Posts

Showing posts from July, 2011

ಜನುಮದ ಜಾತ್ರಿ .............ದ.ರಾ.ಬೇಂದ್ರೆ

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ ಜಾತ್ರಿಯೆನಿಸಿತ್ತ ಜನುಮವು. ||೧|| ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ ‘ಅಬ್ಬ’ ಎನಬೇಡ s ನನ ಗೆಣತಿ | ಸಾವಿರಕ ಒಬ್ಬ ನೋಡವ್ವ ನನ ನಲ್ಲ. ||೨|| ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ ಕಣ್ಣು ಬರೆಧ್ಹಾಂಗ ಕಂಡಿತ್ತು. ||೩|| ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ ಬೀಸಿ ಕರೆದಾನ ನನಗಂತ. ||೪|| ತಂಬುಲತುಟಿ ನಗಿ ಹೊಂಬಿಸಲೆಂಬಂತೆ ಬಿಂಬಿಸಿತವ್ವಾ ಎದಿಯಾಗ | ನಂಬೀಸಿ ರಂಬೀಸಿತವ್ವಾ ಜೀವವ. ||೫|| -- ದ.ರಾ.ಬೇಂದ್ರೆ ಕೃಪೆ: ಸುನಾಥ್ ಮೂಲ ಲೇಖನ: http://sallaap.blogspot.com/2011/07/blog-post.html

ಸಂಯಮವುಳ್ಳ ಶಕ್ತಿ

ಅದೊಂದು ಕರಾಟೆ ತರಬೇತಿ ನೀಡುವ ಶಾಲೆ. ಆ ಶಾಲೆಯ ಮುಖ್ಯಗುರುಗಳು ಈ ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ತಮ್ಮ ಶಿಷ್ಯರಿಗೆಲ್ಲ ಆದರ್ಶಪ್ರಾಯರಾದವರು. ಅವರಿಗೆ ಕರಾಟೆಯ ಪಾಠ ಹೊಟ್ಟೆಪಾಡಿನ ಉದ್ಯೋಗವಾಗಿರಲಿಲ್ಲ, ತರುಣ, ತರುಣಿಯರ ಜೀವನವನ್ನು ಪರಿಷ್ಕಾರಗೊಳಿಸುವ ಒಂದು ಕ್ರಿಯೆಯಾಗಿತ್ತು. ಹಲವಾರು ಮಕ್ಕಳು, ತರುಣರು ಇಲ್ಲಿ ಕರಾಟೆ ಕಲಿಯುತ್ತಿದ್ದರು. ಒಬ್ಬ ಹುಡುಗ ಈ ಗುರುಗಳ ಹತ್ತಿರ ತನ್ನ ಐದನೇ ವಯಸ್ಸಿನಿಂದ ಕರಾಟೆ ಕಲಿಯಲು ಬರುತ್ತಿದ್ದ. ಹದಿನೈದು ವರ್ಷಗಳ ನಿರಂತರ ಪರಿಶ್ರಮದ ಸಾಧನೆಯಿಂದ ಆತ ಅತ್ಯಂತ ಶ್ರೇಷ್ಠ ಕರಾಟೆ ಪಟುವಾಗಿ ಹೊಮ್ಮಿದ. ಅತ್ಯಂತ ಶ್ರೇಷ್ಠ ಕರಾಟೆ ಸಾಧನೆ ಮಾಡಿದವನಿಗೆ  ಬ್ಲ್ಯಾಕ್ ಬೆಲ್ಟ್  ಅಂದರೆ ಕಪ್ಪುಪಟ್ಟಿಯನ್ನು ನೀಡಲಾಗುತ್ತದೆ. ಅದನ್ನು ವಿಶೇಷ ಸಮಾರಂಭದಲ್ಲಿ ನೀಡಲು ಆಯೋಜಿಸಲಾಗಿತ್ತು. ಅದು ಆ ತರುಣನ ಕರಾಟೆ ಜೀವನದ ಮರೆಯಲಾಗದ ಸಂದರ್ಭ. ಆತ ತುಂಬ ಖುಷಿಯಾಗಿದ್ದ. ಆ ದಿನವೂ ಬಂತು. ಕಾರ್ಯಕ್ರಮವನ್ನು ನೋಡಲು ತುಂಬ ಜನ ಬಂದಿದ್ದರು. ಹುಡುಗ ಎದ್ದು ತನ್ನ ಕಪ್ಪು ಪಟ್ಟಿಯನ್ನು ಪಡೆಯಲು ಗುರುವಿನ ಪೀಠದತ್ತ ಸಾಗಿದ. `ಕಪ್ಪುಪಟ್ಟಿ ಪಡೆಯುವ ಎ್ಲ್ಲಲ ಅರ್ಹತೆಯನ್ನು ನೀನು ಪಡೆದುಕೊಂಡಿರುವುದು ಸಂತೋಷ, ಆದರೆ ಅದನ್ನು ಪಡೆಯುವುದಕ್ಕೆ ಮುನ್ನ ಇನ್ನೊಂದು ಮಹತ್ವದ ಪರೀಕ್ಷೆಯಲ್ಲಿ ಉತ್ತಿರ್ಣನಾಗಬೇಕು`  ಎಂದರು ಗಂಭೀರವಾಗಿ ಗುರುಗಳು. `ನಾನು ಸಿದ್ಧವಾಗಿದ್ದೇನೆ ಗುರುಗಳೇ`  ಎಂದ ಶ...

ಸಂಸ್ಕಾರ.. ಮತ್ತು ಇತರ ಕಥೆಗಳು

Image
ಕನ್ನಡದಲ್ಲಿ ದ್ವನಿ ಪುಸ್ತಕಗಳ ಸರಣಿಗೆ ಮತ್ತೋಂದು ಪುಸ್ತಕ.. ಸಂಸ್ಕಾರ.. ಮತ್ತು ಇತರ ಕಥೆಗಳು ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನು ಸಿ ಅರ್ ಸಿಂಹ ವಾಚನ ಮಾಡಿದರೆ. ಇತರೆ ಕಥೆಗಳು - ಕಾರ್ತಿಕ ಮತ್ತು ಸೂರ್ಯನ ಕುದರೆಯನ್ನು..ರೇಖಾ ಮತ್ತು ಋತ್ವಿಕ ಸಿಂಹ ರವರು ವಾಚನ ಮಾಡಿದರೆ....  9.23 ಗಂಟೆಗಳ.. ದ್ವನಿ ಪುಸ್ತಕ ಇದು... http://www.bookstalk.in/

ಎಸ್ ಎಲ್ ಭೈರಪ್ಪರವ ಧರ್ಮಶ್ರಿ - ಕನ್ನಡದಲ್ಲಿ ದ್ವನಿ ಪುಸ್ತಕ -

ಉಶೀನರ ಎಂಬ ಮಹಾದಾನಿ -

ನಮ್ಮ ದೇಶದಲ್ಲಿ ಅನೇಕ ದಾನಿಗಳು ಆಗಿ ಹೋಗಿದ್ದಾರೆ. ಅವರ ದಾನದ ಕಥೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ. ಆದರೆ ಕೆಲವೊಂದು ಪ್ರಸಂಗಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ. ಅಂಥ ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ. ಉಶೀನರ ಭೋಜನಗರದಲ್ಲಿ  ಒಂದು ಕಾಲದಲ್ಲಿ  ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲೂ ಪ್ರಸಿದ್ಧನಾಗಿದ್ದ. ಇವನ ದಾನಶೀಲತೆಯ ಕೀರ್ತಿ ಮೂರು ಲೋಕಗಳಲ್ಲೂ ಹರಡಿತ್ತು. ಈ ವಿಷಯ ದೇವತೆಗಳ ನಾಯಕನಾದ ದೇವೇಂದ್ರನನ್ನು ಮುಟ್ಟಿತು. ಬಹುಶಃ ಮಾನವರ ಸಾಧನೆಗಳು ದೇವತೆಗಳಲ್ಲೂ ಅಸೂಯೆಯನ್ನು ಉಂಟುಮಾಡುತ್ತಿದ್ದವೆಂದು ತೋರುತ್ತದೆ. ಇಂದ್ರನಿಗೆ ಉಶೀನರನ ದಾನ ಮಾಡುವ ಮನಸ್ಸು ಯಾವ ಮಟ್ಟದವರೆಗೂ ಹೋಗಬಲ್ಲುದು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಈ ಪರೀಕ್ಷೆ ನಡೆಸುವುದಕ್ಕಾಗಿ ಆತ ಇತರ ದೇವತೆಗಳ ಸಹಾಯ ಕೇಳಿದ. ಅಗ್ನಿಯನ್ನು ಕರೆದು ಒಂದು ಪಾರಿವಾಳದ ರೂಪವನ್ನು ಪಡೆಯಲು ಹೇಳಿದ. ತಕ್ಷಣ ಪಾರಿವಾಳದ ರೂಪದಲ್ಲಿ ಅಗ್ನಿ ನಿಂತ. ಇಂದ್ರ ಸ್ವತಃ ತಾನೇ ನಾಯಿಯ ರೂಪ ತಾಳಿ ಪಾರಿವಾಳವನ್ನು ಹಿಡಿಯಲು ಬೆನ್ನು ಹತ್ತಿದ. ಗಾಬರಿಯಾದ ಪಾರಿವಾಳ ಹಾರುತ್ತ ಹಾರುತ್ತ ಉಶೀನರನ ಬಳಿಗೆ ಬಂದಿತು. ರಾಜ ತುಂಬ ದಯಾಳುವಲ್ಲವೇ? ಅದಕ್ಕೆ ಶರಣಾಗತಿಯನ್ನು ನೀಡಿದ. ಅದರ ಹಿಂದೆಯೇ ನಾಯಿಯೂ ಓಡಿ ಬಂತು. ತನಗೆ ಆಹಾರವಾಗಬೇಕಿದ್ದ...

ವಿಚಿತ್ರ ತೀರ್ಮಾನ

ಅವನೊಬ್ಬ ಹತ್ತಿಯ ವ್ಯಾಪಾರಿ. ತಾನು ರೈತರಿಂದ ಹತ್ತಿಯನ್ನು ಕೊಂಡು, ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿ ದಿಂಡುಗಳನ್ನು ಮಾಡಿ ಪಟ್ಟಣಕ್ಕೆ ಒಯ್ದು ಹೆಚ್ಚಿನ ಹಣಕ್ಕೆ ಮಾರಿ ಬರುತ್ತಿದ್ದ. ಅವನ ಜೀವನ ಸುಖವಾಗಿ ಸಾಗುತ್ತಿತ್ತು. ಒಂದು ದಿನ ಹೀಗೆ ಐವತ್ತು ಹತ್ತಿಯ ದಿಂಡುಗಳನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಊಟಕ್ಕೆಂದು ಮರದ ಕೆಳಗೆ ಕುಳಿತ. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ. ಆ ಮರದ ಕೆಳಗೆ ಒಂದು ಸುಂದರವಾದ ಬುದ್ಧನ ವಿಗ್ರಹ. ಅದರ ಮುಂದೆಯೇ ಮಲಗಿದ. ಎಚ್ಚರವಾದ ಮೇಲೆ ನೋಡುತ್ತಾನೆ, ತನ್ನ ಬಂಡಿ ಪೂರ್ತಿ ಖಾಲಿಯಾಗಿದೆ. ಎಲ್ಲ ಹತ್ತಿಯ ದಿಂಡುಗಳನ್ನು ಯಾರೋ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ! ಯಾರನ್ನಾದರೂ ಕೇಳೋಣವೆಂದರೆ ಬುದ್ಧನ ವಿಗ್ರಹದ ಹೊರತು ಯಾರೂ ಅಲ್ಲಿ ಇಲ್ಲ. ಅವನು ತಕ್ಷಣವೇ ಹೋಗಿ ನ್ಯಾಯಾಧಿಕಾರಿಗೆ ದೂರು ಒಪ್ಪಿಸಿದ. ಆ ನ್ಯಾಯಾಧೀಶ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡು ಒಂದು ತೀರ್ಮಾನಕ್ಕೆ ಬಂದ. ಆ ಹತ್ತಿಯ ದಿಂಡುಗಳನ್ನು ಬುದ್ಧನ ವಿನಾ ಇನ್ನಾರೂ ಕದ್ದಿರುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದ್ದರಿಂದ ಬುದ್ಧನನ್ನು ನ್ಯಾಯಾಲಯಕ್ಕೆ ಕರೆತರುವಂತೆ ಅಪ್ಪಣೆ ಮಾಡಿದ. ಅಧಿಕಾರಿಗಳು ಕಷ್ಟಪಟ್ಟು ವಿಗ್ರಹವನ್ನು ಹೊತ್ತು ತಂದರು. ನ್ಯಾಯಾಲಯದಲ್ಲಿ ಜನಸಂದಣಿ. ಇದೆಂಥ ವಿಚಾರಣೆ? ಬುದ್ಧನ ವಿಗ್ರಹ ಹತ್ತಿಯ ದಿಂಡುಗಳನ್ನು ಕಳವು ಮಾಡುವುದುಂಟೇ? ಒಂದು ವೇ...

ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ

Image
ಕನ್ನಡದಲ್ಲಿ ದ್ವನಿ ಪುಸ್ತಕಗಳ.. ಯುಗ ಪ್ರರಂಭವಾಗಿದೆ.. ಎಸ್ ಎಲ್  ಭೈರಪ್ಪ ರವ ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ,, ಮತ್ತು ೩-೪ ಪುಸ್ತಕಗಳು ತುಂಬ ದಿನಗಳ ಹಿಂದೆ.. ಬಿಡುಗಡೆಯಗಿದೆ.. ಓದುಲು ಸಮಯ ಇಲ್ಲದವರು ಕೇಳಿ ಅನಂದೆಸಬಹುದು... ಕನ್ನಡಿಗರೆ... ಕೊಂಡು ಕೇಳಿ.. ಮತ್ತು ಪುಸ್ತಕಗಳು ಪ್ರಕಟವಾಗಲು.. ಸಹಕರ ನೀಡಿ

ಆರ್ಥರ್ ಆಶ್

ಆರ್ಥರ್ ಆಶ್ ಟೆನಿಸ್ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅದು ಬರೀ ಟೆನಿಸ್ ನಲ್ಲಿ ಮಾತ್ರ ದೊಡ್ಡ ಹೆಸರಲ್ಲ. ಆಶಾವಾದಕ್ಕೆ, ಸಮಾಜ ಸುಧಾರಣೆಗೆ, ಅಸಮಾನತೆಯ ನಿವಾರಣೆಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡ ಹೆಸರು ಆರ್ಥರ್ ಆಶ್. ಆರ್ಥರ್ ಆಶ್ ಹುಟ್ಟಿದ್ದು ಜುಲೈ 10, 1948 ರಂದು ಅಮೆರಿಕೆಯ ವರ್ಜಿನಿಯಾದ ರಿಚ್‌ಮಂಡ್‌ನಲ್ಲಿ. ತಂದೆ ಬ್ರೂಕ್‌ಫೀಲ್ಡ್ ಆಟದ ಮೈದಾನದ ಹೊರಗಿದ್ದ ಕಾರುಗಳನ್ನು ನಿಲ್ಲಿಸುವ ಸ್ಥಳದ ವಿಶೇಷ ಪೋಲೀಸ್ ಆಗಿದ್ದರು. ಮಗನನ್ನು ತುಂಬ ಪ್ರೀತಿಯಿಂದ ಆದರೆ ಶಿಸ್ತಿನಿಂದ ಬೆಳೆಸಿದರು. ಈ ಹುಡುಗ ಬೆಳೆದದ್ದೇ ಟೆನಿಸ್ ಮೈದಾನಗಳಲ್ಲಿ. ಮೈ ತುಂಬಿಕೊಳ್ಳದೇ ಕಡ್ಡಿಯ ಹಾಗೆ ಆರಡಿ ಒಂದು ಇಂಚು ಎತ್ತರಕ್ಕೆ ಬೆಳೆದ. ತನ್ನ ಏಳನೇ ವಯಸ್ಸಿಗೆ ಟೆನಿಸ್ ಆಡಲು ಪ್ರಾರಂಬಿಸಿದ ಆಶ್, ಹದಿನೇಳನೇ ವಯಸ್ಸಿಗೆ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆದ. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿವೇತನ ಪಡೆದು ಹೋದ. ವರ್ಣಭೇದ ನೀತಿ ಹೆಚ್ಚಾಗಿದ್ದ ಕಾಲದಲ್ಲಿ ಈ ಕಪ್ಪು ಹುಡುಗ ಮುಂದೆ ಬೆಳೆಯುವುದು ತುಂಬ ಕಷ್ಟವಿತ್ತು. ಎಷ್ಟೋ ಟೆನಿಸ್ ಮೈದಾನಗಳಲ್ಲಿ ಈತನಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಅವನ ಏಕಾಗ್ರ ಚಿತ್ತ ಮತ್ತು ಸತತ ಪ್ರಯತ್ನ ಯಾವುದನ್ನೂ ಲೆಕ್ಕಿಸದೇ ಮುಂದೆ ನಡೆಸುತ್ತಿತ್ತು. 1966 ರಲ್ಲಿ ಆತ ಅಮೆರಿಕೆಯ ಡೆವಿಸ್ ಕಪ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಕಪ್ಪು ...

