Thursday, July 21, 2011

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು ...

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೊ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ ...

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ ....

ಮಹಾಪ್ರವಾಹ... ಮಹಾಪ್ರವಾಹ
ಮಹಾಪ್ರವಾಹ... ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ನೀತಿ ಇದು
ರಾಧೆಯ ಪ್ರೀತಿಯ ನೀತಿ ....
- ಎಚ್.ಎಸ್.ವೆಂಕಟೇಶಮೂರ್ತಿ

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು