ದೂರವಿಡೆ ಸಖಿ

ದೂರವಿಡೆ ಸಖಿ
ದೂರವಿಡೆ |
ಕೈಯವೀಣೆಯನು ದೂರವಿಡೆ ||

ವೀಣೆಯ ನಾದವ ಕೇಳಿ ಚಂದ್ರಮನ
ರಥದ ಜಿಂಕೆಗಳು ಓಡದಿವೆ |
ನೆರಳು ಹೊರಳುತಿದೆ ; ಇರುಳು ಕೆರಳುತಿದೆ
ಬೆಳದಿಂಗಳ ಮಳೆ ಬಾರದಿದೆ ||

ನೋವಿನ ಪರಿಯನು ನೊಂದವರರಿವರು
ನೋಯದೆ ನೋಯುವ ಬಗೆಯುಂಟೆ ?
ಚಂದಿರನಾದನು ಬೆಂಕಿಯ ಗೂಡು
ನೊಂದ ಬಳಿಕ ನೀನದ ನೋಡು ||

ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ
ವೀಣೆಯ ಮುಚ್ಚಿಡೆ ಜೀವಸಖೀ |
ಚಂದ್ರ ಮಹೋತ್ಸವ ಮುಂದಕೆ ಸಾಗಲಿ
ವಿರಹಿಗಳಿಗೆ ಕಾರಿರುಳೆ ಸಖೀ ||

- ಹೆಚ್. ಎಸ್. ವೆಂಕಟೇಶಮೂರ್ತಿ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು