ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Thursday, December 29, 2022
ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ - 2
ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ಬೆಳಗಿನ ಜಾವದ ಮುಹೂರ್ತ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಭಾಗ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆ. ಸೃಷ್ಟಿ ಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು.
✍ ಯಶವಂತ ಚಿತ್ತಾಲ
{'ಶಿಕಾರಿ' ಕಾದಂಬರಿ}
ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ
ಬರೇ ಅವಿತುಕೊಳ್ಳುವ ತಾಣ ಹುಡುಕುತ್ತ ಓಡುತ್ತಿರಬೇಡ. ಎಲ್ಲ ಪರಾರಿಗೂ ಕೊನೆಯೆಂಬುದಿರಬೇಕು. ಒಮ್ಮೆಯಾದರೂ ಸ್ವಸ್ಥಾನಕ್ಕೆ ಮರಳುವ ಧೈರ್ಯ ಮಾಡಬೇಕಪ್ಪಾ. ರಾತ್ರಿ ಮಾಡಿಕೊಂಡ ನಿರ್ಧಾರವನ್ನು ದಿನಬೆಳಗಾಗುವುದರಲ್ಲಿ ಸಡಿಲುಗೊಳ್ಳಲು ಬಿಡಬಾರದು. ಬಿಗಿ ಹಿಡಿ. ಬಿಗಿಯಾಗು. ಗಟ್ಟಿಯಾಗು. ಕವಚ ಕುಂಡಲಗಳನ್ನು ಕಳಚು. ನೀನೇ ನಿನ್ನ ಸುತ್ತ ಬೆಳೆಯಿಸಿಕೊಂಡ ಚಿಪ್ಪನ್ನೊಡೆದು ಹೊರಕ್ಕೆ ಬರಬೇಕು. ತೆರೆ. ತೆರೆದುಕೋ....
✍ ಯಶವಂತ ಚಿತ್ತಾಲ
{'ಶಿಕಾರಿ' ಕಾದಂಬರಿ}
Subscribe to:
Posts (Atom)
ಅಮೃತವರ್ಷಿಣಿ - ಸುಭಾಷಿತ -4
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ | ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ || 📖 ಮೂಲ: 'ಶ್ರೀಮದ್ಭಗವದ್ಗೀತೆ' (ಅಧ್ಯಾಯ ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
Krupe : http://azsmarane.blogspot.in/2012/01/blog-post_21.html ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾ...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...