ನಂಬಿಕೆಯೇ ದೇವರು

ರಾಜೀವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನಿಗೆ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೈದರ ಹುಡುಗನ ಹಾಗೆ ಸಂತೋಷವಾಗಿ ಚಟುವಟಿಕೆಯಿಂದ ಕೆಲಸಮಾಡಿಕೊಂಡಿದ್ದ. ಒಂದು ದಿನ ತುಂಬ ತಲೆನೋವು ಕಾಣಿಸಿಕೊಂಡಿತು. ಯಾವುದೋ ಮಾತ್ರೆ ತೆಗೆದುಕೊಂಡ. ತಾತ್ಪೂರ್ತಿಕವಾಗಿ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುಕಳಿಸಿತು. ಮರುದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಎಡಕಣ್ಣಲ್ಲಿ ಒಂದು ಕೆಂಪು ಚುಕ್ಕಿ ಕಂಡಂತಾಯಿತು. ಸಂಜೆಯ ಹೊತ್ತಿಗೆ ಅದು ಕಣ್ಣು ತುಂಬೆಲ್ಲ ಹರಡಿಕೊಂಡು ಕಣ್ಣೇ ಕಾಣದಂತಾಯಿತು. ಮರುದಿನವೇ ವೈದ್ಯರ ಕಡೆಗೆ ಹೋದ. ಹತ್ತಾರು ಪರೀಕ್ಷೆಗಳನ್ನು ನಡೆಸಿ ರಾಜೀವನ ಎಡಕಣ್ಣಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ತಡೆಯುಂಟಾಗಿದ್ದು ಆ ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿದೆ ಎಂತಲೂ ಅದನ್ನು ಸರಿಮಾಡುವುದು ಸಾಧ್ಯವಿಲ್ಲವೆಂದೂ ವೈದ್ಯರು ತಿಳಿಸಿದರು. ಇದು ಏಕೆ ಆಯಿತು ಎಂಬುದು ತಿಳಿಯದಾಗಿದೆ ಎಂದರು. ಈ ಆಘಾತವೇ ಸಾಕಾಗಿತ್ತು. ಮಾರನೆಯ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ತಲೆಗೆ ಸುತ್ತುಬಂದಂತಾಗಿ ರಾಜೀವ ಕುಸಿದುಬಿದ್ದ. ಮತ್ತೆ ಅವನನ್ನು ಆಸ್ಪತ್ರೆಗೆ ಸೇರಿಸಿದರು. ಈ ಬಾರಿ ಹೃದಯತಜ್ಞರು ಪರೀಕ್ಷೆಗಳನ್ನು ನಡೆಸಿದರು. ಅವರ ತೀರ್ಮಾನ ಇನ್ನೂ ಭಯಂಕರವಾಗಿತ್ತು. ಇದೊಂದು ಅತ್ಯಂತ ಅಪರೂಪದ ರೋಗ ತಾಕಾಯಾಸಸ್ ಆರ್ಟಿರಿಟಿಸ್ ರೋಗವಂತೆ. ಇದರಿಂದ ರಕ್ತನಾಳಗಳಲ್ಲಿ ಉರಿ, ಊತ, ಉಂಟಾಗುತ್ತ ಅವು ಸಣ್ಣದಾಗುತ್ತ ...

