Posts

Showing posts with the label ಅರ್ಥ

ಅಕ್ಕಮಹಾದೇವಿ

Image
ಅರಿವೆನೆಂದರೆ ಅರಿಯಬಾರದು ನೋಡಾ ಘನಕ್ಕೆ ಘನ ತಾ ನೋಡಾ ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆಪೋದೆನು|| - ಜಗದೊಡೆಯ ಮಲ್ಲಿಕಾರ್ಜುನನು(ಈಶ್ವರ) ಎಲ್ಲಾ ಶಕ್ತಿಗಳಿಗಿಂತಲೂ ಅಗಾಧ ಹಾಗೂ ಶಕ್ತಿಯುಳ್ಳವನು, ಅವನನ್ನು ತಿಳಿಯುವುದು ತುಂಬಾ ಕಠಿಣ ಅವನನ್ನು ತಿಳಿದುಕೊಂಡೆನೆಂದರೆ ನನ್ನ ಜೀವನವೇ ಅದೃಷ್ಟಶಾಲಿ(ಧನ್ಯ). ----------- ಈಳೆ, ನಿಂಬೆ, ಮಾವು ಮಾದಲಿಕೆಗೆ ಹುಳಿನೀರನೆರೆದವರಾರಯ್ಯ ಕಬ್ಬು, ಬಾಳೆ, ಹಲಸು, ಗರಿಕೇಳಕೆ ಸಿಹಿನೀರೆರದವರಾರಯ್ಯ! ಕಳೆವಸಾಲೆಗ ಓಗರದ ಉದಕವನೆರೆದವರಾರಯ್ಯ! ಮರುಗ, ಮಲ್ಲಿಗೆ, ಪಚ್ಚೆಗೆ, ಪರಿಮಳದುದಕವನೆರೆದವರಾರಯ್ಯ ಇಂತೀ ಜಲವು ಒಂದೇ ಆಕಾರವು ಒಂದೇ ಹಲವು ದ್ರವ್ಯಂಗಳ ಕೂಡಿ ತನ್ನ ಪರಬೇಕಾಗಿ ಹಾಗೆ ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದರೇನು? ತನ್ನ ಪರಿ ಬೇರೆ! - ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು. --------------- ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ ಅಯ್ಯ ಸಾರಿಬಂದು ನೀನೆ