Posts
Showing posts from 2013
ತಾಳ ತಪ್ಪಿದ ನನ್ನೆದೆಯ ಘಜಲ್...!
- Get link
- X
- Other Apps
ತಾಳ ತಪ್ಪಿದ ನನ್ನೆದೆಯ ಘಜಲ್...! ನನ್ನೆದೆಯ ಘಜಲ್ ಒಂದು ಅರ್ಥವಿರುತಿತ್ತು ಅವಳ ಅಂದದ ಗೆಜ್ಜೆಗಳು ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ ಆದರೆ, ಬರೆದಿಟ್ಟ ಸಾವಿರ ಸಾಲುಗಳಿಗೆ ಸಾಹುಕಾರಳಾಗಲೊಲ್ಲದೆ ಎಸಳಾಗಿ ನೆಲೆ ನಿಂತ ಹುಸಿ-ಹಸಿರ ಮೇಲಿನ ಮಂಜಿನಂತೆ ಪದೇ-ಪದೇ ಕರಗಿ ನೀರಾಗುತ್ತಾಳವಳು! ನೀರಾಗಿ ಹರಿವ ಮಂಜಿನ ಸೋನೆ ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ ಕೋಥ ಹೊಡೆಯುತ್ತದೆ! ಕ್ಷಿತಿಜದೆಡೆಗೆ ತಲುಪಿ ಮುಗಿಲಿಗೆ ಮುತ್ತಿಕ್ಕ ಬಯಸುವ ದಿಗಂತ ಕನಸುಗಳು ಅವಳಿರದ ನೋವು ಕಂಡು ಕ್ಷಾಮಕ್ಕೊಳಗಾದ ಎದೆಗೆ ನೋವಿನ ನಿದ್ದೆಯ ಹಾದಿ ತೋರಿಸುತ್ತವೆ. ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ ನನ್ನೆದೆಯ ಘಜಲ್ ತಾಳತಪ್ಪಿ ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ -ಚೇತನ್ ಸೊಲಗಿ, ಮುಂಡರಗಿ
ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅರ್ಪಣೆ
- Get link
- X
- Other Apps
ದೆಹಲಿಯಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ- 2013
- Get link
- X
- Other Apps
ಚುಮ್ಮು ಚುಮ್ಮುಚಳಿಯ ವಾತಾವರಣದ ನಡುವೆ ನವದೆಹಲಿಯ ಆರ್ ಕೆ ಪುರಂ ದೆಹಲಿ ಕನಾ೯ಟಕ ಸಂಘದ ಸಭಾಭವನದಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಇತ್ತಿಚೆಗೆ ನಡೆಯಿತು. ಹೃದಯವಾಹಿನಿ ಕನ್ನಡ ಬಳಗ ಮತ್ತು ದಿಲ್ಲಿ ಗಣೇಶ ಮಿತ್ರ ಮಂಡಳಿ ಹಮ್ಮಿಕೊಂಡ ಈ ಸಮ್ಮೇಳನವನ್ನು ಯಕ್ಷಗಾನ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿಯೇ ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು, ಮಣಿಪಾಲ ಇವರಿಂದ ಚಕ್ರವೂಹ್ಯ ಯಕ್ಷಗಾನ ಪ್ರದಶಿ೯ತವಾಯಿತು. ಈ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರೋಹಿದಾಸ ನಾಯಕ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಪ್ರಾಸ್ಥಾವಿಕವಾಗಿ ಹೃದಯವಾಹಿನಿ ಕನ್ನಡ ಬಳಗದ ಕೆ.ಪಿ ಮಂಜುನಾಥ ಅವರು ಮಾತನಾಡಿ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕನ್ನಡವನ್ನು ಬೆಳೆಸುವ ಹಿನ್ನಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದ ಚಟುವಟಿಕೆಯನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ದೆಹಲಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷ ಶರೀಪ ಅವರು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ರೋಹಿದಾಸ ನಾಯಕ ಮಾತನಾಡಿ, ಈ ಸಮ್ಮೇಳನದ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವುದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಮಹತ್ವ ಇರುವುದು. ಕನ್ನಡ ಭಾಷೆಯೂ ಸಹ ರಾಷ್ಟ್ರ ಭಾಷೆ...
ಚಿಗುರು
- Get link
- X
- Other Apps
ಮಿಂಚೆಂದರೆ ಮೋಡಕೆ ಮೀಸಲೆಂಬ ನಂಬಿಕೆ ಸುಳ್ಳಾಯಿತು ಅಂದು ನನ್ನೊಳಗೂ ಸಂಚಲಿಸ ಬಹುದು ಗೊತ್ತಾಯಿತು ಆಕೆಯ ಕಂಡು ಗೆಳೆತನದಲಿ ಮೊದಲಾಯಿತು ಪರಿಚಯ ಪ್ರೇಮಾಂಕುರದ ಪಥದಲ್ಲಿ ನಿದ್ದೆಗೂ ಮೀಸಲಿಡದ ಕನವರಿಕೆಗಳೇ ಕಾಮನೆ ಜೊತೆಯಲ್ಲಿ ಚಿಗುರಿದ ಮೀಸೆಗೂ ಕಾರಣವಿತ್ತು ಕಾಣುವ ಹಂಬಲ ಆಕೆಯನು ಒಂದೇ ಸಮನೆ ಗೊಂದಲ ಮನಸಲಿ ಹೃದಯವೂ ಬೆಂಬಲಿಸಿತು ತಾನು ಓದಿನ ಗೋಜಲಿ ಮೂಡಿದ ಅಂತರ ದುಃಸ್ವಪ್ನವೇ ಅನಿಸಿರಬಹುದು ಪಾಠಗಳೆಲ್ಲವೂ ಅವಳದೇ ಕುರಿತು ಅರ್ಥದಲೊಳಾರ್ಥವಿರಬಹುದು ನಕ್ಕರೆ ನವರಾತ್ರಿಯ ದೀಪೋತ್ಸವ ಮಾತಿಗೆ ಸಿಕ್ಕರೆ ಸಕ್ಕರೆಯು ಪ್ರೌಢತೆಯ ಮೂರುತಿಯಾಗಿದ್ದಳು ನಾ ಮೆರೆಸಿದ ರಥ ಸಾರಥಿಯೂ ಆಕೆ ಗಿರಿಜೆ, ಶಂಕರನಾಗೋ ಯೋಗ್ಯತೆ ನಾ ಪಡೆದಿರಲಿಲ್ಲ ನನ್ನೊಳ ಪ್ರೇಮ, ನುಡಿಸದ ಕೊಳಲು ಆಕೆಗೆ ಕೇಳಿಸಲಾಗಿಲ್ಲ !! -- ರತ್ನಸುತ
ಜವ್ ಪ್ರತಿಷ್ಠಾನ
- Get link
- X
- Other Apps
ಪರಿವರ್ತನೆ ನಮ್ಮ ಮಾತು, ಬದಲಾವಣೆಯೆಡೆಗೆ ನಮ್ಮ ನಡಿಗ ತಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಮಾರ್ಗದರ್ಶನ ವಿರದ ಈ ದೇಶದ ನವ ಪೀಳಿಗೆಯ ಗತಿಯೇನು? ಎಂಬುದು ತಮ್ಮ ತಮ್ಮ ಹವಾನಿಯಂತ್ರಿತ ಛೆಂಬರ್ಗಳಲ್ಲಿ ಹಾಯಾಗಿ ದುಡಿಯುತ್ತಾ ಇರಬಹುದಾಗಿದ್ದ ಕೆಲವು ದಕ್ಷಿಣ ಭಾರತೀಯ ಉದ್ಯೋಗಿಗಳ ಆಲೋಚನೆಯಾಗಿತ್ತು. ಇಂಥಾ ಅಲೋಚನೆಯ ಫಲವಾಗಿ ಜವ್ ಪ್ರತಿಷ್ಠಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳ ಅಸಂಖ್ಯಾತ ಯುವ ಜನರ ಪಾಲಿನ ದಾರಿದೀಪವಾಗುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿಯ ಮಟ್ಟಕ್ಕೆ ಭಾರತವನ್ನು ಬೆಳೆಸುವ ಸದುದ್ದೇಶ ವನ್ನು ಹೊಂದಿರುವ ನಮ್ಮ ಸಂಸ್ಥೆಯು, YOUTH ನಲ್ಲಿರುವ YOU, ವನ್ನು ಪೋಷಿಸಿ, ಬೆಳೆಸುವ, ಎಂದರೆ, ಭಾರತೀಯ ಯುವಕ ಯುವತಿ ಯರಲ್ಲಿ ಸ್ವಂತಿಕೆ ಯನ್ನು ಪ್ರೋತ್ಸಾಹಿಸಿ ಅವರು ತಮ್ಮ ಶಕ್ತಿಗಳನ್ನು ಸಾಕ್ಷಾತ್ಕರಿಸಿ, ಅಬ್ದುಲ್ ಕಲಾಮ್]] ರ 2020ರ ಮುನ್ನೋಟ (Vision 2020) ವನ್ನು ನೆರವೇರಿಸುವಲ್ಲಿ ನೆರವಾಗುವ ಧ್ಯೇಯವನ್ನು ಹೊಂದಿದೆ. ಮುಂಚಿನಿಂದಲೂ, ಜವ್ ಪ್ರತಿಷ್ಠಾನದ ತತ್ವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಪೊರೇಟ್ ಉದ್ಯಮಿಗಳು ಮೆಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ಮೊಟ್ಟ ಮೊದಲನೆಯದಾಗಿ, ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಲ್ಲಿ ತನ್ನ ಉದ್ದೇಶಗಳನ್ನು ಹಂಚಿಕೊಂಡಂದಿನಿಂದ ಜವ್ ಹಿಂ...
ನೀ ಪಟ್ಟು ಬಿಡದೆ ಕೂತು ?!!
