ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, May 30, 2016

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು - ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮೀ ನನ್ನಯ್ಯ ರಥವೇರಿ
ಬರುವಾಗ ನಾವೆದ್ದು ಕೈಯ್ಯ ಮುಗುದೇವು

ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ

ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ
ಕಪ್ಪಾದ ಹಸುವು ಕರೆದಾರೆ
ಆ ಹಾಲು ಒಪ್ಪೀತು ಶಿವನ ಪೂಜೆಗೆ
ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವನ್ತನಾಗಿ ಮೆರೆಯಾಲಿ
               

                                      * * * *


Thursday, May 26, 2016

ನಾನೊಂದು ಸಮಾಜವಾಗಿದ್ದರೆ.


 ನಾನೊಂದು ಸಮಾಜವಾಗಿದ್ದರೆ  ದಹಿಸುತ್ತಿದ್ದೆ ಜಾತಿಯ ಬೇರುಗಳನ್ನು
ಕಿತ್ತೆಸೆಯುತ್ತಿದ್ದೆ ಕೆಟ್ಟ ಸಂಪ್ರದಾಯ, ಮೂಢನಂಬಿಕೆಗಳನು
ತುಳಿಯುತ್ತಿದ್ದೆ ಅಧರ್ಮ, ಅನೀತಿ, ಹಿಂಸೆಗಳನ್ನು  ವಾಮನನಂತೆ!
ಸೃಷ್ಠಿಸುತ್ತಿದ್ದೆ ಸುಧರ್ಮ, ಸುಜ್ಞಾನ,ಸುನೀತಿಗಳನ್ನು  ನಿಸರ್ಗದಂತೆ
ಪ್ರತಿಷ್ಟಾಪಿಸುತ್ತಿದ್ದೆ ಚಿಂತಕರನು, ದಾರ್ಶನಿಕರನು, ದೇವರ ಜಾಗದಲ್ಲಿ!
ನಿರ್ಮಿಸುತ್ತಿದ್ದೆ ಹುತ್ಮಾರ ಮಂದಿರಗಳ ಕಂಡ ಕಂಡಲ್ಲಿ
ಮಟ್ಟಹಾಕುತ್ತಿದ್ದೆ ಭಯೋತ್ಪಾಧನೆ, ಭ್ರಷ್ಟಾಚಾರ, ದುರಾಡಳಿತವನ್ನು
ತೂಡಿಸುತ್ತಿದ್ದೆ ನಗ್ನ ರಾಜಕೀಯ ಸ್ಥಿತಿಗೆ ಶುಭ್ರ ಬಟ್ಟೆಯನ್ನು
ನಿಲ್ಲಿಸುತ್ತಿದ್ದೆ ಕದನ, ಜಗಳ, ಕೋಪ ಎಲ್ಲರ ಮನದಲ್ಲಿ
ನಿಡುತ್ತಿದ್ದೆ ಸಮಸ್ಯಗಳನ್ನು ಎದುರಿಸುವ ಶಕ್ತಿ ಜನರಲ್ಲಿ
ತಿಳಿಸುತ್ತಿದ್ದೆ ಜೀವನದ ಸಾರ್ಥಕ ಭಾವ ಏನೆಂದು
ಬೇಡಿಕೊಳ್ಳುತ್ತಿದ್ದೆ ಬುದ್ಧ, ಬಸವ, ಗಾಂಧಿ ಮತ್ತೇ ಹುಟ್ಟಿ ಬರಲೆಂದು.

                         ಮಹಾಂತೇಶ ರಾಜಗುರು
              ಶಿಕ್ಷಕರು, ಕೆನರಾ ಕೇಂಬ್ರಿಡ್ಜ್ ಶಾಲೆ. ಯಡವನಹಳ್ಳಿ.

ಜೀವನ

ಜೀವನ
ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.

