ಜವ್ ಪ್ರತಿಷ್ಠಾನ
ಪರಿವರ್ತನೆ ನಮ್ಮ ಮಾತು, ಬದಲಾವಣೆಯೆಡೆಗೆ ನಮ್ಮ ನಡಿಗ ತಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಮಾರ್ಗದರ್ಶನ ವಿರದ ಈ ದೇಶದ ನವ ಪೀಳಿಗೆಯ ಗತಿಯೇನು? ಎಂಬುದು ತಮ್ಮ ತಮ್ಮ ಹವಾನಿಯಂತ್ರಿತ ಛೆಂಬರ್ಗಳಲ್ಲಿ ಹಾಯಾಗಿ ದುಡಿಯುತ್ತಾ ಇರಬಹುದಾಗಿದ್ದ ಕೆಲವು ದಕ್ಷಿಣ ಭಾರತೀಯ ಉದ್ಯೋಗಿಗಳ ಆಲೋಚನೆಯಾಗಿತ್ತು. ಇಂಥಾ ಅಲೋಚನೆಯ ಫಲವಾಗಿ ಜವ್ ಪ್ರತಿಷ್ಠಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳ ಅಸಂಖ್ಯಾತ ಯುವ ಜನರ ಪಾಲಿನ ದಾರಿದೀಪವಾಗುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿಯ ಮಟ್ಟಕ್ಕೆ ಭಾರತವನ್ನು ಬೆಳೆಸುವ ಸದುದ್ದೇಶ ವನ್ನು ಹೊಂದಿರುವ ನಮ್ಮ ಸಂಸ್ಥೆಯು, YOUTH ನಲ್ಲಿರುವ YOU, ವನ್ನು ಪೋಷಿಸಿ, ಬೆಳೆಸುವ, ಎಂದರೆ, ಭಾರತೀಯ ಯುವಕ ಯುವತಿ ಯರಲ್ಲಿ ಸ್ವಂತಿಕೆ ಯನ್ನು ಪ್ರೋತ್ಸಾಹಿಸಿ ಅವರು ತಮ್ಮ ಶಕ್ತಿಗಳನ್ನು ಸಾಕ್ಷಾತ್ಕರಿಸಿ, ಅಬ್ದುಲ್ ಕಲಾಮ್]] ರ 2020ರ ಮುನ್ನೋಟ (Vision 2020) ವನ್ನು ನೆರವೇರಿಸುವಲ್ಲಿ ನೆರವಾಗುವ ಧ್ಯೇಯವನ್ನು ಹೊಂದಿದೆ. ಮುಂಚಿನಿಂದಲೂ, ಜವ್ ಪ್ರತಿಷ್ಠಾನದ ತತ್ವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಪೊರೇಟ್ ಉದ್ಯಮಿಗಳು ಮೆಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ಮೊಟ್ಟ ಮೊದಲನೆಯದಾಗಿ, ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಲ್ಲಿ ತನ್ನ ಉದ್ದೇಶಗಳನ್ನು ಹಂಚಿಕೊಂಡಂದಿನಿಂದ ಜವ್ ಹಿಂ...