- Get link
- X
- Other Apps
ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!! ಅಷ್ಟು ದೂರ ಕ್ರಮಿಸಿ ಮರೆಯಾಗುವ ತಿರುವಿನಲ್ಲಿ ಸಣ್ಣದೊಂದು ಖುಷಿಯ ಕೊಟ್ಟೆ ಚೂರು ನಿದಾನಿಸಿ ಹಿಂದಿರುಗಿ ನೋಡದರೆ ಹೊಣೆಯಾಗುವೆ ಆಘಾತಕೆ ಗದ್ದಲ ಎಬ್ಬಿಸಿ ಎದೆಯಲಿ ಮೌನವ ನಿವಾರಿಸಿ ಹತ್ತಿರದಲಿ ಅಷ್ಟು ದೂರ ದೂರದಲ್ಲಿ ಹತ್ತಿರದ ಭಾವ ಸ್ಪರ್ಶದೊಳಗೆ ಎನಿತು ವಿಶೇಷವಿದು ಕಾಣೆ ?!! ಮನದ ಪುಟ್ಟ ಅರಮನೆಯಲಿ ದೀಪ ಹೊತ್ತು ಬಂದವಳೇ ಈವರಿಗಿನ ಅಚ್ಚರಿಯ ಪ್ರವೇಶ ನಿನ್ನದೇನೆ !! ಸೋಲುವ ಪದಗಳ ಹಿಂಡು ಸಾಗಿವೆ ಸೊರಗುತ ನೊಂದು ಸಾಟಿಯಿಲ್ಲದಂಥ ನಗೆಯ ಎದುರು ಸೆಣಸಿ ಸೋತು ! ಕಾವಲ ಕಣ್ಣನು ದಾಟಿ ಹೃದಯದ ಬಾಗಿಲ ತಟ್ಟಿ ಗದ್ದಿಗೆ ಹಿಡಿಯುವುದೇ ನಂತರ ಆನಂತರ ಈ ಹೊತ್ತಿನ ಈ ವಿವರ ಸಲ್ಲಿಸುವ ಸರದಿಗೆ ಸಾಲದಾಯ್ತು ಸೊಲ್ಲು ಕೊಂಚ ಸುಧಾರಿಸಿ ಮೊದಲಾಗುವೆ ಮಾತಿಗೆ ವದಂತಿಗಳನು ಬದಿಗಿಟ್ಟು ವಿನಂತಿಯನ್ನು ಕೇಳು ಹುರುಳಿಲ್ಲದ ನನ್ನ ಕವಲೊಡೆದ ದಾರಿ ಪಯಣ ಎಲ್ಲಿಗೋ ಏನೋ ಗೊತ್ತು ಗುರಿಯಿಲ್ಲ ! ಕ್ಷಿತಿಜದಲಿ ನಾನು ಕೈ ಹಿಡಿವೆ ನಿನ್ನ ನಾ ಭೂಮಿ, ನೀ ಬಾನು ಕ್ಷುಲ್ಲಕ ಮಿಕ್ಕೆಲ್ಲ !! -- ರತ್ನಸುತ
ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ
- Get link
- X
- Other Apps
ಪಾರಿಜಾತದ ಹುಡುಕಾಟಕ್ಕೆ ಹುಚ್ಚಿನ ಕುರುಹು ಹೆಚ್ಚಾಗಿದೆ ಹೆಚ್ಚೇನು ಹೇಳಲಾರೆ ಪಾರಿಜಾತದ ಹುಡುಕಾಟಕ್ಕೆ ಪರದಾಟ ನಡೆಸುತಿದ್ದವನಿಗೆ ಪೂರ್ಣಿಮೆಯಂತವಳ ಕರುಣಿಸಿದ ಆತ......! ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ ಇರುಹು ಕುರುಹುಗಳ ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ .... ಹೆಗಲ ಮೇಲಿನ ಕೂಸೂ ನಾಚುವುದೇನೊ ಆ ನಿನ್ನ ಮುಗ್ದ ನಗುವಿಗೆ ಹೇಳಲಾಗದ ಕಠೋರ ಸತ್ಯವೊಂದನ್ನ ಒಳಗೇ ಅದುಮಿಟ್ಟುಕೊಂಡಿದ್ದೇನೆ ಆ ನಗು ನನ್ನೊಂದಿಗೆ ಸದಾ ಇರಲೆಂದು...! ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ ಹಂಬಲತೆಯ ಹುಡುಗ ನಾನು ರಾಣಿಗೋಸ್ಕರ ರಾಣಿಯ ಸಾರಥಿಯಾಗಲೂ ಸನ್ನದ್ಧನಾಗಿರುವೆ ನಾ ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ ಹುಚ್ಚನಂತಾಗಿದ್ದೇನೆ ಹೆಚ್ಚೇನು ಹೇಳಲಿ ಹೇಳು ಹಂಬಲವಂತು ಮಿತಿ ಮೀರಿದೆ ಕಂಗಳಂತು ನಿನ ಬಿಂಬಕೆ ಶರಣಾಗಿ ನಿಂತಿವೆ ಕಣ್ತೆರೆದರೂ ನಿದಿರೆಗೆ ಜಾರಿದರೂ ನನ್ಮನವದಂತೂ ಸುಂದರದೊಂದು ಸಾಮ್ರಾಜ್ಯ ನಿರ್ಮಿಸಿ ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ. ಏ ಚೆಲುವಿ ಬೆಳದಿಂಗಳ ಚಂದಿರನ ನಾ ನೋಡುದ ಮರತೀನ ನಿನ್ ಕಂಡಾಗಿಂದ ತೋಟದಾಗಿನ ಗುಲಾಬಿ ಹೂನತ್ತ ನಾನೀಗ ಚೇತನ್ ಸೊಲಗಿ ನೋಡಂಗೆ ಇಲ್ಲ ಕೆಂಗುಲಾಬಿ ಹಂಗ ನೀನಿರಬೇಕಾದ್ರ ಅದೆಂತಾ ನಗುನ ನಿಂದ ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ ಮುಗುಳ್ನಗು ನಗುದುನ್ನ ನಿನ್ನ ನೋಡೆ ಕಲಿಬೇಕು ಚಂದ್ರನ ತಂಗಿ ನೀನ ಇರಬೋದೆನೋ.... ಮಬ್ಬಹಿಡ...
ಕಾವ್ಯ-ಚಂದ್ರ…. - ಚೇತನ್ ಸೊಲಗಿ ,
- Get link
- X
- Other Apps
ನಾ ನಿನ್ನ ಕಣ್ಣುಗಳ ಬಿಂಬವಾದೆ ನೀ ಕಂಡ ಗಳಿಗೆಯಿಂದ ಮನದ ರೂಪಸಿಯೇ ಚೆಲುವ ಧಾತ್ರಿಯೇ ಬಾರೆ ನನ್ನ ಚೆಲುವೆ ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ ಕಸದ ಕಣಿವೆಯಾದ ಚಿವುಟದಿರು ನೀನು ಮನದ ಪ್ರೀತಿ ನೀ ಬಾರೆ ಮನದ ಒಡತಿ ಚೇತನ್ ಸೊಲಗಿ ಶೃಂಗಾರ ಕಾವ್ಯವದು ನನ್ನಲಿಹುದು ಸಿರಿವಂತ ನಾನು ಅಲ್ಲ ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ ಪ್ರೇಮ – ಕಾವ್ಯ ಚಂದ್ರ ನಗುಮೊಗದ ಚೆಲುವೆ ನೀ ಬಾರೆ ನೀರೆ ಮನದೇಕ ಒಡತಿಯಾಗಿ ತೋರುವೆನು ಅದನೆ ನೀಡುವೆನು ಅದನೆ ಪ್ರೇಮ ಚರಿತೆ ಕಾವ್ಯ. ಸ್ವಪ್ನಕ್ಕೆಲ್ಲಿಹುದು ಸೃಜನಸಾರ ನಿನ್ನೊಲವೆ ಮಿಗಿಲು ಎನಗೆ ನನ್ನೆದೆಯ ಧಿಮಿತಿಗಳ ಕೂಡಿ ಹಾಡಿ ಕಟ್ಟೋಣ ಪ್ರೇಮದೂರು ಪ್ರೇಮಕ್ಕೆಲ್ಲಿಹುದು ಮೇಲುಕೀಳು ಜಗದೇಕ ರೂಪವದುವೇ ಜಗದ ಬಾಗಿಲಾ ಜಗಲಿಯಲ್ಲಿಯೂ ನಾ ನೆನೆವೆ ನಿನ್ನ ಮನವ. - ಚೇತನ್ ಸೊಲಗಿ ,
ಸತ್ಯವಂತರ ಸಂಗವಿರಲು ತೀರ್ಥವೇತಕೆ
- Get link
- X
- Other Apps
ಸತ್ಯವಂತರ ಸಂಗವಿರಲು ತೀರ್ಥವೇತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||ಪ|| ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ ಮಾನ ಹೀನನಾಗಿ ಬಾಳ್ವ ಮನುಜನೇತಕೆ ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ ಮಾನಿನಿಯ ತೊರೆದವಗೆ ಭೋಗವೇತಕೆ||೧|| ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ ನೀತಿಯರಿತು ನಡೆಯದಿರುವ ಬಂಟನೇತಕೆ ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||೨|| ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ ಮನ್ನಣೆಯ ನಡೆಸದಿರುವ ದೊರೆಯು ಏತಕೆ ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩|| Krupe : http://bhakthigeetha.blogspot.in/
ದಾಸದಾಸರ ಮನೆಯ ದಾಸಾನುದಾಸ ನಾನು
- Get link
- X
- Other Apps
ದಾಸದಾಸರ ಮನೆಯ ದಾಸಾನುದಾಸ ನಾನು ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ|| ಕಾಳುದಾಸರ ಮನೆಯ ಆಳು ದಾಸ ನಾನಯ್ಯ ಕೀಳುದಾಸನು ನಾನು ಕಿರಿಯ ದಾಸ ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ ಆಳಿನ ಆಳಿನ ಆಳಿನಡಿದಾಸ ನಾನು||೧|| ಪಂಕಜನಾಭನ ಮನೆಯ ಮುಂಕುದಾಸನಯ್ಯ ಕೊಂಕುದಾಸನು ನಾನು ಕುರುಡು ದಾಸ ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨|| ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ ಕುಲವಿಲ್ಲದ ದಾಸ ಕುನ್ನಿದಾಸ ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩|| Krupe : http://bhakthigeetha.blogspot.in/
ಕೇಶವನೊಲುಮೆಯು ಆಗುವ ತನಕ
- Get link
- X
- Other Apps
ಕೇಶವನೊಲುಮೆಯು ಆಗುವ ತನಕ ಹರಿ ದಾಸರೊಳಿರುತಿರು ಹೇ ಮನುಜ||ಪ|| ಕ್ಲೇಶಪಾಶಂಗಳ ಹರಿದು ವಿಲಾಸದಿ ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.|| ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ||1|| ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿ ಹೋದೀತೇ ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ||2|| ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ||3|| Krupe : http://bhakthigeetha.blogspot.in/
ಲಾಲಿ ಪಾವನ ಚರಣ ಲಾಲಿ ಅಘ ಹರಣ
- Get link
- X
- Other Apps