ಮಹಾಂತೇಶ ರಾಜಗುರು, ಶಿಕ್ಷಕರು.
ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

ನನ್ನಾಸೆ.

ನನ್ನಾಸೆ.

ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ,
ಗ್ರಹ ತಾರೆಯರ ಜೊತೆ ಆಟವಾಡುವಾಸೆ,
ತಿಂಗಳನ ಬೆಳಕಲ್ಲಿ ಮಿಯುವಾಸೆ,
ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ,
ಹಕ್ಕಿಗಳ ಕೊರಳ ಸ್ವರವಾಗುವಾಸೆ,
ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ,
ದುಂಬಿಗೆ ಆಹಾರ ನೀಡುವ ಹೂವಾಗುವಾಸೆ,

ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ,
ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ,
ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ,
ಬಸವನುದಿಸಲಿ ಎಂದು ತಪಗೈಯುವಾಸೆ,
ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ,

ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........
ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು?
ಯಾರು?!........?

ಮಹಾಂತೇಶ ರಾಜಗುರು, ಶಿಕ್ಷಕರು.
ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

Friday, May 20, 2016

ಬಿರು ಮಧ್ಯಾಹ್ನ ಮೈಗಂಟಿದ ಶರಟಿನಿಂದೇಳೊ.... - ಶರತ್ ಚಕ್ರವರ್ತಿ

ಬಿರು ಮಧ್ಯಾಹ್ನ
ಮೈಗಂಟಿದ ಶರಟಿನಿಂದೇಳೊ ಹಬೆ ಹತ್ತಿಡಲು
ಗಂಟಲಿಗೆ ಅರೆಪಾವು ಮಜ್ಜಿಗೆ
ಸುರಿದುಕೊಳ್ಳುವಾಗೊಂದು ದಿಗಿಲು ಹುಟ್ಟಿಕೊಳ್ಳುತ್ತದೆ
ಓಟಬಿದ್ದು ಹೊರಬಂದರೇ
ಸೂರ್ಯನಿರುವಲ್ಲಿ ಸೂರ್ಯನೆ ಇದ್ದು,
-ಶರತ್ ಚಕ್ರವರ್ತಿ
ಮೋಡಗಳಿರುವಲ್ಲಿ ಅವುಗಳಿರದೇ
ಎದುಸುರು ಮತ್ತೂ ಏರುತ್ತದೆ
ಭೂಮಿಗೇನು ಬೆಂಕಿ ಬಿದ್ದಲ್ಲವಲ್ಲ
