ದಾಸ್ಯದಿಂದ ಮುಕ್ತಿ ಹೊಂದದ ನಮ್ಮ ಶೈಕ್ಷಣಿಕ ವ್ಯವಸ್ಥೆ - ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ
ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ನಾವು ಸ್ವಾತಂತ್ರ್ಯರಾದೆವು ಈ ಸಂಭ್ರಮಕ್ಕಾಗಿ ಪ್ರತಿವರ್ಷ ಅಗಷ್ಟ-15 ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವೆವು. ಸ್ವಾತಂತ್ರ್ಯ ಪಡೆದು ಇಂದಿಗೆ ನಾವು 67 ವಸಂತಗಳನ್ನು ಕಳೆದಿರುವೆವು. ಈ ಸಂದರ್ಭದಲ್ಲಿ ನಾವು ದೇಶವಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವೆವು. ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿರುವೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರವೆವು. ಸ್ವತಂತ್ರ್ಯ ಭಾರತದಲ್ಲಿ ನಿಜವಾಗಿ ಎಲ್ಲರಿಗೂ ಸ್ವಂತಂತ್ಯ ಸಿಕ್ಕಿರುವುದೇ? ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಂಡು ಅವಲೋಕಿಸುವುದು ಈ ಸಮಯದಲ್ಲಿ ಉಚಿತವಾಗಿದೆ. ದಾಸ್ಯದಿಂದ ಮುಕ್ತಿ ಹೊಂದಿದ ನಾವು ಪ್ರಜಾಪ್ರಭುತ್ವ ಸಕಾರ ಇದ್ದರು ಇನ್ನೂ ಯಾಕೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ? ಇನ್ನೂ ನಮ್ಮ ದೇಶದಲ್ಲಿ ದಲಿತರ ಸಮಸ್ಯೆ ಇದೆ? ಅಧಿಕಾರ ಎಂಬುದು ಇನ್ನೂ ಯಾಕಾಗಿ ಕೆಲವೆ ಜನರಲ್ಲಿ ಕೇಂದ್ರಿಕೃತವಾಗಿದೆ.? ನಮ್ಮ ದೇಶದಲ್ಲಿ ಮಹಿಳೆಗೆ ಸ್ವಾತಂತ್ಯ ಸಿಕ್ಕಿದೆಯಾ? ಮಕ್ಕಳಿಗೆ ಸ್ವಾತಂತ್ಯ ಇದೆಯಾ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಬಹುಶ: ಸಿಗುವುದು ಇಲ್ಲ. ನಮ್ಮ ಸಮಾಧಾನಕ್ಕಾಗಿ ಒಂದೆರಡು ಉದಾಹರಣೆಗಳನ್ನು ಹೇಳಿಕೊಂಡು ನಾವು ಸಂತೋಷಪಡಬಹುದು ಆದರೇ ಯಾವ ಪ್ರಮಾಣದಲ್ಲಿ ನಾವು ಮುಂದೆ ಹೋಗಬೇಕಾಗಿತ್ತು ಇನ್ನೂ ಅಲ್ಲಿ ತಲುಪಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯೆ ಆಗಿರುವುದು. ಇನ್ನೂ ನಾವು ಬ್ರಿಟಿಷರ ಹಾಕಿ ಕೊಟ್ಟ ಶೈಕ್ಷಣಿಕ ಪದ್ದತಿಯಲ್ಲಿಯೇ ಇರುವೆವು. ಸ್ವಾತಂತ್ಯಾ ನಂತರ ಶಿಕ್ಷಣ ಸುಧಾರಣೆ ಹೆಸರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಸಹಾ ನಾವಿನ್ನು ಬ್ರಿಟಿಷರು ಹಾಕಿ ಕೊಟ್ಟ ಶೈಕ್ಷಣಿಕ ಅಡಿಪಾಯದಿಂದ ಹೊರಬಂದಿಲ್ಲ. 67 ವರ್ಷದ ನಂತರವು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾಸ್ಯದಲ್ಲಿಯೇ ಇರುವುದು. ಅದರ ಪರಿಣಾಮವೇ ಇಂದಿನ ಸಮಾಜವಾಗಿದೆ.
