ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್
ನಮಸ್ಕಾರ !! ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತ