ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 18, 2014

ಸೋಮೇಶ್ವರ ಶತಕ

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧||


ಹಲವಾರು ನದಿಗೊ ಸೇರಿ ಸಮುದ್ರ ಹೇಂಗೆ ಉಂಟಾವುತ್ತೋ ಹಾಂಗೇ, ನಮ್ಮ ಜ್ಞಾನ ಕೂಡಾ.
ಕೆಲವು ವಿಶಯಂಗಳ ನಾವು ಗೊಂತಿಪ್ಪವರಿಂದ ಕಲಿತ್ತು, ಇನ್ನು ಕೆಲವು ಶಾಸ್ತ್ರಂಗಳ ಕೇಳಿ ತಿಳ್ಕೊಳುತ್ತು, ಇನ್ನು ಕೆಲವು ಮಾಡುವ ಕೆಲಸಂಗಳ ನೋಡಿ ಅನುಭವ ತೆಕ್ಕೊಳ್ತು, ಇನ್ನು ಕೆಲವರ ನಮ್ಮ ಸ್ವ ಬುದ್ಧಿಂದ ಕಲಿತ್ತು. ಇನ್ನು ಕೆಲವು ಒಳ್ಳೆ ಜೆನರ ಸಹವಾಸಂದಲೂ ಕಲಿತ್ತು. ಹೀಂಗೆ ಬೇರೆ ಬೇರೆ ಮೂಲಂಗಳಿಂದ ತಿಳ್ಕೊಂಡೇ ಸರ್ವಜ್ಞ ಆವುತ್ತು.



ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ|
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೨||

ಕೈಲಿ ಕನ್ನಾಟಿ ಇಪ್ಪಗ ಅದರ ಬಿಟ್ಟು ನೀರಿಲ್ಲಿ ಮೋರೆ ನೋಡ್ತವಾ?  ಹಾಲಿಂಗಾಗಿ ಕಾಮಧೇನು ಇಪ್ಪಗ ಬೇರೆ ಹಸುಗಳ ಸಾಂಕುತ್ತವೋ? ಗುಣವಂತರು ಹಾಲು ಉಂಡ ಮತ್ತೆ ಬೇರೆ ಎಂತಾರೂ ಉಣ್ಣುತ್ತವೋ? ಗಿಳಿಯ ಮಾತಿಲ್ಲಿ ಇಪ್ಪ ಇಂಪಿಂದ ಹೆಚ್ಚಿನದ್ದು ಕಾಕೆಯ ಕೂಗಿಲ್ಲಿ ಇದ್ದಾ? ರಂಭೆಯ ನೃತ್ಯ ನೋಡಿದ ಮತ್ತೆ ಡೊಂಬರಾಟ  ನೋಡ್ತವಾ? ಸ್ನೇಹಿತರಿಂದ ಹೆಚ್ಚಿನ ದೊಡ್ಡ ವಸ್ತು ಎಂತಾರೂ ಇದ್ದಾ?
(ಮುಕುರಂ= ಕನ್ನಾಟಿ)



ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ |
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ ||
ರವಿ ಮುಖ್ಯಂ ಗ್ರಹ ವರ್ಗದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್ |
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೩||


ಇದರಲ್ಲಿ ಕವಿ, ಆರು ಶ್ರೇಷ್ಠ ಹೇಳಿ ವ್ಯಾಖ್ಯಾನ ಮಾಡ್ತ°.
ಮನುಷ್ಯರಲ್ಲಿ ಕವಿ, ಲೋಹಂಗಳಲ್ಲಿ ಚಿನ್ನ, ತೀರ್ಥಂಗಳಲ್ಲಿ (ನೀರಿಲ್ಲಿ) ಗಂಗಾಜಲ, ಹೆಂಗಸರಲ್ಲಿ ಪತಿವ್ರತೆ, ಗ್ರಹಂಗಳಲ್ಲಿ ಸೂರ್ಯ, ರಸಂಗಳಲ್ಲಿ ಶೃಂಗಾರ ರಸ, ದೇವತೆಗಳಲ್ಲಿ ಶಿವನೇ ಶ್ರೇಷ್ಠ


ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ ||
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೪||

ಇದರಲ್ಲಿ ಕವಿ, ಎಲ್ಲೆಲ್ಲಿ ಆರು ಭೂಷಣಪ್ರಾಯರಾಗಿ ಇರ್ತವು ಹೇಳ್ತ°:
ಆಕಾಶಕ್ಕೆ ಸೂರ್ಯನೂ, ಇರುಳಿಂಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ತಾವರೆಯೂ, ಯಜ್ಞಕ್ಕೆ ಹವಿಸ್ಸೂ, ಹೆಂಗಸರಿಂಗೆ ಪಾತಿವ್ರತ್ಯವೂ, ರಾಜರ ಸಭೆಗೆ ಕವಿಯೂ ಅಲಂಕಾರ.


ಹರನಿಂದುರ್ವಿಗೆ ದೈವವೇ ಕಿರಣಕಿಂದುಂಬಿಟ್ಟು ಸೊಂಪುಂಟೆ ಪೆ|
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ ||
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ವಾಳೆ ಮೂಲೋಕದೊಳ್
ಗುರ್ವಿಂದುನ್ನತ ಸೇವ್ಯನೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೫||

ಶಿವನಿಂದ ಮೇಲ್ಪಟ್ಟು ದೊಡ್ಡ ದೇವರು ಆರೂ ಇಲ್ಲೆ, ಚಂದ್ರನ ಕಿರಣಂದ ಹೆಚ್ಚಿನ ತಂಪಿನ ಕಿರಣ ಬೇರೆ ಯಾವುದೂ ಇಲ್ಲೆ.
ನಮ್ಮ ಹೆತ್ತವರಿಂದ ಹೆಚ್ಚಿನ ಹಿತ ಬಯಸುವವು ಆರೂ ಇಲ್ಲೆ. ಗ್ರಹಸ್ಥರಿಂಗೆ ಹೆಂಡತಿಗಿಂತ ಹೆಚ್ಚಿನ ಆಪ್ತರು ಬೇರೆ ಆರೂ ಇಲ್ಲೆ.
ವಿದ್ಯೆಗಿಂತ ಹೆಚ್ಚಿನ ನೆಂಟರು ಆರೂ ಇಲ್ಲೆ. ಮನ್ಮಥನ ಮೀರುಸುವ ಬಿಲ್ಲಾಳುಗೊ ಆರೂ ಇಲ್ಲೆ. ಸೇವೆ ಮಾಡುಸಲೆ ಗುರುವಿಗಿಂತ ಉತ್ತಮರು ಆರೂ ಇಲ್ಲೆ.


Krupe : http://oppanna.com/

No comments:

Post a Comment