ಲಾಲಿ ಪಾವನ ಚರಣ ಲಾಲಿ ಅಘ ಹರಣ ಲಾಲಿ ವೆಂಕಟರಮಣ ಲಲಿತ ಕಲ್ಯಾಣ [ಪ] ವನಜಾಕ್ಷ ಮಾಧವ ವಸುದೇವ ತನಯ ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ ಕನಕಾದ್ರಿ ನಿಲಯ ವೆಂಕಟರಾಯ[೧] ಜಗದೇಕ ನಾಯಕ ಜಲಜದಳ ನೇತ್ರ ಖಗರಾಜ ವಾಹನ ಕಲ್ಯಾಣ ಚರಿತ ಸಗರ ತನಯಾರ್ಚಿತ ಸನಕಾದಿ ವಿನುತ ರಘುವಂಶ ಕುಲ ತಿಲಕ ರಮಣೀಯ ಗಾತ್ರ[೨] ನಂದಗೋಪ ಕುಮಾರ ನವನೀತ ಚೋರ ಮಂದಾಕಿನಿ ಜನಕ ಮೋಹನಾಕಾರ ಇಂದುಧರ ಸತಿ ವಿನುತ ವಿಶ್ವ ಸಂಚಾರ ನಂದ ಗೋವಿಂದ ಮುಚುಕುಂದ ನುತ ಸಾರ[೩] ನರ ಮೃಗಾಕಾರಿ ಹಿರಣ್ಯಕ ವೈರಿ ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ ಹರಿ ಆದಿಕೇಶವ ಗುರು ಅಪ್ರಮೇಯ ಶ್ರೀಧರ ಶೇಷಗಿರಿ ವರ ತಿಮ್ಮರಾಯ [೪] Krupe : http://bhakthigeetha.blogspot.in/
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
- Get link
- X
- Other Apps
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ [ಪಲ್ಲವಿ] ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ [ಅನುಪಲ್ಲವಿ] ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ [೧] ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ[ ೨] ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ [೩ ] ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ3 Krupe : http://bhakthigeetha.blogspot.in/
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
- Get link
- X
- Other Apps
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರವಾರುಧಿಯೊಳಿರಲು ಕರಿರಾಜ ಕಷ್ಟದಲಿ ಆದಿಮೂಲಾ ಎಂದು ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ೧ ಕಡು ಕೋಪದಲಿ ಖಳನು ಖಡುಗವನು ಹಿಡಿದು ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ೨ ಯಮಸುತನ ರಾಣಿಗೆ ಅಕ್ಷಯವಸನವಿತ್ತೆ ಸಮಯದಲಿ ಅಜಮಿಳನ ಪೊರೆದೆ ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ೩ Krupe : http://bhakthigeetha.blogspot.in/
ಆಮಂತ್ರಣ ಪತ್ರಿಕೆ
- Get link
- X
- Other Apps
ಪ್ರಿಯ ಬಂಧು ಮಿತ್ರರೇ, ರಾ. ಗಣೇಶ್ ಅವರ ೯೯೧ನೇ ಅಷ್ಟಾವಧಾನಕ್ಕೆ ತಮಗೆಲ್ಲಾ ಸ್ವಾಗತ. ಅಷ್ಟಾವಧಾನವು ದಿನಾಂಕ ೨೩/೧೧/೨೦೧೩ ಶನಿವಾರದಂದು ೧೦:೦೦ರಿಂದ ೧:೩೦ ರ ವರೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯುವುದು. ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ. ತಮ್ಮೆಲ್ಲಾ ಸಾಹಿತ್ಯಾಸಕ್ತ ಸ್ನೇಹಿತರಿಗೂ, ಬಂಧುಗಳಿಗೂ ಆಮಂತ್ರಣವನ್ನು ಕೊಟ್ಟು ಅವರನ್ನೂ ಕರೆತನ್ನಿ. ತಾವೆಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೂರುತ್ತೇವೆ. Krupe: Gurudatta Kudli Ganesh
- Get link
- X
- Other Apps
ಅದೊಂದು ಸಂಜೆಯ ಸಮಯ ಸುಡುವ ಸೂರ್ಯನೂ ಕೆಲ ಸಮಯ ನೀರಲ್ಲಿ ಮುಳುಗಲು ಹೊರಟ... ಆದರೆ ಮನದೊಳಗಿನ ಸುಡುವ ನೆನಪುಗಳು ಮಾತ್ರ ಎಂದೂ ಕಣ್ಣೀರಿನ ಸಾಗರದಲ್ಲಿ ಮುಳುಗದು! ಕೆಂಪಾದ ಬೆಳಕಿನ ಕಿರಣಗಳಲ್ಲಿ ತಂಪಾದ ಉದ್ಯಾನವನ .... ಮರದ ಮೇಲೆ ಹಕ್ಕಿಗಳ ಸದ್ದು ಮರದ ಕೆಳಗೆ ಯುವ ಜೋಡಿಗಳ ಗುಸುಗುಸು ... ಆತ..... ಹಾಗೆ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತ ಆತನನ್ನು ನೆನಪಿನ ಗಾಡಿ ಹತ್ತುವರುಷಗಳ ಹಿಂದಕ್ಕೆ ಕರೆದೊಯಿತು .... ಅಂದು ಹೊಸದಾಗಿ ಬಾಡಿಗೆಗೆ ಬಂದ ದಿನ ಹೆತ್ತವರು ಯಾವುದೋ ಒಂದು ಅಪಘಾತದಲ್ಲಿ ತೀರಿಕೊಂಡ ಮೇಲೆ ತನ್ನ ಎರಡು ತಂಗಿಯರ ನೋಡಿಕೊಳ್ಳುವ ಜವಾಬ್ದಾರಿ ಆತನ ಮೇಲಿದೆ .. ಅವರಿಗೆಂದು ಇದ್ದ ಒಂದೇ ಆಸರೆ ಅವರ ದೊಡ್ಡಪ್ಪ ಮಾತ್ರವೇ ! ಮನೆಯಿಂದ ಸ್ವಲ್ಪವೇ ದೂರದಲ್ಲಿ ಇರುವ ಒಂದು ಮಹಡಿಯ ಮನೆಯಲ್ಲಿ ಆ ಹುಡುಗಿ ಇರುವುದು ಹೆಸರು ಅನುಪಮ ..ಒಳ್ಳೆಯ ಮನಸಿನ ಸುಂದರ ಹುಡುಗಿ ! ಎದುರು ಮನೆಯಲ್ಲೇ ಆ ಹುಡುಗಿಯ ಗೆಳತಿಯಿರುವುದು ಆದುದರಿಂದ ಆಗಾಗ ಮನೆಗೆ ಬಂದು ಹೋಗುವಾಗ ನೋಡಿ ..ಅವರಿಬ್ಬರಿಗೂ ಪರಿಚಯ ಎನ್ನುವ ಪುಸ್ತಕದೊಳಗಿದ್ದ ಸ್ನೇಹದ ನವಿಲುಗರಿ ಪ್ರೀತಿಯ ಮರಿ ಹಾಕಿತು ! ಅವಳು ಮನೆಗೆ ಎರಡನೆಯ ಮಗಳು ಮದುವೆ ವಯಸ್ಸಿನ ಅಕ್ಕ ಇದ್ದಾಳೆ! ಅದು ಅಲ್ಲದೆ ಆಕೆ ಮೇಲ್ಜಾತಿಗೆ ಸೇರಿದ ಹುಡುಗಿ ಆತ ಕೀಲ್ಜ...
