Monday, March 19, 2012

ಜಾರುಬೆಣ್ಣೆಯಿದೆ ಕೈಯೊಳಗೆ

ಜಾರುಬೆಣ್ಣೆಯಿದೆ ಕೈಯೊಳಗೆ
ಅಂಬೆಗಾಲನಡೆ! ಧೂಳಡರಿದ ಮೈ!
ಮೊಸರಿನ ಕೊಸರಿದೆ ಮುಖದೊಳಗೆ!


ಕನ್ನಡಿ ಕೆನ್ನೆ! ನೇರಿಲೆ ಕಣ್ಣು !
ಹಣೆಯಲಿ ಗೋರೋಚನ ತಿಲಕ !
ನೊಸಲಿನ ತುಂಬ ಗುಂಗುರಿನುಂಗುರ
ಮುಖಕಮಲಕೆ ಕವಿದಿವೆ ಭೃಂಗ ||


ಕೊರಳಲಿ ತಾಯತಿ! ಹುಲಿಯುಗುರಿನ ಸರ !
ಬರುತಿದೆ ಶ್ಯಾಮಾಂಗನ ಡೋಲಿ |
ಗಾಳಿಗಾಡುತಿದೆ ಸಿರಿ ಮುಂಗುರುಳು
ಮಧು ಹೀರಿದ ದುಂಬಿಯ ಹೋಲಿ || 


-ಹೆಚ್. ಎಸ್ ವೆಂಕಟೇಶ ಮೂರ್ತಿ (ಉತ್ತರಾಯಣ ಮತ್ತು.... ಕವನ ಸಂಕಲನದಿಂದ)

ದೇವಸ್ಥಾನದಲ್ಲಿ ಪ್ರದಕ್ಷಿಣೆ ಎಷ್ಟು ಸುತ್ತು ಬರಬೇಕು? ಶಾಸ್ತ್ರ ಹೇಳುವುದೇನು?

 ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು, ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಹಾಕುವುದು ಹಿಂದೂ ಧರ್ಮದ ಸಂಪ್ರದಾಯಗಳಲ್ಲಿ ಒಂದು.ಕೆಲವು ಭಕ್ತರು ಒಂದು ಸುತ್ತು ಹಾಕಿದರೆ, ...