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ... ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ ಯಾರೊ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ ... ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಭಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ .... ಮಹಾಪ್ರವಾಹ... ಮಹಾಪ್ರವಾಹ ಮಹಾಪ್ರವಾಹ... ಮಹಾಪ್ರವಾಹ ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ ತೊರೆದರು ತನ್ನ ತೊರೆಯದು ಪ್ರಿಯನ ರಾಧೆಯ ಪ್ರೀತಿಯ ನೀತಿ ಇದು ರಾಧೆಯ ಪ್ರೀತಿಯ ನೀತಿ .... - ಎಚ್.ಎಸ್.ವೆಂಕಟೇಶಮೂರ್ತಿ

ಡಾ . ಗುರುರಾಜ ಕರ್ಜಗಿ - ಕಿರು ಪರಿಚಯ

Image
ಡಾ . ಗುರುರಾಜ ಕರ್ಜಗಿ ಯವರು ಶಿಕ್ಷನ ತಜ್ಞರು. ಇವರು ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ , ಬೆಳೆಸಿ, ಪ್ರಾಧ್ಯಾಪಕರಾಗಿ , ಸಾವಿರಾರು ವಿದ್ಯಾರ್ಥಿಗಳ ಕನುಸುಗಳಿಗೆ ಬೆಳಕಾಗಿ, ಅವರ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ . ವಿ.ವಿ. ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ , ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಾ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ , ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷ ರಾಗಿ ದ್ದಾರೆ , ಇವರ ಅನುಭವದ ಮೂಸೆ ಯಿಂದ ಕತೆಗಳೂ , ಲೇಖ ನಗಳೂ , ಪಠ್ಯ ಪುಸ್ತಕಗಳು ಮುಡಿ ಬಂದಿವೆ . ಸೃಜನ ಶೀಲತೆ , ಸಂವಹನ ಕಲೆ , ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ ಕರಜಗಿ ಯವರು ತಮ್ಮ ಧನಾತ್ಮಕ ಚಿಂತನೆಗಳು , ಕಾರ್ಯ ಕ್ಷಮತೆ ಹಾಗೂ ಮಾನ ವೀ ಯ ಮೌಲ್ಯ ಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾ ಗಾ ರ ...

ಇವರು ನಮ್ಮವರು; -

Image
ಕನ್ನಡ ಡಿಂಡಿಮ ಬಾರಿಸಿದ ಕನ್ನಡ ಕಣ್ಮಣಿಗಳ ಅಪರೂಪದ ಚಿತ್ರ: ಎಡದಿಂದ-ನಾಡಿಗೇರ್,ಜಿ ಬಿ ಜೋಷಿ,ಕೆ ವಿ ಅಯ್ಯರ್,ಆಲೂರು ವೆಂಕಟ ರಾವ್,ವಿ ಬಿ ನಾಯಕ್,ಕರ್ಣ     Krupe _ ಕನ್ನಡಿಗರ ಒಕ್ಕೂಟ - Face book

ಶಿವರಾತ್ರಿ

ಶಿವನಿಗ್ಯಾವುದು ಹಗಲು? ಯಾವುದವನಿಗೆ ರಾತ್ರಿ? ನಿತ್ಯ ಜಂಗಮ ಮೂರ್ತಿಗಿರುಳು ಹಗಲಿನ ಫರಕು ಇಲ್ಲ, ಹಗಲಾದಾಗ ಇಲ್ಲಿ, ಅಮೆರಿಕೆಯಲ್ಲಿ ನಟ್ಟಿರುಳು. ಹಗಲರ್ಧ ; ಇರುಳರ್ಧ-ಅರ್ಧನಾ ರೀಶ್ವರಗೆ. ಈ ಶಿವರಾತ್ರಿ ಎನ್ನುವುದೆ ಪಾರ್ವತಿ. ಚಂದ್ರದಂಡೆಯ ಮುಡಿದು, ನಕ್ಷತ್ರನೆಕ್ಲೇಸ ಧರಿಸಿರುವ ನಗೆಮುಗುಳ ಕಾಳಿ, ಶಂಕರನರಸಿ. ಕೈಲಾಸಲಾಸ್ಯ ಮಾನಸದ ಕನ್ನಡಿಯಲ್ಲಿ. ಚಂದ್ರಬೋಗಣಿ ತುಂಬ ತುಳುಕಾಡುತಿರೆ ಇರುಳು. ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ ನಿಂತು ಮೆಲ್ದನಿಯಲ್ಲಿ ಉಸುರಿದನು : "ಶಂಕರೀ... ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ, ನನ್ನಧರಪಾತ್ರೆಯೇ, ಬಿಲ್ವವನಧಾತ್ರಿಯೇ, ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ!" -ಎಚ್. ಎಸ್. ವೆಂಕಟೇಶಮೂರ್ತಿ

