ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋಕದಲ್ಲಿ ತಮ್ಮ ಕೈ ಕೆಳಗೆ ವಿದ್ಯೆ ಕಲಿಯಲು ಬರುವ ಸಾವಿರಾರು ವಿದ್ಯಾರ್ಥಿಗಳಲ್ಲಿ, ಒಬ್ಬನನ್ನ ಮಾತ್ರ ಆಯ್ದುಕೊಂಡು ಅವನನ್ನ ತಮ್ಮ ಶಿಷ್ಯನನ್ನಾಗಿ ಒಪ್ಪಿಕೊಳ್ಳುತ್ತಾರೆ. ಮತ್ತು ಅವರಿಗೆ ತಮ್ಮೆಲ್ಲ ಶಕ್ತಿಗಳನ್ನ ಧಾರೆಯೆರೆಯುತ್ತಾರೆ. ಅದು ತಾಂತ್ರಿಕ ಲೋಕದ ಅಲಿಖಿತ ನಿಯಮ. ಅದಕ್ಕಾಗಿಯೇ ಇಲ್ಲಿ ವಿದ್ಯೆ ಕಲಿಯುವವರು, ತಮ್ಮ ಗುರುಗಳನ್ನು ಒಲಿಸಿಕೊಂಡು ಅವರ ಪಟ್ಟದ ಶಿಷ್ಯರಾಗಲು ತಮ್ಮ ಪ್ರಾಣವನ್ನೇ ಪಣಕ್ಕಿಡುವುದು. ಹಾಗೆ ಆಯ್ಕೆಯಾದ ಶಿಷ್ಯನಿಗೆ ಗುರುಗಳ ಎಲ್ಲಾ ಶಕ್ತಿಗಳು ಲಭಿಸುತ್ತವೆ. ಇಲ್ಲಿ ನಾವು ಗುರುಗಳನ್ನ ಆಯ್ದುಕೊಂಡರೆ ಯಾವ ಪ್ರಯೋಜನವೂ ಇಲ್ಲ, ಅವರು ನಮ್ಮನ್ನ ಶಿಷ್ಯರೆಂದು ಒಪ್ಪಿಕೊಂಡಾಗಲೇ ಅವರ ಸಾಂಗತ್ಯ, ಅವರ ಮಾರ್ಗದರ್ಶನ ಎಲ್ಲವೂ ಸಿಗುತ್ತದೆ.
✍🏻 ಅರ್ಜುನ್ ದೇವಾಲದಕೆರೆ
{'ಅಭೀರ' ಕಾದಂಬರಿ}
ಕೃಪೆ : ಪ್ರಶಾಂತ ಸಾಗರ
No comments:
Post a Comment