೆಯಲ್ಲಿ ಆಗಿರುವುದನ್ನು ನಾವು ಕಾಣುತ್ತೇವೆ. ಹೀಗಾಗಿ ಇಂತಹಾ ಒಂದು ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಮತ್ತು ಬೇರೆಯವರಿಗೆ ಓದುವಂತೆ ಸಲಹೆಮಾಡಬೇಕೆನ್ನುವುದು ನನ್ನ ಆಶಯ. ಹಾಗೆಯೇ ಇನ್ನೊಂದು ವಿಚಾರವನ್ನು ಹೇಳುವುದಾದಲ್ಲಿ ಇಂತಹಾ ಒಂದು ಪುಸ್ತಕ ಇಂಗ್ಲೀಷ್ ಸೇರಿದಂತೆ ಭಾರತದ ಬೇರೆ ಭಾಷೆಗಳಿಗೂ ಅನುವಾದವಾಗಬೇಕಿದೆ. ಆ ಮೂಲಕ ಕನ್ನಡ ನಾಡಿನ ಇತಿಹಾಸ- ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವದಲ್ಲಿ ಪಸರಿಸುವಂತಾಗಬೇಕಿದೆ.
    ಇನ್ನು ಈ ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ- “ಇದು ಕೇವಲ ಮಾಹಿತಿ ಮುಖಿಯಾದ ಕೃತಿ............ವಿಚಾರ್ಸಿದರೆ ಇನ್ನೂ ಕೆಲವು ಶ್ರೇಷ್ಠರ, ರಾಜವಂಶದ ಈಗಿನ ವಂಶಸ್ಥರ ವಿಚಾರಗಳನ್ನು ತಿಳಿಯಬಹುದು” . ಎಂದರೆ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸಂಶೋಧನೆಗೆ ಅವಕಾಶಗಳುಂಟು ಎಂದಾಯಿತು. ಮುಂದಿನ ಪೀಳಿಗೆಯವರೂ ಈ ಕಾರ್ಯದಲ್ಲಿ ಕೈಜೋಡಿಸಿದರೆ ಇನ್ನಷ್ಟು ಇತಿಹಾಸದಲ್ಲಿನ ನಿಘೂಢ ಸತ್ಯಗಳು ತೆರೆದುಕೊಳ್ಳುತ್ತವೆನ್ನುವುದರಲ್ಲಿ ಯಾವ ಅನುಮಾನವಿಲ್ಲ. (ಇನ್ನೊಂದು ಮುಖ್ಯ ವಿಚಾರವೆಂದರೆ ಈ ಪುಸ್ತಿಕೆಯಲ್ಲಿ ನೀಡಿರ್ವ ಎಲ್ಲಾ ವಂಶಸ್ಥರು, ಕುರುಹುಗಳ ಕುರಿತಾಗಿ ಪ್ರತ್ಯೇಕ ಛಾಯಾಚಿತ್ರಗಳಿವೆ, ಮತ್ತು ಕೆಲ ವಂಶೀಕರ ದೂರವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ. )
    ಒಟ್ಟಾರೆಯಾಗಿ ಕನ್ನಡಲ್ಲಿ ಇದೊಂದು ನೂತನ ಪ್ರಯತ್ನ/ ಈ ಪ್ರಯತ್ನಕ್ಕೆ ಶಿಕಾರವನ್ನು ಹಿರಿಯರಾದ ಚಿದಾನಂದಮೂರ್ತಿಗಳು ಹಾಕಿಕೊಟ್ಟಿದ್ದಾರೆ. ಅವರ ಈ ಪ್ರಯತ್ನಕ್ಕೆ ನಾವೆಲ್ಲರೂ ಈ ಪುಸ್ತಿಕೆಯನ್ನು ಓದುವಮೂಲಕ ಪ್ರೋತ್ಸಾಹಿಸೋಣ. ಹಾಗೆಯೇ ಸಾಧ್ಯವಾದರೆ ಇಂತಹಾ ಇನ್ನಷ್ಟು ವಿಚಾರಗಳನ್ನು ಬೆಳಕಿಗೆ ತರುವಲ್ಲಿ ನೆರವಾಗೋಣ.
    ನಮಸ್ಕಾರ.







Inline image 1
ರಾಘವೇಂದ್ರ ಅಡಿಗ ಎಚ್ಚೆನ್. 

Sunday, October 27, 2013

ಮೊಬೈಲ್ - ವಿವೇಕ ಬೆಟ್ಕುಳಿ


ಮೊಬೈಲ್ ಎಂಬ ಪುಟ್ಟ ಯಂತ್ರದ ಸಹಾಯದಿಂದ ವಿದೇಶದಲ್ಲಿರುವ ಮಗಳು ಅಳಿಯನೊಂದಿಗೆ, ಪೇಟೆಗೆ ಹೋದ ಮಗನೊಂದಿಗೆ ಹೀಗೆ ನಮಗೆ ಹತ್ತಿರದ ಎಲ್ಲರೊಂದಿಗೆ ನಮಗೆ ಅಗತ್ಯವೆನಿಸಿದಾದ ನೇರವಾಗಿ ಅವರೊಂದಿಗೆ ಎಲ್ಲಿಯಾದರೂ ನಿಂತು ಮಾತನಾಡಲು ಇಂದು ಸಾಧ್ಯವಾಗಿರುವುದು. ಈ ರೀತಿಯ ಬದಲಾವಣೆ ಆಗುತ್ತದೆ ಎಂದು ಅದನ್ನು ಬಳಕೆ ಮಾಡುವ ಬಹುತೇಕ ಜನರಿಗೆ ಹಿಂದೆ ತಿಳಿದಿರಲಿಲ್ಲ. ಆದರೇ ಇಂದು ಸಾಧ್ಯವಾಗಿದೆ. ಹೌದು ಮೊಬೈಲ್ ಇಂದು ನಮ್ಮ ಜೀವನದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿರುವುದು.  ಈ ಸಂದರ್ಭದಲ್ಲಿ  ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೇ? ಅಥವಾ ಅನಿವಾರ್ಯವೇ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಹತ್ತು ವರ್ಷದ ಹಿಂದೆ ಮೊಬೈಲ ಎಂಬುದು ಒಂದು ಅಗತ್ಯವಾಗಿತ್ತು, ಆದರೇ ಇಂದು ಅದು ಅಗತ್ಯವನ್ನು ಮೀರಿ ಅಗತ್ಯತೆಯ ಪೂರೈಕೆಗಾಗಿ ಇರುವ ಯಂತ್ರದ ದಾಸರಾಗಿರುವೆವು.
ರಾಜರ ಕಾಲದಲ್ಲಿ ಸಂಪರ್ಕಕ್ಕಾಗಿ ಪಾರಿವಾಳವನ್ನು ಬಳಸುತ್ತಿದ್ದರು ಎಂಬುದನ್ನು ಪೌರಾಣಿಕ ಸಿನಿಮಾಗಳಲ್ಲಿ ನೋಡಿರುವೆವು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸಂಪರ್ಕಕ್ಕಾಗಿ ವ್ಯಕ್ತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪತ್ರ ತಲುಪಿಸುತ್ತಿದ್ದರು ಎಂಬುದನ್ನು ತಿಳಿದಿರುವೆವು. ಸ್ವಾತಂತ್ರ್ಯಾನಂತರ ಅಂಚೆ ಇಲಾಖೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿರುವುದನ್ನು ಪತ್ರ, ಗ್ರೀಟಿಂಗ್ಸ್ ಬರೆದು ನಾವೇ ಕಂಡಿರುವೆವು. ತಕ್ಷಣದ ಸಂದೇಶಕ್ಕಾಗಿ ಆಗ ಅಂಚೆ ಇಲಾಖೆ ಟೆಲಿಗ್ರಾಂ ವ್ಯವಸ್ಥೆ ಇದ್ದು ತುಂಬಾ ಅನಿವಾರ್ಯತೆಯಲ್ಲಿ ಜನತೆ ಇದನ್ನು ಬಳಸುತ್ತಿದ್ದರು.  ತದನಂತರ ಅಂದರೆ ಹತ್ತು ವರ್ಷದ ಹಿಂದೆ ಬೇರೆ ರಾಜ್ಯ ಅಥವಾ ದೇಶದವರೊಂದಿಗೆ ಮಾತನಾಡಬೇಕೆಂದರೆ ತಾಲ್ಲೂಕಾ ಕೇಂದ್ರಕ್ಕೆ ಹೋಗಿ ಟೇಲಿಪೋನ ಬುತ್ ಮೂಲಕ ಮಾತನಾಡಬೇಕಾಗಿತ್ತು. ಒಂದೆರಡು ವರ್ಷದಲ್ಲಿ ಟೆಲಿಪೋನ್ ಬುತ್ ಗ್ರಾಮ ಗ್ರಾಮದಲ್ಲಿ ತಲೆ ಎತ್ತಿತ್ತು. ಸಾಕಷ್ಟು ಜನಕ್ಕೆ ಉದ್ಯೋಗವನ್ನು ಕಲ್ಪಿಸಿತು. 2000 ದಶಕದಲ್ಲಿ ಟೋಲಿಪೋನ ಬುತ್ ಬಿಜನೆಸ್ಗೆ ಎಲ್ಲಿಲ್ಲದ ಬೇಡಿಕೆ ಇತ್ತು.  ಆ ಸಂದರ್ಭದಲ್ಲಿ ಬುತ್ನಲ್ಲಿ ಕಾರ್ಯನಿರ್ವಹಿಸುವ ಹುಡುಗಿ/ಹುಡುಗರಿಗೆ ಈ ಬಿಸನೆಸ್ ನೋಡಿಯೇ ಕೆಲವರ ನೆಂಟಸ್ಥಿಕೆ ಆಗಿ ಮದುವೆಯಾಗಿರುವುದು ಇದೆ. ಯಾವಾಗ 2005 ರ ನಂತರ ಮೊಬೈಲ ಬಳಕೆ ಹೆಚ್ಚಾಯಿತೋ ಆಗ ಜನಸ್ನೇಹಿಯಾಗಲಾರಂಭಿಸಿತು. ಒಂದೊಂದೆ ಟೇಲಿಪೋನ ಬುತ್ಗಳು ಮುಚ್ಚಲಾರಂಭಿಸಿತು. ಇಂದು ಎಲ್ಲಾದರೂ ಟೇಲಿಪೋನ ಬುತ್ ಸಿಕ್ಕರೇ ಅದು ಮ್ಯೂಜಿಯಂನಲ್ಲಿ ಇಡುವಂತ ವಸ್ತುವಾಗಿರುವುದು.
ಟೆಲಿಗ್ರಾಂ ಅನ್ನುವುದು ಹೆಸರಿಲ್ಲದೇ ಹೋಗಿದೆ. ಅಂಚೆಯಣ್ಣನ ಕೆಲಸ ಕಡಿಮೆಯಾಗಿದೆ. ಅಂಚೆ ಇಲಾಖೆಯ ಕಾರ್ಯವೈಖರಿ ಬೇರೆ ರೂಪ ಪಡೆದುಕೊಂಡಿದೆ. ಇವೆಲ್ಲಾ ಬದಲಾವಣೆ ಕಾರಣ ಮೊಬೈಲ ಆಗಿದೆ. ಒಂದು ಕಂಪನಿಯ ಜಾಹೀರಾತಿನಂತೆ ದುನಿಯಾ ಮುಠಿ ಮೇ ಹೈ ಎಂಬುದು ನಿಜವಾಗಿದೆ.
ಇಂದು ಏಡ್ಸಗಿಂತಲ್ಲೂ ವೇಗವಾಗಿ ಹರಡುತ್ತಿರುವ ಕಾಯಿಲೆ ಎಂದರೆ ಈ ಮೊಬೈಲ ಕಾಯಿಲೆ ಎಂದರೇ ತಪ್ಪಾಗಲಾರದು. ಇಂದಿನ ಯುವ ಪೀಳಿಗೆ ಒಂದು ದಿನ ಮೊಬೈಲೆ ಬಿಟ್ಟು ಇರಲು ಸಿದ್ದರಿಲ್ಲ. ಓದುವಾಗ, ಬರೆಯುವಾಗ, ತಿನ್ನುವಾಗ, ಮಲಗುವಾಗ ಮೊಬೈಲ ಹತ್ತಿರವೇ ಇರಬೇಕು ಅಷ್ಟೊಂದು ಆತ್ಮೀಯವಾಗಿ ಬಿಟ್ಟಿದೆ. ಮೊಬೈಲ್ನಲ್ಲಿ ಕರೆನ್ಸಿ ಇಲ್ಲದೆ ವ್ಯಕ್ತಿ ನೀರಿಲ್ಲದ ಮೀನಿನಂತೆ ಹಾರಾಡುತ್ತಿರುವನು. ಶಾಲೆಗೆ ಹೋಗುವ ಮಕ್ಕಳಿಂದ ನಾಳೆ ನಾಡಿದ್ದು ಇಹಲೋಕ ತ್ಯಜಿಸುವ ಮಾತನಾಡುವಂತ ವ್ಯಕ್ತಿಗೆ ಮೊಬೈಲ ಇಂದು ಅನಿವಾರ್ಯವಾಗಿದೆ. ಇದು ಅಗತ್ಯತೆಯ ಪೂರೈಸುವ ಒಂದು ಸಾಧನವಾಗಿ ಇಲ್ಲ ಬದಲಾಗಿ, ಗಾಳಿ, ನೀರು, ಆಹಾರ, ಬಟ್ಟೆ ಈ ಗುಂಪಿಗೆ ಸೇರುವ ಅನಿವಾರ್ಯತೆಯ ಹಂತಕ್ಕೆ ತಲುಪಿರುವುದು. ನಮ್ಮ ಅಗತ್ಯತೆ ಪೂರೈಸುವ ಒಂದು ವಸ್ತುವಿನ ಮೇಲೆ ಈ ರೀತಿಯ ಅವಲಂಬನೆ ಮಾಡಿಕೊಂಡಿರುವ ನಾವು ಇದು ನಮಗೆ ಅಂಟಿರುವ ಒಂದು ಸಾಂಕ್ರಾಮಿಕ ಕಾಯಿಲೆ ಎಂದೇ ಪರಿಗಣಿಸುವ ಅಗತ್ಯವಿದೆ.

ಸರ್ಕಾರಿ ನೌಕರಿಗೆ ಮೀಟಿಂಗ ನೋಟಿಸಗಾಗಿ, ಕಛೇರಿಯ ಅಂಕಿ ಸಂಖ್ಯೆ ತಿಳಿಯುವುದಕ್ಕಾಗಿ, ಮೇಲಾಧಿಕಾರಿಗಳ ಪ್ರವಾಸದ ಬಗ್ಗೆ ತಿಳಿಸುವುದಕ್ಕಾಗಿ, ಸಹಪಾಠಿಯ ಕಳ್ಳ ರಜೆಯ ಮಾಹಿತಿಯನ್ನು ಮುಟ್ಟಿಸುವುದಕ್ಕಾಗಿ ಮೊಬೈಲ ಅನಿವಾರ್ಯವಾದರೇ, ಯುವ ಸಮೂಹಕ್ಕೆ ತಮ್ಮ ಮನದ ಭಾವನೆಯನ್ನು ತಮ್ಮ ಇಷ್ಟದವರೊಂದಿಗೆ ಹಂಚಿಕೊಳ್ಳಲು, ತಿರುಗಾಡಲು ಹೋಗುವ ಸಮಯ, ಸ್ಥಳವನ್ನು ತಿಳಿಸಲು, ಎದುರಿಗೆ ಮಾತನಾಡಲು ಸಾಧ್ಯವಾಗದಂತಹ ವಿಷಯವನ್ನು ಮೆಸೇಜ್ ಮೂಲಕ ತಿಳಿಸಲು, ಇಷ್ಟದ ಹಾಡನ್ನು ಕೇಳುತ್ತಾ ಇರಲು, ವ್ಯವಹಾರಸ್ಥರಿಗೆ ತಮ್ಮ ವ್ಯವಹಾರವನ್ನು ಮಾಡಲು ಮತ್ತು ತಮ್ಮ ವ್ಯವಹಾರದ ಪ್ರತಿಷ್ಠೆಯನ್ನು ತೋರ್ಪಡಿಸಲು, ಸಾಮಾನ್ಯನಿಗೆ ದಿನನಿತ್ಯದ ಎಲ್ಲಾ ಕೊಡು ಕೊಳ್ಳುವ ವ್ಯವಹಾರದಲ್ಲಿಯೂ ಮೊಬೈಲ್ ಅನಿವಾರ್ಯವಾಗಿದೆ. ಒಟ್ಟಾರೆ ಬೆಳ್ಳಿಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ. ಮೊಬೈಲ್ ಇಂದು ಕೇವಲ ಮಾತನಾಡುವ ವಸ್ತುವಾಗಿ ಇಲ್ಲ. ಬದಲಾಗಿ ಮನರಂಜನೆಯ ಪೆಟ್ಟಿಗೆಯಾಗಿ, ಆಟವಾಡುವ ವಸ್ತುವಾಗಿ, ಪತ್ರ ಬರೆದು ಓದುವ ಸಾಧನವಾಗಿ, ಬ್ಯಾಂಕ ವ್ಯವಹಾರವನ್ನು ಮಾಡುವ ಮತ್ತು ಟಿಕೇಟ ಬುಕಿಂಗ್ ಮಾಡುವ ಯಂತ್ರವಾಗಿ ಬದಲಾಗಿರುವುದು.

