Posts

Showing posts from 2014

ನನ್ನ ಕ್ಯಾಮೆರಾ ಕಣ್ಣಲ್ಲಿ

Image

ಉಮರನ ಒಸಗೆ - ಡಿ ವಿ ಜಿ

Image

ಕರ್ನಾಟಕ ಕುಲಪುರೋಹಿತರೆನಿಸಿದ - ಆಲೂರು ವೆಂಕಟರಾಯರು‬

Image

ಉಮರನ ಒಸಗೆ - ಡಿ ವಿ ಜಿ

Image
ಇಲ್ಲಿ ಕ್ಲಿಕಿಸಿ -  ಉಮರನ ಒಸಗೆ - ಡಿ ವಿ ಜಿ

ಅನ್ನಾವತಾರ - ತ. ರಾ. ಸು

Image
ಇಲ್ಲಿ ಕ್ಲಿಕಿಸಿ- ಅನ್ನಾವತಾರ - ತ. ರಾ. ಸು

ಚಿಣ್ಣರ ಕುಸ್ತಿ -ಪ್ರಜಾವಾಣಿ ಚಿತ್ರ

Image

ಶಿಲ್ಪಕಲೆ ‍೬ - ರಾಜೇಶ್ ಶ್ರೀವತ್ಸ

Image
ಸ್ನೇಹಿತರೊಬ್ಬರು ಬದಾಮಿ ಬನಶಂಕರಿಯ ವಿಗ್ರಹದ ಸ್ವರೂಪ ಹೇಗಿದೆ ಎಂದು ಕೇಳಿದ್ದಾರೆ. ಯಾವಾಗಲೂ ಅಲಂಕಾರದಲ್ಲಿ ಮುಚ್ಚಿ ಹೋಗಿರುವ ದೇವಿಯ ವಿಗ್ರಹದ ವಿವರಗಳು ಕಾಣುವುದಿಲ್ಲವಾದ್ದರಿಂದ ಅವರಿಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿರಬಹುದು. ಬದಾಮಿ ಬನಶಂಕರಿ ಚಾಲುಕ್ಯರ ಆರಾಧ್ಯ ದೇವತೆ. ಹಿಂದೊಮ್ಮೆ ದುರ್ಗಮನೆಂಬ ಅಸುರ ಬ್ರಹ್ಮನನ್ನು ಒಲಿಸಿಕೊಂಡು ವೇದಗಳನ್ನು ತನ್ನ ವಶದಲ್ಲಿಟ್ಟುಕೊಂಡನಂತೆ. ವೇದಗಳ ಮರೆವಿನಿಂದ ಜನರು ಧರ್ಮಭ್ರಷ್ಟರಾಗಿ ಭೂಮಿಯ ಮೇಲೆ ಮಳೆ ಇಲ್ಲದೆ ಬರಗಾಲ ಉಂಟಾಯಿತಂತೆ. ಜನರ ಕಷ್ಟ ನೋಡಲಾಗದೆ ಆದಿಶಕ್ತಿಯು ಅವತಾರವೆತ್ತಿದಳು. ಜನರ ದೀನ ಸ್ಥಿತಿಯನ್ನು ನೋಡಿ ಆಕೆ ದುಃಖದಿಂದ ಮೈಯೆಲ್ಲಾ ನೂರಾರು ಕಣ್ಣುಗಳನ್ನು ಹೊಂದಿ ಕಂಬನಿಯ ಮಳೆಬರಿಸಿದಳು(=ಶತಾಕ್ಷಿ) . ತನ್ನ ಮೈಯಿಂದಲೇ ಫಲ,ಪುಷ್ಪ,ಗೆಡ್ದೆ,ಗೆಣಸುಗಳನ್ನು (=ಶಾಕಂಭರಿ) ಸೃಷ್ಟಿಸಿ ಜನರ ಹಸಿವನ್ನು ನೀಗಿಸಿದಳು . ನಂತರ ಭಯಂಕರ ಕೋಪದಿಂದ ದುರ್ಗಮಾಸುರನೊಡನೆ ಹೋರಾಡಿ ಅವನನ್ನು ಸಂಹರಿಸಿ ವೇದಗಳನ್ನು ಮರಳಿ ಪಡೆದಳು. ದುರ್ಗಮಾಸುರನನ್ನು ಸಂಹರಿಸಿ ದುರ್ಗೆ ಎನಿಸಿಕೊಂಡಳು. ನಂತರ ತಿಲಕಾರಣ್ಯದಲ್ಲಿ (ಈಗಿನ ಬದಾಮಿ) ನೆಲೆಸಿದಳು. ವನದಲ್ಲಿ ನೆಲೆಸಿದ್ದರಿಂದ ವನಶಂಕರಿ ಎನಿಸಿಕೊಂಡಳು. ದೇವೀ ಭಾಗವತ ಹಾಗು ಸಪ್ತಶತಿಗಳಲ್ಲಿ ದೇವಿಯು ಶಾಕಂಭರಿ ಅವತಾರದಲ್ಲಿ ತನ್ನ ನಾಲ್ಕು ಕೈಗಳಲ್ಲಿ ಬಲ ಕೈಯಗಳಲ್ಲಿ ಬಾಣ ಹಾಗು ಶಾಕಸಮೂಹ (ಫಲ,ಪುಷ್ಪ,ಗೆಡ್ದೆ,ಗೆಣಸು)ವನ್ನು , ಎಡಕೈಗಳಲ್ಲಿ ಧನಸ್ಸು ಹಾ...

ಶಿಲ್ಪಕಲೆ : ೫ - ರಾಜೇಶ್ ಶ್ರೀವತ್ಸ

Image
ಬಹುತೇಕ ಎಲ್ಲಾ ಪುರಾಣಾಗಳಲ್ಲೂ ಜಗತ್ ಸೃಷ್ಟಿಯ ಕಥೆ ಬರುತ್ತದೆ. ಪುರಾಣದ ಕಥೆಗಳ ಪ್ರಕಾರ ಕಶ್ಯಪ ಹಾಗು ದಿತಿಯರ ಎರಡನೆಯ ಮಗ ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುರುಳಿ ಸುತ್ತಿ ಸಮುದ್ರದಡಿಯಲ್ಲಿ ಬಚ್ಚಿಟ್ಟ. ಆಗ ವಿಷ್ಣು ವರಾಹ (ಕಾಡು ಹಂದಿ) ರೂಪವನ್ನು ತಾಳಿ ನೀರಿಗಿಳಿದು ಹಿರಣ್ಯಾಕ್ಷನನ್ನು ಎಡಗಾಲಿಂದ ಒದ್ದು ಸಂಹರಿಸಿ ಕೋರೆದಾಡೆಗಳ ಮೂಲಕ ಭೂಮಿಯನ್ನು ಮೇಲೆತ್ತಿ ಮೊದಲಿದ್ದಂತೆ ನೀರಿನ ಮೇಲೆ ಪ್ರತಿಷ್ಠಾಪಿಸಿದ. ಬ್ರಹ್ಮ ವರಾಹನನ್ನೆ ಸೃಷ್ಟಿಯಜ್ಞದ ಪಶುವನ್ನಾಗಿಸಿ ತನ್ನ ಕಾರ್ಯವನ್ನು ಪ್ರಾರಂಭ ಮಾಡಿದನು. ಆ ಯಜ್ಞ ಸ್ವರೂಪಿ ವರಾಹನನ್ನು ಈ ರೀತಿ ಬಣ್ಣಿಸಲಾಗುತ್ತದೆ. ನಾಲ್ಕು ವೇದಗಳೇ ಅವನ ಕಾಲುಗಳು, ಯೂಪ ಸ್ತಂಭವೇ ಅವನ ಕೋರೆಹಲ್ಲುಗಳು, ಯಾಗಗಳೆಲ್ಲಾ ಅವನ ದಂತಗಳು, ಚಯನವೇ ( ಅಗ್ನಿವೇದಿಕೆ ) ಮುಖ, ಅಗ್ನಿಯೇ ನಾಲಗೆ, ದರ್ಭೆಗಳೆ ರೋಮಗಳು, ಬೆವರಹನಿಗಳೇ ತಿಲ(ಎಳ್ಳು), ರಾತ್ರಿ-ಹಗಲುಗಳೇ ಇವನ ಕಣ್ಣುಗಳು, ಆಕಾಶವೇ ಒಡಲು, ಗುಡುಗಿನ ಶಬ್ಧಗಳೇ ವಾದ್ಯಗಳು, ಸಾಮಗಾನವೇ ಅವನ ಸ್ವರ, ಅವನ ಮೂತಿಯೇ ಸೃಕ್ -ಸ್ರುವಗಳು (ತುಪ್ಪಹೊಯ್ಯುವ ಚಮಚಗಳು ), ರಕ್ತವೇ ಆಜ್ಯ(ತುಪ್ಪ), ಅಸ್ಥಿಗಳೇ ಸಮಿತ್ತ್ತು(ಕಟ್ಟಿಗೆ), ಗುಪ್ತರ ಕಾಲದಲ್ಲಿ ನಾಲ್ಕುಕಾಲಿನ ಪಶುರೂಪಿ ವರಾಹನ ಮೂರ್ತಿಗಳೇ ಪ್ರಚಲಿತವಾಗಿದ್ದವು, ಪಲ್ಲವ, ಚಾಳುಕ್ಯ ಕಾಲದಿಂದ ನೃವರಾಹ (ಮನುಷ್ಯ ದೇಹ ಕಾಡುಹಂದಿಯ ತಲೆ) ರೂಪದಿಂದ ಅವನ ವಿಗ್ರಹಗಳ ಕೆತ್ತನೆ ಪ್ರಾರಂಭವಾಯ್ತು. ಮೊದಲನೇ ಚಿತ್...