ನಮ್ಮನ್ನು ಆಳಿದ ಬ್ರಿಟಿಷರಿಗೆ ನಮ್ಮಿಂದಲ್ಲೇ ಲಾಭ ಪಡೆದುಕೊಳ್ಳಲು ಯಾವ ರೀತಿ ಶೈಕ್ಷಣಿಕ ಪದ್ದತಿ ಬೇಕೋ ಅದನ್ನು ಜಾರಿಗೊಳಿಸಿದರು ಅದರಲ್ಲಿ ಅವರು ಯಶಸ್ವಿ ಆದರು. ಅದರಲ್ಲಿಯೂ ಸಾಕಷ್ಟು ಒಳ್ಳೆಯ ಅಂಶಗಳು ಇರುವವು. ಆದರೇ ಮುಖ್ಯವಾಗಿ ಇಲ್ಲಿನ ನೈಸಗರ್ಿಕ ಸಂಪನ್ಮೂಲವನ್ನು ಲೂಟಿ ಮಾಡಿ ಕೊಂಡೊಯ್ಯಲು ಬೇಕಾದ ಎಲ್ಲಾ ರೀತಿಯ ಶಿಕ್ಷಣವನ್ನು ಅವರು ನೀಡಿದರು. ಅದು ಆ ದೇಶದ ಲಾಭಕ್ಕಾಗಿ ಅಗತ್ಯವಾಗಿತ್ತು.ಆದರೇ ಸ್ವಾತಂತ್ಯ ದೊರೆತ ಅರ್ಧ ಶತಕಗಳು ಕಳೆದರು ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆ ಕಾನೂನುಗಳ ಹೆಸರಿನಿಂದ ಅದೇ ಅಡಿಪಾಯದ ಮೇಲೆ ಬೇರೆ ಬೇರೆ ಆಕಾರದ ಕಟ್ಟಡವನ್ನು ಕಟ್ಟುತ್ತಿರುವೆವು. ಈ ಕಾರಣದಿಂದಾಗಿಯೇ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಕೆಳಕಂಡ ಅಂಶಗಳು ಕಂಡುಬರುವವು.
o ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೃಷಿ ಪ್ರಮುಖ ಭಾಗವಾಗಿಲ್ಲ.
o ಶೈಕ್ಷಣಿಕ ವ್ಯವಸ್ಥೆ ಕೇಂದ್ರಿಕೃತವಾಗಿರುವುದು ಕೇಂದ್ರ/ರಾಜ್ಯ ಹಂತದಲ್ಲಿಯೇ ಆಗಿರುವುದು.
o ಬೃಹದ್ದಾಕಾರದ ಶೈಕ್ಷಣಿಕ ವ್ಯವಸ್ಥೆ ಇದ್ದರು ಪಾರದರ್ಶಕತೆಯ ಕೊರತೆ.
o ಸಮುದಾಯದ ತೊಡಗಿಸುವಿಕೆ ಇಲ್ಲದಿರುವುದು.
o ಶಿಕ್ಷಣವನ್ನು ಆಥರ್ಿಕತೆಯ ಹಿನ್ನಲೆಯಲ್ಲಿ ನೋಡುತ್ತಿರುವುದು.
o ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಂಪನಿಗಳು, ಆಣೆಕಟ್ಟುಗಳು, ಅಪರಾಧಗಳು
o ನೈಸಗಿ೯ಕ ಸಂಪತ್ತಿನ ಲೂಟಿ, ಅಗತ್ಯಕ್ಕಿಂತ ಹೆಚ್ಚಿನ ಆಸೆ
ಈ ಎಲ್ಲಾ ಅಂಶಗಳು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪಿರುವುದಕ್ಕೆ ಸ್ಪಷ್ಟ ಸೂಚಕಗಳಾಗಿದೆ. ದೇಶದ ಭವಿಷ್ಯ ಎಂಬುದು ಮಕ್ಕಳ ಕೈಯಲ್ಲಿ ಇದೆ ಎಂಬುದನ್ನು ನಾವೆಲ್ಲರೂ ಒಪ್ಪ್ಪಿಕೊಳ್ಳುವೆವು. ಆದರೇ ನಾವು ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಿಂದ ಮಗುವನ್ನು ಸ್ವಾಥರ್ಿಯನ್ನಾಗಿ ಮಾಡುತ್ತಿರುವೆವು. ಚೆನ್ನಾಗಿ ಓದು ಅವನಿಗಿಂತ/ಅವಳಿಗಿಂತ ಹೆಚ್ಚಿನ ಅಂಕ ತೆಗೆ, ಹೆಚ್ಚಿನ ಸಂಬಂಳದ ಕೆಲಸಕ್ಕೆ ಸೇರು. ಇದೇ ನಾವು ಮಕ್ಕಳಿಗೆ ಕಲಿಸುತ್ತಿರುವೆವು. ಅಗಷ್ಟ-15 ರ ಆಚರಣೆಯಲ್ಲಿಯೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡುತ್ತಿರುವೆವು. ಒಬ್ಬರಿಗೆ ಬಹುಮಾನ ನೀಡಿ ಉಳಿದವರ ಮನಸ್ಸಿನಲ್ಲಿ ದ್ವೇಷವನ್ನು ಹೆಚ್ಚಿಸುತ್ತಿರುವೆವು. ಸಕಾ೯ರದ ಯೋಜನೆ ಸಹಾ ಹೆಚ್ಚಿನ ಅಂಕ ಪಡೆದವರಿಗಾಗಿ ಇರುವುದು. ಒಟ್ಟಾರೆ ನಮ್ಮ ಶೈಕ್ಷಣಿಕ ರೀತಿ ನೀತಿಗಳು ದ್ವಂದದಲ್ಲಿರುವುದು. ಹೇಳುವುದು ಒಂದು ಮಾಡುವುದು ಒಂದು ಎಂಬತಾಗಿದೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನೇ ನಾವು ಬದಲಾಯಿಸದಿದ್ದರೇ ಮುಂದಿನ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆದರೇ ನಾವಿಂದು ದುರಾಸೆಯ ಕಾರಣದಿಂದ ಬೇರೆಯವರ ಬದುಕಿನ ಹಕ್ಕನ್ನು ಕಸಿಯುತ್ತಿರುವೆವು. ಇದೇ ಸ್ಥಿತಿ ಮುಂದುವರೆದರೆ ಪುನ: ನಾವು ದಾಸ್ಯದಲ್ಲಿಯೇ ಬದುಕಬೇಕಾಗುವುದು. ಅದಕ್ಕೂ ಮುಂಚೆ ಸಾಮರಸ್ಯದಿಂದ ಬದುಕುವ ಸಮಾಜ ಸೃಷ್ಠಿ ಮಾಡುವ ಅಗತ್ಯವಿದೆ. ಅದಕ್ಕಾಗಿ ನಾವು ನಮ್ಮ ಶೈಕ್ಷಣಿಕ ಅಡಿಪಾಯವನ್ನು ಹೊಸದಾಗಿ ನಿಮಿ೯ಸುವ ಅಗತ್ಯವಿದೆ. ಇದರ ಬಗ್ಗೆ ಚಚೆ೯ಯನ್ನು ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ಹುಟ್ಟುಹಾಕುವ ಅಗತ್ಯವಿದೆ...
ವಿವೇಕ ಬೆಟ್ಕುಳಿ
Comments
Post a Comment