ಸಾಂದರ್ಭಿಕ ಸೋಪಾನ !!! - ರತ್ನಸುತ
- Get link
- X
- Other Apps
ಆಕೆ ಮುನಿಸಿಕೊಂಡಾಗ ಮೂಗು, ಕೆಂಡ ಸಂಪಿಗೆ ಕಣ್ಣು, ಕಿಡಿ ಕಾರುವ ಕುಂಡ ಕೆನ್ನೆ, ಲಾವಾ ರಸ ಹರಿದ ಹಾದಿ ತುಟಿ, ಕಚ್ಚಿದ ಹಲ್ಲಿಗೆ ಬೆಚ್ಚಿದ ಬಳ್ಳಿ ನುಡಿ, ಅಪಶೃತಿಯ ಹಾಡು ನಡೆ, ಭೂ ಕಂಪನಕೆ ಕಂಪನ ಮೈ, ಕಾಡ್ಗಿಚ್ಚ ಕಾನನ ಕೈ, ಅದರಿದ ಆಯುಧ ಆಕೆ ನಾಚಿಕೊಂಡಾಗ ಮೂಗು, ಅರಳು ಮಲ್ಲಿಗೆ ಕಣ್ಣು, ರಾತ್ರಿಯ ಮಿನುಗು ಚುಕ್ಕಿ ಕೆನ್ನೆ, ಮುಸ್ಸಂಜೆ ಬಾನು ತುಟಿ, ಸುರಪಾನದ ಉಚಿತ ಮಳಿಗೆ ನುಡಿ, ನೊರೆ ಹಾಲಿನ ಪೇಯ ನಡೆ, ತಾಳಕೆ ಬೆರಗು ವೈಖರಿ ಮೈ-ಸೂರಿನ ತುಪ್ಪದ ಪಾಕ ಕೈ ಸೋಕಲು ಕಾಣ್ವುದು ನಾಕ ಆಕೆ ಅಚ್ಚರಿಗೊಂಡಾಗ ಮೂಗು, ಮೂರ್ಸುತ್ತು ಮಲ್ಲಿಗೆ ಕಣ್ಣು, ಬತ್ತಿ ಏರಿಸಿದ ಉರಿ ದೀಪ ಕೆನ್ನೆ, ಅಂಕು ಡೊಂಕು ಮಣ್ಣ ಜಾಡು ತುಟಿ, ಕುತೂಹಲದ ಕೂಸು ನುಡಿ, ಬರೀ ತೊದಲು ನಡೆ, ಮೋಹಕ ಮಜಲು ಮೈ, ಶಿಲೆಯ ನಿಲುವು ಕೈ, ಕೆನ್ನೆ ಸಲುವು ಆಕೆ ನಟಿಸುವಾಗ ಮೂಗು, ನಟನೆಯ ಸುಳುವು ಕಣ್ಣು, ಕಾಡಿಗೆ ಗೂಡು ಕೆನ್ನೆ, ಕೃತಕ ಹೂಬನ ತುಟಿ, ಒತ್ತಾಯದ ನಗೆ ಸಿಂಚನ ನುಡಿ, ತಾತ್ಕಾಲಿಕ ಸದ್ದು ನಡೆ, ಬೇಕನಿಸದ ಮುಗಿಲು ಮೈ, ನನ್ನದಲ್ಲದ ಆಸ್ತಿ ಕೈ-ಕೊಡುಗೈಯ್ಯ ಕುಸ್ತಿ ಆಕೆ ಅಳುವಾಗ ಮೂಗು, ಉಸಿರಿಗಿಕ್ಕಟ್ಟು ಮೂಸೆ ಕಣ್ಣು, ಉಕ್ಕಿದ ಕಡಲು ಕೆನ್ನೆ, ಮಳೆಗಾಲದ ನೆಲ ತುಟಿ, ಕಂಬನಿಗೆ ಜಾರು ಸ್ಥಳ ನುಡಿ, ಬಿಕ್ಕಳಿಕೆ ಬಂಧು ನಡೆ, ನುಡಿಯಂತೆ ನೊಂದು ಮೈ- ಮನಸಿಗೆ ಘಾಸಿ ಕೈ ಬಯಸಿತು ಪ್ರೀತಿ ರತ್ನಸುತ ಆಕೆ ನಾನಾದಾಗ ಮೂಗು...
ನವಿರು ಕಲ್ಲು
- Get link
- X
- Other Apps
¸ÀÆgÀå£ÉÆA¢UÉ ªÀiÁwV½AiÀÄĪÀÅzÉAzÀgÉ CzÀÄ MAzÀÄ CzÀÄâvÀ.EzÀÄ £À£ÀUÀjªÁzÁV¤AzÀ®Æ £ÀqÉAiÀÄÄwÛzÉ.¸ÀÆgÀå ¸ÀàA¢¸ÀÄvÁÛ£ÉÆà E®èªÉÇà DzÀgÉ £Á£ÁqÀÄvÀÛ¯Éà EgÀÄvÉÛãÉ.. GzÀ¬Ä¸ÀÄ GzÀ¬Ä¸ÀÄ N CgÀÄuÁ… dUÀPÉ®è ¥À¸Àj¸ÀÄ ¤£À QgÀuÁ… EzÀÄ PÉ®ªÀjUÉ vÀÄA¨Á ¨Á°±ÀªÁV PÁt§ºÀÄzÀÄ DzÀgÉ 24 ªÀµÀðzÀ AiÀÄĪÀPÀ¤UÉ 4 ªÀµÀðzÀ ¨Á®PÀ£ÁUÀĪÁ¸É. £À£ÀUÉ ¸ÀÆAiÀÄð ªÀÄAf¤AzÉüÀĪÀ zÁn, ªÉÆÃqÀUÀ½UɯÁè NPÀĽ JgÀZÀĪÀ PÀæªÀÄ J®èªÀÇ EµÀÖ. NPÀĽ ¸ÀÆAiÀÄð£Á £ÉÆÃrzÉ £Á GdÄÓªÀ PÀuÉÆÚ¼ÀÄ DPÀ½¹ ªÉÆÃqÀPÉ ªÀÄÄzÀÄÝ ªÉÆÃd£ÀÄ ªÀiÁr JgÀZÀÄvÀ°zÀÝ §tÚzÀ NPÀĽ §UÉ §UÉ §tÚzÀ NPÀĽ PÉýzÉ £Á£ÀÄ DlPÉ §gÀ¯Éà ºÉüÀ¯Éà E®è ªÀiÁvÀ£ÁqÀ¯Éà E®è.. ªÀÄvÉÛ ºÉÆÃUÀÄªÉ ªÀÄvÉÛ ºÉÆÃUÀÄªÉ JzÀÄÝ £ÁtÄ £À¸ÀÄPÀ¯Éà MzÀÄÝ PÉüÀĪÀ ªÀÄÄzÀÄÝvÀ£À¢ ¸ÀĪÀÄä¤zÀÝ CªÀ¤UÉ… ¨Á®PÀ£ÁV¹zÀ D UÀÄqÀØPÉ,PÀ« £ÀÄ°zÁrzÀ, PÀ« £À°zÁrzÀ £À«gÀÄ , £À«®PÀ®Äè UÀÄqÀØPÉ…¤ÃªÀÇ §wÃðgÀ¯Áè…??????