ಶಿಲ್ಪಕಲೆ; ೪ - ರಾಜೇಶ್ ಶ್ರೀವತ್ಸ

Image
ಖಟ್ವಾಂಗಧಾರಿಣಿ ಚಾಮುಂಡಾ: ದುರ್ಗಾ ಸಪ್ತಶತಿಯ ಏಳನೆಯ ಅಧ್ಯಾಯದಲ್ಲಿ ಚಾಮುಂಡಿಯ ಕಥೆ ಬರುತ್ತದೆ. ಶುಂಭ-ನಿಶುಂಭರ ಸೇವಕರಾದ ಚಂಡ ಮುಂಡರು ದೇವಿಯನ್ನು ಬಂಧಿಸಿ ಕರೆದೊಯ್ಯಲು ಬರುತ್ತಾರೆ. ಆಗ ಕೋಪದಿಂದ ಹುಬ್ಬುಗಂಟ್ಟಿಕ್ಕಿದ ದುರ್ಗೆಯ ಮುಖದಿಂದ ಕಡುಗಪ್ಪಿನ ಶಕ್ತಿದೇವಿಯೊಬ್ಬಳು ಆವಿರ್ಭವಿಸುತ್ತಾಳೆ.ಆಕೆ ಕೈಗಳಲ್ಲಿ ಕತ್ತಿ , ಹಗ್ಗ, ಖಟ್ವಾಂಗ ಮೊದಲಾದ ಅಯುಧಗಳನ್ನು ಕೈಗಳಲ್ಲಿ ಹಿಡಿದಿರುತ್ತಾಳೆ. ಹುಲಿಚರ್ಮವನ್ನು ಧರಿಸಿರುತ್ತಾಳೆ. ಮೈಯಲ್ಲಿ ಮಾಂಸವಿಲ್ಲದ ಅಸ್ಥಿ ಪಂಜರದಂತೆ ಕಾಣಿಸುವ ಜೋಲು ಸ್ತನಗಳ ಶುಷ್ಕದೇಹಿ ಆಕೆ, ಜಟೆಗಟ್ಟಿದ ಕೆಂಪು ಕೂದಲು, ಕತ್ತಿನ ಸುತ್ತ ತಲೆಬುರುಡೆಗಳ ಮಾಲೆ, ಗುಳಿಬಿದ್ದ ಬೆಕ್ಕಿನ ಕಣ್ಣುಗಳು, ಕೋರೆದಾಡೆಗಳು ಹೊರ ಚಾಚಿರುವ ಅಗಲವಾದ ಬಾಯಿ, ಮುಖದಲ್ಲಿ ವಿಕಟ ನಗೆ. ಅವಳು ಏರಿರುವ ವಾಹನ ಬೇತಾಳ ಹೊಕ್ಕಿರುವ ಶವ. ಅದು ಆಕೆಯನ್ನೆತ್ತಿ ಎಲ್ಲಿಂದರಲ್ಲಿಗೆ ಹಾರಾಡುತ್ತದೆ. ಅವಳನ್ನು ನೋಡಿಯೇ ಎಷ್ಟೋ ಶತ್ರು ರಾಕ್ಷಸರು ಎದೆಯೊಡೆದು ಸಾಯುತ್ತಾರೆ. (ಇದನ್ನು ಓದಿಯೇ ನಮ್ಮ ಎದೆ ಒಡೆಯುತ್ತದೆ ಬಿಡಿ  ) ರಾಕ್ಷಸ ಸೇನೆಯನ್ನು ಕ್ಷಣ ಮಾತ್ರದಲ್ಲಿ ನಿರ್ನಾಮ ಮಾಡಿದ ಆಕೆ ಚಂಡ- ಮುಂಡರ ತಲೆ ಕತ್ತರಿಸಿ ದೇವಿಯ ಬಳಿ ತರುತ್ತಾಳೆ. ಅವಳ ಶೌರ್ಯಕ್ಕೆ ಮೆಚ್ಚಿದ ದುರ್ಗೆ ಅವಳನ್ನು ಚಾಮುಂಡಾ ಎಂದು ಕರೆಯುತ್ತಾಳೆ. ಮುಂದಿನ ಅಧ್ಯಾಯಗಳಲ್ಲಿ ಆಕೆ ರಕ್ತಬೀಜನನ್ನು ನಿರ್ಮೂಲ ಮಾಡಿದ ಕತೆ ಬರುತ್ತದೆ. ವರಾಹ ಹಾಗು ಪದ್ಮ ಪುರಾಣಗಳಲ್ಲಿ...

ಜಿಜ್ಙಾಸೆ

Image
ಭರತ ಎಂದರೆ ಯಾರು ? ನಮ್ಮ ಇತಿಹಾಸ/ಪುರಾಣದಲ್ಲಿ ಎಷ್ಟು 'ಭರತ'ರಿದ್ದಾರೆ? ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದ್ದು ಇವರಲ್ಲಿ ಯಾರಿಂದ? ೧ . ಅಗ್ನಿಯ ಮಗ ೨.,ಋಷಭ ದೇವನ ಮಗ ೩ ಶಕುಂತಲೆ-ದುಷ್ಯಂತರ ಮಗ ೪.ಧಶರಥನ ಮಗ ೫. ನಾಟ್ಯ ಶಾಸ್ತ್ರವನ್ನು ಬರೆದವನು. ಇವರಲ್ಲಿ ಚಕ್ರವರ್ತಿಗಳಾಗಿ ಮೆರೆದವರು ೧ . ಋಷಭದೇವನ ಮಗ ೨ ದುಷ್ಯಂತನ ಮಗ. ಇವರಲ್ಲಿ ಪುರಾತನನಾದವನು ಋಷಭದೇವ ಹಾಗು ಜಯಂತಿಯರ ಮಗನಾದ ಭರತ. ಭಾಗವತ , ವಿಷ್ಣು ಪುರಾಣಗಳ ಪ್ರಕಾರ ಇವನು ಆಳಿದ ಭೂ ಭಾಗವೇ ಭರತವರ್ಷ ಅಥವ ಭಾರತ. (ಜೈನ ಧರ್ಮದಲ್ಲಿ ಬರುವ ಬಾಹುಬಲಿಯ ಸೋದರ ಭರತನೂ ಇವನೆ). ’ಅಜನಾಭಂ ನಾಮೈತದ್ವರ್ಷಂ ಭಾರತಮಿತಿ ಯತ ಆರಭ್ಯ ವ್ಯಪದಿಶಂತಿ" ( ಭಾಗವತ ಪಂಚಮ ಸ್ಕಂದ ಏಳನೇ ಅಧ್ಯಾಯ ಮೂರನೇ ಶ್ಲೋಕ ; ಅಜನಾಭವರ್ಷವೆಂದು ಹೆಸರಾಗಿದ್ದ ಈ ವರ್ಷ(ಭೂ ಭಾಗಕ್ಕೆ)ಕ್ಕೆ ಭರತ ಚಕ್ರವರ್ತಿಯ ಕಾಲದಿಂದ ಭರತವರ್ಷವೆಂದು ಹೆಸರಾಯ್ತು.). ಇವನ ನಂತರ ಬಂದ ದುಷ್ಯಂತನ ಮಗ ಚಕ್ರವರ್ತಿಯಾಗಿ ಇಡೀ ಭೂಮಂಡಲವನ್ನಾಳಿದ . ಅವನಿಂದ ಆ ವಂಶಕ್ಕೆ ಭರತವಂಶವೆಂದು ಹೆಸರಾಯಿತೆಂದು ಹೇಳಿದ್ದರೂ ಅವನಿಂದ ಈ ಭೂ ಭಾಗಕ್ಕೆ ಭಾರತವೆಂದು ಹೆಸರಾಯ್ತೆಂದು ಭಾಗವತದಲ್ಲಿ ಹೇಳಿಲ್ಲ. ಋಷಭನ ಮಗ ಭರತ ವಾನಪ್ರಸ್ಥಕ್ಕೆ ಹೋದ ಮೇಲೆ ಭರತ ಮುನಿಯೆನಿಸಿಕೊಂಡ. ಜಿಂಕೆಮರಿಯೊಂದರೆ ಮೋಹಕ್ಕೆ ಬಿದ್ದು ಮರಣ ಹೊಂದಿದ. ನಂತರ ಜಿಂಕೆಯಾಗಿ ಜನ್ಮ ತಾಳಿದ. ಮುಂದಿನ ಜನ್ಮದಲ್ಲಿ ಅಂಗಿರಸ ಮುನಿಗೆ ಭರತನೆಂಬ ಮಗನಾಗಿ ಮತ್...

ಸೋಮೇಶ್ವರ ಶತಕ

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ | ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ || ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ | ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧|| ಹಲವಾರು ನದಿಗೊ ಸೇರಿ ಸಮುದ್ರ ಹೇಂಗೆ ಉಂಟಾವುತ್ತೋ ಹಾಂಗೇ, ನಮ್ಮ ಜ್ಞಾನ ಕೂಡಾ. ಕೆಲವು ವಿಶಯಂಗಳ ನಾವು ಗೊಂತಿಪ್ಪವರಿಂದ ಕಲಿತ್ತು, ಇನ್ನು ಕೆಲವು ಶಾಸ್ತ್ರಂಗಳ ಕೇಳಿ ತಿಳ್ಕೊಳುತ್ತು, ಇನ್ನು ಕೆಲವು ಮಾಡುವ ಕೆಲಸಂಗಳ ನೋಡಿ ಅನುಭವ ತೆಕ್ಕೊಳ್ತು, ಇನ್ನು ಕೆಲವರ ನಮ್ಮ ಸ್ವ ಬುದ್ಧಿಂದ ಕಲಿತ್ತು. ಇನ್ನು ಕೆಲವು ಒಳ್ಳೆ ಜೆನರ ಸಹವಾಸಂದಲೂ ಕಲಿತ್ತು. ಹೀಂಗೆ ಬೇರೆ ಬೇರೆ ಮೂಲಂಗಳಿಂದ ತಿಳ್ಕೊಂಡೇ ಸರ್ವಜ್ಞ ಆವುತ್ತು. ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ| ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ|| ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ | ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೨|| ಕೈಲಿ ಕನ್ನಾಟಿ ಇಪ್ಪಗ ಅದರ ಬಿಟ್ಟು ನೀರಿಲ್ಲಿ ಮೋರೆ ನೋಡ್ತವಾ?  ಹಾಲಿಂಗಾಗಿ ಕಾಮಧೇನು ಇಪ್ಪಗ ಬೇರೆ ಹಸುಗಳ ಸಾಂಕುತ್ತವೋ? ಗುಣವಂತರು ಹಾಲು ಉಂಡ ಮತ್ತೆ ಬೇರೆ ಎಂತಾರೂ ಉಣ್ಣುತ್ತವೋ? ಗಿಳಿಯ ಮಾತಿಲ್ಲಿ ಇಪ್ಪ ಇಂಪಿಂದ ಹೆಚ್ಚಿನದ್ದು ಕಾಕೆಯ ಕೂಗಿಲ್ಲಿ ಇದ್ದಾ? ರಂಭೆಯ ನೃತ್ಯ ನೋಡಿದ ಮತ್ತೆ ಡೊಂಬರಾಟ  ನೋಡ್ತವಾ? ...

ಶಿಲ್ಪಕಲೆ :೩ - ರಾಜೇಶ್ ಶ್ರೀವತ್ಸ

Image
ಐಹೊಳೆಯ ಗಜ ಪೃಷ್ಟಾಕಾರದ (ಅರ್ಧ ವೃತ್ತಾಕಾರದ ಹಿಂಬದಿಯ) ದುರ್ಗಾ ದೇವಾಲಯ ಚಾಳುಕ್ಯರ ವಿಶಿಷ್ಟ ವಾಸ್ತು ಪ್ರಯೋಗ. ಅದು ನಿಜವಾಗಿ ವಿಷ್ಣುವಿನ ದೇಗುಲ . ದುರ್ಗದ (ಕೋಟೆಯ) ದೇವಾಲಯ ದುರ್ಗಾ ದೇವಾಲಯವಾಗಿ ಆಡು ಮಾತಿನಲ್ಲಿ ಬಂದು ಬಿಟ್ಟಿದೆ. ಎತ್ತರ ಜಗುಲಿಯ ಮೇಲೆ ದೇವಾಲಯವನ್ನು ಸುತ್ತುವರೆದಿರುವ ಪ್ರದಕ್ಷಿಣಾ ಪಥದ ಹೊರಾಂಗಣವಿದೆ. ದೇವಾಲಯದ ಗೋಡೆಯ ಸುತ್ತಲೂ ರಚಿಸಿರುವ ಗೂಡುಗಳಲ್ಲಿ ಹರಿಹರ, ಲಕ್ಷ್ಮೀನಾರಾಯಣ, ನರಸಿಂಹ, ವರಾಹ, ವೃಷಭವಾಹನ, ಗರುಡಾರೂಢ, ತ್ರಿವಿಕ್ರಮ, ಅರ್ಧನಾರೀಶ್ವರ ಹಾಗು ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ. ಇಲ್ಲಿರುವ ಮಹಿಷಾಸುರ ಮರ್ದಿನಿಯ ಶಿಲ್ಪವು ಬಹಳ ಪ್ರಸಿದ್ಧವಾದದ್ದು. ಗೂಗ‌‌‌ಲ್ನಲ್ಲಿ ಮಹಿಷಾಸುರ ಮರ್ದಿನಿ ಶಿಲ್ಪವೆಂದು ಹುಡುಕಿದರೆ ಕೇವಲ ಇದರ ಚಿತ್ರಗಳೇ ಕಾಣಿಸುವಷ್ಟು. ಶಿಲ್ಪದಲ್ಲಿ ಮಹಿಷಾಸುರನನ್ನು ಕೋಣನ ರೂಪದಲ್ಲಿ ಬಿಂಬಿಸಲಾಗಿದೆ. ಅವನನ್ನು ತ್ರಿಶೂಲದ ಬುಡದದಿಂದ ತಿವಿಯುತ್ತಿರುವಂತೆ ದೇವಿಯನ್ನು ತೋರಿಸಲಾಗಿದೆ. ದೇವಿ ಎಂಟು ಕೈಗಳನ್ನು ಹೊಂದಿದ್ದು ಎಡಗಾಲು ಹಾಗು ಎಡ ಭಾಗದ ೪ ಕೈಗಳು ಈಗ ಭಿನ್ನವಾಗಿವೆ. ಬಲಕೈಗಳಲ್ಲಿ ತ್ರಿಶೂಲ, ಚಕ್ರ, ಬಾಣ, ಖಡ್ಗ ಗಳನ್ನೂ ಎಡಗೈಯಲ್ಲಿ ಘಂಟೆ, ಶಂಖಗಳನ್ನು ಹಿಡಿದಿದ್ದು ಉಳಿದೆರಡು ಕೈಗಳು ಭಿನ್ನವಾಗಿವೆ. ಬಲಗಾಲನ್ನು ನೆಲದ ಮೇಲೆ ಊರಿನಿಂತಿದ್ದು ಎಡಗಾಲನ್ನು ಕೋಣನ ಬೆನ್ನಿನ ಮೇಲೆ ಊರಿದ್ದಾಳೆ. ಕೋಣವು ತಲೆಯನ್ನು ನೆರವಾಗಿ ಮೇಲಕ್ಕೆತ್ತಿದ್ದು ತನ್ನನ್ನು ಅದುಮಿ ಕೆಳಗೆ ಒತ...

ಶಿಲ್ಪಕಲೆ ೨ - ರಾಜೇಶ್ ಶ್ರೀವತ್ಸ

Image
ಭಾರತೀಯ ಕಲಾ ಪ್ರಪಂಚಕ್ಕೆ ಚಾಳುಕ್ಯರ ಕೊಡುಗೆ ಅನನ್ಯವಾದುದ್ದು. ಐಹೊಳೆ, ಪಟ್ತದಕಲ್ಲು, ಬಾದಾಮಿಗಳು ಶಿಲ್ಪ ಕಲೆಯ ಹಾಗು ಭಾರತೀಯ ವಾಸ್ತುಕಲೆಯ ಪ್ರಯೋಗ ಶಾಲೆಯೆಂದೇ ಹೆಸರಾಗಿದೆ. ಚಾಳುಕ್ಯರು ತಮ್ಮ ಸಮಕಾಲೀನ ಪಲ್ಲವರೊಡನೆ ಪೈಪೋಟಿಗೆ ಬಿದ್ದಂತೆ ರಚಿಸಿದ ಶಿಲಾದೇಗುಲಗಳ ವಾಸ್ತು ಹಾಗು ವಿಗ್ರಹಗಳು ಇಂದಿಗೂ ನವನವೀನ. ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ (ಹಿಂದೆ ಲೋಕಪಾಲೇಶ್ವರ ಹೆಸರಿತ್ತು) ಕಂಬ ಹಾಗು ಗೋಡೆಯ ಕೋಷ್ಠಕಗಳಲ್ಲಿರುವ ಕೆಲವು ಶಿಲ್ಪಗಳಂತೂ ಅದ್ಬುತ. ಉತ್ತರ ದ್ವಾರದ ಮಂಟಪದ ಬಲಕಂಬದಲ್ಲಿರುವ ಗಜೇಂದ್ರ ಮೋಕ್ಷ ಶಿಲ್ಪವು ಅವುಗಳಲ್ಲೊಂದು. ಗಜೇಂದ್ರ ಮೋಕ್ಷ ಪ್ರಕರಣವು ವಿಷ್ಣು ಪರವಾದ ಬಹುತೇಕ ಎಲ್ಲಾ ಪುರಾಣಗಳಲ್ಲಿ ಕಾಣಿಸುತ್ತದೆ.ಸರೋವರದಲ್ಲಿ ತನ್ನ ಬಳಗದೊಡನೆ ಜಲಕ್ರೀಡೆಯಾಡುತ್ತಿದ್ದ ಗಜೇಂದ್ರನನ್ನು ಮೊಸಳೆಯೊಂದು ಕಚ್ಚಿ ನೀರಿನೊಳಗೆ ಸೆಳೆಯಲು ಪ್ರಾರಂಬಿಸುತ್ತದೆ. ಮೊಸಳೆಯ ದವಡೆಯಿಂದ ತಪ್ಪಿಸಿಕೊಳ್ಳಲಾಗದೆ ಬವಳಿದ ಗಜೇಂದ್ರನನ್ನು ಇತರ ಆನೆಗಳು ಸಂಕಷ್ಟದಿಂದ ಪಾರುಮಾಡಲು ಯತ್ನಿಸಿ ಸೋತು ಕೈಚೆಲ್ಲುತ್ತವೆ. ಸೋಲೊಪ್ಪದ ಗಜರಾಜ ಮೊಸಳೆಯ ದವಡೆಯಿಂದ ಪಾರಾಗಲು ಏಕಾಂಗಿಯಾಗಿ ಹೋರಾಡುತ್ತಾನೆ. ಮೊಸಳೆಗಳಿಗೆ ನೀರಿನಲ್ಲೇ ಬಲ. ಹಾಗಾಗಿ ಗಜರಾಜ ಕೊನೆಗೂ ಸೋಲನೊಪ್ಪಿ ಅಹಂಕಾರವನ್ನು ತ್ಯಜಿಸಿ ತನ್ನನ್ನು ಪಾರುಮಾಡಲು ಎಕಮೇವಾದ್ವಿತೀಯ ಭಗವಂತ ವಿಷ್ಣುವಿನ ಮೊರೆ ಹೋಗಿ ಆರ್ತನಾಗಿ ಸ್ತುತಿಸುತ್ತಾನೆ. ಸಾವಿನ ಬಾಯೋಳಗೆ ಹೊಕ್ಕಿರುವ ತನ್ನ ಭಕ್ತನನ್ನು...

ಶಿಲ್ಪಕಲೆ ೧ ರಾಜೇಶ್ ಶ್ರೀವತ್ಸ

Image
ಶಿಲ್ಪಕಲೆಯ ಅಭ್ಯಾಸ ನಮ್ಮ ಪಠ್ಯದ ಒಂದು ಭಾಗವಾಗಿತ್ತು. ನಮ್ಮ ಪ್ರಾಚಾರ್ಯರಾದ ’ಕಾಳೇಶ್ವರಾಚಾರ್ಯ ಹಂಸಬಾವಿ ’ಯವರೊಡನೆ ಮಹಾಬಲಿಪುರಮ್ ದೇವಸ್ಥಾನದ ವೀಕ್ಷಣೆಗೆ ಹೋಗಿದ್ದೆವು. ಗೈಡ್ಗಳ ಸಹಾಯವಿಲ್ಲದೆ ಶಿಲ್ಪಗಳನ್ನು ನೋಡಿ ಬಂದು ಟಿಪ್ಪಣಿ ಬರೆದು ತೋರಿಸಬೇಕೆಂದು ನಮ್ಮ ಗುರುಗಳ ಆದೇಶ. ಸರಿ ನಮ್ಮ ದೇಗುಲ ವೀಕ್ಷಣೆ ಮುಗಿಸಿ ಟಿಪ್ಪಣಿ ಬರೆದುಕೊಂಡು ಗುರುಗಳಿರುವಲ್ಲಿ ಹಿಂತಿರುಗಿದೆವು ಎಂದಿನಂತೆ ಮುಂದೆ ನಿಂತಿದ್ದ ನಾನೇ ಟಿಪ್ಪಣಿಯನ್ನು ಗುರುಗಳ ಕೈಗಿಟ್ತೆ. ನಾನು ಬರೆದ ಟಿಪ್ಪನಿಯ ಒಂದು sample...೧ನೇ ಗುಹೆಯಲ್ಲಿ ಸುಂದರವಾದ ಗಜಲಕ್ಶ್ಮೀ ದೇವಿಯ ಕೆತ್ತನೆ ಇದೆ. ಎಡ-ಬಲಗಳಲ್ಲಿ ಚಾಮರಧಾರಿಣಿಯರಿದ್ದಾರೆ. ೨ನೇ ಗುಹೆಯಲ್ಲಿ ಮಹಿಷಾಸುರಮರ್ದಿನಿ.. ಒಂದೆರಡು ಸಾಲುಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಗುರುಗಳ ಮುಖ ಕೋಪದಿಂದ ಕಪ್ಪಿಟ್ತಿತು. ಪರ್ರನೆ ಕಾಗದವನ್ನು ಹರಿದು ಚೂರು ಚೂರು ಮಾಡಿದರು’ ಏನಪ್ಪಾ PWD report ಬರ್ದಿದ್ದೀಯಲ್ಲಾ... ನಿನ್ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಲೆ ನೋಡಲಿಕ್ಕೆ ಬಂದಿದ್ಯೋ ? ಕಲ್ಲು ನೋಡಲಿಕ್ಕೆ ಬಂದಿದ್ಯೋ? ನಡಿ ಮತ್ತೆ ಒಂದೇ ಒಂದು ಶಿಲ್ಪದ್ದಾದರೂ ಸರಿ ಬರ್ಕೊಂಡು ಬಾ..’. ಎಂದು ಗುಡುಗಿದರು. ಸರಿ ಸಾರ್ ಎಂದು ಮತ್ತೊಮ್ಮೆ ಶಿಲ್ಪ ವೀಕ್ಷ್ಣೆಣೆಗೆ ಹೋಗಲು ಹಿಂದೆ ತಿರುಗಿದೆ ಸಹಪಾಠಿಗಳೆಲ್ಲಾ ಮಂಗಮಾಯವಾಗಿದ್ದರು. ಒಬ್ಬರಿಗೂ ಅವರು ಬರೆದದ್ದನ್ನು ಗುರುಗಳಿಗೆ ತೋರಿಸುವ ಧೈರ್ಯ ಉಳಿದಿರಲಿಲ್ಲ. ತಲೆ ಕೆಡಿಸಿಕೊಂಡು ಎರಡನ...

ದೃಢ ಮನಸ್ಸಿನವರ ೧೨ ವರ್ತನೆಗಳು

1 ಮುಂದೆ ಸಾಗಿ ಬಿಡ್ತಾರೆ. ಸಾರಿ ಗೀರಿ ಅಂತೆಲ್ಲ ಹೇಳಿಕೊಂಡು ಸಮಯ ವ್ಯರ್ಥ ಮಾಡುವ ಮಾತೇ ಇಲ್ಲ. 2 ಖುಷಿಯಾಗಿರುತ್ತಾರೆ. ಯಾರನ್ನೂ ದೂರುವುದಿಲ್ಲ. ಕೈಲಾಗದ ಕೆಲಸಕ್ಕೆ ಮುಂದಾಗುವುದಿಲ್ಲ. 3 ಸುಮ್ಮನೆ ಸುಮ್ಮನೆ ಹೊಗಳುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಯಾರು ಯಾರಿಗೋ ಸಲಾಮು ಹೊಡೆಯುವುದಿಲ್ಲ. 4 ವರ್ತಮಾನಕ್ಕೆ ಶಕ್ತಿ ವ್ಯಯಿಸುತ್ತಾರೆ. ವರ್ತಮಾನದಲ್ಲಿ ಬದುಕುತ್ತಿರುತ್ತಾರೆ. 5 ಹಳೆಯ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.ತಪ್ಪು ಮಾಡಿದ್ದಿದ್ರೆ ತಪ್ಪು ಅಂತ ಒಪ್ಪಿಕೊಂಡಿರುತ್ತಾರೆ. ಬೇರೆಯವರ ಮೇಲೆ ಅದನ್ನು ಹೊರಿಸುವುದಿಲ್ಲ. ಮುಂದೆ ಅಂಥ ತಪ್ಪು ಮಾಡುವುದಿಲ್ಲ. 6 ಬೇರೆಯವರ ಗೆಲುವಿಗೆ ಸಂಭ್ರಮಿಸುತ್ತಾರೆ. ಹೊಟ್ಟೆಕಿಚ್ಚು ಇಲ್ಲವೇ ಇಲ್ಲ. ಬೇರೆಯವರು ಗೆದ್ದರೆ ತಾವೇ ಗೆದ್ದಷ್ಟು ಖುಷಿಯಾಗುತ್ತಾರೆ. 7 ಏಕಾಂತವನ್ನೂ ಇಷ್ಟಪಡುತ್ತಾರೆ. ಏಕಾಂಗಿ ಅಂತ ನರಳುವುದಿಲ್ಲ, ಖುಷಿಯಲ್ಲಿರುತ್ತಾರೆ. 8 ಕೆಟ್ಟ ಯೋಚನೆಗಳಲ್ಲಿ ಮುಳುಗುವುದಿಲ್ಲ.ಬೇಡದ ವಿಷಯಗಳ ಬಗ್ಗೆ ಯೋಚಿಸುವುದೂ ಇಲ್ಲ, ಮಾತನಾಡುವುದೂ ಇಲ್ಲ. 9 ಎಲ್ಲಿ ಹೋದರೂ ಸಲ್ಲುತ್ತಾರೆ.ಅದೇ ಬೇಕು, ಇದೇ ಬೇಕು ಅಂತ ಇಲ್ಲ. ಎಲ್ಲಿ ಹೋದರೂ ಹೇಗೆ ಇದ್ದರೂ ಹೊಂದಿಕೊಳ್ಳುತ್ತಾರೆ. 10 ಜಾಣ್ಮೆಯಿಂದ ಸವಾಲು ಎದುರಿಸುತ್ತಾರೆ. ಯೋಚನೆ ಮಾಡದೆ ಮುನ್ನುಗ್ಗಿ ಸೋಲುವುದಿಲ್ಲ. ಸಾಕಷ್ಟು ಲೆಕ್ಕಹಾಕಿ, ಯೋಚನೆ ಮಾಡಿ ಗೆಲ್ಲುತ್ತಾರೆ. 11 ಭಯಂಕರ ತಾಳ್ಮೆ ಇರುತ್ತದೆ. ಕೆಲಸ ಮಾಡು...

ಎದೆಗೆ ಬಿದ್ದ ಅಕ್ಷರ " - ದೇವನೂರು ಮಹಾದೇವ

https://soundcloud.com/satish-r-bengaluru/edege-bida-akashara

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪು -

Image

ಕನಸು.

 ಕನಸು.* ಬಾನಂಚಿನ ಅಂಗಳದಿ ನಾ ಕಂಡ ಆ ಕನಸು ತಾರೆಗಳ ಆಗಸದಿ ಚಿತ್ತಾರವ ಬಿಡಿಸಿದಂತೆ ಚಂದಿರನ ಬೆಳದಿಂಗಳಲಿ ನಾ ನಗುವ ಕಂಡೆ ನಗುವಿನಾಳದ ನೋವ ಮರೆತು ಮೋಡಗಳು ಬಂಧಿಸಿದ ಆ ಚಂದ್ರನ ಪರದಾಟ ಜೀವನದಿ ಕಮರಿದ ಕನಸುಗಳ ಹುಡುಕಾಟ ಕಪ್ಪಗಿನ ಮೋಡದ ಅಂಚಿನಲಿ ನಿಂತ ಮಳೆಯಹನಿ ಕಣ್ಣಂಚಿನಲಿ ತುಂಬಿದ ಕಣ್ಣೀರ  ಹನಿಯ ಸಾಲು ಮೋಡಗಳ ಪೈಪೋಟಿ ಭಾವನೆಗಳ ಮಿಡುಕಾಟ ದೂರದಾಗಸದ ಕಡೆಗೆ ನೆಮ್ಮದಿಯ ನೋಟ. ಸ್ಮೃತಿ..   

ನನ್ನ ಕ್ಯಾಮೆರಾ ಕಣ್ಣಲ್ಲಿ

Image

ಹಾಗೆ ಸುಮ್ಮನೆ

Image

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ : ಶ್ರಾವಣ ಮುಗಿಯುತ್ತಿದ್ದಂತೆ ನಿಮ್ಮ ಸಂತಸದ ದಿನಗಳೂ ಮುಗಿದವು. ವಧಾ ಸ್ಥಾನದಲ್ಲಿ ಇರುವ ಕುಜನ ಕೆಂಗಣ್ಣು ನಿಮ್ಮ ಮೇಲಿದೆ. ಬಿರಿಯಾನಿ ಆಗುವುದನ್ನು ತಪ್ಪಿಸಿಕೊಳ್ಳಲು ನಿತ್ಯವೂ ಕಟುಕ ಹೃದಯ ಪರಿವರ್ತನಾ ಸ್ತೋತ್ರ ಪಠಿಸಿದಲ್ಲಿ ಸಹಾಯವಾಗಬಹುದು. ಉಳಿದಂತೆ ದೇವರೇ ದಿಕ್ಕು. ವೃಷಭ: ಕೆಟ್ಟಕಾಲ ಬರುತ್ತಾ ಇದೆ. ಮುಂದೆ ಹೋದರೆ ಹಾಯಬೇಡಿ , ಹಿಂದೆ ಬಂದರೆ ಒದೆಯ ಬೇಡಿ. ಚಂಚಲ ಚಂದ್ರ ಘಾತಕ ಸ್ಥಾನದಲ್ಲಿರುವುದರಿಂದ ಮನಸಿನ ಮೇಲೆ ಹಿಡಿತ ಕಳೆದುಕೊಂಡು ಕಂಡವರ ಬೇಲಿ ಹಾರಿ ಮೇಯಲು ಹೋಗದಿರಿ. ನಿಮ್ಮ ಹೆಡೆಮುರಿ ಕಟ್ತಿ ದೊಡ್ಡಿಗೆ ದೂಡುವ ಸಂಭವವಿದೆ. ಒಳಿತ್ತಿಗಾಗಿ ರಾಮಚಂದ್ರಾಪುರದ ಮಠಕ್ಕೆ ಮುಡಿಪಿಟ್ಟು ಪ್ರಾರ್ಥಿಸಿ. ಮಿಥುನ: ಶುಕ್ರ ಉಚ್ಚನಾಗಿ ೫ನೇ ಮನೆಯಲ್ಲಿರುವುದು ನಿಮ್ಮ ಅದೃಷ್ಟ. ಶ್ರಾವಣ ಮಾಸ ಮುಗಿದರೂ ನಿಮ್ಮ ಒಳ್ಳೆಯದಿನಗಳು ಮುಗಿದಿಲ್ಲ. ಮಲೆನಾಡಿನ ಕಡೆ ಮಳೆ ಇನ್ನೂ ನಿಂತಿಲ್ಲ. ಬೆಚ್ಚಗಿನ ಪ್ರವಾಸಕ್ಕೆ ಸಕಾಲ. ಆದರೂ ಶನಿ ೭ನೆ ಮನೆಯಲ್ಲಿ ಹೊಂಚು ಹಾಕಿ ಕುಳಿತಿರುವುದರಿಂದ ಪಬ್/ಬಾರ್/ಪಾರ್ಕ್ ಗಳಿಗೆ ಹೋಗುವಾಗ ಎಚ್ಚರ. moral ಪೊಲೀಸರ ಕೈಗೆ ಸಿಕ್ಕುಬಿದ್ದಲ್ಲಿ ನಿಮ್ಮ ಮಾನ ಮೂರು ಕಾಸಾಗುವ ಸಾಧ್ಯತೆಗಳಿವೆ.ನಿಮ್ಮಿಬ್ಬರಲ್ಲಿ ಹೆಣ್ಣು ಕತ್ತಿನಲ್ಲಿ ಸದಾ ತಾಳಿ ಧರಿಸುವುದು,ಬುರ್ಕಾ ಧರಿಸುವುದು ಮಾಡಿದಲ್ಲಿ ಶನಿಯ ಕೆಟ್ಟ ದೃಷ್ಟಿ ಕರಗುವ ಭರವಸೆ ಇದೆ. ಗಂಡಿಗೆ ಒದೆ ತಿನ್ನುವುದೇ ಭಾಗ್ಯ. ಕಟಕ: ಎಲ್ಲೆಂದರಲ್ಲಿ ಚೀನಾ,ಹಾಂಕಾಂಗ್, ಸಿಂ...

ದಾಸ್ಯದಿಂದ ಮುಕ್ತಿ ಹೊಂದದ ನಮ್ಮ ಶೈಕ್ಷಣಿಕ ವ್ಯವಸ್ಥೆ - ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ

                         ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ನಾವು ಸ್ವಾತಂತ್ರ್ಯರಾದೆವು  ಈ ಸಂಭ್ರಮಕ್ಕಾಗಿ ಪ್ರತಿವರ್ಷ  ಅಗಷ್ಟ-15 ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವೆವು. ಸ್ವಾತಂತ್ರ್ಯ ಪಡೆದು ಇಂದಿಗೆ ನಾವು 67 ವಸಂತಗಳನ್ನು ಕಳೆದಿರುವೆವು. ಈ ಸಂದರ್ಭದಲ್ಲಿ ನಾವು ದೇಶವಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವೆವು. ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿರುವೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರವೆವು.  ಸ್ವತಂತ್ರ್ಯ ಭಾರತದಲ್ಲಿ ನಿಜವಾಗಿ ಎಲ್ಲರಿಗೂ ಸ್ವಂತಂತ್ಯ ಸಿಕ್ಕಿರುವುದೇ? ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಂಡು ಅವಲೋಕಿಸುವುದು ಈ ಸಮಯದಲ್ಲಿ ಉಚಿತವಾಗಿದೆ. ದಾಸ್ಯದಿಂದ ಮುಕ್ತಿ ಹೊಂದಿದ ನಾವು ಪ್ರಜಾಪ್ರಭುತ್ವ  ಸಕಾರ ಇದ್ದರು ಇನ್ನೂ ಯಾಕೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ? ಇನ್ನೂ ನಮ್ಮ ದೇಶದಲ್ಲಿ ದಲಿತರ ಸಮಸ್ಯೆ ಇದೆ? ಅಧಿಕಾರ ಎಂಬುದು ಇನ್ನೂ ಯಾಕಾಗಿ ಕೆಲವೆ ಜನರಲ್ಲಿ ಕೇಂದ್ರಿಕೃತವಾಗಿದೆ.? ನಮ್ಮ ದೇಶದಲ್ಲಿ ಮಹಿಳೆಗೆ ಸ್ವಾತಂತ್ಯ ಸಿಕ್ಕಿದೆಯಾ? ಮಕ್ಕಳಿಗೆ ಸ್ವಾತಂತ್ಯ ಇದೆಯಾ?  ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಬಹುಶ: ಸಿಗುವುದು ಇಲ್ಲ. ನಮ್ಮ ಸಮಾಧಾನಕ್ಕಾಗಿ ಒಂದೆರಡು ಉದಾಹರಣೆಗಳನ್ನು ಹೇಳಿಕೊಂಡು ನಾವು ಸಂತೋಷಪಡಬಹುದು ಆದರೇ ಯಾವ ಪ್ರಮಾಣ...

ಆಲ್ಬರ್ಟ್ ಐನ್ಸ್ಟನ್ - ಸುಭಾಷಿತ

ಧರ್ಮದ ಸ್ಪರ್ಶವಿಲ್ಲದ ವಿಜ್ಞಾನ ಕುಂಟು; ವಿಜ್ಞಾನದ ಸ್ಪರ್ಶವಿಲ್ಲದ ಧರ್ಮ ಕುರುಡು -                                                                                                                         - ಆಲ್ಬರ್ಟ್ ಐನ್ಸ್ಟನ್

ಅ.ನ.ಕೃ - ಸುಭಾಷಿತ,

ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು ಮುಂದೆ ನೋಡಿ ಬದುಕ ಬೇಕು -                                                                                           ಅ. ನ. ಕೃ. 