ಕಾಲಕಾಲಕ್ಕೆ ಮತ್ತು ಜನತೆಯ ಆಶೋತ್ತರಗಳಿಗೆ ತಕ್ಕಂತೆ ಮೊಬೈಲಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹತ್ತು ಹಲವಾರು ಕಂಪನಿಗಳು ವಿವಿಧ ರೀತಿಯ ಕೊಡುಗೆಗಳ ಮುಖಾಂತರ ಗ್ರಾಹಕರನ್ನು ಆಕಷರ್ಿಸಲು ಪ್ರಯತ್ನಿಸುತ್ತಿವೆ. ಕರೆ ಬಂದಾಗ ಮತ್ತು ಮೆಸೇಜ್ ಬಂದಾಗ ಎಚ್ಚರಿಸುವ ವಿವಿಧ ನಮೂನೆಯ ಶಬ್ದ ಹಾಡುಗಳು ಮೊಬೈಲನಲ್ಲಿ ಇರುವುದು.
ಮೊಬೈಲ ಇಂದು ದೇಶದಲ್ಲಿ ಹೆಚ್ಚು ವ್ಯಾಪಾರವಾಗುತ್ತಿರುವ ವಸ್ತುವಾಗಿದೆ. ದಿನದಿಂದ ದಿನಕ್ಕೆ ಇದರ ಮಾರುಕಟ್ಟೆ ವಿಸ್ತರಿಸುತ್ತಾ ಇರುವುದು. ಐದಾರು ವರ್ಷದ ಹಿಂದೆ ಒಂದು ಬಿಎಸ್ಎನ್ಎಲ್ ಸಿಮ್ ಕೊಳ್ಳಬೇಕೆಂದರೆ ತಿಂಗಳು ಮೊದಲೇ ಬುಕಿಂಗ್ ಮಾಡಬೇಕಾಗಿತ್ತು. ಕಛೇರಿಯಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿರಲಿಲ್ಲ. ಯಾವುದೋ ಪ್ರಭಾವ ಬೀರಿ ಸಿಮ್ ಪಡೆದುಕೊಳ್ಳುವ ಪ್ರಯತ್ನವು ಇರುತ್ತಿತ್ತು. ಆ ನಂತರವು ಅದು ಸಿಗುವುದು ಕಷ್ಟವಾಗಿತು. ಆದರೇ ಇಂದು ಹತ್ತಾರು ಕಂಪನಿಗಳು ಈ ಕ್ಷೇತ್ರ ಪ್ರವೇಶದ ಪರಿಣಾಮವಾಗಿ ಬೀದಿ ಬೀದಿಯಲ್ಲಿ ಸಿಮ್ ಮಾರಾಟ ಪ್ರಾರಂಭವಾಗಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬೀದಿಯಲ್ಲಿ ತಾತ್ಕಾಲಿಕ ಶೆಡ್ಗಳ ಮೂಲಕ, ಸಂಚಾರಿ ಅಂಗಡಿಗಳ ಮೂಲಕ ಸಿಮ್ ಮಾರಾಟ ನಿರಂತರವಾಗಿ ಸಾಗಿರುವುದು.
ಅನಿವಾರ್ಯವಾಗಿ ಅಸ್ಥಿತ್ವ ಇರಿಸಿಕೊಳ್ಳಲು ಬಿಎಸ್ಎನ್ಎಲ್ ಅವರು ಎಲ್ಲರಂತೆ ಬೀದಿಗಿಳಿದು ವ್ಯಾಪಾರ ಪ್ರಾರಂಭಿಸಿದ್ದಾರೆ. ಅವರು ಗ್ರಾಹಕರನ್ನು ಆಧರಿಸುವ ರೀತಿ ಬದಲಾಗಿದೆ. ಜನಸಂದಣಿ ಇರುವ ಎಲ್ಲಾ ಪ್ರದೇಶದಲ್ಲಿ ಇಂದು ಮೊಬೈಲ್ ಅಂಗಡಿಗಳಿವೆ. ಹಳ್ಳಿ ಹಳ್ಳಿಗಳ ಅಂಗಡಿಯಲ್ಲಿ ಕರೆನ್ಸಿ ಸಿಗುತ್ತಿದೆ. ಎಲ್ಲಾ ಕಡೆ ದೊಡ್ಡ ದೊಡ್ಡ ವಿವಿಧ ಕಂಪನಿಗಳ ಜಾಹೀರಾತುಗಳಿವೆ. ಒಟ್ಟಾರೆ ಹೆಚ್ಚಿನ ಜನಕ್ಕೆ ಉದ್ಯೋಗವನ್ನು ಇದು ಕಲ್ಪಿಸಿರುವುದು. ಎಲ್ಲಾ ಕಂಪನಿಗಳು ಮಾರುಕಟ್ಟೆ ವಿಸ್ತರಣೆಗಾಗಿ ಮುಖ್ಯವಾಗಿ ವಿದ್ಯಾಥರ್ಿಗಳನ್ನು ಮತ್ತು ಯುವ ಸಮೂಹವನ್ನು ಕೇಂದ್ರಿಕರಿಸಿರುವುದನ್ನು ಕಾಣಬಹುದಾಗಿದೆ.
 ಹಿಂದೆ ಸಂಬಳ ಆಗಿದೆ ಎಂಬುದನ್ನು ತಿಳಿಯಲು ಬ್ಯಾಂಕ ಹೋಗಿ ವಿಚಾರಿಸಬೇಕಾಗಿತ್ತು. ಇಲ್ಲ ಯಾರಾದರೂ ಪಟ್ಟಣಕ್ಕೆ ಹೋದ ಸಹಪಾಠಿಗಳಿಂದ ಕೇಳಿ ತಿಳಿಯಬೇಕಾಗಿತ್ತು. ಆದರೇ ಇಂದು ಹಣ ಖಾತೆಗೆ ಬಂದ 10 ನಿಮಿಷದಲ್ಲಿ ಮೆಸೇಜ ಬರುವುದು. ಬೇರೆ ಬೇರೆ ಕಂಪನಿಗಳು ತಮ್ಮ ತಮ್ಮ ವ್ಯವಹಾರವನ್ನು ಕುದುರಿಸಲು ಮೊಬೈಲ ಮುಖಾಂತರ ಜಾಹೀರಾತು ನೀಡುತ್ತಿರುವುದನ್ನು ಕಾಣಬಹುದಾಗಿದೆ.
ಆರು ವರ್ಷದ ಹಿಂದಿನ ಮಾತು ಕುಮಟಾದ ಸರ್ಕಲ್ನಲ್ಲಿ  ಹಳ್ಳಿಯಿಂದ ಬಂದ ಹೆಂಗಸರ ಗುಂಪೊಂದು ದಾರಿಯಲ್ಲಿ ಮೊಬೈಲನಲ್ಲಿ ಮಾತನಾಡುತ್ತಾ  ನಿಂತಿರುವ ಒಬ್ಬ ಗುತ್ತಿಗೆದಾರರನ್ನು ನೋಡಿ ಏ. ಅವನಿಗೆ ಮಳ್ಳ ಹಿಡಿದಿದೆ ನೋಡೇ ತನ್ನಟ್ಟಕೆ ಮಾತಡದಿಂವ್. ಸಾವಕಾರನಂಗೆ ಕಾಣುತ್ತಿಯಾ ಪಾಪ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಇನ್ನೂ ಮೊಬೈಲ್ ಬಳಕೆ ಪ್ರಾರಂಭವಾಗಿರಲಿಲ್ಲ. ಆದರೇ ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೇ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೇ ವ್ಯತ್ಯಾಸ ಇಷ್ಟೇ ಅವರನ್ನು ಯಾರು ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಿಜವಾಗಿ ಹುಚ್ಚನಾಗಿದ್ದರೂ ಆತನ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ.
ಮೊಬೈಲ ಬಳಕೆ ತಿಳಿಯದ ವ್ಯಕ್ತಿ ಅನಕ್ಷರಸ್ಥ ಮೊಬೈಲ ಇಲ್ಲದ ಯವಕ/ಯುವತಿ ಹಳ್ಳಿ ಗುಗ್ಗು ಎನ್ನುವಂತಹ ವಾತಾವರಣ ಸೃಷ್ಠಿಯಾಗಿರುವುದು.
ಎನ್ಡಿಎ ಸಕರ್ಾರ ಇದ್ದಾಗ ಪ್ರಮೋದ ಮಹಾಜನ ಸಂಪರ್ಕ ಕ್ರಾಂತಿಯ ಬಗ್ಗೆ ಕಂಡ ಕನಸು ಇಂದು ನನಸಾಗಿದೆ. ಆದರೇ ದುರಾದೃಷ್ಟವಶಾತ ಅವರು ನಮ್ಮೊಂದಿಗೆ ಇಲ್ಲ. ಆದರೇ ಸಂಪರ್ಕ ಕ್ರಾಂತಿಯ ಹೆಸರಿನಲ್ಲಿ ಅತಿ ದೊಡ್ಡ ಹಗರಣವನ್ನು ಮಾಡಿರುವ ಹಾಲಿ ಯುಪಿಎ ಸಕರ್ಾರದ  ಎ ರಾಜಾ ಮಾಜಿ ಮಂತ್ರಿಯಾಗಿ ನಮ್ಮೊಂದಿಗೆ ಇರುವರು. ಇದು ಕೂಡ ಮೊಬೈಲ್ ಕ್ರಾಂತ್ರಿಯ ಒಂದು ಆಯಾಮವೇ ಆಗಿರುವುದು.

ನಾವು ಬಳಸುತ್ತಿರುವ ಮೊಬೈಲ್, ಇಂಟರನೆಟ್, ರೇಡಿಯೋ, ಟಿವಿ ಇವೆಲ್ಲವು ತಂರಗಗಳ ಮೂಲಕವೇ ನಡೆಯುವುದು. ವಾತಾವರಣದಲ್ಲಿ ಈ ಮಾನವ ಸೃಷ್ಠಿತ ತರಂಗಗಳು ಹೆಚ್ಚಿದಂತೆ ಅದು ಪರಿಸರ ವಿವಿಧ ಜೀವಿಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ.  ಅದರಲ್ಲಿಯೂ   ಮೊಬೈಲ್ ಕ್ರಾಂತಿ ಎಂದೂ ಪ್ರಾರಂಭವಾಯಿತೋ ಅಂದಿನಿಂದ ಹಳ್ಳಿ ಹಳ್ಳಿಗಳಲ್ಲಿ ಮೊಬೈಲ್ ಟವರ್ ತಲೆಎತ್ತಿತ್ತು.  ಆ ನಂತರದಲ್ಲಿ ಗುಬ್ಬಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹಳ್ಳಿಗಳಲ್ಲಿ ಕಡಿಮೆಯಾದರೇ ಪಟ್ಟಣದಲ್ಲಿ ಗುಬ್ಬಿಯನ್ನು ಚಿತ್ರದಲ್ಲಿ ಮಾತ್ರ ನೋಡುವಂತೆ ಆಗಿರುವುದು.  ನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿರುವುದು. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇರುವುದು. ಆದರೇ ಅದರಿಂದ ನಮಗೆ ಆಗುತ್ತಿರುವ ಉಪಯೋಗದ ಮುಂದೆ  ಏನು ಕಾಣಿಸುತ್ತಿಲ್ಲವಾಗಿದೆ. ಆದರೇ ಪ್ರಕೃತಿಯಲ್ಲಿ ನಮ್ಮ ರೀತಿಯಲ್ಲಿಯೇ ಬದುಕ ಬೇಕಾದ ಅನೇಕ ಜೀವ ಸಂಕುಲವನ್ನೇ ಆಧುನಿಕತೆಯ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದನ್ನು ನಾವು ನೆನಪಿರಿಸಿಕೊಳ್ಳಬೇಕಾಗಿದೆ.
ಮುಂದಿನ ದಿನಗಳಲ್ಲಿ ಈ ಮೊಬೈಲ ನಮ್ಮನ್ನು ಎಲ್ಲಿ ತೆಗೆದುಕೊಂಡು ಹೋಗಿ ಮುಟ್ಟಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆ ಬಗ್ಗೆ ಈಗಲೇ ಚಿಂತಿಸದಿದ್ದರೇ ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಕಷ್ಟವಾಗಬಹುದು. ನಾವು ಆಧುನಿಕ ಯುಗದಲ್ಲಿ ಯಂತ್ರಗಳ ದಾಸರಾಗುವುದಕ್ಕಿಂತ ನಮ್ಮ ಅಂಕೆಯಲ್ಲಿ ಯಂತ್ರಗಳನ್ನು ಇರಿಸಿಕೊಂಡು ಮುಂದುವರೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಒಂದಾನು ವೇಳೆ ಒಂದು ದಿನದ ಮಟ್ಟಿಗೆ ಏನಾದರೂ ಸಂಪೂರ್ಣ ಮೊಬೈಲ್ ಸಂಪರ್ಕ ನಿಂತು ಹೋದರೇ ಅದರ ಪರಿಣಾಮ ಒಂದು ಹಂತದ ಪ್ರಳಯದಂತೆ ಇರುವುದು. ಮುಂದೆ ಅದನ್ನೇ ಪ್ರಳಯದ ಮುನ್ಸುಚನೆ ಎಂದು ಕೊಳ್ಳಬಹುದು. ಪ್ರಕೃತಿಯ ಮೇಲೆ ಇದೇ ರೀತಿ ಮಾನವನ ದಬ್ಬಾಳಿಕೆ ನಡೆದರೇ ಪ್ರಕೃತಿಗೂ ತನ್ನನ್ನು ಸಮತೋಲನ ಮಾಡಿಕೊಳ್ಳುವ ವಿಧಾನ ತಿಳಿದಿದೆ ಎಂಬುದನ್ನು ನಾವು ಮರೆಯಬಾರದು.                
ವಿವೇಕ ಬೆಟ್ಕುಳಿ ಕುಮಟಾ

