Posts

Showing posts with the label ವಾಟ್ಸ್ ಆಪ್

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಏನಿದು ಹೊಸ ಸ್ಕ್ಯಾಮ್..? ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ. ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ. ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್

ಹಾಸ್ಯ - ಕೃಪೆ - ವಾಟ್ಸ್ ಆಪ್

ಹೊಸದಾಗಿ ಮದುವೆ ಆಗಿ ಬಂದ ಸೊಸೆ ಏನೂ ಕೆಲಸ ಮಾಡಲ್ಲ ಅಂತ ಮಗನಿಗೆ ಹೇಳಿ ಪೇಚಾಡಿಕೊಂಡರು ಅಮ್ಮ. ಆಮೇಲೇ ಅಮ್ಮಾ ಮಗ ಸೇರಿ ಒಂದು plan ಮಾಡಿದರು ಅಮ್ಮ ಹೇಳಿದ್ರು" ನಾಳೆ ಬೆಳಿಗ್ಗೆ ಕಸ ಗುಡಿಸತಾ ಇರ್ತೀನಿ ಆಗ ನೀನು ಬಿಡಮ್ಮ ನಾ ಗುಡಸ್ತೀನಿ ಅನ್ನು ಆಗಲಾದ್ರೂ ನಾ ಮಾಡ್ತೀನಿ ಅಂತಾಳಾ ನೋಡೋಣ" ಅದೇ ಪ್ರಕಾರ ಅಮ್ಮ ಕಸ ಗುಡಸ್ತಾ ಇದ್ದಾಗ ಮಗ "ಬಿಡಮ್ಮ ನಾ ಗುಡಸ್ತೀನಿ" ಅಂದ "ಇಲ್ಲ ನಾ ಗುಡಸ್ತೀನಿ" ಅಮ್ಮ ಮಗ ಕಿತ್ತಾಡೊಕೆ ಶುರು ಮಾಡಿದ್ರು. ಸೊಸೆ ಬಂದು ಶಾಂತ ರೀತಿಯಿಂದ ಹೇಳಿದಳು"ಅದಕ್ಕೆ ಯಾಕ ಕಿತ್ತಾಡತೀರಿEven  date ಗೆ ಅಮ್ಮ ಗುಡಸಲಿ,Odd date ಗೆ ಮಗ ಗುಡಸಲಿ" ಅಂತ. ಸೊಸೆ Rockingಅಮ್ಮ ಮಗ Shocking ಕೃಪೆ - ವಾಟ್ಸ್ ಆಪ್

ಹಾಸ್ಯ - ಕೃಪೆ - ವಾಟ್ಸ್ ಆಪ್

ಎಂಟು , ಹತ್ತು ವರುಷದ ಇಬ್ಬರು ಹುಡುಗರು ತುಂಟತನದಲ್ಲಿ ಪ್ರಖ್ಯಾತರಾಗಿದ್ದರು. ಕುಖ್ಯಾತರು ಕೂಡ. ಊರಲ್ಲಿ ಏನೇ ಕಿತಾಪತಿಯಾದರೂ ಅದರಲ್ಲಿ ಇವರಿಬ್ಬರ ಹೆಸರು ಇದ್ದೇ ಇರುತಿತ್ತು.. ಅವರ ಹೆತ್ತವರಿಗೆ ಸಹಜವಾಗಿಯೇ ಇದು ತಲೆಬಿಸಿಯ ಸಂಗತಿಯಾಗಿತ್ತು.   ಹೀಗಿರುವಾಗ ಅವರಮ್ಮನಿಗೆ ಒಬ್ಬ ಸ್ವಾಮೀಜಿಯ ಬಗ್ಗೆ ತಿಳಿದು ಬಂತು. ಅವರು ಇಂಥ ಎಷ್ಟೊ ಮಕ್ಕಳ ತಂಟತನವನ್ನು ಬುದ್ಧಿ ಹೇಳಿ ಕಡಿಮೆ ಮಾಡಿದ್ದರು. ಮಕ್ಕಳಿಬ್ಬರನ್ನೂ ಕರೆದುಕೊಂಡು ಸ್ವಾಮೀಜಿಯವರ ಬಳಿ ಹೋದಳು. ವಿಷಯವೆಲ್ಲ ತಿಳಿದುಕೊಂಡು ಸ್ವಾಮೀಜಿ ಹೇಳಿದರು ಒಬ್ಬೊಬ್ಬರನ್ನೇ ಮಾತಾಡಿಸುತ್ತೇನೆ. ನಾಳೆ ಚಿಕ್ಕವನನ್ನು ಕಳುಹಿಸಿ ನನ್ನ ಹತ್ತಿರ. ಸರಿ ಎಂದ ಅಮ್ಮ.. ಮಾರನೆ ದಿನ ಚಿಕ್ಕವನನ್ನು ಕಳುಹಿಸಿದರು. ಅವನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸ್ವಾಮೀಜಿ ತಮ್ಮ ಕಂಚಿನ ಕಂಠದಿಂದ ದೇವರು ಎಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮೌನವಾಗಿದ್ದ. ಪುನಃ ಹತ್ತಿರ ಬಂದು ದೇವರು ಎಲ್ಲಿದ್ದಾನೆ ಎಂದು ಕೇಳಿದರು. ಆಗಲೂ ಮಾತಾಡದ ಹುಡುಗನ ಕೆನ್ನೆಯನ್ನು ತನ್ನ ಬೆರಳಿಂದ ತಿವಿದು ಅದೇ ಪ್ರಶ್ನೆಯನ್ನು ಕೇಳಿದರು.. ದೇವರು ಎಲ್ಲಿದ್ದಾನೆ?. ಹುಡುಗ ಅಲ್ಲಿಂದ ಒಂದೇ ಉಸಿರಿಗೆ ಓಡಿ ಬಂದು ಮನೆ ಸೇರಿ ಮೂಲೆಯೊಂದರಲ್ಲಿ ಅಡಗಿ ಕೂತ. ಅದನ್ನು ಕಂಡ ದೊಡ್ಡ ಹುಡುಗ ಹತ್ತಿರ ಬಂದು ಏನಾಯ್ತು ಎಂದು ಕೇಳಿದ. ಚಿಕ್ಕವನು ನಡುಗುತ್ತ... ಅಣ್ಣಾ.... ಎಂದು ಅವನ ಕಿವಿಯಲ್ಲಿ ಗುಟ್ಟಾಗಿ ಹೇಳಿದ.. ಆ ಪುಟ್ಟ ಹುಡುಗನ ಉತ್ತರ ಅ