ಹರಕು - ಮುರುಕು - ಶರತ್ ಚಕ್ರವರ್ತಿ

Image
ಇತ್ತಿಚೆಗೆ ವಾಟ್ಸ್ ಆಪ್ ಅಲ್ಲಿ ಒಂದ್ ವಿಡಿಯೋ ಬಂತು. ಅದ್ರಲ್ಲಿ ಬ್ರಿಗೆಡ್ ಕಾಲೇಜ್ ವಿದ್ಯಾರ್ಥಿಗಳು 'ಬಕ್ರಾ' ಮಾಡುವಂತಹ ಹಾಸ್ಯ ದೃಶ್ಯ ಇತ್ತು. ರಸ್ತೆ ಬದಿ ಬಸ್ ಕಾಯ್ತಾ ನಿಂತಿದ್ದ ನಡು ವಯಸ್ಸಿನ ವ್ಯಕ್ತಿ ಹತ್ರ ಹೋಗಿ ಇಂಗ್ಲೀಷಿನಲ್ಲಿ ಬ್ರಿಗೇಡ್ ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಂತ ಮೈಕ್ ಚಾಚ್ತಾನೆ. ಆ ವ್ಯಕ್ತಿ ತನಗೆ ಗೊತ್ತಿರೋ ಅರೆ ಬರೆ ಇಂಗ್ಲೀಷ್ನಲ್ಲಿ 'ಯಾ ಯಾ ಕಾಲೇಜ್ ಈಸ್ ಗುಡ್, ಸ್ಟೂಡೆಂಡ್ ಈಸ್ ಗುಡ್, ಬ್ರಿಲಿಯಂಟ್....' ಹೀಗೆ ಏನೋ ಒಂದು ಹೇಳಿ ಸುಮ್ಮನಾಗ್ತಾನೆ. ಅಷ್ಟಕ್ಕೆ ಬಿಡದ ಆ ವಿದ್ಯಾರ್ಥಿಗಳು ಅವನನ್ನ ಇನ್ನಷ್ಟು ಹುಚ್ಚು ಪ್ರಶ್ನೆಗಳನ್ನ ಅವರ ಸ್ಟಾಂಡರ್ಡ್ ಇಂಗ್ಲೀಷ್ನಲ್ಲಿ ಕೇಳಿ ತಬ್ಬಿಬ್ಬು ಮಾಡುತ್ತಾನೆ. ಅತ್ತ ಕೇಳಿದ ಪ್ರಶ್ನೆನು ಅರ್ಥವಾಗ್ದೆ, ಇತ್ತ ಇಂಗ್ಲೀಷ್ ಬರಲ್ಲ ಹೇಳೋಕು ಆಗ್ದೆ ಆ ವ್ಯಕ್ತಿ ಪೇಚಾಡ್ತ ಹೇಗಾದ್ರ ಮಾಡಿ ತಪ್ಪಿಸ್ಕೊಂಡ್ರೆ ಸಾಕು ಅನ್ನೋ ಹಾಗೆ ದಿಸ್ ದಟ್ ಗೋಯಿಂಗ್ ನೈಸ್ ಅಂದ್ಕೊಂಡು ಅಲ್ಲಿ ಕಾಲ್ಕೀಳೋಕೆ ನೋಡ್ತಾನೆ. ಅವನ ಇಂಗ್ಲೀಷನ್ನ ಎಂಜಾಯ್ ಮಾಡೋಕೆ ಶುರು ಮಾಡ್ಕೊಂಡ ಆ ವಿದ್ಯಾರ್ಥಿಗಳು ಅವನ ಬೆನ್ನತ್ತಿ ಸಾಕಾಷ್ಟು ರೋಸಿಕೊಳ್ಳುತ್ತಾರೆ. ನೋಡಲು ತುಂಬಾ ಫನ್ನಿ ಆಗಿರೋ ಈ ವಿಡಿಯೋ ನಗಿಸುತ್ತದೆ ನಿಜ. ಆದರೆ... ಇಂಗ್ಲೀಷ್ ಬಾರದೇ ಇರೋದು ನಮ್ಮನ್ನು ಈ ಮಟ್ಟಿಗಿನ ಅಪಹಾಸ್ಯಕ್ಕೆ ಗುರಿ ಮಾಡುತ್ತದೆಯೇ ಎಂಬುದು ಯೋಚಿಸಬೇಕಾದ ವಿಚಾರ...

"..... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು...." - ನಾಗೇಶ ಸೂರ್ಯ

Image
ನೀವು “ಲೂಸಿಯ” ಸಿನಿಮಾ ನೋಡಿದ್ದೀರಾ??? ಚಿತ್ರದ ಕೊನೆಯಲ್ಲಿ ಒಂದು ದೃಶ್ಯವಿದೆ. ನಾಯಕ ಒಬ್ಬ ಸ್ಟಾರ್ ನಟ, ಚಾನಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾನೆ. ಸಂದರ್ಶಕ ಕೇಳುತ್ತಾನೆ ನಿಮ್ಮ ಕನಸುಗಳೇನು ಅಂತ??? ಆ ನಟ.... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು. ನನಗೆ ಜನರುಗಳ ಮಧ್ಯೆ ಕಳೆದುಹೋಗಬೇಕೆನ್ನೋ ಆಸೆ, ರೋಡ್ನಲ್ಲಿ ಪಾನಿಪುರಿ ತಿನ್ನೋ ಆಸೆ, ಬಸ್ ಸ್ಟಾಂಡ್ ನಲ್ಲಿ ಬಸ್ ಗಾಗಿ ಕಾಯೋ ಆಸೆ ಅನ್ನುತ್ತಾನೆ. ಒಳ ಮನಸ್ಸಿನಿಂದ ಆಲಿಸಿದಾಗ ನಿಜಕ್ಕೂ ಅವನ ಮಾತುಗಳು ನಮಗೆ ಆಶ್ಚರ್ಯವೆನಿಸುತ್ತದೆ. ಸಾಮಾನ್ಯ ವ್ಯಕ್ತಿಯಾಗಿದಾಗ ದೊಡ್ಡ, ದೊಡ್ಡ ಕನಸ್ಸುಗಳನ್ನ, ಆಸೆಗಳನ್ನ ಕಾಣುವ ಇವರು ದೊಡ್ಡ ವ್ಯಕ್ತಿಗಳಾದ ಮೇಲೆ ಯಾಕೋ ಚಿಕ್ಕ, ಚಿಕ್ಕ ಕನಸು ಕಾಣುತ್ತಾರೆ!!! ಮತ್ತು ಅದರಲ್ಲೇ ಸುಖವನ್ನ ಹುಡುಕಲು ಬಯಸುತ್ತಾರೆ. ಅದಕ್ಕೆ ಏನೋ ಅಡಿಗರು ಹೇಳಿರೋದು “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಅಂತ. ಇದು ಇವರೊಬ್ಬರ ಕಥೆಯಲ್ಲ. ನಮ್ಮ ಸಿನಿಮಾದಲ್ಲಿದ್ದು ದೊಡ್ಡ ವ್ಯಕ್ತಿಗಳಾಗಿರೋ ಇನ್ನೂ ಅನೇಕರು ಈ ರೀತಿಯ ಚಿಕ್ಕ, ಚಿಕ್ಕ ಆಸೆಗಳನ್ನ ಕಂಡು ಆ ಆಸೆಗಳನ್ನ ನೆರವೇರಿಸಿಕೊಳ್ಳಲು ಕಷ್ಟ ಪಟ್ಟಿದ್ದಾರೆ ಮತ್ತು ಪಡುತ್ತಲೇ ಇದ್ದಾರೆ. ಜೀವನದಲ್ಲಿ ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಮೇಲೇರಿ ಯಶಸ್ಸು, ಹಣ, ಕೀರ್ತಿ ಎಲ್ಲವನ್ನೂ ಪಡೆದ ನನ್ನ ಗುರು ನಾಗತಿಹಳ್ಳಿ ಚಂದ್ರಶೇಖರ ರವರು ನಾನು ಒಮ್ಮೆ ಅವರ ಊರಿಗೆ ಹೋಗಿ ವಾಪಸ್ಸು ಬರುವಾಗ...

ಸಂದರ್ಶನ - ತಾರಾ ಶೈಲೇಂದ್ರ

ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ... http://taraantaranga.blogspot.in/2014/06/blog-post.html ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ? ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು . ಕುವೆಂಪು ಅವರು QUANTUM PHYSICS ಓದಿದವರು . ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು . ಯಶವಂತ್ ಚಿತ್ತಾಲರು ಒಬ್ಬ Polymer Chemist. ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು ನಿಸಾರ್ ಅಹ್ಮದ್ ಅವರು Geologist ಆಗಿದ್ದವರು . ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

ಅಮ್ಮ- ಸ್ಮತಿ ಶ್ರೀ

Image

ಸುದ್ದಿಗುದ್ದುbyPHD‬ - P Harish Dixit Marathe,

ಮಹಿಳೆಯರ ಹಿತ ಕಾಯಲು ಸರ್ಕಾರ ವಿಫಲ - ಶಾಸಕ ಆರ್.ಅಶೋಕ್. . ಸರ್ಕಾರ ವಿಫಲವಾದರೇನು, ದೇವರಿಲ್ಲವೇ? ರಾಜ್ಯದ ಕರೆಂಟನ್ನು ತೆಗೆದ ದೇವರಿಗೆ ಅತ್ಯಾಚಾರ ಮಾಡುವ ಗಂಡಸರ ಫ್ಯೂಸ್ ತೆಗೆಯುವುದು ಗೊತ್ತಿಲ್ಲವೇ? 