ಇರುಳ ಸಮಯ

ಇರುಳ ಸಮಯ ಸುರಿಮಳೆಯೊಳಗೆ ದೋಣಿಗಳಿಳಿದಿವೆ ಹೊಳೆಯೊಳಗೆ ಶ್ಯಾಮಲ ಸಾಗರವೇ ಗುರಿಯೆನ್ನುತ ಸಾಗಿವೆ ಸಾವಿರ ದೋಣಿಗಳು | ಸೆರಗೇ ಹಾಯಿ ! ಹೃದಯವೆ ಹುಟ್ಟು ! ದೋಣಿ ಹಿಂದೆ ಜಲವೇಣಿಗಳು || ಏರಿಳಿಯುವ ಅಲೆ! ಮುಂದೆ ಇದಿರು ಹೊಳೆ ! ಜಗ್ಗುವುವೇ ಈ ಹಾಯಿಗಳು ? ಎದೆಯನೆ ಸೀಳುವ ಹೋಳು ಬಂಡೆಗಳು ಆ ಎನ್ನುವ ಸುಳಿಬಾಯಿಗಳು || ಮುಳುಗಿಸೊ ಅಥವಾ ತೇಲಿಸೊ ರಥವ ಧೃತಿಯೊಂದೇ ಗತಿ ಹಾಡುತಿವೆ | ಮುಳುಗುವ ಹೊರತೂ ತೇಲದು ದೋಣಿ ಹಾಯಿ ವಿದಾಯವ ಹೇಳುತಿವೆ || -ಹೆಚ್. ಎಸ್. ವೆಂಕವೇಶಮೂರ್ತಿ

ಕಾಲವಲ್ಲದ ಕಾಲ

ಕಾಲವಲ್ಲದ ಕಾಲ ಧೋಮಳೆಯ ಸುರಿಸುತಿವೆ ಮೋಡಗಳ ಅಣಕಿಸುತ ನಿನ್ನ ಕಣ್ಣು | ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ ನಿಟ್ಟಿಸುತ ತೆರೆದಿರುವ ಬಾಗಿಲನ್ನು || ಮೋಡ ಮುಸುಕಿದ ಇರುಳು ಆಗಸದ ತಾರೆಗಳು ಕಾಣದಾಗಿವೆ ಮೇಲೆ ಬಾನಿನಲ್ಲಿ ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ || ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ | ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ ತುಟಿಯಂಚಿನಲಿ ತೊಪ್ಪ ತೋಯುತ್ತಿದೆ || ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ ಕೆನ್ನೆಸರಪಳಿಯನ್ನು ಬರೆಯುತ್ತಿದೆ | ಮಾಮರದ ಮೇಲೊಂದು ಕೂ ಎಂಬ ಕೋಗಿಲೆ ಕೂಗು ಬಾಗಿಲವರೆಗು ಹಾಯುತ್ತಿದೆ || - ಹೆಚ್.ಎಸ್. ವೆಂಕಟೇಶಮೂರ್ತಿ

ದೂರವಿಡೆ ಸಖಿ

ದೂರವಿಡೆ ಸಖಿ ದೂರವಿಡೆ | ಕೈಯವೀಣೆಯನು ದೂರವಿಡೆ || ವೀಣೆಯ ನಾದವ ಕೇಳಿ ಚಂದ್ರಮನ ರಥದ ಜಿಂಕೆಗಳು ಓಡದಿವೆ | ನೆರಳು ಹೊರಳುತಿದೆ ; ಇರುಳು ಕೆರಳುತಿದೆ ಬೆಳದಿಂಗಳ ಮಳೆ ಬಾರದಿದೆ || ನೋವಿನ ಪರಿಯನು ನೊಂದವರರಿವರು ನೋಯದೆ ನೋಯುವ ಬಗೆಯುಂಟೆ ? ಚಂದಿರನಾದನು ಬೆಂಕಿಯ ಗೂಡು ನೊಂದ ಬಳಿಕ ನೀನದ ನೋಡು || ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ ವೀಣೆಯ ಮುಚ್ಚಿಡೆ ಜೀವಸಖೀ | ಚಂದ್ರ ಮಹೋತ್ಸವ ಮುಂದಕೆ ಸಾಗಲಿ ವಿರಹಿಗಳಿಗೆ ಕಾರಿರುಳೆ ಸಖೀ || - ಹೆಚ್. ಎಸ್. ವೆಂಕಟೇಶಮೂರ್ತಿ

ಅಕ್ಕಮಹಾದೇವಿ

Image
ಅರಿವೆನೆಂದರೆ ಅರಿಯಬಾರದು ನೋಡಾ ಘನಕ್ಕೆ ಘನ ತಾ ನೋಡಾ ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆಪೋದೆನು|| - ಜಗದೊಡೆಯ ಮಲ್ಲಿಕಾರ್ಜುನನು(ಈಶ್ವರ) ಎಲ್ಲಾ ಶಕ್ತಿಗಳಿಗಿಂತಲೂ ಅಗಾಧ ಹಾಗೂ ಶಕ್ತಿಯುಳ್ಳವನು, ಅವನನ್ನು ತಿಳಿಯುವುದು ತುಂಬಾ ಕಠಿಣ ಅವನನ್ನು ತಿಳಿದುಕೊಂಡೆನೆಂದರೆ ನನ್ನ ಜೀವನವೇ ಅದೃಷ್ಟಶಾಲಿ(ಧನ್ಯ). ----------- ಈಳೆ, ನಿಂಬೆ, ಮಾವು ಮಾದಲಿಕೆಗೆ ಹುಳಿನೀರನೆರೆದವರಾರಯ್ಯ ಕಬ್ಬು, ಬಾಳೆ, ಹಲಸು, ಗರಿಕೇಳಕೆ ಸಿಹಿನೀರೆರದವರಾರಯ್ಯ! ಕಳೆವಸಾಲೆಗ ಓಗರದ ಉದಕವನೆರೆದವರಾರಯ್ಯ! ಮರುಗ, ಮಲ್ಲಿಗೆ, ಪಚ್ಚೆಗೆ, ಪರಿಮಳದುದಕವನೆರೆದವರಾರಯ್ಯ ಇಂತೀ ಜಲವು ಒಂದೇ ಆಕಾರವು ಒಂದೇ ಹಲವು ದ್ರವ್ಯಂಗಳ ಕೂಡಿ ತನ್ನ ಪರಬೇಕಾಗಿ ಹಾಗೆ ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದರೇನು? ತನ್ನ ಪರಿ ಬೇರೆ! - ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು. --------------- ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ ಅಯ್ಯ ಸಾರಿಬಂದು ನೀನೆ...

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು || ನಾನು || ಹತ್ತಿರಿರಲಿ ದೂರವಿರಲಿ ಅವನೇ ರಂಗಸಾಲೆ ಕಣ್ಣು ಕಟ್ಟುವಂಥ ಮೂರ್ತಿ ಕಿವಿಗೆ ಮೆಚ್ಚಿನೋಲೆ || ನಾನು || ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು ತೋಳುಗಳಿಗೆ ತೋಳಬಂಧಿ ಕೆನ್ನೆತುಂಬ ಮುತ್ತು || ನಾನು || ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು ಹೊಟ್ಟೆಗಿತ್ತ ಜೀವಫಲವ ತುಟಿಗೆ ಹಾಲು ಜೇನು || ನಾನು ||