ಮದುವೆ ಸಮಾರಂಬ

ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ?
ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಯಾರಿಗೂ ಕೆಲಸವೂ ಇಲ್ಲ ಪುರಸತ್ತು ಇಲ್ಲದಂತ ಪರಿಸ್ಥಿತಿ. ಎಪ್ರಿಲ್ ಮೇ ತಿಂಗಳು ಬಂತು ಬಂದರೆ ಮುಗಿಯಿತು ಶಾಲಾ ಕಾಲೇಜಿಗೆ ರಜೆ, ಜೋರಾಗಿ ಮದುವೆ, ಮುಂಜಿ, ಗ್ರಹಪ್ರವೇಶದ ಭರಾಟೆ ಪ್ರತಿಯೊಂದು ಮನೆಯಲ್ಲಿಯೂ ಹತ್ತಾರು ಆಮಂತ್ರಣ ಪತ್ರಿಕೆಗಳು. ಒಂದು ಕಡೆ ಬಿಸಿಲಿನ ಜಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ. ಕಾರಣ ಆಮಂತ್ರಣ ಕೊಟ್ಟವರು ಬೇಸರ ಮಾಡಿಕೊಳ್ಳುವರು, ಅವರು ನಮ್ಮ ಮನೆಯಲ್ಲಿ ಕಾರ್ಯವಾದಾಗ ಬರುವುದಿಲ್ಲ ಎಂಬ ಭಯ ಇರುವುದು. ಮುಖ್ಯವಾಗಿ ಅಲ್ಲಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಹುದುಗಿರುವ ಆಶೆ.
ಈ ಸಭೆ ಸಮಾರಂಭವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಯಾಕಾಗಿ ಈ ರೀತಿ ವತರ್ಿಸುತ್ತಿರುವರು ಎಂದು ಅನಿಸುವುದು. ಆದರೂ ಅದು ಹಿಂದಿನಿಂದ ನಡೆದುಕೊಂಡ ಬಂದ ರೀತಿಯಾಗಿದೆ. ವಿವಿಧ ರೀತಿಯ ಜನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.
ಸ್ವತಂತ್ರರು : ಚಿಕ್ಕಮಕ್ಕಳಿವರು ಇವರಿಗೆ ಪಾಪ ಯಾರ ಮದುವೆ ಅಥವಾ ಮುಂಜಿ ಎಂಬುದು ತಿಳಿದಿಲ್ಲ. ಒಟ್ಟಾರೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೋಗಿರುವರು. ಸಮಾರಂಭದಲ್ಲಿ ನೀಡುವ ಶರಬತ್ತು ಕುಡಿದು, ಅದರ ಪೈಪನ್ನು ಕೂಡಿಸುವುದು ಯಾರು ಹೆಚ್ಚು ಸೇರಿಸಿರುವರು ಎಂದು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುವುದು ಇವರ ಕಾರ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ತಮ್ಮ ಬಾಲ್ಯವೇ ಮರೆತು ಹೋಗುತ್ತಿರುವಾಗ ಚಿಕ್ಕ ಮಕ್ಕಳಿಗೆ ಸ್ವತಂತ್ಯ ಸಿಗುವುದೇ ಈ ರೀತಿಯ ಸಮಾರಂಭಗಳಿಗೆ ಹೋದಾಗ. ಆ ಮಕ್ಕಳಿಗೆ ಈ ಬೇಸಿಗೆ ಧಗೆಯಲ್ಲಿ ಬಟ್ಟೆಯೇ ಬೇಕು ಏನಿಸುವುದಿಲ್ಲ ಆದರೇನು ಮಾಡುವುದು ಅಮ್ಮನ ಒತ್ತಾಯದಿಂದ ಧರಿಸಲೇಬೇಕಾದ ಅನಿವಾರ್ಯತೆ ಇರುವುದು.
ಸೂಚಕಗಳು :
                ಕುಡಿದು ಒಗೆದಿರುವ ಶರಬತ್ತು ಪೈಪ್ ಅಥವಾ ಬಟ್ಟೆಯ ಪ್ಲಾಸ್ಟಿಕ್ ಕವರ್ನ್ನು ಆರಿಸುತ್ತಾ ಇರುವರು.
                ಇನ್ನೊಂದು ಶರಬತ್ತು ಬೇಕು, ಬೊಂದಿ ಪ್ಯಾಕೇಟ್ ಬೇಕು ಎಂದು ಅಳುತ್ತಾ ಇರುವರು.
                ಮಹೂರ್ತದ ಕಲ್ಪನೆ ಇರುವುದಿಲ್ಲ.
                ತಮ್ಮದೇ ಗುಂಪಿನೊಂದಿಗೆ ಆಟವಾಡುತ್ತಾ ಇರುವರು. ವಾದ್ಯ ಬಾರಿಸಿದಾಗ ಒಬ್ಬರೇ ಇದ್ದರೇ ಡ್ಯಾನ್ಸ ಮಾಡುತ್ತಾ ಇರುವರು.

ಆಕರ್ಷಕರು : ಬಹುಷ: ಯುವ ಸಮೂಹ ಸಮಾರಂಭಕ್ಕೆ ಹೋಗುವುದಕ್ಕೆ ಅವರದೇ ಆದ ಕಾರಣಗಳಿರುವುದು. ಯುವಕರು ಹುಡುಗಿಯರನ್ನು ನೊಡಲೆಂದೇ ಹೊಗುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೇ ಯುವತಿಯರು ಹೋಗುವಾಗ ಯುವಕರಿಗೆ ತಾವು ತೋರಿಸಿಕೊಳ್ಳುವುವುದರ ಜೊತೆಗೆ ಒದಿಂಷ್ಟು ಜನರಿಗೆ ತನ್ನ ಡ್ರೆಸ್ ಆಭರಣ ತೋರಿಸುವ ಮಹತ್ವಾಕಾಂಕ್ಷೆ ಇರುವುದು. ಅಷ್ಟೇ ಅಲ್ಲ ಬೇರೆಯ ಮಹಿಳೆಯರು ಧರಿಸಿರುವ ಬಟ್ಟೆ ಮತ್ತು ಆಬರಣದ ಬಗ್ಗೆ ತಿಳಿದು ಮನೆಗೆ ಬಂದು ಇತರರಿಗೆ ವರದಿ ಒಪ್ಪಿಸುವ ಬಾತ್ಮೀದಾರರಾಗಿಯೂ ಇವರು ಕಾರ್ಯನಿರ್ವಹಿಸುವರು. ಯುವ ಸಮೂಹದ ಉಪಸ್ಥಿತಿ ಬಹುಶ: ಪರಸ್ಪರ ಆಕರ್ಷಣೆಗಾಗಿರುವುದು.
ಸೂಚಕಗಳು :
                ಗುಂಪಿನಲ್ಲಿದ್ದು ತಮ್ಮಷ್ಟಕ್ಕೆ ತಾವೇ ನಗುವರು.
                ಬಟ್ಟೆಗೆ ಹಾಕಿರುವ ಇಸ್ತ್ರೀ ಕತ್ತರಿಸುವ ರೀತಿ ಇರುವುದು.
                ಹೊಸದಾಗಿ ಚಾಲ್ತಿಯಲ್ಲಿರುವ ಸಿನಿಮಾದ ಡ್ರೆಸ್ ಅಥವಾ ಹೇರ್ ಸ್ಟೈಲ್ ಇರುವುದು.
                ಮುಖದ ಕಣ್ಣಿನ ಚಲನವಲನ ಜೋರಾಗಿರುವುದು.
                ಊಟಕ್ಕೆ ಕುಳಿತಿರುವಾಗ ಎದುರುಗಡೆ ಅಥವಾ ಕಾಣುವ ಹಾಗೇ ಯುವಕ, ಯುವತಿಯರ ಗುಂಪಿರುವುದು.
ಆಭರಣ&ಬಟ್ಟೆ ಪ್ರದರ್ಶಕರು : ಹೆಚ್ಚಾಗಿ ಹೆಂಗಸರು ಸಮಾರಂಭಕ್ಕೆ ಹೋಗುವ ಮೂಲ ಉದ್ದೇಶವೇ ತಮ್ಮ ಹೊಸ ಸೀರೆಯ ಮತ್ತು ಇತ್ತಿಚೀಗೆ ತನ್ನ ಗಂಡ ಅಥವಾ ಮಕ್ಕಳು ಮಾಡಿಸಿರುವ ಆಭರಣದ ಪ್ರದರ್ಶನ ಮಾಡುವುದೇ ಆಗಿದೆ. ತಮ್ಮ ಮನೆಯಲ್ಲಿ ಕಾರ್ಯ ಇದ್ದಾಗ ಬಟ್ಟೆ ಆಭರಣದ ಬಗ್ಗೆ ಹೆಚ್ಚು ಚಿಂತಿಸಲು ಆಗದು ಆಗ ಕಾರ್ಯ ಮುಗಿಸುವ ತವಕದಲ್ಲಿ ಇರುವರು. ಆದರೇ ಪಕ್ಕದ ಮನೆಯಲ್ಲಿ ಕಾರ್ಯ ಇದ್ದರೇ ಇವರಿಗೆ ಹೆಚ್ಚು ಒತ್ತಡ ಯಾವು ಬಟ್ಟೆ, ಆಭರಣ ಯಾವಾಗ ಧರಿಸಬೇಕು ಎಂಬುದರ ಬಗ್ಗೆ ವಾರದ ಹಿಂದಿನಿಂದಲ್ಲೇ ತಯಾರಿ ನಡೆಸುವರು. ಇನ್ನೂ ದುರಂತ ಎಂದರೆ ಪಾಪ ಹೆಚ್ಚಿನವರಿಗೆ ಅವರಲ್ಲಿ ಎಷ್ಟೇ ಬಟ್ಟೆ ಆಭರಣ ಇದ್ದರೂ ಬೇರೆಯವರದ್ದೇ ಚೆನ್ನಾಗಿ ಕಾಣಿಸುವುದು ಆದ್ದರಿಂದ ಅವರಿಂದ ಒಂದು ದಿನದ ಮಾತಿಗೆ ಪಡೆದು ಅದನ್ನು ಧರಿಸುವುದು ಇದೆ.
ಗುರುತಿಸುವ ಸೂಚಕಗಳು :
                ಎಲ್ಲರಿಗೂ ಕಾಣುವ ಹಾಗೇ ಆಭರಣ ಪ್ರದರ್ಶನ ಇರುವುದು.
                ಆಭರಣವನ್ನು ಆಗಾಗ ಮುಟ್ಟಿ ನೊಡಿಕೊಳ್ಳುತ್ತಿರುವರು
                ಬೇರೆಯವರು ತನ್ನ ಆಭರಣವನ್ನು ನೋಡುತ್ತಿರುವರಾ ಎಂದು ಆ ಕಡೆ ಈ ಕಡೆ ಗಮನಿಸುತ್ತಾ ಇರುವರು.
                ತಮ್ಮ ಅಥವಾ ಬೇರೆಯವರ ಮಕ್ಕಳನ್ನು ಎತ್ತಿಕೊಳ್ಳುವಾಗ ಆಭರಣ ಸೀರೆಗೆ ಅಥವಾ ಕೈಗೆ ಸಿಲುಕಿದ ಹಾಗೇ ಮಾಡುವರು
                ತಮ್ಮ ಹಾಗೂ ತಮ್ಮ ಮಕ್ಕಳ ಬಟ್ಟೆಯೂ ಕೊಳೆಯಾಗುವ್ಯದೆಂಬ ಆತಂಕದಿಂದ ಇರುವರು. ಮಕ್ಕಳನ್ನು ಆದ್ದರಿಂದ ಓಡಾಡಲು ಬಿಡಲು ಇಷ್ಟಪಡುವುದಿಲ್ಲ.
ಗಾಂಭೀರ್ಯದಿಂದ ಇರುವವರು  : ಬಹುಶ: ಇವರುಗಳು ತಾವು ಹಿರಿಯರು ಎಂದು ತೋರಿಸಿಕೊಳ್ಳುವ ವೇದಿಕೆ ಸಮಾರಂಭವಾಗಿರುವುದು. ಮಕ್ಕಳನ್ನು ಗದರಿಸುವುದು, ಊಟದಲ್ಲಿ ಶಾಂತತೆ ಕಾಪಾಡುವುದು, ನಾಲ್ಕಾರು ಜನ ಸೇರಿ ಹೆಂಗಸರು ಕಾಣುವ ರೀತಿಯಲ್ಲಿ ಏನೋ ಗಂಭೀರ ಚಚರ್ೆ ಮಾಡುವುದು, ನೆಂಟಸ್ಥಿಕೆಯ ಬಗ್ಗೆ ಚಚರ್ಿಸುವುದು, ಒಟ್ಟಾರೆ ಇವರು ಗಂಬೀರವಾಗಿರುವರು. ಇವುಗಳು ಗಂಡಸರು ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯಾಗಿದೆ.
                ಸುಮ್ಮನೆ ಆ ಕಡೆ ಈ ಕಡೆ ಓಡಾಡುತ್ತಾ ಇರುವರು.
                ನಾಲ್ಕು ಜನರು ಸೇರಿ ನಿಂತಾಗ ಸಿಗರೇಟ್ ಅಥವಾ ಬೀಡಿ ಇರುವುದು.
                ಮಾತನಾಡುತ್ತಾ ದೊಡ್ಡ ಗುಂಪಿನ ಕಡೆ ಗಮನ ಇಡುವರು.
                ಮಾತನಾಡುವಾಗ ಮುಖದ ಅಭಿನಯ ಮತ್ತು ಕೈಯ ಚಲನೆ ಇರುವುದು
                ಒಂದು ಹೊಸದಾದ ಟಾವೆಲ್ ಹೆಗಲ ಮೇಲೆ ಇರುವದು.

