ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, July 6, 2011

ಅಕ್ಕಮಹಾದೇವಿ


ಅರಿವೆನೆಂದರೆ ಅರಿಯಬಾರದು ನೋಡಾ
ಘನಕ್ಕೆ ಘನ ತಾ ನೋಡಾ
ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆಪೋದೆನು||

- ಜಗದೊಡೆಯ ಮಲ್ಲಿಕಾರ್ಜುನನು(ಈಶ್ವರ) ಎಲ್ಲಾ ಶಕ್ತಿಗಳಿಗಿಂತಲೂ ಅಗಾಧ ಹಾಗೂ ಶಕ್ತಿಯುಳ್ಳವನು, ಅವನನ್ನು ತಿಳಿಯುವುದು ತುಂಬಾ ಕಠಿಣ ಅವನನ್ನು ತಿಳಿದುಕೊಂಡೆನೆಂದರೆ ನನ್ನ ಜೀವನವೇ ಅದೃಷ್ಟಶಾಲಿ(ಧನ್ಯ).

-----------

ಈಳೆ, ನಿಂಬೆ, ಮಾವು ಮಾದಲಿಕೆಗೆ ಹುಳಿನೀರನೆರೆದವರಾರಯ್ಯ
ಕಬ್ಬು, ಬಾಳೆ, ಹಲಸು, ಗರಿಕೇಳಕೆ ಸಿಹಿನೀರೆರದವರಾರಯ್ಯ!
ಕಳೆವಸಾಲೆಗ ಓಗರದ ಉದಕವನೆರೆದವರಾರಯ್ಯ!
ಮರುಗ, ಮಲ್ಲಿಗೆ, ಪಚ್ಚೆಗೆ, ಪರಿಮಳದುದಕವನೆರೆದವರಾರಯ್ಯ
ಇಂತೀ ಜಲವು ಒಂದೇ ಆಕಾರವು ಒಂದೇ ಹಲವು ದ್ರವ್ಯಂಗಳ
ಕೂಡಿ ತನ್ನ ಪರಬೇಕಾಗಿ ಹಾಗೆ ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದರೇನು? ತನ್ನ ಪರಿ ಬೇರೆ!

- ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು.

---------------

ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ
ಅಯ್ಯ ಸಾರಿಬಂದು ನೀನೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡೆ
ಇನ್ನಾರಂತೆ ಎಲ್ಲವೂ ಲಿಂಗ ಆಗ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚನ್ನಮಲ್ಲಿಕಾರ್ಜುನ ನಿಮ್ಮ ನೆನ್ನ ಕರಸ್ಥಲದಲಿ
ನೋಡಿ, ನೋಡಿ, ಕಂಗಳೇ ಪ್ರಾಣವಾಗಿರ್ದೆನಯ್ಯ ||

- ದೇವನೇ ನೀನು ಬಹು ದೂರದಲ್ಲಿರುವೆ ಎಂದು, ನೀರಿನ ದಾಹ ತಡೆಯದೆ ಬಳಲುವವರಂತೆ ಪರಿತಪಿಸುತ್ತಲಿದ್ದೆ. ಆದರೆ ನೀನು ಒಂದು ಸಾರಿ ನನ್ನ ಕರಸ್ಥಳದಲ್ಲಿ ಪ್ರಸನ್ನವಾದೇ ನೋಡು ಅಂದೇ ನನ್ನ ಮನ ನಿನ್ನಲ್ಲಿ ಲೀನವಾಯಿತು. ದೇವನೆ ನಿನ್ನನ್ನು ಪ್ರೇಮದಿಂದ ಕಂಡ ಈ ಕಂಗಳೇ ಪ್ರಾಣವಾದವಯ್ಯ, ನಾನೇ ಪುಣ್ಯವಂತಳು......

1 comment:

 1. Dear Brothers and Sisters
  Namaste 🙏🏼
  Please treat this as a personal invitation from Narayana Gurukula and kindly join us all with your family and friends @ Bangalore.
  it is requested to share/circulate this with your friends and contacts/groups/pages feed too. let’s celebrate and make this event successful.
  Om. 🙏🏼❤️  https://www.facebook.com/events/2045581759017863/?acontext=%7B%22ref%22%3A%2222%22%2C%22feed_story_type%22%3A%2222%22%2C%22action_history%22%3A%22null%22%7D

  ReplyDelete