ಸುದ್ದಿಗುದ್ದುbyPHD‬ - P Harish Dixit Marathe,

ಕೂಡಗಿ ಸ್ಥಾವರವನ್ನು ಇನ್ನಷ್ಟು ಪರಿಸರ ಸ್ನೇಹಿ ಆಗಿಸಲು ''ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ'' ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ''ಜನ ಭಯಪಡುವ ಅಗತ್ಯವಿಲ್ಲ.'' - ಎಂ.ಬಿ. ಪಾಟೀಲ. - ಪತ್ರಿಕಾ ವರದಿ . ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಮಿನಲ್ ಏಥೂ  ಕ್ರಿಟಿಕಲ್ ...... ಈ ಪದಪುಂಜವೇ ಭಯ ಹುಟ್ಟಿಸುವಂತಿದೆಯಲ್ಲ ಸಿವಾ 

ಸುದ್ದಿಗುದ್ದುbyPHD‬ - P Harish Dixit Marathe

ಸರ್ಕಾರದ 'ಭಾಗ್ಯಲಕ್ಷ್ಮಿ' ಯೋಜನೆಯ ಫಲಾನುಭವಿಗಳಲ್ಲಿ 7814 ಮಕ್ಕಳು ಎಲ್ಲಿದ್ದಾರೆ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೇ ಗೊತ್ತಿಲ್ಲ ! -  ಪತ್ರಿಕಾ ವರದಿ . ರಸ್ತೆ ಬದಿಯಲ್ಲಿ ಒಬ್ಬ ಊದ್ದಕ್ಕೆ ಗುಂಡಿ ತೋಡ್ತಾ ಹೋಗ್ತಿದ್ನಂತೆ. ಮತ್ತೊಬ್ಬ ಮುಚ್ತಾ (ಮುಂಡಾ ಮೋಚ್ತಾ  ) ಬರ್ತಿದ್ನಂತೆ. ಏನ್ರೋ ಇದು ಅಂತ ಕೇಳಿದ್ರೆ, ನಮ್ಮಿಬ್ರ ಮಧ್ಯ ಇನ್ನೊಬ್ಬ ಗಿಡ ನೆಡೋನು ಇರ್ಬೇಕಾಗಿತ್ತು ಸಾ, ಆದ್ರೆ ಅವ್ನಿವತ್ತು ಬಂದಿಲ್ಲ, ರಜಾ, ನಮ್ ಕೆಲ್ಸ ನಾವ್ ಮಾಡ್ತಾ ಇದೀವಿ ಸಾ ಅಂದ್ರಂತೆ ಇಬ್ರೂ. ಹಾಗೇ, ಭಾಗ್ಯ ಕೊಟ್ಟೋರು ಭಾಗ್ಯ ತಗಂಡೋರು ಇಬ್ರೂ ಇದ್ದು ಲಕ್ಷ್ಮಿನೇ ಹುಟ್ಟಿಲ್ದಿದ್ರೆ ಈಗೇನ್ ಮಾಡೋಕಾಗತ್ತೆ! 
Image

ಭಾರತದ ಪ್ರಥಮ “72 ಜೀನಾಲಯ”

Image
72  ಜೀನಾಲಯದ   ಹೊರ   ಆವರಣದ   ಒಂದು   ನೋಟ ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಈ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಈ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು 72   ಜೀನಾಲಯದ   ಇದರ  ಸಂಪೂರ್ಣ   ನೋಟ ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಈ ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಈ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಈ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದು.  ಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು. ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರುವ ಅನುಭವವನ್ನು ನೀಡ...

ಇಳಿದು ಬಾ ತಾಯಿ ಇಳಿದು ಬಾ - ದ ರಾ ಬೇಂದ್ರೆ,

ಇಳಿದು ಬಾ ತಾಯಿ ಇಳಿದು ಬಾ || ಪ || ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ, ತಾಯಿ ಇಳಿದು ಬಾ ಇಳಿದು ಬಾ, ತಾಯೇ ಇಳಿದು ಬಾ. ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ, ಕಣ್ಣ ಕಣ ತೊಳಿಸಿ ಉಸಿರ ಎಳೆ ಎಳಿಸಿ ನುಡಿಯ ಸಸಿ ಮೊಳಸಿ ಹಿಗ್ಗಿ ಬಾ; ಎದೆಯ ನೆಲೆಯಲ್ಲಿ ನೆಲೆಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ ಇಳಿದು ಬಾ ತಾಯೇ ಇಳಿದು ಬಾ. ಕಂಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮತ್ತೆ ಹೊಡೆಮರಳಿ ಹೊರಳಿ ಬಾ, ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ ಇಳಿದು ಬಾ ತಾಯೇ ಇಳಿದು ಬಾ. ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿಸುಳಿದು ಬಾ; ಶಿವಶುಭ್ರ ಕರುಣೆ ಅತಿಕಿಂಚದರುಣೆ ವಾತ್ಸಲ್ಯವರಣೆ ಇಳಿ ಇಳಿದು ಬಾ ಇಳಿದು ಬಾ ತಾಯೇ ಇಳಿದು ಬಾ. ಕೊಳೆಯ ತೊಳೆವವರು ಇಲ್ಲ ಬಾ ಬೇರೆ ಶಕ್ತಿಗಳ ಹೊಲ್ಲ ಬಾ ಹೀಗೆ ಮಾಡಿದರು ಅಲ್ಲ ಬಾ ನಾಡ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನು ಎತ್ತ ಬಾ. ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ...

ವಿಶ್ವದ ಮೊದಲ ಹಡಗು ಮಂದಿರ - ವರದಿ * ವಿವೇಕ ಬೆಟ್ಕುಳಿ

Image
ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯಲ್ಲಿ ಬರುವ ಜಿಲ್ಲೆಯ ಸಾಯಲಾ ಬ್ಲಾಕನ ಮಂಡವಾಲಾ ಗ್ರಾಮದಲ್ಲಿ ವಿಶ್ವದ ಪ್ರಥಮ ಹಡಗು ಮಂದಿರವಿರುವುದು . ಜಾಲೋರದಿಂದ 20-22 ಕಿ . ಮೀ ದೂರವಿರುವ ಈ ಜೈನ ಮಂದಿರವನ್ನು   ಜಹಾಜ್ ಮಂದಿರವೆಂದೆ ಕರೆಯುವರು . ಜಹಾಜ್ ಎಂದರೆ ಹಡಗು ಎಂದರ್ಥ .              ಹಡಗು   ಮಂದಿರದ   ಒಂದು   ನೋಟ ಶ್ರೀ ಕಾಂತಿಸಾಗರಸೂರಿ ಸ್ಮಾರಕ ಟ್ರಸ್ಟನವರು ನಿಮಿ೯ಸಿರುವ ಈ ಮಂದಿರ ತನ್ನದೇ ಆದ ವಿಶೇಷತೆಯನ್ನು ಹಂದಿರುವುದು .  ಕ್ರಿ . ಶ 1992 ರಲ್ಲಿ ಕಟ್ಟಲ್ಪಟ್ಟ ಈ   ಜೈನ ಮಂದಿರ ಮಾರ್ಬಲನಿಂದ ನಿಮಿ೯ತವಾಗಿರುವುದು . ಮಂದಿರದ ಒಳಗೆ ಬಳಕೆ ಮಾಡಿರುವ ಎಲ್ಲಾ ಸಾಮಗ್ರಿಗಳು ತಳ ತಳ ಹೊಳುಯುವಂತಹ ಸಾಮಗ್ರಿಯಾಗಿದೆ . ಸಂಪೂರ್ಣ ಮಂದಿರ ಶ್ರೀಮಂತಿಕೆಯಿಂದ ತುಂಬಿ ತಳ ತಳಸಿರುವುದು .   ಪುರಾಣ ಕಾಲದ ಮಂದಿರಗಳನ್ನು ನೋಡುತ್ತಾ ಅವುಗಳನ್ನು ವಣಿ೯ಸುತ್ತಾ ಇತಿಹಾಸ ಕೆದಕುತ್ತಾ ಇರುವ ನಾವು ಆಧುನಿಕ ಯುಗದಲ್ಲಿ ಹೆಚ್ಚು ವೈಭವೋಪ್ರೇರಿತ ಮಂದಿರಗಳನ್ನು ನಿಮಿ೯ಸಿರುವುದು ಕಡಿಮೆ ಇರುವುದು .  ಇಂತಹ ಸಂದರ್ಭದಲ್ಲಿ ಜೈನ ಸಮುದಾಯವರು ನಿಮಿ೯ಸಿರುವ ಈ ಹಡಗು ಮಂದಿರ ಎಲ್ಲರ ಆಕರ್ಷಣೆಯ ಬಿಂದುವಾಗಿರುವುದು .  ಮುಂದೆ ಇದು ಜೈನ ಧರ್ಮದ ...