ಊಟಕ್ಕಾಗಿ ಬರುವವರು : ಸಮಾರಂಭಕ್ಕೆ ಬಂದವರು ಎಲ್ಲರೂ ಊಟ ಮಾಡಿಯೇ ಹೋಗುವುದು ಇದೆ. ಆದರೇ ಊಟಕ್ಕಾಗಿಯೆ ಬರುವ ಅಥಿತಿಗಳು ಇರುವರು. ಅವರಿಗೆ ಅದು ಯಾರ ಮನೆ ಸಮಾರಂಭ ಎಂಬುವುದು ಮುಖ್ಯವಲ್ಲ ಸರಿಯಾಗಿ ಊಟದ ಸಮಯಕ್ಕೆ ಬಂದು ಮೊದಲ ಪಂಕ್ತಿಯಲ್ಲಿಯೇ ಕುಳಿತು ಹೊಟ್ಟೆ ತುಂಬ ಊಟಮಾಡಿ ಹೋಗುವುದು ಅವರ ಕಾಯಕ, ಅವರು ಬೆಳ್ಳಗೆ ಎದ್ದು 11 ಗಂಟೆಯವರೆಗೆ ಕೆಲಸ ಮಾಡಿ ಆ ನಂತರ ಊಟವನ್ನು ಸಮಾರಂಭದಲ್ಲಿ ಮಾಡಿ ಪುನ: 3 ಗಂಟೆಗೆ ತಮ್ಮ ಕಾಯಕದಲ್ಲಿ ತೊಡಗುವರು. (ಬೇಸಿಗೆಯಲ್ಲಿ ಸಾರಿಗೆ ಏನು ಸಿಗದೇ ಇದ್ದಾಗ ಮತ್ತೇನು ಮಾಡಲು ಸಾಧ್ಯ) ಈ ಗುಂಪಿನಲ್ಲಿ ಮೇಲ್ಕಾಣಿಸಿದ ಗುಂಪಿನಲ್ಲಿ ಬರುವ ಯುವಕ,ಯುವತಿ,ಗಂಡಸು, ಹೆಂಗಸರು ಇವರೂ ಸಹಾ ಕೆಲವರು ಬರುವರು. (ಊಟದ ಮೊದಲ ಪಂಕ್ತಿಯಲ್ಲಿರುವರು ಅವರನ್ನು ಮುಂದಿನ ಸಮಾರಂಭದಲ್ಲಿ ಹೋಗಿ ನೋಡಲು ಅವಕಾಶವಿದೆ.)
                ಊಟ ಹಾಕುವುದು ಎಲ್ಲಿ ಎಂದು ಮೊದಲೇ ತಿಳಿದಿರುವರು.
                ಮೊದಲ ಪಂಕ್ತಿಯಲ್ಲಿಯೇ ಕುಳಿತುಕೊಳ್ಳುವರು. ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳುವರು.
                ಇವರಿಗೆ ಶಕೆ ಏನು ತಾಗುವುದಿಲ್ಲ. ಆರಾಮ ಆಗಿ ಏನನ್ನು ಎಷ್ಟು ತಿನ್ನಬೇಕೋ ಅಷ್ಟು ತಿಂದು ಹೋಗುವರು. ಎಲೆಯ ಮೇಲೆ ಏನನ್ನು ಬಿಡುವುದಿಲ್ಲ.
                ಊಟದ ನಂತದ ಆಯ್ಸಕ್ರೀಮ್ ಅಥವಾ ಎಲೆ ಅಡಿಕೆ ನಿಡುತ್ತಿದ್ದರೇ ಖಂಡಿತಾ ಸ್ವೀಕರಿಸಿ ಹೋಗುವರು.
ಆಶೀರ್ವದಿಸಲು ಬರುವವರು : ಇನ್ನೊಂದು ಗುಂಪಿದೆ ಅಕ್ಷತೆಯನ್ನು ಹಾಕಬೇಕು ಎಂದು ಬರುವವರು. ಇದರಲ್ಲಿ ಹೆಚ್ಚಾಗಿ ವಯಸ್ಸಾದವರು ಬರುವರು. ಇತರೆ ಗುಂಪಿನ ಜನರು ಇದ್ದರೂ ಪ್ರಮಾಣ ಕಡಿಮೆಯಾಗಿ ಇರುವುದು.
ಸೂಚಕಗಳು:
                ಮದುವೆ ಕಾರ್ಯಕ್ರಮವನ್ನು ನೋಡುತ್ತಾ ಇರುವರು. ಹೇಗಾದರೂ ಮಾಡಿ ಎಲ್ಲವನ್ನು ಗಮನಿಸಲು ಅನೂವಾಗುವ ಸ್ಥಳದಲ್ಲಿ ಇರುವರು.
                ಅಕ್ಷತೆಯನ್ನು ಸರಿಯಾಗಿ ಹಾಕುವರು.
                ಮದುವೆ ನಂತರ ಊಡುಗರೆ ನೀಡುವರು. ಒತ್ತಾಯ ಮಾಡಿದರೇ ಮಾತ್ರ ಊಟ ಇಲ್ಲವಾದರೇ ನೆರವಾಗಿ ಮನೆಗೆ ಹೋಗುವರು.
            ಮಾಮೂಲಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಈ ರೀತಿಯ ವ್ಯಕ್ತಿಗಳು ಸವರ್ೆಸಾಮಾನ್ಯವಾಗಿದೆ. ಈ ಎಲ್ಲ ರೀತಿಯ ಜನರು ಇದ್ದರೇ ಮದುವೆ ಮದುವೆಯಂತೆ ಇರುವುದು ಮದುವೆ ಸರಾಗವಾಗಿ ಆಗಬೇಕಾದರೇ ಮಕ್ಕಳ ಗಲಾಟೆ, ಹೆಂಗಸರ ಬಳೆಗಳ ಸದ್ದು, ಗಂಡಸರ ಗಾಂಭೀರ್ಯತೆ, ಯುವಕ ಯುವತಿಯರ ಓಡಾಟ ಇವುಗಳ ಜೊತೆಗೆ ಹಿರಿಯರ ಆಶರ್ೀವಾದ ಇವೆಲ್ಲವು ಅಗತ್ಯವಾಗಿದೆ. ಈ ಎಲ್ಲವನ್ನು ಆಯಾ ಜನರು ಅದೇ ರೀತಿಯಾಗಿ ನಿರ್ವಹಿಸಿದರೇ ಮಾತ್ರ ಮದುವೆ ಸಂಭ್ರಮದಿಂದ ಕೂಡಿರುವುದು.
ಒಂದು ಮದುವೆ ಮಾಡುವುದು ಸುಲಭವಲ್ಲ ಅದಕ್ಕಾಗಿಯೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾಧೆ ಇರುವುದು. ಮದುವೆಯ ಮಾಡುವವರ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾ ಅಲ್ಲಿ ಭಾಗವಹಿಸುವ ಜನರ ಮನಸ್ಥಿತಿಯನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದರೇ ಆ ಸಮಾರಂಭ ಚಿರಕಾಲ ನೆನಪಿನಲ್ಲಿರುವುದು. ಆ ಪ್ರಯತ್ನ ಮುಂದಿನ ಸಮಾರಂಭದಿಂದಲೇ ಆಗಲಿ. ವರ್ಷ ವರ್ಷ ಬದಲಾವಣೆ ಆಗುತ್ತಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಈ ಅನುಭವ ಸಿಗದೇ ಇರಬಹುದು.  ಮಿಸ್ ಮಾಡಿಕೊಳ್ಳುವುದಿಲ್ಲ ಅಲ್ಲವಾ?

ವಿವೇಕ

ಕಾದಿರುವಳು ಶಬರಿ ರಾಮ ಬರುವನೆಂದು


ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು
ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು | ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು
ಕೊಳದಲ್ಲಿ ಮುಳುಗಿ ಮಿಂದು ಬಿಳಿ ನಾರು ಮುಡಿಯನುಟ್ಟು | ತಲೆವಾಗಿಲಿಂಗೆ ಬಂದು ಹೊಸತಿಲಲಿ ಕಾದು ನಿಂದು
ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು | ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು
ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು | ಗಿರಿ ಮೇಲಕೈದಿ ಕೈಯ ಮರೆ ಮಾಡಿ ನೋಡುತಿಹಳು
ಬಾ ರಾಮ, ರಾಮ ಎಂದು ಬರುತಿಹನು ಇಹನು ಎಂದು | ಹಗಲಿರುಳು ತವಕಿಸಿಹಳು ಕಳೆದಿಹವು ವರುಷ ಹಲವು
ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು| ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು
ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ | ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ
ಬಂದಾನೊ ಬಾರನೋ ಓ ಕಂಡಾನೊ ಕಾಣನೋ ಓ | ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ
ಬಾ ರಾಮ, ಬಾರ, ಬಾರಾ ಬಡವರನು ಕಾಯು ಬಾರಾ| ಕಂಗಾಣದಿವರ ಪ್ರೇಮ ನುಡಿಸೋತ ಮೂಕ ಪ್ರೇಮ
ಕಾದಿರುವುದು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು


ಟೀಚರ್

DzÀ±Àð ²PÀëPÀgÉAzÀgÉà AiÀiÁgÀÄ?
UÀÄgÀÄ ¥ÀgÀA¥ÀgÉAiÀÄ £ÀªÀÄä zÉñÀzÀ°è UÀÄgÀÄUÀ¼ÀÄ AiÀiÁªÁUÀ®Æ EvÀgÀjUÉ DzÀ±ÀðªÁVgÀ¨ÉÃPÀÄ JAzÀÄ ¸ÀªÀiÁd §AiÀĸÀÄvÀÛzÉ. CzÀgÀAvÉ £ÀªÀÄä EwºÁ¸ÀzÀ°è DV ºÉÆÃzÀ UÀÄgÀÄUÀ¼À §UÉÎ w½AiÀÄĪÀzÀÄ. E¥ÀàvÀÄÛ ªÀµÀðzÀ »AzÉ ¸ÀºÁ UÀÄgÀÄ«UÉ CzÉà jÃwAiÀÄ ªÀĺÀvÀé EvÀÄÛ. DzÀgÉà EwÛaãÀ ¢£ÀUÀ¼À°è UÀÄgÀÄ«£À §UÉÎ ªÉÆzÀ°zÀݵÀÄÖ UËgÀªÀ ¸ÀªÀiÁdPÉÌ E®è ªÀÄvÀÄÛ CzÀÄ PÀrªÉÄAiÀiÁUÀÄvÁÛ EzÉ. ¸ÀªÀiÁd ¸ÀºÁ »AzÉ EzÀÝ UÀÄgÀÄ«£ÀAvÉ FVãÀ ²PÀëPÀ£ÀÄß C¥ÉÃPÉë ªÀiÁqÀĪÀÅzÀÄ ¸ÀÆPÀÛªÀ®è. J¯Áè PÉëÃvÀæUÀ¼À°èAiÀÄÆ CªÀÄƯÁUÀæ §zÀ¯ÁªÀuÉ DUÀÄwÛzÉ CzÀgÀAvÉ ²PÀët PÉëÃvÀæªÀÇ §zÀ¯ÁUÀÄvÁÛ EAzÀÆ ¥ÀÆwðAiÀiÁV ªÀåªÀºÁjPÀªÁVzÉ. CzÀPÉÌ vÀPÀÌAvÉ UÀÄgÀÄ«£À PÁAiÀÄð¤ªÀðºÀuÉ §zÀ¯ÁVgÀĪÀÅzÀÄ. »A¢£À UÀÄgÀÄ EvÀgÀjUÉ ªÀiÁzÀjAiÀiÁVzÀÝ DzÀgÉà EA¢£À PÉ®ªÀÅ UÀÄgÀĪÀ£ÀÄß ªÀiÁzÀjAiÀiÁVj¹PÉÆAqÀgÉ CzÀQÌAvÀ zÀÄgÀAvÀ E£ÉÆßA¢®è. ²PÀëPÀ ¢£ÁZÀgÀuÉAiÀÄ F ¸ÀAzÀ¨sÀðzÀ°è ¸ÀªÀÄÄzÁAiÀÄ ²PÀëPÀªÀUÀð¢AzÀ ¤ÃjQë¸ÀĪÀ CA±ÀUÀ¼ÀÄ, ²PÀëPÀgÀÄ EgÀĪÀ jÃw F §UÉÎ CªÀ¯ÉÆÃQ¸À ¨ÉÃPÁzÀ CUÀvÀå«zÉ.
ªÀÄPÀ̽UÉ GvÀÛªÀÄ ¤ÃwAiÀÄ£ÀÄß w½¸À¨ÉÃPÁzÀ J®ègÀÆ ªÉÆzÀ®Ä vÁªÀÅ ªÀAiÀÄåQÛPÀªÁV £ÉÊwPÀªÁVgÀ¨ÉÃPÀÄ. CzÀÄ »A¢£À ²PÀëPÀgÀ°è EvÀÄÛ CªÀjUÉ ¸ÀªÀiÁdzÀ UËgÀªÀ EvÀÄÛ. DzÀgÉà EAzÀÄ ²PÀëPÀ ºÀÄzÉÝ PÉÆqÀÄPÉƼÀÄîªÀ ªÀåªÀºÁgÀPÉÌ ¹Ã«ÄvÀªÁVzÉ. ²PÀëPÀgÀ ªÀAiÀÄåQÛPÀ fêÀ£À vÉgÉzÀ ¥ÀĸÀÛPÀzÀAvÉ EgÀ¨ÉÃPÀÄ. CzÀÄ G½¢ªÀjUÉ ªÀiÁzÀjAiÀiÁUÀ¨ÉÃPÀÄ JA§ ªÀiÁvÀÄ EvÀÄÛ DzÀgÉà EAzÀÄ ²PÀëPÀgÀÄ ºÉüÀĪÀÅzÉà ¨ÉÃgÉ ±Á¯Á CªÀ¢üAiÀÄ°è £Á£ÀÄ ¸ÀjAiÀiÁV PÁAiÀÄð¤ªÀð»¸ÀÄwÛgÀÄªÉ G½zÀ CªÀ¢ü CzÀÄ £À£Àß ªÀAiÀÄåQÛPÀ JAzÀÄ ºÉüÀĪÀgÀÄ. DzÀgÉà ¸ÁªÀðd¤PÀ ªÀåQÛ AiÀiÁgÉà DzÀgÀÆ CªÀgÀÄ ªÉÆzÀ®Ä ªÀAiÀÄåQÛPÀªÁV £ÉÊwPÀgÁVgÀ¨ÉÃPÁzÀ CUÀvÀå«zÉ. PÁAiÀÄð¤ªÀð»¸ÀĪÀ ªÉüÉUÉ ªÀiÁvÀæ £ÁªÀÅ §zÀÝgÁzÀgÉà CzÀÄ MAzÀÄ ªÀåªÀºÁgÀªÉà «£ÀºÁ ¸ÉêÉAiÀÄ®è JA§ÄzÀ£ÀÄß CxÀðªÀiÁrPÉƼÀÄîªÀ CUÀvÀå«zÉ.
F jÃwAiÀÄ §zÀ¯ÁªÀuÉUÀ¼ÀÄ DUÀÄvÁÛ EzÀÝgÀÆ £ÀªÀÄä zÉñÀzÀ°è E£ÀÆß ¥ÁæªÀiÁtÂPÀªÁV PÁAiÀÄð¤ªÀð»¸ÀÄwÛgÀĪÀ ²PÀëPÀgÀÄ EgÀĪÀgÀÄ JA§ÄzÀÄ ¸ÀªÀiÁzsÁ£ÀzÀ ¸ÀAUÀwAiÀiÁVzÉ. DzÀgÉà ¸ÀA¥ÀÆtð ²PÀët ªÀåªÀ¸ÉÜAiÉÄà ªÀåªÀºÁjPÀªÁV PÁAiÀÄð¤ªÀð»¸ÀÄwÛgÀĪÁUÀ ²PÀëPÀgÀÄ AiÀiÁgÀÄ GvÀÛªÀÄgÀÄ JAzÀÄ »A¢£À UÀÄgÀÄUÀ½UÉ ºÉÆð¹ ºÉüÀĪÀÅzÀQÌAvÀ ¸ÀzÀåzÀ°è PÉ®ªÀÅ ²PÀëPÀgÀ°è PÀAqÀÄ §gÀÄwÛgÀĪÀ UÀÄt ªÀÄvÀÄÛ ªÀvÀð£ÉUÀ¼À£ÀÄß F PɼÀUÉ ¤ÃqÀ¯ÁVzÉ. AiÀiÁgÀÄ DzÀ±Àð GvÀÛªÀÄ ²PÀëPÀgÀÄ JA§ÄzÀ£ÀÄß CªÀgÀªÀgÀ «ªÉÃZÀ£ÉUÉ ©qÀ¯ÁVzÉ.
AiÀiÁgÀÄ DzÀ±Àð ²PÀëPÀ?
±Á¯É EgÀĪÀ Hj£À°è EgÀĪÀªÀgÀÄ
¥ÀlÖtzÀ°è ªÁ¹¸ÀÄwÛgÀĪÀªÀgÀÄ. ±Á¯ÉUÉ §gÀĪÀªÀgÀÄ.
vÀªÀÄä ªÀÄPÀ̼À£ÀÄß vÀªÀÄä ±Á¯ÉUÉ PÀ½¸ÀÄwÛgÀĪÀªÀgÀÄ
£À£Àß ¸ÉÃªÉ ¸ÀPÁðj ±Á¯ÉUÉ £À£Àß ªÀÄPÀ̼ÀÄ PÁ£ÉäAlUÉ K£ÀÄߪÀªÀgÀÄ
²PÀëPÀ ªÀÈwÛAiÉÆAzÉ GzÉÆåÃUÀ. CzÀgÀ°è ¥ÁæªÀiÁtÂPÀªÁV PÁAiÀÄð¤ªÀð»¸À®Ä ¥ÀæAiÀÄw߸ÀÄwÛgÀĪÀgÀÄ
²PÀëPÀ ªÀÈwÛ eÉÆvÉUÉ §rØ ªÀåªÀºÁgÀ, PÀ®Äè PÀtÂ, PÀnÖUÉ ªÀåªÀºÁgÀ, UÀÄwÛUÉ PÁAiÀÄð, ºÉAqÀzÀ ªÁå¥ÁgÀ EªÉ®èªÀÅ EgÀĪÀÅzÀÄ.
AiÀiÁªÀÅzÉà AiÉÆÃd£ÉAiÀÄ£ÀÄß AiÀıÀ¹éUÉƽ¸À®Ä ¥ÁæªÀiÁtÂPÀªÁV ¥ÀæAiÀÄw¸ÀĪÀgÀÄ.
K£Éà AiÉÆÃd£É §AzÀgÀÆ zÁR¯ÉAiÀÄ°è AiÀıÀ¹éUÉƽ¹ PÉÆqÀĪÀgÀÄ.
C¢üPÁjUÀ¼ÀÄ/d£À¥Àæw¤¢üUÀ¼ÉÆA¢UÉ ¸ÀA§AzsÀ ±Á¯ÉUÉ ¸ÀA§AzsÀ¥ÀlÖAvÉ ªÀiÁvÀæ EgÀĪÀÅzÀÄ
¢£À¤vÀå C¢üPÁjUÀ¼À/d£À¥Àæw¤¢üUÀ¼À ¨Á®§rAiÀÄÄvÁÛ CªÀgÀ »AzÉ NqÁqÀÄwÛgÀĪÀgÀÄ.
vÀ£Àß PÁAiÀÄð¢AzÀ K£ÁzÀgÀÆ ¥ÀæAiÉÆÃd£À DUÀ¨ÉÃPÀÄ JAzÀÄ §AiÀĸÀĪÀgÀÄ
¥Àæw wAUÀ¼ÀÄ ªÉÃvÀ£À §AzÀgÉ ¸ÁPÀÄ. AiÀiÁgÀÄ K£ÁzÀgÀÆ ºÁ¼ÁVºÉÆÃUÀ° JA§ ¨ÁªÀ£É EgÀĪÀÅzÀÄ.
±Á¯Á CªÀ¢üAiÀÄ eÉÆvÉUÉ ¨ÉÃgÉ CªÀ¢üAiÀÄÆ zÉÊ»PÀªÁV CxÀªÁ ªÀiÁ£À¹PÀªÁV ±Á¯ÉAiÉÆA¢UÉ EgÀĪÀgÀÄ
¸ÀªÀÄAiÀÄPÉÌ ¸ÀjAiÀiÁV §gÀĪÀÅ¢®è. §AzÀgÀÆ ªÀiÁ£À¹PÀªÁV ±Á¯ÉAiÉÆA¢UÉ EgÀzÀªÀgÀÄ.
ªÀÄPÀ̼À ©¹AiÀÄÆl AiÉÆÃd£ÉAiÀÄ£ÀÄß GvÀÛªÀĪÁV C£ÀĵÁ×£ÀUÉƽ¸ÀĪÀªÀgÀÄ.
ªÀÄPÀ̼À ©¹AiÀÄÆlzÉÆA¢UÉ vÁªÀÅ ºÉÆmÉÖ vÀÄA§ Hl ªÀiÁqÀĪÀªÀgÀÄ. ²PÀëPÀgÀ ©¹AiÀÄÆl AiÉÆÃd£É JAzÀÄ vÀ¥ÁàV CxÉÊð¹PÉÆAqÀªÀgÀÄ