ಉಮಾಶ್ರೀ ಚಿತ್ರೋತ್ಸವ : ನಟಿಯ ಆಂತರ್ಯ ಬದುಕಿನ ಯಾನ - ಶಂಕರ್ ಮಿತ್ರಾ ಶ್ರೀವಾಸ್ತವ್
- Get link
- X
- Other Apps
ಬೆಂಗಳೂರಿನ ಉತ್ಸಾಹಿ ತಂಡ "ಕಾಜಾಣ " ಆಯೋಜಿಸಿದ್ದ ಉಮಾಶ್ರೀ ಚಿತ್ರೋತ್ಸವ ಇತ್ತೀಚೆಗಷ್ಟೇ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆಯಿತು . ಬೇಲೂರು ರಘುನಂದನ್ ರವರ ನೇತೃತ್ವ ದಲ್ಲಿ ನಡೆದ ಮೂರು ದಿನದ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು . ಚಿತ್ರರಂಗದ ಗಣ್ಯರಾದ ಕೇಸರಿ ಹರವು , ರೇಖಾ ರಾಣಿ , ಆ ದಿನಗಳು ಚಿತ್ರ ನಿರ್ದೇಶಕ ಚೈತನ್ಯ , ಆದ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ , ಡಾ।। ನಿಕಿಲಾ , ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು, ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ನಟಿ ಉಮಾಶ್ರೀ ಯವರ ಚಿತ್ರ ಬದುಕಿನ ಬಗೆಗಿನ ಹೊರ ಒಳವುಗಳನ್ನ ಶಿಬಿರಾರ್ಥಿಗಳೊಡನೆ ಹಂಚಿಕೊಂಡರು ಹಾಗೂ ಚರ್ಚೆ ನಡೆಸಿದರು . ಮೂರು ದಿನದ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರ ಕೊಟ್ರೇಶಿ ಕನಸು , ಕನಸೆಂಬ ಕುದುರೆಯನೇರಿ , ಗುಲಾಬಿ ಟಾಕೀಸ್ ಚಿತ್ರಗಳ ಪ್ರದರ್ಶನವನ್ನೂ ಕೂಡ ಕಾಜಾಣ ಆಯೋಜಿಸಿತ್ತು . ಒಬ್ಬ ನಟಿಯನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿರುವ ಈ ಚಿತ್ರೋತ್ಸವ ದೇಶದ ಮೊಟ್ಟ ಮೊದಲ ಪ್ರಯತ್ನ . ಕಾಜಾಣದ ಮೊದಲ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ . ಮೊದಲ ದಿನ ಕೇಸರಿ ಹರವು ರವರು ಉಮಾಶ್ರಿ ಯವರ ಆರಂಭದ ದಿನಗಳು ಬಗ್ಗೆ ಮಾತನಾಡುತ್ತಾ ಉಮಾಶ್ರೀ ಯವರ ರಂಗ ಭೂಮಿಯ ಬದುಕಿನ ವಿವಿದ ಆಯಾಮಗಳನ್ನು ಶಿಬಿರಾರ್ಥಿ ಗಳ ಮುಂದೆ ತೆರೆದಿಟ್ಟರು . ಆಕಸ್ಮಿಕತೆ ಗಿಂತ...
ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ - V R BHAT
- Get link
- X
- Other Apps
ಕನ್ನಡನಾಡಿಗಾಗಿ ಯಾರ‍್ಯಾರು ಏನೆಲ್ಲಾ ಸೇವೆಮಾಡಿದರು ಎಂಬುದು ಬೇರೆ ವಿಷಯ. ಕನ್ನಡ ನೆಲದಲ್ಲಿಯೇ ಅರಳಿದ ’ಅವಧಾನ’ ಕಲೆ ಮಾಸಿಹೋದಾಗ ಹೊಸದಾಗಿ ಅದನ್ನು ಪ್ರತಿಷ್ಠಾಪಿಸಿದವರು ಶತಾವಧಾನಿ ಡಾ| [’ರಾಗ’]ರಾ.ಗಣೇಶರು. ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ, ವಾಚಿಸಿದ್ದಾರೆ, ಪ್ರವಚಿಸಿದ್ದಾರೆ, ಉಪನ್ಯಾಸಗಳಂತೂ ಯಾರೂ ಮಾಡದಷ್ಟು ಹೇರಳ ಸಂಖ್ಯೆಯಲ್ಲಿ ಅವರಿಂದ ನಡೆದಿವೆ. ಅವರ ಪಾಂಡಿತ್ಯ ಕನ್ನಡ ಜನರಿಗೆ ಪರಿಚಯವಿರದ್ದಲ್ಲ; ಆದರೆ ಕರ್ನಾಟಕ ಸರಕಾರಕ್ಕೆ ಇನ್ನೂ ಅವರ ಪರಿಚಯವಿಲ್ಲ!! ಕೆಲವರು ಕೆಲವು ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಮಾತ್ರ ತೊಡಗಿಕೊಳ್ಳುತ್ತಾರೆ; ಗಣೇಶರದ್ದು ಹಾಗಲ್ಲ, ಕನ್ನಡದಲ್ಲಿ ಈಗಿರುವ ಪರಮೋಚ್ಚ ವ್ಯಾಖ್ಯಾನಕಾರರು ಮತ್ತು ಅತಿಶ್ರೇಷ್ಠ ವಿದ್ವಾಂಸರು ಎಂದರೆ ಗಣೇಶರೊಬ್ಬರೇ. ಅವರ ನೆನಪಿನ ಶಕ್ತಿಯಂತೂ ಸಾಗರದಷ್ಟು ಅಗಾಧ. ಪ್ರೀತಿಯಿಂದ, ಅಭಿಮಾನದಿಂದ ಹೇಳುವುದಾದರೆ ಕನ್ನಡಕ್ಕೊಂದೇ ’ರಾಗ’-ಅದು ರಾ.ಗಣೇಶ. V.r. Bhat
ತಳಮಳಿಸುತ್ತಿರುವ ಹಳ್ಳಿಗಳು
- Get link
- X
- Other Apps
20 ವರ್ಷದ ಹಿಂದೆ ಊರಿನಲ್ಲಿ ಒಂದು ಮನೆಯಲ್ಲಿ ಮದುವೆ, ಪೂಜೆ, ಗ್ರಹಪ್ರವೇಶ ಏನೇ ಮುಖ್ಯವಾದ ಕಾರ್ಯವಿರಲಿ, ಅಥವಾ ಊರಿನ ದೇವಸ್ಥಾನದ ಮುಖ್ಯವಾದ ಕಾರ್ಯವಿರಲಿ ಒಟ್ಟಾರೆ ಅಂದು ಊರಿನ ಎಲ್ಲರಿಗೂ ಎಲ್ಲರ ಸಹಕಾರದ ಅಗತ್ಯವಿತ್ತು. ಸಹಕಾರಕ್ಕಾಗಿಯೇ ಮನೆ ಮನೆಗೆ ಹೋಗಿ ಚಪ್ಪರದ ವಿಳ್ಯ, ಮದುವೆ ವೀಳ್ಯ,ಅಡುಗೆ ವಿಳ್ಯ ಎಂದು ಪ್ರತ್ಯೇಕ ಪ್ರತ್ಯೇಕ ಆಮಂತ್ರಣ ಇತ್ತು. ಆ ಆಮಂತ್ರಣ ಸ್ವೀಕರಿಸಿದ ಮೇಲೆ ಆ ಕಾರ್ಯಕ್ಕೆ ಮನೆಯಿಂದ ಒಬ್ಬರ ಉಪಸ್ಥಿತಿ ಕಡ್ಡಾಯವಾಗಿತ್ತು. ಊರಿನಲ್ಲಿ ಸಂಕ್ರಾತಿ ಹಬ್ಬ, ಗಡಿಹಬ್ಬ, ಹಗರಣ, ಭಜನೆ ಈ ಎಲ್ಲಾ ದೈವಿಕ ಕಾರ್ಯಗಳಲ್ಲಿಯೂ ಎಲ್ಲಾ ಜನಾಂಗದವರು ಭಾಗವಹಿಸಿ ಆಯಾಯ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದರು. ಯಾರದೇ ಮನೆಯಲ್ಲಿ ಒಂದು ಸಾವು ಸಂಭವಿಸಿದ್ದರೂ ಊರಿಗೇ ಊರೇ ಬಂದು ಸಾಂತ್ವಾನ ಹೇಳುತ್ತಿತ್ತು ಮತ್ತು ಮುಂದಿನ ಕಾರ್ಯವನ್ನು ನೇರವೆರಿಸುತ್ತಿತ್ತು. ಅಂದರೇ ಊರಿನ ಸಂಭ್ರಮವಾಗಿರಲ್ಲಿ ಅಥವಾ ದುಖ:ವಾಗಿರಲ್ಲಿ ಎರಡರಲ್ಲಿಯೂ ಊರಿಗೆ ಊರೇ ಸಂಭ್ರಮಿಸುತ್ತಿತ್ತು ಮತ್ತು ದುಖಿ:ಸುತ್ತಿತ್ತು. ಪರಸ್ಪರರ ಬಗ್ಗೆ ಮತ್ತು ಪ್ರತಿಯೊಂದು ಕಾರ್ಯದ ಬಗ್ಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯಿತು ಜೊತೆಗೆ ಸಹಕಾರ ಭಾವನೆ ಇತ್ತು. ಬೇಸಿಗೆಯಲ್ಲಿ ಯಕ್ಷಗಾನ, ದೊಡ್ಡಾಟ್ ನಡೆಯುತ್ತಿತ್ತು. ಬೇಸಿಗೆ ರಜೆಗೆ ಬರಲು ಊರಿನ ಮಕ್ಕಳು ಮೊಮ್ಮಕ್ಕಳು ಕಾತರದಿಂದ ಕಾಯುತ್ತಿದ್ದರು. ಊರಿನಲ್ಲಿರುವ ಅಜ್ಜನ ಕಥೆಯನ್ನು ಕೇಳಲು, ಚಿನ್ನಿದಾಂಡು ಆಟ ಆಡಲು, ...