ಎಂದು ಸಾವರಿಸಿಕೊಳ್ಳುತ್ತೇನೆ
ಅಲ್ಲೆಲ್ಲೋ ಡ್ಯಾಮು ಬಿರಿಯಿತಂತೆ
ಎಂದು ಕೇಳುವಾಗ ತಣ್ಣಗೇ ಇದ್ದವನು
ಡ್ಯಾಮಿನ ಅಂಚಿಗೆ ಕಟ್ಟಿದ್ದ ಕಪ್ಪೆಗೂಡ ನೆನೆದು
ಮತ್ತೆ ಧಿಗಿಲಾಗುತ್ತೇನೆ
ಡ್ಯಾಮಿನಲ್ಲೆ ನೀರೆ ಇರಲಿಲ್ಲ,
ಖಾಲಿಯದ್ದು ಬಿರಿದಿದೆ ಬಿಡು
ಎಂದವರು ಸುಮ್ಮನಿರಿಸಿದ್ದರೂ
ತಮಟೆಯ ಹೊಡೆತ ನಿಲ್ಲುವುದೇ ಇಲ್ಲ
ಬಾಲ್ಯಗೆಳೆಯನೊಬ್ಬ ಕನಸಿಗೆ ಬಂದಾಗ
ಸಂತಸ ನಳನಳಿಸಿ
ಹತ್ತಿರ ಹೋಗಿ ಆಲಂಗಿಸಿಕೊಳ್ಳುತ್ತೇನೆ
ಅಪ್ಪಿಕೊಂಡಮೇಲೆ ನೆನಪಾಗುತ್ತದೆ ಅವನಿಂದ ಕದ್ದು
ಜೋಬಲ್ಲಿಟ್ಟುಕೊಂಡಿರೊ ಸವೆದ ಬಳಪ
ಅಪ್ಪಿದಾಗ ಅವನೆದೆಗೆ ಚುಚ್ಚಬಹುದೆಂದು
ಹುಷಾರಿಯಾಗುತ್ತಾ
ಮೆಲ್ಲಗೆ ಅಪ್ಪುಗೆ ಬಿಡಿಸಿಕೊಂಡು
ಮುಖಮರೆಮಾಚುತ್ತಾ ಹೊರಟೆಬಿಡುತ್ತೇನೆ
ಅದೆಷ್ಟೊ ಹೊತ್ತು ಹೋತ್ತೊಯ್ತದ ಮೇಲೆ
ಅವನಿಗೆ ಮೀಸೆಯಿದ್ದದ್ದು ನೆನಪಾಗುತ್ತದೆ
ನನ್ನ ಗಡ್ಡವನ್ನ ಸವರಿಕೊಂಡು
ನಗುವಾಗ ಬಿಕನಾಸಿ ಕಣ್ಣೀರು ಬಂದೇಬಿಡುತ್ತದೆ
ಕಾಲಾತಿಕಾಲದಲ್ಲಿ ಜಂಗಮನ ಮೇಲೆ
ಬೀಸಿದ ಕಲ್ಲು ನೆನಪಾಗಿ
ಪಾಪ ಎಂದುಕೊಳ್ಳುವಷ್ಟರಲ್ಲೆ ಅವನು
ಕಲ್ಲಿಡಿದು ಬೆನ್ನಿಂದೆಯೆ ಇರುವುದು ಕಾಣುತ್ತದೆ
ಓಡಿ ಓಡಿ ಬಯಲದಾರಿಗೆ ಬಂದರೆ
ನಡುರೋಡಲ್ಲೆ ನುಲಿದುಕೊಂಡ ಹಾವುಗಳು
ಸರಸ ಬಿಟ್ಟು ನನ್ನೆಡೆಗೆ ನೋಡುತ್ತವೆ
ಹೊಂಚು ಹಾಕುತ್ತಿದ್ದ ಮುಂಗುಸಿಯೂ
ನನ್ನ ನೋಡಿ ಕೆಕ್ಕರಿಸುತ್ತದೆ
ಸಂಬಂಧವಿಲ್ಲದ ವ್ಯವಹಾರಕ್ಕೆ ತಲೆ ಹಾಕಿದೆನೆ
ಎಂದುಕೊಂಡಾಗ
ಕಾಲಿನಲ್ಲಿ ತಾಕತ್ತಿಲ್ಲದಿದ್ದರೂ ತಲೆ ಓಡು ಎನ್ನುತ್ತದೆ
ಓಡಿಸಿಯೇ ಓಡಿಸುತ್ತದೆ, ಮತ್ತೆಲ್ಲೋ ಕೂರು ಎಂದೇಳುತ್ತದೆ
ಕೂರುವ ಮುನ್ನ ಚುಂಚಿ ನುಗ್ಗಿದಂತಾಗಿ
ನಿದ್ದೆಗೆಡುತ್ತದೆ.
ಆದರೂ ತಮಟೆ ಬಡಿಯುತ್ತಲೇ ಇರುತ್ತದೆ,
ಅದು ಕಾಲನ ಕಯ್ಯ ಢಮರುಗವಿರುಬಹುದ
ಎಂಬ ಎರಡಲುಗಿನ ಗರಗಸವೊಂದು ಮೆದುಳ
ಕತ್ತರಿಸುತ್ತಲೇಯಿದೆ.