ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ - 2
ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ಬೆಳಗಿನ ಜಾವದ ಮುಹೂರ್ತ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಭಾಗ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆ. ಸೃಷ್ಟಿ ಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು. ✍ ಯಶವಂತ ಚಿತ್ತಾಲ {'ಶಿಕಾರಿ' ಕಾದಂಬರಿ}