«ªÉÃPÀ ¨ÉlÄ̽
vivekpy@gmail.com

Saturday, October 26, 2013

ನಮ್ಮವರಿಗೆ - ಶಿವ ಪ್ರಸಾದ,


ನಮ್ಮವರು
ಶಿವ ಪ್ರಸಾದ, 


ಸಾಲಕೊಡದವನ ಮುಂದೆ
ಸಾಲಾಗಿ ನಿಂತವರು
ನಮ್ಮವರು

ಪ್ಯಾಂಟು ಶರ್ಟಿಗೆ
ತೂತಿಕ್ಕಿಸಿಕೊಂಡು
ಅವರೆಂಜಲಿಗೂ
ಇವರಂಜದೆ
ನೆಕ್ಕೀ
ನೆಕ್ಖೀ...
ಉಕ್ಕಿಬರುವ ದು:ಖಕ್ಕೂ
ಮಿಕ್ಕವರು
ಇವರು

ಅದೇ....
ಸಾಲಾ...ಗಿ

ನಿಂತವರು..

ಕನ್ನಡ ಎಂದೊಡನೆ


ಕನ್ನಡ ಎಂದೊಡನೆ..?


ಕನ್ನಡ ಶಿವನಿಗೆ ತೆಲುಗು ಪಾರ್ವತಿ

ಬಹು ಭಾಷಿಕತೆ,ಬಹು ಸಾಂಸೃತಿಕತೆ,ಬಹು ಧಾರ್ಮಿಕತೆಗಳು ಈ ದೇಶದ ಸಹಜ ಅಸ್ಮಿತೆಗಳು. ಅವು ಮಾಡುವ ಮಾತುಕತೆಯಲ್ಲಿ,ಸಾಹಿತ್ಯ ಕೃತಿಗಳಲ್ಲಿ ,ಆಚರಣೆಗಳಲ್ಲಿ, ಕಲಾ ಪ್ರಕಾರಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಬಾಳ ಹೋರಾಟದಲ್ಲಿ ಮುಳುಗಿರುವ ಜನ , ಪರಿಸರದ ಭಾಷೆಗಳನ್ನು ಎರಡು ಹೊಳ್ಳೆಗಳ ಮೂಲಕ ಒಂದೇ ಉಸಿರನ್ನು ಪಡೆದುಬಿಡುವಂತೆ ಬಳಸುತ್ತಿರುತ್ತಾರೆ. ಪರಿಸರದ ಭಾಷೆಗಳಲ್ಲಿ ತಮ್ಮದೂ ಒಂದು ಎಂದಾಗ ಸಮಸ್ಯೆಯಿಲ್ಲ. ತಮ್ಮದೂ ವಿಶಿಷ್ಟ ಎಂದಾಗಲೂ ಅಷ್ಟು ಕಷ್ಟವಿಲ್ಲ. ತಮ್ಮದು ಶ್ರೇಷ್ಠ ಎಂದ ಕೂಡಲೇ ತಾರತಮ್ಯ ಆರಂಭವಾಗುತ್ತದೆ. ಆಗ ಕೊಡುಕೊಳು ಬದಲು ಹೇರಿಕೆ ,ಹೇರಿಕೆಯನ್ನು ವಿರೋಧಿಸುವ ಸಂಘರ್ಷ- ಹೀಗೇ ಬೇರೆಯದೇ ಸೆಣಸಾಟ ಶುರುವಾಗುತ್ತದೆ

Thursday, October 17, 2013

'ಅಮ್ಮ'ನೆಂಬ ಅಯಸ್ಕಾಂತ -ಶಿವ ಪ್ರಸಾದ

ಶಿವ ಪ್ರಸಾದ
ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

(Inspired by Sunil Rao ಅವನಿರಬೇಕಿತ್ತು (ಅವಧಿಯಲ್ಲಿ ಪ್ರಕಟವಾದ ಕವಿತೆ))

ನಾನು ಕೂಡ ಭಾರತೀಯ - ಪವನ್ ಪಾರುಪತ್ತೇದಾರ


ತಾತ್ಸಾರ ಎಂದಿಗೂ ನನಗೆ ಕಟ್ಟಿಟ್ಟ ಬುತ್ತಿ
ಜನಿವಾರ ಹಿಡಿದೊಡನೆ ಜಗಕೆ ನಾ ದೂರ
ಸಂಸ್ಕೃತವ ಉಲಿದೊಡನೆ ಸಂಘಕ್ಕೆ ಭಾರ
ತೆಗಳೋಕೆ ನಿಮಗೊಂದು ವಸ್ತುವು ನಾನು
ಪವನ್ ಪಾರುಪತ್ತೇದಾರ
ನನ್ನ ತೆಗೆಳಿದೊಡನೆ ಹತ್ತುವಿರಿ ಖ್ಯಾತಿಯ ಪ್ಲೇನು
ತೆಗೆಳುವ ಭರದಲ್ಲಿ ಮರೆಯದಿರಿ ಗೆಳೆಯರೆ
ನಾನು ಕೂಡ ನಿಮ್ಮಂತೆ ಭಾರತೀಯ

ಮೀಸಲಿನ ಗೋಜಿಗೆ ಎಂದು ಹೋಗಿಲ್ಲ
ಸರ್ಕಾರಿ ಕೆಲಸಕ್ಕೆ ಅವಕಾಶ ಕೇಳಿಲ್ಲ
ಸವಲತ್ತು ಮರೆತಿರುವೆ ಹುಟ್ಟಿದಾಗಿಂದ
ಮಸಲತ್ತೆ ನೋಡಿರುವೆ ಮೂಲೆ ಮೂಲೆಯಿಂದ
ಹಿಂದೆಂದೋ ಯಾವನೋ ಮಾಡಿದ ಶೋಷಣೆಗೆ
ಇಂದಿನ ಯುವ ಪೀಳಿಗೆಗೆ ಶಿಕ್ಷೆ ಯಾಕೆ
ಜನಿವಾರದವರು ಜೋಪಡಿಯಲು ಇರುವರು
ಜಾತಿಯ ಹೆಸರಿನಲಿ ತಾರತಮ್ಯ ಯಾಕೆ
ಹಸಿವಿಗೆ ಬಡತನಕೆ ಜಾತಿಯ ಹಂಗಿಲ್ಲ
ಜಾತಿ ಜಾತಿ ನಡುವೆ ಕಂದಕವು ಏಕೆ
ಮರೆಯದಿರಿ ಗೆಳೆಯರೆ ಜಾತಿಗೂ ಮುಂಚೆ
ನಾನು ಕೂಡ ನಿಮ್ಮಂತೆ ಭಾರತೀಯ

ಕೆಲವರ ಕುತಂತ್ರ ಹೆಸರು ಮಾಡುವ ಹುನ್ನಾರ
ಒಂದು ಪಂಥವನು ಬೈದೊಡೆ ಬೆಳೆದುಬಿಡೋ ಆಸೆ
ಬಿತ್ತುತಿದೆ ದ್ವೇಶವನು ನಮ್ಮ ನಮ್ಮಗಳ ನಡುವೆ
ಎಲ್ಲರೊಳು ಒಂದಾಗಿ ಎಲ್ಲರೊಳು ಬೆರೆತು
ಒಬ್ಬರನೊಬ್ಬರು ಅರಿತು ಪರಸ್ಪರ ಗೌರವಿಸಿ
ಒಟ್ಟಾಗಿ ಬಾಳುವುದ ನೋಡುವಾಸೆ ಎನಗೆ
ಮರೆಯದಿರಿ ಗೆಳೆಯರೆ ನಿಮ್ಮ ಅಣ್ಣತಮ್ಮನು ನಾನು
ನಾನು ಕೂಡ ನಿಮ್ಮಂತೆ ಭಾರತೀಯ

ಪವನ್ ಪಾರುಪತ್ತೇದಾರ :-

Wednesday, October 16, 2013

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 1

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 2

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 3

ಸಂವಾದ - ಶತಾವಧಾನಿ ಡಾ ಆರ್ ಗಣೇಶ್

ಅವರಣದ ಸುತ್ತ - ಡಾ|| ಎಸ್ ಎಲ್ ಭೈರಪ್ಪ

ಡಾ|| ಎಸ್ ಎಲ್ ಭೈರಪ್ಪರವರ - ಸಂವಾದ

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 1

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 2

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 3

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 4

Tuesday, October 15, 2013

ತುಳಿಸಿಕೊಂಡವರು ಇವರು - ಪವನ್ ಪಾರುಪತ್ತೇದಾರ


ಪವನ್ ಪಾರುಪತ್ತೇದಾರ


ಅದು ಸಿಂಧೂ ನದಿಯ ಸೇತುವೆ
ಅಲ್ಲಲ್ಲಿ ಕಾಂಕ್ರೀಟಿನ ಕೊರತೆ
ಕಬ್ಬಿಣದ ಸಲಾಕೆಗಳ ಅಲುಗಾಟ ಬೇರೆ
ತಟದಾಕಡೆ ಹೆಸರಾಂತ ದೇಗುಲ
ತಟದೀಕಡೆ ಜಾತ್ರೆ ಪೇಟೆ ಪೆಂಡಾಲು

ಸೇತುವೆಯ ಮೇಲೆ ಇಪ್ಪತ್ತೈದು ಸಾವಿರ ಜನೆ
ಎಲ್ಲರ ಮನದಲ್ಲೂ ಒಂದೇ ಬಯಕೆ
ಆಯುಧಗಳಿಗೊಂದಷ್ಟು ಶಕ್ತಿ ಬರಲೆಂದು
ಗುದ್ದಲಿ ಪಿಕಾಸಿ ಶನಕೆ ಕುಡುಗೋಲು
ನೇಗಿಲು ವೊರವಾಲೆ ಇನ್ನು ಇನ್ನೆಷ್ಟೋ

ಈಗ ಅದೇ ಸೇತುವೆ ಇನ್ನೂ ಭದ್ರವಾಗಿದೆ
ಆದರಲ್ಲಿ ಎಲ್ಲರಲ್ಲು ಭಯದ ವಾತಾವರಣ
ಕಾಂಕ್ರೀಟು ಗುಂಡಿಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ
ಕಬ್ಬಿಣದ ಸಲಾಕೆಗಳಿಗೆ ಕರುಳು ನರಗಳ ಹಾರ
ಇಲ್ಲಿ ಯಾರು ಪಾಪಿಗಳೋ ಗೊತ್ತಿಲ್ಲ
ತುಳಿದವರ ತುಳಿಸಿಕೊಂಡವರ

ಸಿಂಧು ಹರಿಯುತ್ತಳೇ ಇದ್ದಾಳೆ
ರಕ್ತದ ತೊಟ್ಟು ಸೇತುವೆಯ ಸೊಂದಿಗಳಿಂದ
ಜಾತ್ರೆ ಪೇಟೆ ಪೆಂಡಾಲುಗಳಲ್ಲಿನ
ಸರಕುಗಳೆಲ್ಲಾ ಸೂತಕದ ಮೌನ
ಗಿರಗಿಟ್ಟಲೆ ಹಿಡಿದ ಹುಡುಗನ ಕೈ ಹಾಗೆ ಇದೆ
ಜೋಳಿಗೆಯಲ್ಲಿ ತುಂಬಿಕೊಂಡಿದ್ದ ಕಡಲೆ ಹಾಗೆ ಇದೆ
ಆದರೆ ಯಾರಿಗೂ ಜೀವವಿಲ್ಲ
ಶಕ್ತಿ ದೇವತೆ ಆಯುಧಗಳ ಹಿಡಿದು ಮೌನವಾಗಿದ್ದಾಳೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ

(ಮಧ್ಯಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದವರ ಕುರಿತು )

ದೇವರು ರುಜು ಮಾಡಿದನು - ಕುವೆಂಪು

ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು.
ಹೂಬಿಸಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ‍್ತೊದಲು
ರಂಜಿಸೆ ಇಕ್ಕೆಲದಲಿ ಹೊಮ್ಮಳಲು

ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

ಗ್ರಾಹಕರ ಹಿತರಕ್ಷಣೆ: ನಿಮಗಿದು ಗೊತ್ತಿರಲಿ - ಪಿ.ಎಸ್.ಪರ್ವತಿ



                                                - ಪಿ.ಎಸ್.ಪರ್ವತಿ  , ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗದಗ

  ಹಣ ನೀಡಿ ಪಡೆಯುವ ಸರಕು ಅಥವಾ ಸೇವೆಯಿಂದಾಗಿ ನಾವು ಗ್ರಾಹಕರೆನಿಸಿಕೊಳ್ಳುತ್ತೇವೆ. ಈ ರೀತಿ ಹಣ ಕೊಟ್ಟು ಪಡೆದ ಸರಕು ಅಥವಾ ಸೇವೆಗಳಲ್ಲಿ ಅದು ಕೊಟ್ಟ ಬೆಲೆಗೆ ಅನುಗುಣವಾದ ಗುಣಮಟ್ಟವನ್ನು ಹೊಂದಿರದಿದ್ದಲ್ಲಿ ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಗ್ರಾಹಕರಿಗೆ ಕಾನೂನು ಒದಗಿಸಿದೆ. ಡಿಸೆಂಬರ್ ೨೪ ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ಜಾಗೃತಿಗಾಗಿ ಈ ಲೇಖನ            

ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ.  ಆದರೆ ನಾವದನ್ನು ಗಮನಸಿರುವುದಿಲ್ಲ.  ಬೆಳಗಿನ ಹಲ್ಲುಜ್ಜುವ ಹಲ್ಲುಪುಡಿ ಅಥವಾ ಟೂಥ್‌ಪೇಸ್ಟ್, ಹಾಲಿನಿಂದ ಹಿಡಿದು ತಿಂಡಿ, ಊಟಕ್ಕಾಗಿ ಅಂಗಡಿಯಲ್ಲಿ ಕೊಂಡು ತಂದ ಆಹಾರ ಪದಾರ್ಥಗಳು, ಕುಡಿಯುವ ನಲ್ಲಿ ನೀರು, ಸಂಚರಿಸುವ ರಸ್ತೆ, ಬಸ್ ಸೇವೆಯಲ್ಲದೇ ಶಾಲಾ-ಕಾಲೇಜು ವಿದ್ಯಾರ್ಜನೆಗೂ ಸಹ ಶುಲ್ಕ ನೀಡಿ ಗ್ರಾಹಕರಾಗುತ್ತೇವೆ.  ಬಟ್ಟೆ ಖರೀದಿ , ನಂತರ ಹೊಲಿಯುವಿಕೆಯ ಸೇವೆ ಹಾಗೂ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋದಾಗ ಅವರು ನೀಡುವ ಸೇವೆಗೆ ಗ್ರಾಹಕರಾಗುತ್ತೇವೆ. ದಿನನಿತ್ಯದ ಯಾವುದೇ ಕೆಲಸ-ಕಾರ್ಯ ತೆಗೆದುಕೊಂಡರೂ ನಾವು ಯಾವುದಾದರೂ ಸರಕು ಅಥವಾ ಸೇವೆಯ ಗ್ರಾಹಕರಾಗಿರುತ್ತೇವೆ.

       ಈ ರೀತಿ ಹಣ ತೆತ್ತು ಪಡೆದ ಸರಕು ಅಥವಾ ಸೇವೆಯ ಗುಣಮಟ್ಟದ ಬಗ್ಗೆ ಬಳಕೆದಾರ ಅಷ್ಟೊಂದು ಗಮನಹರಿಸುವುದಿಲ್ಲ. ಸೇವಾ ನ್ಯೂನತೆಯಾದಾಗ ಆ ಸಂದರ್ಬದಲ್ಲಿ ಸ್ವಲ್ಪ ಗೊಣಗಬಹುದೇ ವಿನಹ ಪರಿಹಾರಕ್ಕೆ ಹೋರಾಡುವುದಿಲ್ಲ.  ಇದರಿಂದಾಗಿ ಗ್ರಾಹಕ  ಕಡಿಮೆ ತೂಕದ ಅಳತೆ, ಕಲಬೆರಕೆ ಅಥವಾ ನಕಲು ವಸ್ತುಗಳ ಶೋಷಣೆಗೊಳಗಾಗುತ್ತಾನೆ. ಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲ ಎಂಬುದು ಇದರ ಅರ್ಥವಲ್ಲ.  ಬಳಕೆದಾರರ   ಅಸಹಾಯಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ಕಾಯಿದೆ ಮತ್ತು ಕಾನೂನುಗಳನ್ನು ಜಾರಿಗೊಳಿಸಿದೆ.  ಬಳಕೆದಾರರಿಗೆ ಗುಣಮಟ್ಟದ ಸರಕುಗಳು ದೊರೆಯಲಿ ಎಂಬ ಉದ್ದೇಶದಿಂದ ಸೂಕ್ತ ಏರ್ಪಾಟು ಮಾಡಿದೆ.  ಇದಕ್ಕಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೆ ಗ್ರಾಹಕರ ವೇದಿಕೆಗಳನ್ನು ರಚಿಸಿದೆ.

        ಗ್ರಾಹಕರ ರಕ್ಷಣೆಗಾಗಿ ಇರುವ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಜನರು ಅರಿತುಕೊಂಡಾಗ ಮಾತ್ರ ಈ ಕ್ರಮಗಳು ನಿರೀಕ್ಷಿತ ಫಲ ನೀಡುತ್ತವೆ.  ಈ ಬಗ್ಗೆ ಗ್ರಾಹಕರು ಕನಿಷ್ಟ ಮಟ್ಟದ ಮಾಹಿತಿ ಹೊಂದಿರಬೇಕು.  ತಮ್ಮ ಹಕ್ಕುಗಳಿಗೆ ಚ್ಯುತಿ ಬರದಂತೆ ನಿಗಾ ವಹಿಸಬೇಕು.  ಮಾರಾಟದ ಆಕರ್ಷಕ ಕ್ರಮಗಳಿಗೆ ಮೋಸ ಹೋಗದಷ್ಟು ಜಾಗರೂಕರಾಗಿದ್ದು, ತಾಳ್ಮೆಯಿಂದ   ತಮ್ಮ ಹಕ್ಕು ಜವಾಬ್ದಾರಿ ಅರಿತುಕೊಂಡಾಗ ಶೋಷಣೆ ತಪ್ಪಿಸಲು ಸಾಧ್ಯವಾಗುತ್ತದೆ.

ಗ್ರಾಹಕರ ಹಕ್ಕು

       ಗ್ರಾಹಕರಾಗಿ ನಮಗಿರುವ ಹಕ್ಕುಗಳ ಬಗ್ಗೆ ನಾವು ಅರಿತುಕೊಳ್ಳಬೇಕು.  ಅಂದಾಗ ಮಾತ್ರ ನಾವು ನಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತದೆ.  ಸ್ಥೂಲವಾಗಿ ಹೇಳುವುದಾದಲ್ಲಿ ಗ್ರಾಹಕರಾಗಿ ನಮಗೆ ಎಂಟು ವಿಧದ ಹಕ್ಕುಗಳಿವೆ.  ಅವುಗಳೆಂದರೆ:

೧) ಮೂಲಭೂತ ಅಗತ್ಯಗಳನ್ನು ಪೂರೈಸುವ ಹಕ್ಕು   ೨)  ಸುರಕ್ಷತೆಯ ಹಕ್ಕು   ೩) ಮಾಹಿತಿ ಪಡೆಯುವ ಹಕ್ಕು  ೪) ಆಯ್ಕೆ ಹಕ್ಕು  ೫) ಕೇಳಿಸಿಕೊಳ್ಳುವ ಹಕ್ಕು   ೬) ಪರಿಹಾರ ಪಡೆಯುವ ಹಕ್ಕು  ೭) ಗ್ರಾಹಕ ಶಿಕ್ಷಣದ ಹಕ್ಕು ಹಾಗೂ ೮) ಆರೋಗ್ಯಕರ ಮತ್ತು ಸಹನೀಯ ಪರಿಸರದ ಹಕ್ಕು

       ಪರಿಹಾರ ಪಡೆಯುವ ಹಕ್ಕಿನ ಅನ್ವಯ ಭಾರತದ ಸಂಸತ್ತು ೧೯೮೬ ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮ ಜಾರಿಗೆ ತಂದಿದೆ.  ಈ ಕಾನೂನಿನ ಅಡಿಯಲ್ಲಿ ನಾವು ಖರೀದಿಸಿದ ಸರಕು ದೋಷಪೂರಿತವಾಗಿದ್ದಲ್ಲಿ ಅಥವಾ ಹಣ ನೀಡಿ ಪಡೆದ ಸೇವೆಯಲ್ಲಿ ನ್ಯೂನತೆಯಿದ್ದರೆ ನಾವು ಸುಲಭವಾಗಿ ಪರಿಹಾರವನ್ನು ಪಡೆಯಬಹುದು.    ಈ ಕಾನೂನು ಅನುಷ್ಟಾನಕ್ಕೆ ತರಲು ಮೂರು ಹಂತಗಳಲ್ಲಿ ಗ್ರಾಹಕರ ನ್ಯಾಯಾಲಯಗಳನ್ನು ರಚಿಸಲಾಗಿದೆ.  ಜಿಲ್ಲಾ ಮಟ್ಟದ ಗ್ರಾಹಕರ ವೇದಿಕೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ  ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ. ನಾವು ಸಾಮಾನ್ಯವಾಗಿ ನಮ್ಮ ದೂರುಗಳನ್ನು ಜಿಲ್ಲಾ ಗ್ರಾಹಕರ ವೇದಿಕೆಗೆ ಸಲ್ಲಿಸಬಹುದು.  ಈ ಗ್ರಾಹಕ ನ್ಯಾಯಾಲಯಗಳ ಶುಲ್ಕ ಬಹಳ ಕಡಿಮೆ. ತ್ವರಿತ ಇತ್ಯರ್ಥಕ್ಕೆ ಅವಕಾಶವಿರುವ ಈ ನ್ಯಾಯಾಲಯದಲ್ಲಿ ಗ್ರಾಹಕನೇ ತನ್ನ ವಾದ ಮಂಡಿಸಬಹುದು.  ಗ್ರಾಹಕ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಪ್ರತಿವಾದಿ ನಿಮಗೆ ನೀಡದಿದ್ದರೆ ಅವರಿಗೆ ದಂಡನೆ ಹಾಗೂ ಸಜೆ ವಿಧಿಸುವ ಅಧಿಕಾರ ಈ ನ್ಯಾಯಾಲಯಗಳಿಗಿದೆ. ಮೋಸ ಹೋಗಬೇಡಿ:

       ಇಂದಿನ ಮಾರುಕಟ್ಟೆ ಬಹು ಸಂಕೀರ್ಣವಾಗಿದ್ದು ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಬಹು ಜಾಗರೂಕರಾಗಿರಬೇಕಲ್ಲದೆ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ ನಿರ್ಧರಿಸಿ.  ಕೊಂಡ ಪದಾರ್ಥದೊಂದಿಗೆ ನೀಡುವ ಗ್ಯಾರಂಟಿ ಪತ್ರವನ್ನು  ಗಮನಿಸಬೇಕು.  ತಕ್ಕಡಿ ಸರಿಯಾಗಿರುವುದನ್ನು ಗಮನಿಸಲು ತೂಕದ ಕಲ್ಲುಗಳನ್ನು (ಬೊಟ್ಟುಗಳನ್ನು) ಅದಲು ಬದಲು ಮಾಡಿ. ಆಗ ಮೋಸ ಹೋಗಿದ್ದರೆ ತಿಳಿಯುತ್ತದೆ.  ತೂಕದ  ಸಾಧನಗಳನ್ನು ಕಾನೂನು ಮಾಪನ ಇಲಾಖೆ ಪ್ರತಿ ವರ್ಷ  ಸತ್ಯಾಪನೆಗೆ ಒಳಪಡಿಸಿ, ಸರಿಯಾಗಿದ್ದರೆ ಮುದ್ರೆ ಹಾಕಿ ಖಚಿತಪಡಿಸುತ್ತಾರೆ.  ಗ್ರಾಹಕರು ಇದನ್ನು ಅರಿತಿರಬೇಕು.  ಅಂಗಡಿಯಲ್ಲಿ ಯಾವ ಸರಕುಕೊಂಡರೂ, ಕೊಳ್ಳುವ ಮೊದಲು ದೋಷಗಳಿಗಾಗಿ ಅದನ್ನು ಅಂಗಡಿಯಲ್ಲೇ ಪರಿಶೀಲಿಸಿ ಕೊಂಡದ್ದಕ್ಕೆ ರಸೀದಿ ಪಡೆಯಿರಿ.  ತಕ್ಕಡಿಯ ಕೆಳಭಾಗದಲ್ಲಿ ಅಯಸ್ಕಾಂತ ಅಥವಾ ಅಳತೆ ಮಾಪನದಲ್ಲಿ ಒಳಭಾಗದಲ್ಲಿ ಯಾವುದೇ ವಸ್ತು ಅಂಟಿಸಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.  ರಸೀದಿಯಿಲ್ಲದೇ ಹಣ ಕಡಿಮೆಯಾಗುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ.  ಖರೀದಿ ನಂತರ ಸರಕಿನಲ್ಲಿ ದೋಷವಿದ್ದಲ್ಲಿ ಪರಿಹಾರ ಪಡೆಯಲು ಈ ರಸೀದಿ ಬೇಕೆ ಬೇಕು.  ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಬಗ್ಗೆ ತಿಳಿದುಕೊಂಡಿರಬೇಕು.  ಅನೇಕ ತರಹದ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು ಅವುಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯ.

      ಮಾರುಕಟ್ಟೆಯಲ್ಲಿ ಈಗ ಅನೇಕ ಪೊಟ್ಟಣ ಸಾಮಗ್ರಿ ಲಭ್ಯವಾಗುತ್ತಿವೆ.  ಪೊಟ್ಟಣಗಳ ಮೇಲೆ ತಯಾರಕರ ಹೆಸರು ವಿಳಾಸ, ಪದಾರ್ಥದ ಹೆಸರು, ನಿವ್ವಳ ತೂಕ, ಪ್ಯಾಕ್ ಮಾಡಿದ ತಿಂಗಳ ವರ್ಷ ಹಾಗೂ ಗರಿಷ್ಟ ಬೆಲೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು.  ಯಾವುದೇ ಕಾರಣಕ್ಕೂ ಮುದ್ರಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ.  ಸರಕಿನ ಗುಣಮಟ್ಟವನ್ನು ಖಾತರಿ ಮಾಡಲು ಸರ್ಕಾರವು ಐ.ಎಸ್.ಐ. ಮಾನ್ಯತೆ ನೀಡುತ್ತದೆ.  ಈ ಚಿಹ್ನೆ ಇರುವ ಸರಕನ್ನೆ ಕೊಳ್ಳಿರಿ.

       ಚಿನ್ನ , ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಾಗ ಫ್ಯಾನ್ ನಿಲ್ಲಿಸಲು ತಿಳಿಸಬೇಕು. ಇಲ್ಲವಾದಲ್ಲಿ ತೂಕ ಬದಲಾಗಬಹುದಾಗಿದೆ.  ಸೀಮೆ ಎಣ್ಣೆ ಖರೀದಿಸುವಾಗ ಲೀಟರ್  ನೆಗ್ಗಿದ್ದರೆ  ಅಥವಾ ಹಿಡಿಕೆಯಲ್ಲಿ ರಂಧ್ರವಾಗಿ ಎಣ್ಣೆ  ಸೋರಿಕೆಯಾಗುತ್ತಿದ್ದಲ್ಲಿ ಅಂತಹ ಅಳತೆ ಒಪ್ಪಬೇಡಿ.  ಮಾಪನದಲ್ಲಿ ನೊರೆ ನಿಂತರ ಎಣ್ಣೆ ಖರೀದಿಸಿ. ಅಡಿಗೆ ಅನಿಲದ ಸಿಲೆಂಡರ್ ೧೪.೨ ಕಿಲೋಗ್ರಾಂ ಅನಿಲದ ಜೊತೆಗೆ ಅದರಲ್ಲಿ ನಮೂದಿಸಿರುವ ತೂಕವಿರುವುದನ್ನು ಗಮನಿಸಬೇಕು. ಪೆಟ್ರೋಲ್ ಅಥವಾ ಡೀಸೈಲ್ ಕೊಳ್ಳುವಾಗ ಸ್ವಿಚ್ ಹಾಕಿದ ತಕ್ಷಣ ಮೀಟರ್ ಸೊನ್ನೆ (೦) ತೋರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.  ತಂಪು ಪಾನೀಯ ಅಥವಾ ಹಣ್ಣಿನ ರಸದ ಪಾನೀಯ ಬಾಟಲ್‌ಗಳ ಮೇಲೆ ಅದನ್ನು ಪ್ಯಾಕ್ ಮಾಡಿದ ಅವಧಿ ಹಾಗೂ ಮಾರಾಟ ಬೆಲೆ ಇರಬೇಕಾದುದು ಕಡ್ಡಾಯ.

ಅಪಾರ  ಅಮಿಷ:

       ಊರಿಗೆ  ಹೊಸ ಹೊಸ ಕಂಪನಿಗಳು ಬಂದು ಗ್ರಾಹಕರಿಗೆ ಅಪಾರ ಅಮಿಷಗಳನ್ನು ತೋರಿ ವ್ಯವಹಾರ ನಡೆಸುವ ಪ್ರಸಂಗಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಇಂತಹ ಕಂಪನಿಗಳೊಂದಿಗೆ ವ್ಯವಹಾರ ಮಾಡಿದಲ್ಲಿ ಮೋಸ ಹೋಗುವ ಸಂಭವ ಹೆಚ್ಚು.  ಇಂತಹ ಕಂಪನಿಗಳು ಹೇಳ ಹೆಸರಿಲ್ಲದೇ ದಿನ ಬೆಳಗಾಗುವುದರಲ್ಲಿ ಮಾಯವಾಗುವುದರಿಂದ ಅವರ ಮೇಲೆ ಪ್ರಕರಣ ಹಾಕುವುದಾಗಲಿ ಅಥವಾ ಪರಿಹಾರ ಪಡೆಯುವುದು ಕಷ್ಟಸಾಧ್ಯ.  ಆದ್ದರಿಂದ ಭಾರೀ ರಿಯಾಯತಿ , ಹೆಚ್ಚು ಅಮಿಷ ತೋರುವ ಕಂಪನಿಗಳ ಬಗ್ಗೆ  ಗ್ರಾಹಕರು ಸದಾ ಜಾಗೃತರಾಗಿರಬೇಕು.

       ಕೊಳ್ಳುವ ಶಕ್ತಿ ಹೆಚ್ಚಿದಷ್ಟು, ಮರುಳು ಮಾಡುವ ಜಾಹೀರಾತುಗಳಿಂದ ಕಣ್ಣಿಗೆ ಕಂಡದ್ದನ್ನೆಲ್ಲ ಖರೀದಿಸಬೇಕೆಂಬ ಚಪಲ ಹೆಚ್ಚುತ್ತದೆ.  ಮಾರುಕಟ್ಟೆ ಅಷ್ಟೇ ಅಲ್ಲ, ಪ್ರವಾಸ ಸಂದರ್ಭದಲ್ಲೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಗ್ರಾಹಕ ಮಾರು ಹೋಗುತ್ತಾನೆ.  ಉದ್ಯಮ, ವ್ಯಾಪಾರ ಅಭಿವೃದ್ಧಿಯಾದಂತೆ ಮಾರಾಟದ ಮಾದರಿಗಳು ಬದಲಾಗುತ್ತಿವೆ. ಮಾಹಿತಿ ತಂತ್ರಜ್ಞಾನದ ಫಲವಾಗಿ ಆನ್ ಲೈನ್ ಶಾಪಿಂಗ್, ಟೆಲಿಶಾಪಿಂಗ್, ಡೈರೆಕ್ಟ್ ಸೆಲ್ಲಿಂಗ್ ಎಂಬ ಪದ್ಧತಿಗಳು ಈಗ ಚಾಲ್ತಿಯಲ್ಲಿವೆ.

       ಆದ್ದರಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ಬೆಲೆ ಹಾಗೂ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದು ಅಗತ್ಯ.  ಸಾಮಗ್ರಿ ಅಥವಾ ಸರಕು ಖರೀದಿಯಲ್ಲಿ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಅಶುದ್ಧತೆ ಅಥವಾ ನ್ಯೂನತೆ ಕಂಡುಬಂದಲ್ಲಿ ಗ್ರಾಹಕರು ಕೂಡಲೇ ದೂರು ನೀಡುವ ಮೂಲಕ ವಂಚನೆ ತಡೆಗಟ್ಟಲು ಮುಂದಾಗಬೇಕು.  ಸರಕಾರದ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ದೊರೆತಾಗ ಮಾತ್ರ ಗ್ರಾಹಕರ ಹಿತರಕ್ಷಣೆ ಸಾಧ್ಯವಾಗುತ್ತದೆ.

Krupe : http://kannadaratna.com/lekhana/consumer_rights.html

Monday, October 14, 2013

ಯುಗಾದಿ


 ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಶ್ರೀ ಶರತ್ ಚಕ್ರವರ್ತಿ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.



Sunday, October 13, 2013

ವೇಶ್ಯೆ

ಬೆವರಿಗೆ
ಸಾವೂ
ಒಣಗಿದಂತೆ

ಸಾಯದ
ಸಣ್ಣ ಬಾಡಿನ ದೇಹ
ತೂಕಕ್ಕಿಲ್ಲ
ಮಾರಾಟಕ್ಕಿದೆ...

Tuesday, October 8, 2013

ಕುವೆಂಪು ನೆನಪು - ಎಚ್.ಎಲ್.ನಾಗೇಗೌಡರು




ಕುವೆಂಪುರವರು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬರಬೇಕಾದರೆ ಕೊಂಚ ಹೊತ್ತು ಮೌನ ತಾಳಿ ಆಮೇಲೆ ಶುರುಮಾಡುತ್ತಾರೆ. ಹಾಗೆ ಮಾಡಿ "ಮೊನ್ನೆ ಪುಟ್ಟಯ್ಯ ನಾಯ್ಕರು ಬಂದಿದ್ರು. ನಿಮ್ಮ ಶಿವಮೊಗ್ಗ ಮ್ಯೂಸಿಯಂನಲ್ಲಿ ಕೆಲವು ವಿಷಯಗಳು ದೊರೆಯಬಹುದು ಎಂದರು" ಎಂದು ಹೇಳಿದಾಗ, ನಾನು "ಯಾವ ಬಗ್ಗೆ?" ಎಂದು ಕೇಳಿದೆ.



"ಅದೇ ನನ್ನ ಕಾದಂಬರಿಗೆ ಸಾಮಗ್ರಿ ಸಂಗ್ರಹಿಸುತ್ತಿದ್ದೇನಲ್ಲ ಅದರ ಬಗ್ಗೆ. ಕೆಲವು ಒದಗಿಸಿದ್ದಾರೆ. ಮ್ಯೂಸಿಯಂನಲ್ಲಿ ತುಂಬಾ ಹಳೆಯ ಗ್ರಂಥಗಳನ್ನು ಸಂಗ್ರಹಿಸಿಟ್ಟಿದ್ದೀರಂತೆ. ಒಂದ್ಸಲ ಹೋದಾಗ ನೋಡಿಕೊಂಡು ಬರ್ತೀನಿ." ಎಂದರು.



"ಹೌದು ಇವೆ. ಹಳೆಯ ಕಡತಗಳು, ಓಲೆಗರಿಗಳು, ತಾಮ್ರ ಲಿಖಿತಗಳು ಅನೇಕ ಇವೆ. ಹುಡುಕಿದರೆ ನಿಮಗೆ ಕೆಲವು ಸಂಗತಿಗಳು ಸಿಗಬಹುದು. " ಎಂದೆ.



"ಚಿನ್ನೇಗೌಡರು ಕ್ರೈಸ್ತರಾದದ್ದು ಯಾವಾಗ ಎಂಬ ವಿಷಯ ಈಗ ಗೊತ್ತಾಗಿದೆ. ತಪ್ಪು ನಮ್ಮದು. ವೇದೋಪನಿಷತ್ತುಗಳ ಸಾರವನ್ನು ಮನೆಮನೆಗೆ ಮುಟ್ಟಿಸದೇ ಹೋದ ತಪ್ಪು ನಮ್ಮವರದು. ಕ್ರೈಸ್ತನ ಬಗ್ಗೆ ನನಗೆ ಗೌರವವಿದೆ. ಆದರೆ ಅನ್ಯಮತ ಅವಲಂಬಿಸಬೇಕೆ, ನಮ್ಮ ಮತದಲ್ಲಿ ಏನೂ ಇಲ್ಲ ಅಂತ ಹೇಳಿ! ವೇದೋಪನಿಷತ್ತುಗಳು ತಮ್ಮ ಸ್ವಂತ ಆಸ್ತಿ ಎಂದು ನಮ್ಮವರು ಮಾಡಿದ್ದು ತಪ್ಪು. ದೇವಂಗಿ ರಾಮಣ್ಣಗೌಡರು ಅವರೆಲ್ಲಾ ಕ್ರೈಸ್ತರಾಗಬೇಕು ಅಂತ ತೀರ್ಮಾನ ಮಾಡಿ ಹಾರೆ ತಗೊಂಡು ನಿಂತಿದ್ರಂತೆ, ತುಳಸೀ ಕಟ್ಟೆ ಕಿತ್ತಾಕೋದಕ್ಕೆ, ಅವರ ತಮ್ಮ ನಾಗಪ್ಪಗೌಡರು- ಈಗ್ಲೂ ಇದಾರೆ - ಕೈಲಿ ಕೋವಿ ಹಿಡಿದು ನೀವು ತುಳಸಿ ಕಟ್ಟೆ ಕಿತ್ರೆ ಬಂದೂಕಿನಲ್ಲಿ ಸುಡ್ತೀನಿ ಅಂದ್ರಂತೆ. ಆಗ ಸುಮ್ಮನಾದರು ರಾಮಣ್ಣಗೌಡರು. ಅವರು ಕ್ರೈಸ್ತಮತಕ್ಕೆ ಸೇರೋದು ನಿಂತ್ಹೋಯ್ತು. ವಿಷಯಾನೆಲ್ಲಾ ಸಂಗ್ರಹಿಸ್ತಾ ಇದ್ದೀನಿ ನನ್ನ ಕಾದಂಬರಿಗೆ. " ಎಂದರು.



"ಎಷ್ಟು ದೊಡ್ಡ ಗ್ರಂಥ ಆಗಬಹುದು? " ಎಂದೆ.



"ಬಹುಶಃ ಎಂಟು ಹತ್ತು ಸಂಪುಟಗಳಾಗಬಹುದು. ಕಳೆದ ನೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಮೈಸೂರಿನಲ್ಲಿ, ಇಂಡಿಯಾದಲ್ಲಿ ಪ್ರಪಂಚದಲ್ಲಿ ಏನೇನಾಯ್ತು ಎಂಬುದರ ಚಿತ್ರ ಅದರಲ್ಲಿ ಬರ್ತದೆ. ಅದು ಪೂರ್ಣದೃಷ್ಟಿಯ ಮಹಾಕಾದಂಬರಿ. ಇಡೀ ಪ್ರಪಂಚದಲ್ಲಿ ಯಾವ ಭಾಷೆಯಲ್ಲಿಯೂ ಸೃಷ್ಟಿಯಾಗದಂತಹ ಕಾದಂಬರಿ. It covers the whole universe! ಟಾಲ್ಸ್ಟಾಯ್ ಅವರ War and Peace .....? ನನಗೆ ಟಾಲ್ಸ್ಟಾಯ್ ಅವರಿಗಿಂತ ಹೆಚ್ಚು ಇಮ್ಯಾಜಿನೇಷನ್ ಉಂಟು .... " ಎಂದರು.



ಅವರು ಹೀಗೆಂದಾಗ ನನಗೆ ಅನ್ನಿಸಿತು, ಮನುಷ್ಯನ ಜಂಭ ಎಷ್ಟು ಅಂತ. ಆದರೆ ಮಾತಾಡಿದ್ದು ಕೆ.ವಿ.ಪುಟ್ಟಪ್ಪ ಅಲ್ಲ, ಅಂತಹ ಹತ್ತಾರು ಪುಟ್ಟಪ್ಪಗಳನ್ನೊಳಗೊಂಡ ಮಹಾದಾರ್ಶನಿಕ ಎಂದುಕೊಂಡಾಗ ಅವರ ಮಾತಿನ ಅರ್ಥ ಆದಂತಾಯಿತು.



"ಹಿಂದೆ ಹೇಗಿತ್ತು ಎನ್ನುವ ವಿಷಯ ಬೇಕು ನನಗೆ. ನೋಡಿ ರಸ್ತೆ (ಅವರಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರು) - ಕೊಪ್ಪ ತೀರ್ಥಹಳ್ಳಿ ರಸ್ತೆ ಯಾವಾಗಾಯ್ತು, ಬಸ್ಸು ಬಂದದ್ದು ಯಾವಾಗ- ಹೀಗೆ ನನಗೆ ಅನೇಕ ವಿಷಯಗಳು ಬೇಕು. ೧೮೬೦ ರಿಂದ ಆರಂಭವಾಗಿ ೧೯೨೦ ಕ್ಕೆ ಮುಗಿಯುತ್ತೆ ಕಾದಂಬರಿ. ಈಗಿರೋ ರಸ್ತೆ ಯಾವಾಗ ಆದದ್ದು, ಹಿಂದಿನ ಕಾಲದಲ್ಲಿ ಜನರು ಹೇಗೆ ಓಡಾಡುತ್ತಿದ್ದರು - ಇವೆಲ್ಲ ಬೇಕು. ನೀವು ನಿಮಗೆ ಗೊತ್ತಾದಷ್ಟನ್ನು ಟಿಪ್ಪಣಿ ಮಾಡಿಕೊಟ್ರೆ ಸಾಕು. " ಎಂದರು.



ವಿಷಯವನ್ನು ನನಗೆ ಹಿಂದೆಯೇ ಹೇಳಿದ್ದರು. ಆದರೆ ಏನೂ ಮಾಡಿರಲ್ಲಿಲ್ಲ. ಈಗ "ಆಗಲಿ" ಎಂದೆ. ಅರವತ್ತಕ್ಕೆ ಅರುಳು ಮರುಳು ಎನ್ನುತ್ತಾರೆ. ಆದರೆ, ಮನುಷ್ಯನಿಗೆ ವಯಸ್ಸಿನಲಿ ಎಂಟು ಹತ್ತು ಸಂಪುಟಗಳ ಮಹಾಕಾದಂಬರಿ ಬರೆಯುವ ನಿರ್ಧಾರ, ನಿಜವಾಗಿಯೂ ಆಶ್ಚರ್ಯ! ವಯಸ್ಸಿನ ಇತಿಮಿತಿ ಇವರಿಗೆ ಇದ್ದಂತೆ ಕಾಣಲಿಲ್ಲ. ಹಿಂದೊಮ್ಮೆ ಕೇಳಿಯೇ ಬಿಟ್ಟಿದ್ದೆ "ವಯಸ್ಸಾಯಿತಲ್ಲ ನಿಮಗೆ, ನಿಮ್ಮ ಮೇಧಾಶಕ್ತಿ ಹೇಗಿದೆ? ಹಿಂದೆ ಇದ್ದಂತೆಯೇ ಇದೆಯೇ?" ಎಂದು. ನಾನು ವಯಸ್ಸಿಗೆ ಹೇಗಿರುತ್ತೇನೆ ಎಂದು ತಿಳಿದುಕೊಳ್ಳುವುದೂ ನನ್ನ ಉದ್ದೇಶವಾಗಿತ್ತು. "ಓಹೋ ಇದೆ. I have not lost anything" ಎಂದಿದ್ದರು. ಈಗಲೂ ಅವರಲ್ಲಿ ಕವಿಯ ದರ್ಶನ ಹಾಗೂ ಕಲ್ಪನೆಗಳಿಗೆ ಹಾಗೂ ಕೃತಿ ರಚನೆಗೆ ಯಾವ ಅಡ್ಡಿಯೂ ಬಂದಂತಿಲ್ಲ. ನರೆತ ಕ್ರಾಪು ಮೀಸೆಗಳನ್ನು ಬಿಟ್ಟರೆ ಮತ್ತೆಲ್ಲೂ ನರೆತಂತೆ ಕಾಣುವುದಿಲ್ಲ.



"ಮಲೆನಾಡಿನ ಮದುಮಗಳು ಎಷ್ಟಕ್ಕೆ ಬಂತು? " ಎಂದೆ.



"ಮಲೆಗಳಲ್ಲಿ ಮದುಮಗಳು. ಬರೀತಾ ಇದ್ದೀನಿ. ರಾಮಾಯಣ ದರ್ಶನಂ ಬರೆಯುವಾಗಲೇ ಇದನ್ನು ಬರೆಯಲು ಆರಂಭಿಸಿದ್ದೆ. ನಲವತ್ತು ಪುಟ ಅಚ್ಚಾಗಿಯೂ ಇತ್ತು..... ಪತ್ರಿಕೇಲಿ ಪ್ರಕಟವಾಗ್ತಾನೂ ಇತ್ತು. ಆದ್ರೆ ರಾಮಾಯಣ ದರ್ಶನಂ, ಕಾದಂಬರಿ ಎರಡನ್ನೂ ಒಟ್ಟಿಗೆ ಬರೆಯುವುದು, ಎರಡರಲ್ಲಿ ಬರುವ ಭಿನ್ನ ಭಿನ್ನ ಭಾವನೆಗಳನ್ನು ಒಂದೇ ಕಾಲದಲ್ಲಿ ಮೂಡಿಸುವುದು ಸರಿಯಲ್ಲ ಎಂದು ಕಾದಂಬರಿ ನಿಲ್ಲಿಸಿದೆ. ಈಗ ಮಾಡ್ತಿದ್ದೀನಿ ಇನ್ನೂ ಒಂದು ದಿನದ ಕಥೆಯೂ ಮುಗಿದಿಲ್ಲ. ಆಗಲೇ ಮುನ್ನೂರು ಪುಟ ಆಗಿದೆ. ಪಾತ್ರಗಳನ್ನು ಸೃಷ್ಟಿ ಮಾಡಿ ಬಿಟ್ಟು ಬಿಟ್ಟಿದ್ದೀನಿ. ಅವರು ಮುಂದೆ ತಮ್ಮ ಕಥೆ ಹೇಳ್ಕೊಂಡು ಹೋಗ್ತಾರೆ. ಈಗ ನನ್ನ ಕೈಯಲ್ಲಿಲ್ಲ ಕಾದಂಬರಿ, ಅವರ ಕೈಯಲ್ಲಿದೆ, ತಾಯಿ-ಮಕ್ಕಳನ್ನು ಹೆತ್ತು ಸಲಹಿದ ನಂತರ ಅವರ ಪಾಡಿಗೆ ಅವರನ್ನು ಬಿಟ್ಟು ತಾನು ನೋಡುತ್ತಿರುವಂತೆ ಆಗಿದೆ ನನ್ನ ಕಾದಂಬರಿಯ ಪಾತ್ರಗಳ ಸೃಷ್ಟಿ, ನಾನೀಗ ಅವರ ಕೈಯಲ್ಲಿದ್ದೇನೆ. I think a poet has to be not only a creator but also humble witness of the actions of the characters he creates. ಕಾದಂಬರಿ ಎಲ್ಲಿಗೆ ಮುಟ್ಟುತ್ತೆ ಅಂತ ಹೇಳಲಾರೆ . . . " ಎಂದರು.



ಮಾತುಗಳನ್ನು ಕೇಳುತ್ತ ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ.



ಕುವೆಂಪು "ನೆನಪಿನ ದೋಣಿಯಲ್ಲಿ ..... Reminiscences ಎಂಬ ಇನ್ನೊಂದು ಗ್ರಂಥ ಬರೆಯಬೇಕಾಗಿದೆ' ಎಂದರು.



ಕುವೆಂಪು ಅವರು ಅನಾವಶ್ಯಕವಾಗಿ ಮಾತಾಡುವವರಲ್ಲ, ಇಷ್ಟು ಮಾತಾಡಿದ್ದೆ ಹೆಚ್ಚು ಎಂದು ಅಂದುಕೊಂಡು ಅವರಿಗೆ ಬೇಜಾರು ಮಾಡಬಾರದೆಂದು ಹೊರಡುವ ಸೂಚನೆ ತೋರಿಸಿದೆ. ಅವರು ಎದ್ದು ಮನೆಯೊಳಕ್ಕೆ ಹೋಗಿ ಬಂದು ಮತ್ತೆ ಕೂತರು.



"ನೀವು ಕಡೆ ಬಂದರೆ ನಿಮಗೆ ಬೇಕಾದ ವಿಷಯ ಸಂಗ್ರಹ ಮಾಡಲು ಅನುಕೂಲವಾಗುತ್ತದೆ" ಎಂದೆ.

" ಎಲ್ಲಿ? ಸಾಧ್ಯವಾಗುವುದಿಲ್ಲ. ದೇವರು ನನಗೆ ಎಷ್ಟು ಆಯುಸ್ಸು ಕೊಟ್ಟಿದಾನೋ ಕಾಣೆ. ಮಲೆಗಳಲ್ಲಿ ಮದುಮಗಳು ಮುಗಿಸಬೇಕು. ಬೆಳಗ್ಗೆ ವಾಕಿಂಗ್, ವಾಕಿಂಗ್ನಿಂದ ಬಂದ ಮೇಲೆ ಸ್ವಲ್ಪ ಹೊತ್ತು ಮಧ್ಯಾಹ್ನದವರೆಗೆ ಬರೆಯೋ ಕೆಲಸ. ಬರೆಯುವ mood ಬರಬೇಕು. ಬಂದಾಗ ಬರೆದುಬಿಡಬೇಕು.   ಎಲ್ಲಿಯೂ ಹೋಗುವಂತಿಲ್ಲ. ಕರ್ನಾಟಕ ಯೂನಿವರ್ಸಿಟಿಯವರು ಹೋದ ವರ್ಷ ನಿಮಗೆ ಡಾಕ್ಟರೇಟ್ ಕೊಡಬೇಕಾಗಿದೆ ಬನ್ನಿ ಎಂದು ಬರೆದಿದ್ದರು. ನಾನು ಈಗ ಸಾಧ್ಯವಿಲ್ಲ. ನೀವು ಕೊಡ್ಲೇಬೇಕು ಅಂತ ಇದ್ರೆ 'In Absentia' ಕೊಡಿ ಎಂದು ತಿಳಿಸಿದೆ. ಅವರು ಇಲ್ಲ ನೀವೇ ಬರಬೇಕು ,      ಇಲ್ಲಿಯೋರೆಲ್ಲ ನಿಮ್ಮನ್ನ ನೋಡ್ಬೇಕು ಅಂತ ಇದಾರೆ ಎಂದು ಬರೆದು ಒತ್ತಾಯ ಮಾಡಿದರು. ನಾನು ಅವರಿಗೆ ಉತ್ತರ ಬರೆದೆ. ನಾಲ್ಕು ಷರತ್ತುಗಳನ್ನು ಹಾಕಿದೆ; ಒಂದನೆಯದು, ಕನ್ನಡ ಅಧಿಕೃತ ಭಾಷೆಯಾಗಬೇಕು; ಎರಡನೆಯದು, ಮೈಸೂರಿನ ಹೆಸರು ಕರ್ನಾಟಕ ಎಂದಾಗಬೇಕು; ಮೂರನೆಯದು, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕ ಆಗಬೇಕು; ನಾಲ್ಕನೆಯದು ಬೋಧನಾ ಭಾಷೆ ಕನ್ನಡ ಆಗಬೇಕು. ಇವು ನಾಲ್ಕು ಆದ ನಂತರ ಬಂದು ಸಂತೋಷದಿಂದ ಡಾಕ್ಟರೇಟ್ ಸ್ವೀಕರಿಸುತ್ತೇನೆ ಎಂದು ಹೇಳಿದೆ. ಕನ್ನಡ ಅಧಿಕೃತ ಭಾಷೆ ಆಗಬೇಕು ಅಂತ ಕಾಗದದ ಮೇಲೇನೊ ಆಗಿದೆ. ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವೂ ಆಗುವಂತಿದೆ. ನಮಗೆ ದಾಸ್ಯದ ಮನೋಭಾವ ಹೋಗಬೇಕಾದರೆ ಬೇರೆ ರಾಜ್ಯಪಾಲರು ಬರಬೇಕು. ಈಗ ಇರುವ ಮಹಾರಾಜರೇ ಬೇರೆ ಕಡೆ ಹೋಗಿ ಮತ್ತೆ ಬೇಕಾದರೆ ಬರಲಿ. ಆಗ ಸರಿಹೋಗುತ್ತೆ. ಆದರೆ ಹಿಂದೆ ಮಹಾರಾಜರಾಗಿದ್ದವರೆ ರಾಜ್ಯಪಾಲರಾಗಿ ಮುಂದುವರಿಯುವುದು ದಾಸ್ಯ ಮನೋವೃತ್ತಿಯ ಬದಲಾವಣೆಗೆ ಸಹಾಯವಾಗುವುದಿಲ್ಲ. ನಾವು ಸೊಂಟ ಬಗ್ಗಿಸಿ ಬೆನ್ನು ಗೂನು ಮಾಡಿಕೊಂಡಿದ್ದೀವಿ. ಗೂನು ಬೆನ್ನೇ ನಮಗೆ ಲಕ್ಷಣವಾಗಿ ಕಾಣುವಷ್ಟರಮಟ್ಟಿಗೆ ನಾವು ಅದಕ್ಕೆ ಹೊಂದಿಕೊಂಡಿದ್ದೇವೆ. ನೆಟ್ಟಗೆ ನಿಂತರೆ ಎಲ್ಲಿ ಬೆನ್ನುಲುಬು ಮುರಿಯುತ್ತೋ ಎಂದು ಹೆದರಿದ್ದೇವೆ. ನಮ್ಮ ಜನರ ಅಜ್ಞಾನ, ದಾಸ್ಯ, ಸಣ್ಣ ತನಕ್ಕೆ ಎರಡು ಕಾರಣ; ಒಂದು ಗುರುಮನೆ; ಮತ್ತೊಂದು ಅರಮನೆ. ಅರಮನೆಯೇನೋ ಹೋಯಿತು ಗುರುಮನೆ ಇನ್ನೂ ಭದ್ರವಾಗಿ ಬೇರೂರಿದೆ. ಅಜ್ಞಾನಿಗಳಿಂದ ಹಣ ಕಿತ್ತು ತಿನ್ನುವ ಮಠಗಳಿಂದ ದೇಶಕ್ಕಾಗುವ ಅನಾಹುತ ಅಷ್ಟಿಷ್ಟಲ್ಲ. .... " ಎಂದರು.

ಇಷ್ಟರಲ್ಲಿ ಕುವೆಂಪು ಅವರ ಕಿರಿಯ ಮಗಳು ಕಾಫಿ ತಂದಿಟ್ಟು ಹೋದಳು. ಅದನ್ನು ಕುಡಿಯುತ್ತಾ, ಕುಡಿಯುತ್ತಾ ಅವರಿಗೆ ಹುಮ್ಮಸ್ಸು ಬಂದಂತಾಯಿತೋ ಏನೋ " ಸ್ವಾಮಿ ವಿವೇಕಾನಂದರ ಧೀರವಾಣಿ ಹಳ್ಳಿ ಹಳ್ಳಿಗಳಿಗೆಲ್ಲ ಹರಡಬೇಕು, ಷಂಡರನ್ನು ಧೀರರನ್ನಾಗಿ ಮಾಡುವ ವಾಣಿ ಅದು. ನನ್ನ ಜೀವನದಲ್ಲೇ ಅದ್ಭುತ ಬದಲಾವಣೆ ಮಾಡಿದರು ಅವರು. ಮೊನ್ನೆ ಅವರ ಶತಮಾನೋತ್ಸವ ನಡೆಯಿತಲ್ಲ, ಅದನ್ನು ಶೃಂಗೇರಿ ಮುಂತಾದ ಮಠಗಳಲ್ಲಿ ಆಚರಿಸಿದರೇನು? ಇಲ್ಲ! ಅವರಿಗೆ ವಾಣಿಯನ್ನು ಕೇಳುವ ಆಸೆಯಿಲ್ಲ. ಕೇಳಿದರೆ ಅವರ ಕಾಣಿಕೆ ಕಾಸಿಗೇ ಚಕ್ಕರ್! " ಎಂದು ಹೇಳಿ ನಕ್ಕರು.



ಹೀಗೆಂದವರು ಎದ್ದು ಒಳಗೆ ಹೋಗಿ `ವಿವೇಕಾನಂದ ಕೃತಿ ಶ್ರೇಣಿ' ಎಂಬ ಹತ್ತು ಕನ್ನಡ ಪುಸ್ತಕಗಳನ್ನು ತಂದು ಮುಂದೆ ಪೇರಿಸಿಟ್ಟರು. ಮೊದಲನೇ ಸಂಪುಟದಲ್ಲಿ ನನ್ನ ಮುನ್ನುಡಿ ಇದೆ. ಎಲ್ಲಾ ಸೇರಿ ೬೦ ರಿಂದ ೭೦ ರೂಪಾಯಿ ಆಗಬಹುದು. ಇದರ ಒಂದೊಂದು ಕಟ್ಟು ತಕ್ಕೊಂಡ್ಹೋಗಿ ಹಳ್ಳೀಲಿ ಇಟ್ಟುಬಿಡಿ. ಯಾರಾದರೂ ಇದಕ್ಕೆ ಢಿಕ್ಕಿ ಹೊಡೆದಾಗ ಡೈನಮೈಟ್ ಸಿಡಿದು ಹೋಗುತ್ತದೆ. ಆಗ ನೋಡಿ, ಇದು ಮಾಡುವ ಕೆಲಸವನ್ನು! ಎಂದು ಕುವೆಂಪು ಮಹಾವಿಧ್ವಂಸಕ ಗೂಢಾಚಾರನಂತೆ ನುಡಿದರು. "ಭೇಷ್ ನನ್ನಪ್ಪ! " ಎಂದೆ ನನಗೆ ನಾನೇ.

ವಿವೇಕಾನಂದರ ಬಗ್ಗೆ ಅಮೇರಿಕಾ ಮಹಿಳೆಯೊಬ್ಬಳು ಬರೆದಿರುವ ಉದ್ಗ್ರಂಥವೊಂದನ್ನು ಪ್ರಸ್ತಾಪಿಸುತ್ತಾ ಅದರಲ್ಲಿ ಬರುವ anecdotes ಗಳ ಬಗ್ಗೆ ಹೇಳಿದರು. ವಿವೇಕಾನಂದರ ಪ್ರಜ್ಞೆ, ಪ್ರತಿಭೆ, ಜ್ಞಾಪಕ ಶಕ್ತಿ- ಇವುಗಳನ್ನು ವರ್ಣಿಸುತ್ತಾ "ಬೇಕಾದರೆ ಇಂಗ್ಲೀಷ್ ವಿಶ್ವಕೋಶವನ್ನು ಒಮ್ಮೆ ತಿರುವು ಹಾಕಿ ಯಾವುದನ್ನು ಕೇಳಿದರೂ ಹೇಳಬಹುದಾದಷ್ಟು ಜ್ಞಾಪಕ ಶಕ್ತಿ ಇತ್ತು. ವೇದೊಪನಿಷತ್ತುಗಳು ಅವರ ಕಂಠಗತವಾಗಿದ್ದವು. ಶಕ್ತಿ ಹೇಗೆ ಬಂತು ಅಂತ ಕೇಳಿದರೆ ಅವರು ಪಾಲಿಸಿದ ಬ್ರಹ್ಮಚರ್ಯದಿಂದ ! ಒಮ್ಮೆ ಯಾರೋ ರಾಮಕೃಷ್ಣ ಪರಮಹಂಸರನ್ನು ಕೇಳಿದರಂತೆ ಶಕ್ತಿ ಹೇಗೆ ಬರುತ್ತೆ ಅಂತ. ಅದಕ್ಕೆ ಅವರು ಹೇಳಿದರು, `ಯಾರು ಕಾಯಾ, ವಾಚಾ, ಮನಸಾ ಹನ್ನೆರಡು ವರ್ಷಗಳು ಬ್ರಹ್ಮಚರ್ಯ ಪಾಲಿಸುತ್ತಾರೋ ಅವರಿಗೆ ಇದು    ಸಿದ್ಧಿಸುವುದು' ಎಂದು. " ಇದು ನನಗೂ ಸಾಧ್ಯ, ನಿಮಗೂ ಸಾಧ್ಯ " ಎಂದರು ಕುವೆಂಪು .



Krupe: http://www.kuvempu.com/nenapu14.html